logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  7 ದಿನಗಳ ಒಳಗೆ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆ, ಪುನಸ್ಕಾರ, ಹಿಂದೂಗಳಿಗೆ ವಾರಾಣಸಿ ಕೋರ್ಟ್ ಅನುಮತಿ

7 ದಿನಗಳ ಒಳಗೆ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆ, ಪುನಸ್ಕಾರ, ಹಿಂದೂಗಳಿಗೆ ವಾರಾಣಸಿ ಕೋರ್ಟ್ ಅನುಮತಿ

Umesh Kumar S HT Kannada

Jan 31, 2024 05:20 PM IST

ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆಗೆ ಹಿಂದೂಗಳಿಗೆ ಅನುಮತಿ ನೀಡಿದ ವಾರಾಣಸಿ ಜಿಲ್ಲಾ ಕೋರ್ಟ್‌. (ಕಡತ ಚಿತ್ರ)

  • Court News: ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ದಕ್ಷಿಣ ನೆಲಮಾಳಿಗೆಯಲ್ಲಿ ಇನ್ನು ಏಳು ದಿನಗಳ ಒಳಗೆ ಪೂಜೆ ಶುರುವಾಗಲಿದೆ. ಈ ರೀತಿ ಪೂಜೆ ನಡೆಸುವುದಕ್ಕೆ ವಾರಾಣಸಿ ಜಿಲ್ಲಾ ಕೋರ್ಟ್‌ ಹಿಂದೂಗಳಿಗೆ ಬುಧವಾರ (ಜ.31) ಅನುಮತಿ ನೀಡಿದೆ. 

ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆಗೆ ಹಿಂದೂಗಳಿಗೆ ಅನುಮತಿ ನೀಡಿದ ವಾರಾಣಸಿ ಜಿಲ್ಲಾ ಕೋರ್ಟ್‌. (ಕಡತ ಚಿತ್ರ)
ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆಗೆ ಹಿಂದೂಗಳಿಗೆ ಅನುಮತಿ ನೀಡಿದ ವಾರಾಣಸಿ ಜಿಲ್ಲಾ ಕೋರ್ಟ್‌. (ಕಡತ ಚಿತ್ರ)

ವಾರಾಣಸಿ: ವಾರದ ಒಳಗೆ ವಾರಾಣಸಿಯ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆ ಆರಂಭವಾಗಲಿದೆ. ಹೌದು, ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೆ ವಾರಾಣಸಿ ಕೋರ್ಟ್‌ ಬುಧವಾರ (ಜ.31) ಹಿಂದೂಗಳಿಗೆ ಅನುಮತಿ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನಿಂದ ನಾಮನಿರ್ದೇಶನಗೊಂಡ ಪೂಜಾರಿ ಮತ್ತು ಹಿಂದೂಗಳ ಕಡೆಯಿಂದ ಪೂಜೆಗೆ ವ್ಯವಸ್ಥೆ ಮಾಡುವಂತೆ ನ್ಯಾಯಾಲಯವು ನಿರ್ದೇಶನ ನೀಡಿತು. ಟ್ರಸ್ಟ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮಸೀದಿ ಸಮಿತಿಯು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಫೆಬ್ರವರಿ 8 ಕ್ಕೆ ನಿಗದಿ ಮಾಡಿದೆ.

"ಏಳು ದಿನಗಳಲ್ಲಿ ಪೂಜೆ ಪ್ರಾರಂಭವಾಗಲಿದೆ. ಪ್ರತಿಯೊಬ್ಬರಿಗೂ ಪೂಜೆ ಮಾಡುವ ಹಕ್ಕಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.

ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ವಕೀಲ ಅಖ್ಲಾಕ್ ಅಹ್ಮದ್ ಅವರು ಈ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದರು.

ಜ್ಞಾನವಾಪಿ ಮಸೀದಿ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ದಾವೆ

ಮಸೀದಿ ನಿರ್ಮಾಣಕ್ಕೂ ಮೊದಲು ದೊಡ್ಡ ಹಿಂದೂ ದೇವಾಲಯ ಅಸ್ತಿತ್ವದಲ್ಲಿತ್ತು ಎಂದು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ವರದಿ ತೀರ್ಮಾನಿಸಿದ ನಂತರ, ಮಸೀದಿಯ ಮುಚ್ಚಿದ ಭಾಗದ ಉತ್ಖನನ ಮತ್ತು ವೈಜ್ಞಾನಿಕ ಸಮೀಕ್ಷೆ ಕೋರಿ ನಾಲ್ವರು ಹಿಂದೂ ಮಹಿಳೆಯರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಮಾರನೇ ದಿನ ವಾರಾಣಸಿ ಜಿಲ್ಲಾ ನ್ಯಾಯಾಲಯದ ಈ ಆದೇಶ ಬಂದಿದೆ.

"ಸರಿಯಾದ ಮತ್ತು ಪರಿಣಾಮಕಾರಿ ತನಿಖೆಗಾಗಿ, ಶಿವಲಿಂಗದ ಸುತ್ತಲಿನ ಕೃತಕ / ಆಧುನಿಕ ಗೋಡೆಗಳು / ಮಹಡಿಗಳನ್ನು ತೆಗೆದುಹಾಕಿದ ನಂತರ ಅಲ್ಲಿರುವ ವಸ್ತುವಿಗೆ ಯಾವುದೇ ಹಾನಿಯಾಗದಂತೆ ಶಿವಲಿಂಗದ ಸ್ವರೂಪ ಮತ್ತು ಸಂಬಂಧಿತ ವೈಶಿಷ್ಟ್ಯವನ್ನು ನಿರ್ಧರಿಸಲು ಶಿವಲಿಂಗದ ಸುತ್ತಲೂ ಅಗತ್ಯ ಉತ್ಖನನವನ್ನು ಕೈಗೊಳ್ಳಲು ಮತ್ತು ಇತರ ವೈಜ್ಞಾನಿಕ ವಿಧಾನಗಳನ್ನು ಬಳಸಲು ಎಎಸ್ಐಗೆ ನಿರ್ದೇಶಿಸುವುದು ಅಗತ್ಯವಾಗಿದೆ. " ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ವಿವಾದಿತ ಪ್ರದೇಶವು ವಿವಾದಿತ ರಚನೆಯನ್ನು ಹೊಂದಿದ್ದು, ಅದನ್ನು ಹಿಂದೂಗಳು ಶಿವಲಿಂಗ ಎಂದು ಪ್ರತಿಪಾದಿಸುತ್ತಿದ್ದಾರೆ. ಇದನ್ನು ಮುಸ್ಲಿಮರು ತಿರಸ್ಕರಿಸಿದ್ದು, ಇದು ಧಾರ್ಮಿಕ ಪೂಜಾ ಕೊಳದ ಭಾಗವಾಗಿದೆ ಎಂದು ಪ್ರತಿಪಾದಿಸಿದ್ದರು.

ಭಾರತೀಯ ಪುರಾತತ್ವ ಸಮೀಕ್ಷೆ ವರದಿ ಏನು ಹೇಳಿದೆ

ವಾರಣಾಸಿಯಲ್ಲಿ ಜ್ಞಾನವಾಪಿ ಮಸೀದಿ ನಿರ್ಮಾಣದ ಮೊದಲು ದೊಡ್ಡ ಹಿಂದೂ ದೇವಾಲಯ ಅಸ್ತಿತ್ವದಲ್ಲಿತ್ತು ಎಂದು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ವರದಿ ಹೇಳಿದೆ. ಇದು ವಿವಾದಾತ್ಮಕ ಸಮುದಾಯ ಸಂಘರ್ಷದ ಉತ್ತುಂಗವನ್ನು ಸೂಚಿಸುತ್ತದೆ. ಇದು 2021 ರಲ್ಲಿ ದಾಖಲಾದ ಸಿವಿಲ್ ದಾವೆಯ ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ. ಆದರೂ, ಅದರ ಪರಿಣಾಮ ದೂರಗಾಮಿಯದ್ದು ಎಂದು ಹೇಳಲಾಗುತ್ತಿದೆ.

ಈ ವಿಚಾರಣೆಗೆ ಪೂರ್ವಭಾವಿಯಾಗಿ 2022ರ ಏಪ್ರಿಲ್‌ನಲ್ಲಿ ಸಿವಿಲ್ ನ್ಯಾಯಾಲಯವು ವಕೀಲರು-ಆಯುಕ್ತರಿಂದ ವಿವಾದಾತ್ಮಕ ಸಂಕೀರ್ಣದ ಸಮೀಕ್ಷೆಗೆ ಆದೇಶಿಸಿತು. ಈ ಆದೇಶದ ವಿರುದ್ಧ ಪ್ರತಿಭಟನೆ ವ್ಯಕ್ತವಾಯಿತು. ಅಂತಿಮವಾಗಿ 2022ರ ಮೇ ತಿಂಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿತು. ಆದರೆ ಮುಸ್ಲಿಂ ಕಡೆಯವರು ಇದನ್ನು ನಿರಾಕರಿಸಿದರೂ ಪ್ರಕ್ರಿಯೆಯ ಕೊನೆಯ ಹಂತದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂಗಳು ಪ್ರತಿಪಾದಿಸಿದರು. ಇದಕ್ಕೂ ಮೊದಲು ಮುಸ್ಲಿಮರು ಅದನ್ನು ನೀರ ಕಾರಂಜಿ ಎಂದು ಪ್ರತಿಪಾದಿಸಿದ್ದರು.

ನಂತರ, ಕಳೆದ ಜುಲೈನಲ್ಲಿ ವಾರಾಣಸಿ ಜಿಲ್ಲಾ ನ್ಯಾಯಾಲಯವು ಮಸೀದಿಯನ್ನು ಮೊದಲೇ ಅಸ್ತಿತ್ವದಲ್ಲಿರುವ ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ಕಂಡುಹಿಡಿಯಲು ಎಎಸ್ಐ ವ್ಯಾಪಕ ಸಮೀಕ್ಷೆಗೆ ಆದೇಶಿಸಿತು. ಆದರೆ ಸತ್ಯ ಹೊರಬರಲು ವೈಜ್ಞಾನಿಕ ತನಿಖೆ ಅಗತ್ಯ ಎಂದು ಅಭಿಪ್ರಾಯಪಟ್ಟಿತು. ಆದಾಗ್ಯೂ, ವಿವಾದವುಂಟಾದ ಭಾಗವನ್ನು ನ್ಯಾಯಾಧೀಶರು ವಿಚಾರಣೆಯಿಂದ ತಾತ್ಕಾಲಿಕವಾಗಿ ಹೊರಗಿಟ್ಟರು. ಇದು ಸುಪ್ರೀಂ ಕೋರ್ಟ್‌ 2022ರ ಮೇ ತಿಂಗಳು ನೀಡಿದ ನಿರ್ದೇಶನದಲ್ಲಿ ಮುಚ್ಚಲ್ಪಟ್ಟಿದೆ.

ಮೂರು ಅವಧಿ ವಿಸ್ತರಣೆಗಳ ನಂತರ, ಎಎಸ್ಐ ಡಿಸೆಂಬರ್ 18 ರಂದು ತನ್ನ ವರದಿಯನ್ನು ಸಲ್ಲಿಸಿತು. ವರದಿಯ ಪ್ರಮುಖ ಅಂಶಗಳನ್ನು ಮುಂದಿಟ್ಟುಕೊಂಡು ಮಸೀದಿ ಸಂಕೀರ್ಣದಲ್ಲಿ ನಿಯತವಾಗಿ ಪೂಜೆ ಸಲ್ಲಿಸುವ ಹಕ್ಕುಗಳನ್ನು ಕೋರಿ ಮನವಿ ಸಲ್ಲಿಸಲಾಗಿದೆ ಎಂದು ನಾಲ್ಕು ಹಿಂದೂ ಮಹಿಳಾ ದೂರುದಾರರ ಪರ ಪ್ರಮುಖ ವಕೀಲ ವಿಷ್ಣು ಶಂಕರ್ ಜೈನ್ ಬಹಿರಂಗಪಡಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ