logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Mahindra Scorpio: ಸೇನೆಗೆ ಸ್ಕಾರ್ಪಿಯೊ ಎಸ್‌ಯುವಿ ಅಚ್ಚುಮೆಚ್ಚು, 1850 ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್‌ ಆರ್ಡರ್‌ ಮಾಡಿದ ಭಾರತೀಯ ಸೇನೆ

Mahindra Scorpio: ಸೇನೆಗೆ ಸ್ಕಾರ್ಪಿಯೊ ಎಸ್‌ಯುವಿ ಅಚ್ಚುಮೆಚ್ಚು, 1850 ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್‌ ಆರ್ಡರ್‌ ಮಾಡಿದ ಭಾರತೀಯ ಸೇನೆ

Praveen Chandra B HT Kannada

Jul 19, 2023 12:35 PM IST

ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್‌ ಆರ್ಡರ್‌ ಮಾಡಿದ ಭಾರತೀಯ ಸೇನೆ

    • Indian Army: ಭಾರತೀಯ ಸೇನೆಯ ಅಚ್ಚುಮೆಚ್ಚಿನ ವಾಹನಗಳಲ್ಲಿ ಮಹೀಂದ್ರ ಆಂಡ್‌ ಮಹೀಂದ್ರದ ಸ್ಕಾರ್ಪಿಯೊ ಕ್ಲಾಸಿಕ್‌ ಕೂಡ ಒಂದು. ಈ ವರ್ಷದ ಜನವರಿಯಲ್ಲಿ ಸೇನೆಯು 1470 ಸ್ಕಾರ್ಪಿಯೊ ಕ್ಲಾಸಿಕ್‌ ಎಸ್‌ಯುವಿ ಆರ್ಡರ್‌ ಮಾಡಿತ್ತು. ಇತ್ತೀಚೆಗೆ ಮತ್ತೆ 1850 ಎಸ್‌ಯುವಿಗೆ ಆರ್ಡರ್‌ ಮಾಡಿದೆ. ಸೇನೆಗೆ ಮೊದಲ ಬ್ಯಾಚ್‌ನ ಎಸ್‌ಯುವಿಗಳನ್ನು ಕಂಪನಿ ಡೆಲಿವರಿ ಮಾಡಿದೆ.
ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್‌ ಆರ್ಡರ್‌ ಮಾಡಿದ ಭಾರತೀಯ ಸೇನೆ
ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್‌ ಆರ್ಡರ್‌ ಮಾಡಿದ ಭಾರತೀಯ ಸೇನೆ

ಮಹೀಂದ್ರ ಆಂಡ್‌ ಮಹೀಂದ್ರ ಕಂಪನಿಯು ಭಾರತೀಯ ಸೇನೆಯಿಂದ ಇತ್ತೀಚೆಗೆ 1850 ಸ್ಕಾರ್ಪಿಯೊ ಕ್ಲಾಸಿಕ್‌ ಆರ್ಡರ್‌ ಪಡೆದಿತ್ತು. ಕಂಪನಿಯು ಇದೀಗ ಸೇನೆಗೆ ಮೊದಲ ಬ್ಯಾಚ್‌ನ ಸ್ಕ್ಯಾರ್ಪಿಯೊ ಎಸ್‌ಯುವಿಗಳನ್ನು ಡೆಲಿವರಿ ಮಾಡಿದೆ. ಜನವರಿ ತಿಂಗಳಲ್ಲಿ ಭಾರತೀಯ ಸೇನೆಯು 1470 ಸ್ಕಾರ್ಪಿಯೊ ಕ್ಲಾಸಿಕ್‌ ಎಸ್‌ಯುವಿ ಆರ್ಡರ್‌ ಮಾಡಿತ್ತು. ಭಾರತೀಯ ಸೇನೆಯ 12 ಯೂನಿಟ್‌ಗಳಿಗೆ ಈ ಸ್ಕಾರ್ಪಿಯೊ ಕಾರುಗಳನ್ನು ಶೀಘ್ರದಲ್ಲಿಯೇ ಹಂಚಿಕೆ ಮಾಡುವ ನಿರೀಕ್ಷೆಯಿದೆ.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ಭಾರತೀಯ ಸೇನೆಯು ಈಗಾಗಲೇ ಟಾಟಾ ಕ್ಸೆನನ್‌, ಮಾರುತಿ ಸುಜುಕಿ ಜಿಪ್ಸಿ ಮತ್ತು ಟಾಟಾ ಸಫಾರಿ ಇತ್ಯಾದಿ ವಾಹನಗಳನ್ನು ಬಳಸುತ್ತಿದೆ. ಭಾರತೀಯ ಸೇನೆಯ ಸಾರಿಗೆ ಮತ್ತು ಪ್ರಯಾಣದ ಅವಶ್ಯಕತೆಯನ್ನು ಸ್ಕಾರ್ಪಿಯೊ ಕ್ಲಾಸಿಕ್‌ ಪೂರೈಸಲಿದೆ. ಅಂದಹಾಗೆ, ಸೇನೆಗಾಗಿ ಮಹೀಂದ್ರ ಕಂಪನಿಯು ಸ್ಕಾರ್ಪಿಯೊ ಕ್ಲಾಸಿಕ್‌ ಅನ್ನು 4x4 ಪವರ್‌ಟ್ರೇನ್‌ನಲ್ಲಿ ನಿರ್ಮಾಣ ಮಾಡಿದೆ.

ಮಹೀಂದ್ರ ಕಂಪನಿಯು ಸ್ಕಾರ್ಪಿಯೊ ಕ್ಲಾಸಿಕ್‌ನ ಎಂಜಿನ್‌ ಅಪ್‌ಡೇಟ್‌ ಮಾಡಿದೆ. ಸೇನೆಗೆ ನೀಡಿರುವ ವಾಹನವು 2.2 ಲೀಟರ್‌ ಎಂಜಿನ್‌ ಆಗಿದ್ದರೂ, ಹಿಂದಿನ ಆವೃತ್ತಿಗಿಂತ 55 ಕೆ.ಜಿ. ಹಗುರವಾಗಿರುತ್ತದೆ. ಮಹೀಂದ್ರ ಕಂಪನಿಯ ಪ್ರಕಾರ 1 ಸಾವಿರ ಆವರ್ತನಕ್ಕೆ 230 ಎನ್‌ಎಂ ಟಾರ್ಕ್‌ ದೊರಕುತ್ತದೆ. ಇಷ್ಟು ಮಾತ್ರವಲ್ಲದೆ ಇಂಧನ ದಕ್ಷತೆಯು ಶೇಕಡ 15ರಷ್ಟು ಹೆಚ್ಚು ದೊರಕಲಿದೆ. ಕೇಬಲ್‌ ಶಿಫ್ಟ್‌ ಗಿಯರ್‌ಬಾಕ್ಸ್‌ ಕೂಡ ಇದರಲ್ಲಿದೆ.

ಇದರ ಟ್ರಾನ್ಸ್‌ಮೀಷನ್‌ ಆರು ಸ್ಪೀಡ್‌ನ ಯೂನಿಟ್‌ ಆಗಿದ್ದು, ಹಿಂಬದಿ ಚಕ್ರಕ್ಕೆ ಮಾತ್ರ ಇರುತ್ತದೆ. ಸ್ಕಾರ್ಪಿಯೊ ಕ್ಲಾಸಿಕ್‌ನ ನೂತನ ಆವೃತ್ತಿಗಳನ್ನು ಭಾರತೀಯ ಸೇನೆಯ ಅವಶ್ಯಕತೆಗೆ ಪೂರಕವಾಗಿ ವಿನ್ಯಾಸ ಮಾಡಲಾಗಿದೆ. ಸೈನಿಕರಿಗೆ ಅನುಕೂಲವಾಗುವಂತೆ ಹಲವು ಹುಕ್ಸ್‌ಗಳನ್ನು ಕಾರಿನೊಳಗೆ ಜೋಡಿಸಲಾಗಿದೆ. ಜತೆಗೆ, ಸಣ್ಣ ಕ್ಯಾಲಿಬರ್‌ ಆರ್ಟಿಲರಿ ಶಸ್ತ್ರಾಸ್ತ್ರಗಳನ್ನು ಇಡಲು, ಬಳಸಲು ಸೂಕ್ತವಾಗುವಂತೆ ವಿನ್ಯಾಸ ಮಾಡಲಾಗಿದೆ.

Watch: ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್‌ ಫಸ್ಟ್‌ಡ್ರೈವ್‌ ವಿಮರ್ಶೆ

ಕಾರ್‌ಟಾಕ್‌ ವೆಬ್‌ಸೈಟ್‌ ಪ್ರಕಾರ ಸೇನೆಯ ಸ್ಕಾರ್ಪಿಯೊ ಕ್ಲಾಸಿಕ್‌ ಆವೃತ್ತಿಯು ಸ್ಟಾಂಡರ್ಡ್‌ ಟಾಪ್‌ ಎಂಡ್‌ ಮಾಡೆಲ್‌ ಅನ್ನು ಹೋಲುತ್ತದೆ. ಇದರಲ್ಲಿ ಒಂಬತ್ತು ಇಂಚಿನ ಟಚ್‌ಸ್ಕ್ರೀನ್‌ ಇನ್‌ಫೋಟೈನ್‌ಮೆಂಟ್‌ ಸಿಸ್ಟಮ್‌ ಇದೆ. ಆಟೋಮ್ಯಾಟಿಕ್‌ ಟೆಂಪರೇಷರ್‌ ಕಂಟ್ರೋಲ್‌, ಟಿಲ್ಟ್‌ ಸ್ಟಿಯರಿಂಗ್‌, ಇಮೊಬಿಲೈಜರ್‌, ಆಂಟಿ ಥೆಪ್ಟ್‌ ವಾರ್ನಿಂಗ್‌, ಸ್ಪೀಡ್‌ ಅಲಾರ್ಟ್‌ ಇತ್ಯಾದಿ ಫೀಚರ್‌ಗಳು ಟಾಪ್‌ ಎಂಡ್‌ ಮಾಡೆಲ್‌ನಲ್ಲಿದೆ.

ಸೇನೆಗಾಗಿ ನಿರ್ಮಾಣಗೊಂಡ ಈ ಎಸ್‌ಯುವಿಯ ಸಸ್ಪೆನ್ಷನ್‌ ವ್ಯವಸ್ಥೆಯನ್ನು ಅಪ್‌ಗ್ರೇಡ್‌ ಮಾಡಲಾಗಿದೆ. ಎಂಟಿವಿ ಸಿಎಲ್‌ ಡ್ಯಾಂಪರ್‌ಗಳನ್ನು ಬಳಸಲಾಗಿದೆ. ಬಾಡಿ ರೋಲ್‌ ನಿಯಂತ್ರಣಕ್ಕೆ ಪೂರಕವಾದ ಫೀಚರ್‌ಗಳನ್ನು ಅಳವಡಡಿಸಲಾಗಿದೆ.

ಮಹೀಂದ್ರ ಸ್ಕಾರ್ಪಿಯೊ ಎನ್‌

ಇತ್ತೀಚೆಗೆ ಮಹೀಂದ್ರ ಆಂಡ್‌ ಮಹೀಂದ್ರ ಕಂಪನಿಯು ಸ್ಕಾರ್ಪಿಯೊ ಎನ್‌ ಎಂಬ ಕಾರನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿತ್ತು. ಇದನ್ನು ಎಲ್ಲಾ ಸ್ಕಾರ್ಪಿಯೊಗಳ ದೊಡ್ಡಪ್ಪ ಎಂದು ಕರೆಯಲಾಗಿತ್ತು. ನೂತನ ಮಹೀಂದ್ರ ಸ್ಕಾರ್ಪಿಯೊ ಎನ್‌ನ ದಿಲ್ಲಿ ಎಕ್ಸ್‌ಶೋರೂಂ ಆರಂಭಿಕ ದರ 11.99 ಲಕ್ಷ ರೂಪಾಯಿ ಇದ್ದು, ಗ್ರಾಹಕರು ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಈ ದರವು ಮ್ಯಾನುಯಲ್‌ ಗಿಯರ್‌ ಬಾಕ್ಸ್‌ನ ಕಾರುಗಳದ್ದಾಗಿದೆ. ನೂತನ ಸ್ಕಾರ್ಪಿಯೊ ಎನ್‌ ಕಾರು Z2, Z4, Z6, Z8, ಮತ್ತು Z8L ಎಂಬ ಐದು ಆವೃತ್ತಿಗಳಲ್ಲಿ ಲಭ್ಯವಿದೆ. ಈ ಎಸ್‌ಯುವಿಯು ಆರು ಮತ್ತು ಏಳು ಸೀಟುಗಳ ಆಯ್ಕೆಗಳಲ್ಲಿ ದೊರಕಲಿದೆ. ಫುಲ್‌ ಎಲ್‌ಇಡಿ ಲೈಟಿಂಗ್‌, ಡ್ಯೂಯೆಲ್‌ ಝೋನ್‌ ಏಸಿ, ೮ ಇಂಚಿನ ಅಲೆಕ್ಸಾ ಇರುವ ಟಚ್‌ಸ್ಕ್ರೀನ್‌ ಇನ್ಫೋಟೈನ್‌ಮೆಂಟ್‌ ಸಿಸ್ಟಮ್‌, ವೈರ್‌ಲೆಸ್‌ ಆಂಡ್ರಾಯ್ಡ್‌ ಆಟೋ ಆಂಡ್‌ ಆಪಲ್‌ ಕಾರು ಪ್ಲೇ , ರಿಮೋಟ್‌ ಆಪರೇಷನ್‌ ಇತ್ಯಾದಿಗಳಿರುವ ಕನೆಕ್ಟೆಡ್‌ ಕಾರ್‌ ಟೆಕ್ನಾಲಜಿ, ಸೋನಿ ಸೌಂಡ್‌ ಸಿಸ್ಟಮ್‌ನ ೧೨ ಸ್ಪೀಕರ್‌, ಎಲೆಕ್ಟ್ರಿಕ್‌ ಸನ್‌ ರೂಫ್‌, ವೈರ್‌ಲೆಸ್‌ ಚಾರ್ಜಿಂಗ್‌, ಪವರ್‌ ಡ್ರೈವಿಂಗ್‌ ಸೀಟ್‌ ಸೇರಿದಂತೆ ಹಲವು ಫೀಚರ್‌ಗಳನ್ನು ನೂತನ ಮಹೀಂದ್ರ ಸ್ಕಾರ್ಪಿಯೊ ಎನ್‌ ಹೊಂದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ