logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Independence Day: ಪಿಎಂ ಮೋದಿಗೆ ಚಟ್ನಿ ಕಳುಹಿಸಿದ್ದ ಮಹಿಳೆಗೆ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ಆಹ್ವಾನ

Independence Day: ಪಿಎಂ ಮೋದಿಗೆ ಚಟ್ನಿ ಕಳುಹಿಸಿದ್ದ ಮಹಿಳೆಗೆ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ಆಹ್ವಾನ

Meghana B HT Kannada

Aug 13, 2023 04:01 PM IST

ದೆಹಲಿಯ ಕೆಂಪು ಕೋಟೆ

    • Independence Day at Red Fort: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಫ್​ಪಿಒ ವತಿಯಿಂದ ಚಟ್ನಿಯನ್ನು ಕಳುಹಿಸಿಕೊಟ್ಟಿದ್ದ ಮಹಿಳೆಗೆ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ಆಹ್ವಾನಿಸಲಾಗಿದೆ. 
ದೆಹಲಿಯ ಕೆಂಪು ಕೋಟೆ
ದೆಹಲಿಯ ಕೆಂಪು ಕೋಟೆ

ನವದೆಹಲಿ: ಆಗಸ್ಟ್ 15 ರಂದು ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಅತಿಥಿಗಳಾಗಿ ಉತ್ತರಾಖಂಡದ ಕೇಂದ್ರ ಸರ್ಕಾರದ ಯೋಜನೆಗಳ 8 ಫಲಾನುಭವಿಗಳನ್ನು ಆಹ್ವಾನಿಸಲಾಗಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ; ಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್‌

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಧ್ವಜಾರೋಹಣವನ್ನು ವೀಕ್ಷಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರವನ್ನು ಉದ್ದೇಶಿಸಿ ಮಾಡುವ ಭಾಷಣವನ್ನು ಕೇಳಲು ದೇಶಾದ್ಯಂತದ ಜಲ ಜೀವನ್ ಮಿಷನ್, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಅಮೃತ್ ಸರೋವರ ಯೋಜನೆ ಮುಂತಾದ ವಿವಿಧ ಕೇಂದ್ರ ಸರ್ಕಾರದ ಯೋಜನೆಗಳ ಸುಮಾರು 1,700 ಫಲಾನುಭವಿಗಳನ್ನು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

1,700 ಫಲಾನುಭವಿಗಳ ಪೈಕಿ ಉತ್ತರಾಖಂಡದ 8 ಮಂದಿ ಹಾಗೂ ಕರ್ನಾಟಕದ 31 ಜನರು ಇದ್ದಾರೆ. ಕರ್ನಾಟಕದ 31 ಮಂದಿಯಲ್ಲಿ ಶಿಕ್ಷಕರು, ಮೀನುಗಾರರು, ಜಲ ಜೀವನ್ ಮಿಷನ್‌ನ ಫಲಾನುಭವಿಗಳು, ಕುಶಲಕರ್ಮಿಗಳೂ ಸೇರಿದ್ದಾರೆ. ದೆಹಲಿ ಭೇಟಿಯ ಸಮಯದಲ್ಲಿ, ವಿಶೇಷ ಅತಿಥಿಗಳು ರಾಷ್ಟ್ರೀಯ ಯುದ್ಧ ಸ್ಮಾರಕ ಮತ್ತು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯಕ್ಕೂ ಭೇಟಿ ನೀಡುವ ಅವಕಾಶವನ್ನು ಪಡೆಯುತ್ತಾರೆ.

ಫಾರ್ಮರ್ ಪ್ರೊಡ್ಯುಸರ್​ ಆರ್ಗನೈಸೇಶನ್​ (FPO)ನ ಫಲಾನುಭವಿ ಭರತ್ ಸಿಂಗ್ ರೌಟೇಲಾ ಹಾಗೂ ಅವರ ಪತ್ನಿ ಸುನೀತಾ ರೌಟೇಲಾ ಇಬ್ಬರಿಗೂ ಸ್ವಾತಂತ್ರ್ಯ ದಿನಾಚರಣೆಗೆ ಆಹ್ವಾನ ನೀಡಲಾಗಿದೆ. ಇವರು ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ದೂರದ ಪ್ರದೇಶವಾದ ಭಟ್ವಾರಿಯ ಝಾಲಾ ಗ್ರಾಮದವರಾಗಿದ್ದಾರೆ. ಸುನೀತಾ ರೌಟೇಲಾ ಅವರು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಫ್​ಪಿಒ ವತಿಯಿಂದ ಚಟ್ನಿಯನ್ನು ಕಳುಹಿಸಿಕೊಟ್ಟಿದ್ದರು. ಇದೀಗ ಅವರನ್ನೂ ಕೆಂಪುಕೋಟೆಗೆ ಆಹ್ವಾನಿಸಲಾಗಿದೆ.

ಇನ್ನು ಜಲ ಜೀವನ್ ಮಿಷನ್‌ನ ಫಲಾನುಭವಿ ಭಾವನಾ ಶರ್ಮಾ ಮತ್ತು ನೈನಿತಾಲ್ ಜಿಲ್ಲೆಯ ರಂಜೀತ್‌ಪುರ ಗ್ರಾಮದ ದಿನೇಶ್ ಚಂದ್ರ ತ್ರಿಪಾಠಿ ಅವರನ್ನೂ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಮೋದಿಯವರ ಭಾಷಣವನ್ನು ಲೈವ್​ ಆಗಿ ಕೇಳಲು ಸಂತಸ ವ್ಯಕ್ತಪಡಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ