logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Madhya Pradesh News: ಮಧ್ಯಪ್ರದೇಶ ಪಟಾಕಿ ಘಟಕದಲ್ಲಿ ಸ್ಪೋಟ, ಸಾವಿನ ಸಂಖ್ಯೆ 11ಕ್ಕೆ ಏರಿಕೆ

Madhya Pradesh News: ಮಧ್ಯಪ್ರದೇಶ ಪಟಾಕಿ ಘಟಕದಲ್ಲಿ ಸ್ಪೋಟ, ಸಾವಿನ ಸಂಖ್ಯೆ 11ಕ್ಕೆ ಏರಿಕೆ

Umesha Bhatta P H HT Kannada

Feb 06, 2024 04:50 PM IST

google News

ಮಧ್ಯಪ್ರದೇಶದ ಹರ್ದಾದ ಪಟಾಕಿ ಘಟಕದಲ್ಲಿ ಭಾರೀ ಸ್ಪೋಟ ಸಂಭವಿಸಿದೆ.

    • Crackers factory ಮಧ್ಯಪ್ರದೇಶದ ಹರ್ದಾ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಪಟಾಕಿ ಘಟಕದಲ್ಲಿ ಸ್ಪೋಟ ಸಂಭವಿಸಿ 11 ಮಂದಿ ಮೃತಪಟ್ಟಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. 
ಮಧ್ಯಪ್ರದೇಶದ ಹರ್ದಾದ ಪಟಾಕಿ ಘಟಕದಲ್ಲಿ ಭಾರೀ ಸ್ಪೋಟ ಸಂಭವಿಸಿದೆ.
ಮಧ್ಯಪ್ರದೇಶದ ಹರ್ದಾದ ಪಟಾಕಿ ಘಟಕದಲ್ಲಿ ಭಾರೀ ಸ್ಪೋಟ ಸಂಭವಿಸಿದೆ.

ಭೋಪಾಲ್‌: ಮಧ್ಯಪ್ರದೇಶದ ಪಟಾಕಿ ಸಂಭವಿಸಿದ ಸ್ಪೋಟ ಪ್ರಕರಣದಲ್ಲಿ11ಮಂದಿ ಮೃತಪಟ್ಟಿದ್ದು, 60 ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಹರ್ದಾದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು. ಕೆಲವ ಸ್ಥಿತಿ ಗಂಭೀರವಾಗಿದೆ. ಪಟಾಕಿ ಘಟಕದಲ್ಲಿ ಏಳು ಸ್ಪೋಟಗಳು ಸಂಭವಿಸಿ ಅಲ್ಲಿ ಕೆಲಸ ಮಾಡುತ್ತಿದ್ದವರು ಸುಟ್ಟು ಕರಕಲಾಗಿದ್ದಾರೆ. ಅಕ್ಕಪಕ್ಕದ ಪ್ರದೇಶಗಳಿಗೂ ಬೆಂಕಿ ಆವರಿಸಿದ್ದು, ಅಗ್ನಿ ಶಾಮಕ ಘಟಕದಿಂದ ಬೆಂಕಿ ನಂದಿಸುವ ಕೆಲಸ ನಡೆದಿದೆ.

ಹರ್ದಾ ಪಟ್ಟಣದ ಹೊರ ವಲಯದಲ್ಲಿ ಪಟಾಕಿ ಉತ್ಪಾದನೆ ಘಟಕದಲ್ಲಿ ಕೆಲ ದಿನಗಳಿಂದ ಚಟುವಟಿಕೆ ನಡೆದಿತ್ತು. ಬೇಡಿಕೆ ಹೆಚ್ಚಿದ್ದರಿಂದ ಹೆಚ್ಚಿನ ಸಿಬ್ಬಂದಿ ಇಲ್ಲಿ ಕೆಲಸ ನಡೆಸುತ್ತಿದ್ದರು. ಮಂಗಳವಾರ ಮಧ್ಯಾಹ್ನ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು. ಅದನ್ನು ಆರಿಸುವಷ್ಟರಲ್ಲಿ ಸ್ಪೋಟ ಸಂಭವಿಸಿದೆ. ಒಟ್ಟು ಏಳು ಬಾರಿ ಸ್ಪೋಟಗಳ ಒಳಗೆ ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬೆಂಕಿ ಕೆನ್ನಾಗಲಗೆ ಜೋರಾಗಿದ್ದರಿಂದ ಅಲ್ಲಿದ್ದ ಆರು ಮಂದಿ ತೀವ ರ ಸುಟ್ಟ ಗಾಯಗಳಿಂದ ಮೃತಪಟ್ಟರೆ, ಇನ್ನೂ ಹಲವರು ಹೊರಗೆ ಓಡಿ ಬಂದರು. ಅವರಿಗೂ ಸುಟ್ಟು ಗಾಯಗಳಾಗಿವೆ. ಆನಂತರ ಐದು ಮಂದಿ ಮೃತಪಟ್ಟು ಒಟ್ಟು 11 ಮಂದಿ ಜೀವ ಕಳೆದುಕೊಂಡಿದ್ದಾರೆ.

ಸ್ಪೋಟದ ಪ್ರಮಾಣ ಹೇಗಿತ್ತೆಂದರೆ ಪಕ್ಕದ ಮಾಲ್ವಾ ಪ್ರದೇಶಕ್ಕೂ ಇದು ಹಬ್ಬಿತ್ತು. ಪಕ್ಕದವರಿಗೆ ಸ್ಪೋಟದ ಸದ್ದು ಕೇಳಿಸಿದೆ.

ಕೂಡಲೇ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಸ್ಥಳೀಯರೂ ಕೈ ಜೋಡಿಸಿದರು. ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಇನ್ನೂ ಬೆಂಕಿ ಆರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಒಟ್ಟು 150 ಮಂದಿ ಘಟಕದಲ್ಲಿ ಕೆಲಸ ಮಾಡುತ್ತಿದ್ದರು ಎನ್ನುವ ಮಾಹಿತಿ ದೊರೆತಿದೆ. ಈವರೆಗೂ 60ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲವರು ಯಾವುದೇ ತೊಂದರೆ ಇಲ್ಲದೇ ಪಾರಾಗಿದ್ದಾರೆ.

ವಿಷಯ ತಿಳಿದು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರು ಬೆಂಕಿ ನಂದಿಸುವ ಜತೆಗೆ ಗಾಯಾಳುಗಳ ಕಡೆಯೂ ಗಮನ ನೀಡುವಂತೆ ಸೂಚಿಸಿದರು. ಮೃತರ ಕುಟುಂಬ ಹಾಗೂ ಗಾಯಾಗಳುಗಳಿಗೆ ಮುಖ್ಯಮಂತ್ರಿ ಪರಿಹಾರ ಘೋಷಿಸಿದ್ದಾರೆ.

ಘಟನೆ ಕಾರಣ ಎನ್ನುವುದು ತಿಳಿದು ಬಂದಿಲ್ಲ. ಬೆಂಕಿಯಿಂದಲೇ ಘಟನೆ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆ ಕುರಿತು ತನಿಖೆ ನಡೆಸಿದರೆ ಕಾರಣ ಗೊತ್ತಾಗಬಹುದು ಎನ್ನುವುದು ಸ್ಥಳೀಯ ಅಧಿಕಾರಿಗಳ ಮಾಹಿತಿ.

ಈಗಾಗಲೇ ರಾಷ್ಟ್ರೀಯ ವಿಪತ್ತು ನಿಯಂತ್ರಣ ಘಟಕದೊಂದಿಗೂ ಮಾತನಾಡಲಾಗಿದ್ದು, ಸಿಬ್ಬಂದಿಗಳು ಆಗಮಿಸುವರು. ಒಳಗೆ ಸಿಲುಕಿದವರನ್ನು ರಕ್ಷಿಸುವ ಕಾರ್ಯ ಮುಂದುವರದಿದೆ ಎಂದು ನರ್ಮದಾಪುರಂ ಜಿಲ್ಲಾಧಿಕಾರಿ ರಿಶಿ ಗರ್ಗ್‌ ತಿಳಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ