logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Mp Cabinet: ಮಧ್ಯಪ್ರದೇಶದಲ್ಲಿ ಸಂಪುಟ ವಿಸ್ತರಣೆ: ಸಂಪುಟ ಸೇರಿದ ಕೇಂದ್ರದ ಮಾಜಿ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌

MP Cabinet: ಮಧ್ಯಪ್ರದೇಶದಲ್ಲಿ ಸಂಪುಟ ವಿಸ್ತರಣೆ: ಸಂಪುಟ ಸೇರಿದ ಕೇಂದ್ರದ ಮಾಜಿ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌

HT Kannada Desk HT Kannada

Dec 25, 2023 06:13 PM IST

ಮಧ್ಯ್ರದೇಶದಲ್ಲಿ ಸೋಮವಾರ ಸಚಿವ ಸಂಪುಟ ವಿಸ್ತರಣೆ ನಡೆದಿದೆ.

    • Madhya pradesh Cabinet expansion ಮಧ್ಯಪ್ರದೇಶದಲ್ಲಿ ಸಂಪುಟ ವಿಸ್ತರಣೆ ನಡೆದಿದ್ದು ಕೇಂದ್ರದಲ್ಲಿ ಸಚಿವರಾಗಿದ್ದ ಪ್ರಹ್ಲಾದ್‌ ಸಿಂಗ್‌ ಪಟೇಲ್‌ ಸೇರಿ 28 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಧ್ಯ್ರದೇಶದಲ್ಲಿ ಸೋಮವಾರ ಸಚಿವ ಸಂಪುಟ ವಿಸ್ತರಣೆ ನಡೆದಿದೆ.
ಮಧ್ಯ್ರದೇಶದಲ್ಲಿ ಸೋಮವಾರ ಸಚಿವ ಸಂಪುಟ ವಿಸ್ತರಣೆ ನಡೆದಿದೆ.

ಭೋಪಾಲ್‌; ಭಾರೀ ಬಹುಮತದೊಂದಿಗೆ ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸತತ ಕಸರತ್ತಿನ ಬಳಿಕ ಸಂಪುಟ ವಿಸ್ತರಣೆ ಮಾಡಿದೆ. ಈಗಾಗಲೇ ಸಿಎಂ ಆಗಿ ಪ್ರಮಾನ ವಚನ ಸ್ವೀಕರಿಸಿದ್ದ ಮೋಹನ್‌ ಯಾದವ್‌ ಸಂಪುಟಕ್ಕೆ 28 ಶಾಸಕರು ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ; ಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್‌

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಈವರೆಗೂ ಕೇಂದ್ರದಲ್ಲಿ ಸಚಿವರಾಗಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದ ಪ್ರಹ್ಲಾದ್‌ ಸಿಂಗ್‌ ಪಟೇಲ್‌ ಅವರೂ ಸಚಿವರಾಗಿ ಸೋಮವಾರ ಪದಗ್ರಹಣ ಮಾಡಿದರು. ಇವರೊಂದಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ಕೂಡ ಸಚಿವರಾದರು. ಮತ್ತೊಬ್ಬ ಕೇಂದ್ರ ಸಚಿವರಾಗಿದ್ದ ನರೇಂದ್ರ ಸಿಂಗ್‌ ತೋಮರ್‌ ಅವರು ಈಗಾಗಲೇ ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್‌ ಆಗಿದ್ದಾರೆ.

18 ಶಾಸಕರಿಗೆ ಸಂಪುಟ ದರ್ಜೆ ಸಚಿವರಾಗಿ ಹಾಗೂ 10 ಶಾಸಕರಾಗಿ ಕಿರಿಯ ಸಚಿವರಾಗಿ ಪ್ರಮಾಣ ವಚನವನ್ನು ಮಧ್ಯಪ್ರದೇಶದ ರಾಜ್ಯಪಾಲ ಮಂಗುಬಾಯಿ ಪಟೇಲ್‌ ಬೋಧಿಸಿದರು. ಇವರಲ್ಲಿ 12 ಸಚಿವರು ಹಿಂದುಳಿದ ವರ್ಗಕ್ಕೆ ಸೇರಿದ್ದರೆ, ಐವರು ಮಹಿಳೆಯರಿಗೆ ಸಚಿವರಾಗುವ ಅವಕಾಶ ದೊರೆತಿದೆ. ಹಿರಿಯರಾದ ನಿರ್ಮಲಾ ಬುರಿಯಾ, ನಾರಾಯಣ ಖುಷ್ವಾ, ನಗರಸಿಂಗ್‌ ಚೌಹಾಣ್‌, ಸಂಪತಿಯಾ ಯುಕೀ, ವಿಜಯಸಿಂಗ್‌, ಕರಣ್‌ ಸಿಂಗ್‌ ವರ್ಮ, ರಾಜೇಶ್‌ ಸಿಂಗ್‌, ವಿಶ್ವಾಸ್‌ ಸಾರಂಗ್‌, ರಾಕೇಶ್‌ ಶುಕ್ಲ, ಚೈತನ್ಯ ಕಶ್ಯಪ್‌, ಇಂದರ್‌ ಸಿಂಗ್‌ ಪರ್ಮರ್‌, ಉದಯಪ್ರತಾಪಸಿಂಗ್‌, ಪ್ರುದುಮನ್‌ ಸಿಂಗ್‌ ತೋಮರ್‌,ಗೋವಿಂದ ಸಿಂಗ್‌ ರಜಪೂತ್‌, ಐದಲ್‌ ಸಿಂಗ್‌ ಕನ್ಸಾನ ಪ್ರಮಾಣ ವಚನ ಸ್ವೀಕರಿಸಿದ ಸಚಿವರು.

ಮುಂದಿನ ಲೋಕಸಭೆ ಚುನಾವಣೆ ಗುರಿಯಲ್ಲಿಟ್ಟುಕೊಂಡು ಎಲ್ಲ ವರ್ಗ, ಸಮುದಾಯದವರಿಗೆ ಬಿಜೆಪಿ ನೂತನ ಸಂಪುಟದಲ್ಲಿ ಮಣೆ ಹಾಕಿದೆ. ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಮಾಜಿ ಸಿಎಂ ಶಿವರಾಜ ಸಿಂಗ್‌ ಚೌಹಾಣ್‌ ಬೆಂಬಲಿಗರಿಗೂ ಮಣೆ ಹಾಕಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ