logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Covid News: ಭಾರತದಲ್ಲಿ ಒಂದೇ ದಿನ ಕೋವಿಡ್‌ನ ಹೊಸ 628 ಪ್ರಕರಣ, 4,054 ಸಕ್ರಿಯ

Covid News: ಭಾರತದಲ್ಲಿ ಒಂದೇ ದಿನ ಕೋವಿಡ್‌ನ ಹೊಸ 628 ಪ್ರಕರಣ, 4,054 ಸಕ್ರಿಯ

HT Kannada Desk HT Kannada

Dec 25, 2023 02:17 PM IST

ಭಾರತದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ.

    • Covid updates ಭಾರತದಲ್ಲಿ ಭಾನುವಾರ ಒಂದೇ ದಿನ ಕೋವಿಡ್‌( Covid) 628 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಇಡೀ ದೇಶದಲ್ಲಿ ಕೋವಿಡ್‌ನ ಒಟ್ಟು 4,054 ಪ್ರಕರಣಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ( Union Health ministry ತಿಳಿಸಿದೆ.
ಭಾರತದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ.
ಭಾರತದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ.

ದೆಹಲಿ: ಭಾರತದಲ್ಲಿ ಒಂದೇ ದಿನ 628 ಕೋವಿಡ್‌ ಪ್ರಕರಣಗಳು ದಾಖಲಾಗಿವೆ.

ಟ್ರೆಂಡಿಂಗ್​ ಸುದ್ದಿ

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ಸೋಮವಾರ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಭಾನುವಾರ ಒಂದೇ ದಿನದಲ್ಲಿ 628 ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಸಕ್ರಿಯವಾಗಿರುವ ಕೋವಿಡ್‌ ಪ್ರಕರಣಗಳ ಸಂಖ್ಯೆ 4,054ಕ್ಕೆ ಏರಿಕೆ ಕಂಡಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಕೇರಳದಲ್ಲಿ ಒಂದು ಸಾವಿನ ಪ್ರಕರಣ ವರದಿಯಾಗಿದೆ. ಈ ಮೂಲಕ ದೇಶದಲ್ಲಿ ಈವರೆಗೂ ಕೋವಿಡ್‌ನಿಂದ ಅಸುನೀಗಿದವರ ಸಂಖ್ಯೆ 5,33,334 ತಲುಪಿದೆ.

ಈವರೆಗೂ ಇಡೀ ಭಾರತದಲ್ಲಿ ಕೋವಿಡ್‌ಗೆ ಸಿಲುಕಿದವರ ಪ್ರಮಾಣ 4,50,09,248( 4.50 ಕೋಟಿ). ಈವರೆಗೂ ಕೋವಿಡ್‌ ಸಿಲುಕಿದವರಲ್ಲಿ 4,44,71,860 (4.44 ಕೋಟಿ) ಮಂದಿ ಚೇತರಿಕೆ ಹೊಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ. ಭಾರತದ ಕೋವಿಡ್‌ ಚೇತರಿಕೆ ಪ್ರಮಾಣ ಶೇ.98.81 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ.

ಕೋವಿಡ್‌ನಿಂದ ಸಾವಿಗೆ ಒಳಗಾದವರ ಪ್ರಮಾಣ ಭಾರತದಲ್ಲಿ ಶೇ 1.19 ಮಾತ್ರ ಇದೆ. ಈವರೆಗೂ ಇಡೀ ದೇಶದಲ್ಲಿ 220.67 ಕೋಟಿ ಲಸಿಕೆಗಳನ್ನು ಮೂರು ಹಂತದಲ್ಲಿ ನೀಡಲಾಗಿದೆ ಎಂದು ವಿವರಿಸಲಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ