logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಮೇನ್ಸ್ ಎಕ್ಸಾಂ ನಾಳೆಯಿಂದ ಶುರು, 5 ಅಂಶದ ಪರೀಕ್ಷಾ ಮಾರ್ಗಸೂಚಿ ಹೀಗಿದೆ ನೋಡಿ

ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಮೇನ್ಸ್ ಎಕ್ಸಾಂ ನಾಳೆಯಿಂದ ಶುರು, 5 ಅಂಶದ ಪರೀಕ್ಷಾ ಮಾರ್ಗಸೂಚಿ ಹೀಗಿದೆ ನೋಡಿ

HT Kannada Desk HT Kannada

Sep 14, 2023 05:52 PM IST

ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಮೇನ್ಸ್ ಎಕ್ಸಾಂ ನಾಳೆಯಿಂದ ಶುರು (ಸಾಂಕೇತಿಕ ಚಿತ್ರ)

  • ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ಮೇನ್ಸ್ ನಾಳೆಯಿಂದ ಶುರುವಾಗುತ್ತಿದೆ. ಸೆ.24ರಂದು ಕೊನೇ ಪರೀಕ್ಷೆ ನಡೆಯಲಿದೆ. ಎರಡು ಪಾಳಿಯಲ್ಲಿ ಅಂದರೆ ಬೆಳಗ್ಗೆ ಮತ್ತು ಮಧ್ಯಾಹ್ನ ನಂತರ ಪರೀಕ್ಷೆಗಳು ನಡೆಯಲಿವೆ. 

 ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಮೇನ್ಸ್ ಎಕ್ಸಾಂ ನಾಳೆಯಿಂದ ಶುರು (ಸಾಂಕೇತಿಕ ಚಿತ್ರ)
ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಮೇನ್ಸ್ ಎಕ್ಸಾಂ ನಾಳೆಯಿಂದ ಶುರು (ಸಾಂಕೇತಿಕ ಚಿತ್ರ) (HT)

ಯುಪಿಎಸ್‌ಸಿ ಸಿವಿಲ್ ಸರ್ವೀಸಸ್‌ ಮೇನ್ಸ್ 2023ರ (UPSC Civil Services Mains 2023) ಪರೀಕ್ಷೆ ನಾಳೆ (ಸೆಪ್ಟೆಂಬರ್ 15) ಶುರುವಾಗುತ್ತಿದೆ. ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್‌ (Union Public Service Commission) ಈ ಪರೀಕ್ಷೆ ನಡೆಸುತ್ತಿದ್ದು, ಪರೀಕ್ಷೆಯು ಸೆಪ್ಟೆಂಬರ್ 15, 16,17, 23 ಮತ್ತು 24ರಂದು ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

ಪರೀಕ್ಷೆ ಎರಡು ಪಾಳಿಯಲ್ಲಿ ಅಂದರೆ ನಿಗದಿತ ದಿನಾಂಕದಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12ರ ತನಕ ಮತ್ತು ಅಪರಾಹ್ನ 2 ಗಂಟೆಯಿಂದ ಸಂಜೆ 5 ತನಕ ನಡೆಯಲಿದೆ.

ಇದನ್ನೂ ಓದಿ| ವೈದ್ಯ ವೃತ್ತಿ ಬಿಟ್ಟು ಐಎಎಸ್‌ ಆಫೀಸರ್‌ ಆದ ಮುದ್ರಾ ಸಕ್ಸಸ್‌ ಸ್ಟೋರಿ, ಯುಪಿಎಸ್‌ಸಿ ಪರೀಕ್ಷೆ ಬರೆಯುವವರಿಗೆ ಸ್ಫೂರ್ತಿದಾಯಕ

ಅಡ್ಮಿಟ್‌ ಕಾರ್ಡ್ ಅನ್ನು ಆಗಸ್ಟ್ 29 ರಂದು ಬಿಡುಗಡೆ ಮಾಡಲಾಗಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ. ಆದರೆ, ಪರೀಕ್ಷಾ ಕೇಂದ್ರಕ್ಕೆ ಹೋಗುವ ಮೊದಲು ಅಭ್ಯರ್ಥಿಗಳು ಈ ಕೆಳಗಿನ ಮಾರ್ಗಸೂಚಿಗಳನ್ನು ಗಮನಿಸುವುದು ಒಳಿತು.

  1. ಪರೀಕ್ಷೆಗೆ ಹಾಜರಾಗುವ ಎಲ್ಲ ಅಭ್ಯರ್ಥಿಗಳು ತಮ್ಮ ಇ-ಪ್ರವೇಶ ಪತ್ರವನ್ನು ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯಬೇಕು. ಪ್ರವೇಶ ಪತ್ರವಿಲ್ಲದೆ ಪರೀಕ್ಷಾ ಕೇಂದ್ರಕ್ಕೆ ಹೋದರೆ ಪರೀಕ್ಷೆ ಬರೆಯಲು ಅವಕಾಶ ಸಿಗದು.
  2. ಅಭ್ಯರ್ಥಿಗಳು ನಿಗದಿತ ಸಮಯಕ್ಕೆ ಪರೀಕ್ಷಾ ಸ್ಥಳಕ್ಕೆ ಪ್ರವೇಶಿಸಬೇಕು. ಪರೀಕ್ಷೆಯ ನಿಗದಿತ ಆರಂಭಕ್ಕೆ 10 ನಿಮಿಷಗಳ ಮೊದಲು ಪರೀಕ್ಷಾ ಕೊಠಡಿ ಬಾಗಿಲು ಮುಚ್ಚಲಾಗುತ್ತದೆ. ಇಷ್ಟಾದ ಬಳಿಕ ಯಾವುದೇ ಅಭ್ಯರ್ಥಿಗೆ ಪರೀಕ್ಷಾ ಕೊಠಡಿಗೆ ಪ್ರವೇಶ ಸಿಗುವುದಿಲ್ಲ.
  3. ಪರೀಕ್ಷಾರ್ಥಿಗಳು ಕಪ್ಪು ಬಾಲ್ ಪಾಯಿಂಟ್ ಪೆನ್ನನ್ನು ಕೊಂಡೊಯ್ಯಬೇಕು. ರಫ್‌ ವರ್ಕ್‌ ಮಾಡುವುದಕ್ಕೆ ಮತ್ತು ಹಾಜರಾತಿ ಹಾಕುವುದಕ್ಕೆ ಕಪ್ಪು ಬಾಲ್‌ ಪಾಯಿಂಟ್ ಪೆನ್‌ ಮಾತ್ರ ಬಳಸುವುದಕ್ಕೆ ಅವಕಾಶವಿದೆ.
  4. ಪರೀಕ್ಷಾ ಕೊಠಡಿ/ ಹಾಲ್‌ನಲ್ಲಿ ಅಭ್ಯರ್ಥಿಗಳು ಸಾಮಾನ್ಯ ಅಥವಾ ಸರಳ ಕೈಗಡಿಯಾರಗಳ ಬಳಕೆಗೆ ಅನುಮತಿ ಇದೆ. ಆದಾಗ್ಯೂ, ಸಂವಹನ ಸಾಧನ ಅಥವಾ ಸ್ಮಾರ್ಟ್ ವಾಚ್‌ಗಳಾಗಿ ಬಳಸಬಹುದಾದ ಯಾವುದೇ ವಿಶೇಷ ಪರಿಕರ ಅಳವಡಿಸಲಾಗಿರುವ ಕೈಗಡಿಯಾರಗಳ ಬಳಕೆಗೆ ಕಡ್ಡಾಯವಾಗಿ ಅವಕಾಶ ಇಲ್ಲ.
  5. ಮೊಬೈಲ್ ಫೋನ್, (ಸ್ವಿಚ್ ಆಫ್ ಮೋಡ್‌ನಲ್ಲಿಯೂ ಸಹ), ಪೇಜರ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು ಅಥವಾ ಪ್ರೊಗ್ರಾಮೆಬಲ್ ಸಾಧನ ಅಥವಾ ಪೆನ್ ಡ್ರೈವ್, ಸ್ಮಾರ್ಟ್ ವಾಚ್‌ಗಳು ಮುಂತಾದ ಸ್ಟೋರೇಜ್‌ ಡಿವೈಸ್‌ಗಳನ್ನು ಅಥವಾ ಕ್ಯಾಮರಾ ಅಥವಾ ಬ್ಲೂಟೂತ್ ಸಾಧನಗಳು ಅಥವಾ ಯಾವುದೇ ಇತರ ಉಪಕರಣಗಳು ಅಥವಾ ಸಂಬಂಧಿತ ಪರಿಕರಗಳನ್ನು ಪರೀಕ್ಷಾ ಹಾಲ್ ಒಳಗೆ ಕೊಂಡೊಯ್ಯುವಂತೆ ಇಲ್ಲ. ಅದಕ್ಕೆ ಅನುಮತಿ ಇಲ್ಲ.

ಇದನ್ನೂ ಓದಿ| ಯುಪಿಎಸ್‌ಸಿ ಪರೀಕ್ಷೆ ಬರೆಯೋರಿಗೆ ಸ್ಪೂರ್ತಿ ನೀಡುವ ಡಾ. ತನು ಜೈನ್‌ ಕೇಂದ್ರ ನಾಗರಿಕ ಸೇವಾ ಹುದ್ದೆ ಬಿಟ್ಟದ್ದು ಏಕೆ, ಇಲ್ಲಿದೆ ಉತ್ತರ

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್ ಗಮನಿಸಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ