logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  North India Weather: ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಮಂಗಳವಾರವೂ ಭಾರೀ ಮಳೆ ನಿರೀಕ್ಷೆ; ಒಡಿಶಾದಲ್ಲಿ ಮೋರಿ ಕುಸಿದು ಐವರು ಸಾವು

North India Weather: ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಮಂಗಳವಾರವೂ ಭಾರೀ ಮಳೆ ನಿರೀಕ್ಷೆ; ಒಡಿಶಾದಲ್ಲಿ ಮೋರಿ ಕುಸಿದು ಐವರು ಸಾವು

Meghana B HT Kannada

Jul 31, 2023 07:15 PM IST

ಉತ್ತರ ಭಾರತದಲ್ಲಿ ಭಾರೀ ಮಳೆ

    • Odisha Rain: ಮಂಗಳವಾರ ( ಆಗಸ್ಟ್ 1) ಒಡಿಶಾದಲ್ಲಿ 'ಅತಿ ಹೆಚ್ಚು' ಮಳೆ ಸುರಿಯಲಿದ್ದು, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗೋವಾ ಮತ್ತು ಮಹಾರಾಷ್ಟ್ರದ ಹಲವು ಭಾಗಗಳಲ್ಲಿ 'ಹೆಚ್ಚು' ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಭಾರತದಲ್ಲಿ ಭಾರೀ ಮಳೆ
ಉತ್ತರ ಭಾರತದಲ್ಲಿ ಭಾರೀ ಮಳೆ

ನವದೆಹಲಿ: ಉತ್ತರ ಭಾರತದಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು, ಅನೇಕ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಳೆ ಸಂಬಂಧಿತ ಅವಘಡಗಳು ಹೆಚ್ಚುತ್ತಿವೆ. ಮುಂದಿನ ಕೆಲ ದಿನಗಳ ವರೆಗೂ ಭಾರೀ ಮಳೆ ಮುಂದುವರೆಯಲಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ; ಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್‌

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಮಂಗಳವಾರ ( ಆಗಸ್ಟ್ 1) ಒಡಿಶಾದಲ್ಲಿ 'ಅತಿ ಹೆಚ್ಚು' ಮಳೆ ಸುರಿಯಲಿದ್ದು, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗೋವಾ ಮತ್ತು ಮಹಾರಾಷ್ಟ್ರದ ಹಲವು ಭಾಗಗಳಲ್ಲಿ 'ಹೆಚ್ಚು' ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಾರ್ಖಂಡ್, ಬಿಹಾರ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಒಡಿಶಾದ ಕಲ್ಯಾಣಸಿಂಗ್​ಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೋರಿ ಕುಸಿದು ನಾಲ್ವರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಎಡಬಿಡದೆ ಸುರಿದ ಮಳೆಯಿಂದಾಗಿ ಮೋರಿ ಕುಸಿದು ಬಿದ್ದಿದೆ. ನಿರ್ಮಾಣ ಹಂತದ ಮೋರಿಯ ಕೆಳಗೆ ಶೇಖರಣೆಯಾದ ಮಳೆ ನೀರಿನಲ್ಲಿ ಕೆಲವರು ಸ್ನಾನ ಮಾಡುತ್ತಿದ್ದರು, ಈ ವೇಳೆ ಮೋರಿ ಕುಸಿದಿದೆ.

ದೆಹಲಿ-ಎನ್​ಸಿಆರ್​ ಭಾಗಗಳಲ್ಲಿ ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದರೂ ಯಮುನಾ ನದಿ ಈಗಲೂ ಅಪಾಯಮಟ್ಟಕ್ಕಿಂತ ಕೇವಲ ಒಂದು ಅಡಿ ಕಡಿಮೆ ಹರಿಯುತ್ತಿದೆ. ಮಹಾರಾಷ್ಟ್ರದ ಅನೇಕ ಜಿಲ್ಲೆಗಳಲ್ಲಿ ಸೋಮವಾರ ಯೆಲ್ಲೋ ಅಲರ್ಟ್​ ನೀಡಲಾಗಿದೆ.

ನೈಋತ್ಯ ಅರೇಬಿಯನ್ ಸಮುದ್ರದ ಭಾಗಗಳಲ್ಲಿ ಗಂಟೆಗೆ 45-55 ಕಿಲೋ ಮೀಟರ್​ ಇದ್ದ ಗಾಳಿಯ 65 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ. ಪಶ್ಚಿಮ ಕೇಂದ್ರದ ಅರೇಬಿಯನ್ ಸಮುದ್ರದ ಭಾಗಗಳಲ್ಲಿ ಗಂಟೆಗೆ 55-65 ಕಿಲೋ ಮೀಟರ್​ ಇದ್ದ ಗಾಳಿಯ 75 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ.

ಗುಜರಾತ್​​ ಮತ್ತು ಮಹಾರಾಷ್ಟ್ರದ ಕರಾವಳಿ ಭಾಗಗಳಲ್ಲಿ ಗಂಟೆಗೆ 40-45 ಕಿಲೋ ಮೀಟರ್​ ಇದ್ದ ಗಾಳಿಯ 55 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ. ಬಂಗಾಳ ಕೊಲ್ಲಿಯ ಪಶ್ಚಿಮ ಕೇಂದ್ರ, ವಾಯುವ್ಯ ಮತ್ತು ಪೂರ್ವ ಮಧ್ಯ ಭಾಗಗಳಲ್ಲಿ ಗಂಟೆಗೆ 40-45 ಕಿಲೋ ಮೀಟರ್​ ಇದ್ದ ಗಾಳಿಯ 55 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ. ಈ ಪ್ರದೇಶಗಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ