logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  India News: ಹೊರಗಿನವರಿಗಿಂತ ದೇಶದೊಳಗಿನ ವಿರೋಧಿಗಳನ್ನು ಎದುರಿಸುವುದೇ ಸವಾಲು, ಅವರ ಚಿಂತನೆ ಬದಲಿಸೋಣ: ಆರ್‌ಎಸ್‌ಎಸ್‌ ಮುಖ್ಯಸ್ಥ

India News: ಹೊರಗಿನವರಿಗಿಂತ ದೇಶದೊಳಗಿನ ವಿರೋಧಿಗಳನ್ನು ಎದುರಿಸುವುದೇ ಸವಾಲು, ಅವರ ಚಿಂತನೆ ಬದಲಿಸೋಣ: ಆರ್‌ಎಸ್‌ಎಸ್‌ ಮುಖ್ಯಸ್ಥ

HT Kannada Desk HT Kannada

Jun 02, 2023 07:01 AM IST

ನಾಗ್ಪುರದಲ್ಲಿ ಮಾತನಾಡಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

    • ಕೆಲವು ಧರ್ಮಗಳು ಭಾರತದ ಹೊರಗಿನವು. ಅವುಗಳೊಂದಿಗೆ ನಾವು ಯುದ್ದ ಮಾಡಿದ್ದೇವೆ. ದೇಶದೊಳಗೆ ಆಗಿರುವ ಜಾತಿಯ ತಾರತಮ್ಯದ ನೋವನ್ನೂ ಅನುಭವಿಸಿದ್ದೇವೆ. ಹಿಂದೆ ನಾವು ಮಾಡಿದ ಇಂತಹ ತಪ್ಪುಗಳಿಗೆ ಈಗಲೂ ಪರಿತಪಿಸುತ್ತಿದ್ದೇವೆ ಎನ್ನುವುದು ಮೋಹನ್‌ ಭಾಗವತ್‌ ಬೇಸರದ ನುಡಿ.
ನಾಗ್ಪುರದಲ್ಲಿ ಮಾತನಾಡಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌
ನಾಗ್ಪುರದಲ್ಲಿ ಮಾತನಾಡಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ನಾಗ್ಪುರ: ಈಗ ಭಾರತಕ್ಕೆ ಹೊರಗಿನ ದೇಶದವರ ತೊಂದರೆ ಕಡಿಮೆಯಾಗಿದೆ. ಆದರೆ ದೇಶದೊಳಗೆ ಇರುವ ವಿರೋಧಿಗಳನ್ನು ಎದುರಿಸುವ ಸವಾಲು ನಮ್ಮ ಮುಂದೆ ಇದೆ. ಅವರ ಚಿಂತನೆಗಳನ್ನೂ ಬದಲಾಯಿಸಲು ಪ್ರಯತ್ನಿಸೋಣ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ನಾಗ್ಪುರದಲ್ಲಿ ಆಯೋಜನೆಗೊಂಡಿದ್ದ ಆರ್‌ಎಸ್‌ಎಸ್‌ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ದೇಶದ ಹಿಂದಿನ ಹಾಗೂ ಈಗಿನ ಸ್ಥಿತಿಗತಿಯನ್ನು ಅವಲೋಕಿಸಿದರು.

ಹೊರಗಿನವರು ಈಗ ಹೋಗಿದ್ದಾರೆ. ಈಗ ಎಲ್ಲರೂ ಒಳಗಿನವರೇ. ಆದರೂ ಹೊರಗಿನವರ ವಿಚಾರಗಳ ಪ್ರೇರಣೆಯಲ್ಲಿ ಹಲವರು ಇದ್ದಾರೆ. ಕೆಲವು ವಿಷಯಗಳಲ್ಲಿ ಗೊಂದಲ ಸೃಷ್ಟಿಸುವುದು ನಡೆದೇ ಇದೆ. ಅವರೆಲ್ಲಾ ನಮ್ಮವರೇ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಅವರ ಚಿಂತನೆಯಲ್ಲಿ ಬದಲಾವಣೆ ಆಗಬೇಕೆಂದಿದ್ದರೆ ಅದನ್ನೂ ಮಾಡೋಣ ಎಂದು ಹೇಳಿದರು.

ಕೆಲವು ಧರ್ಮಗಳು ಭಾರತದ ಹೊರಗಿನವು. ಅವುಗಳೊಂದಿಗೆ ನಾವು ಯುದ್ದ ಮಾಡಿದ್ದೇವೆ. ಭಾರತದಲ್ಲಿ ಇಸ್ಲಾಂ ಯಾವಾಗಲೂ ಸುರಕ್ಷಿತ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಇನ್ನು ದೇಶದೊಳಗೆ ಆಗಿರುವ ಜಾತಿಯ ತಾರತಮ್ಯದ ನೋವನ್ನೂ ಅನುಭವಿಸಿದ್ದೇವೆ. ಹಿಂದೆ ನಾವು ಮಾಡಿದ ಇಂತಹ ತಪ್ಪುಗಳಿಗೆ ಈಗಲೂ ಪರಿತಪಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಜಾಗತಿಕ ಆರ್ಥಿಕ ಕುಸಿತ ಹಾಗೂ ಕೋವಿಡ್‌ ಸಂಕಷ್ಟವನ್ನು ಭಾರತ ಸಮರ್ಥವಾಗಿಯೇ ಎದುರಿಸಿದೆ. ಈಗ ಭಾರತಕ್ಕೆ ಜಿ 20 ಅಧ್ಯಕ್ಷತೆಯ ಅವಕಾಶ ಈ ವರ್ಷ ಬಂದಿದೆ. ಇದು ನಿಜಕ್ಕೂ ಹೆಮ್ಮೆ ಪಡಬೇಕಾದ ವಿಷಯಗಳೇ. ನಮ್ಮಲ್ಲಿ ಜಾತಿ, ಧರ್ಮದ ವಿಚಾರದಲ್ಲಿ ಇನ್ನೂ ಭಿನ್ನಾಭಿಪ್ರಾಯಗಳು ಇವೆ. ಇವುಗಳನ್ನು ಬಗೆಹರಿಸಿಕೊಳ್ಳುವ ಜತೆಗೆ ದೇಶವನ್ನು ಇನ್ನಷ್ಟು ಸದೃಢಗೊಳಿಸಲು ನಮ್ಮ ಯೋಚನೆಗಳನ್ನೂ ಗಟ್ಟಿಗೊಳಿಸಿಕೊಳ್ಳಬೇಕು. ಹೀಗಿದ್ದರೂ ನಾವು ಭಾರತದ ಗಡಿಯಲ್ಲಿನ ವಿರೋಧಿಗಳಿಗೆ ನಮ್ಮ ಶಕ್ತಿ ಪ್ರದರ್ಶಿಸುವ ಬದಲು ಆಂತರಿಕವಾಗಿ ಕಚ್ಚಾಡುವುದನ್ನು ನಿಲ್ಲಿಸಿಲ್ಲ. ಭಾರತದ ಏಕತೆ ಹಾಗೂ ಸಮಗ್ತತೆ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂಬುದು ಅವರ ಸಲಹೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ