logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಅವರ ಜನ್ಮದಿನಾಂಕ ನನಗೆ ಕರಾಳ ದಿನ!, ಹೀಗಂದವರು ಬೇರಾರೂ ಅಲ್ಲ ಉಪರಾಷ್ಟ್ರಪತಿ ಜಗದೀಪ್‌ ಧನಕರ್- ಇಲ್ಲಿದೆ ಕಾರಣ

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಅವರ ಜನ್ಮದಿನಾಂಕ ನನಗೆ ಕರಾಳ ದಿನ!, ಹೀಗಂದವರು ಬೇರಾರೂ ಅಲ್ಲ ಉಪರಾಷ್ಟ್ರಪತಿ ಜಗದೀಪ್‌ ಧನಕರ್- ಇಲ್ಲಿದೆ ಕಾರಣ

HT Kannada Desk HT Kannada

Nov 04, 2023 02:20 PM IST

ಉಪರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

  • ಕಳೆದ ಒಂದು ವಾರದ ಅವಧಿಯಲ್ಲಿ ಕೆಲವು ವಿದ್ಯಮಾನಗಳು ದೇಶದ ಗಮನಸೆಳೆದಿವೆ. ಆ ಪೈಕಿ ಕೆಲವು ಘಟನೆಗಳಲ್ಲಿ ಹಾಸ್ಯ ಒಳಗೊಂಡಿದೆ. ಅಂತಹ ಎರಡು ಘಟನೆಗಳನ್ನು ಇಲ್ಲಿ ನೀಡಲಾಗಿದೆ. ಮೊದಲನೆಯದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಹಾಸ್ಯಪ್ರಜ್ಞೆ, ಇನ್ನೊಂದು ರಾಮನಗರ ಜಿಲ್ಲೆಯ ಮರುನಾಮಕರಣದ ವಿಚಾರ.

ಉಪರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ
ಉಪರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಉಪರಾಷ್ಟ್ರಪತಿ ಜಗದೀಪ್ ಧನಕರ್ ಪ್ರೊಟೋಕಾಲ್‌ ಕುರಿತು ತಲೆಕೆಡಿಸಿಕೊಂಡವರಲ್ಲ. ಹೇಳಬೇಕಾದ್ದನ್ನು ಹೇಳಿಬಿಡುವುದು, ಆಮೇಲಿಂದಾಮೇಲೆ ಎನ್ನುವುದು ಅವರ ನಡವಳಿಕೆಯ ಭಾಗವಾಗಿ ಗೋಚರಿಸುತ್ತದೆ. ಅವರು ಇತ್ತೀಚೆಗೆ ಗುವಾಹಟಿ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮದ ವೇದಿಕೆ ಏರಿದವರು ಅಸ್ಸಾಂ ರಾಜ್ಯಪಾಲ ಗುಲಾಬ್‌ ಚಂದ್‌ ಕಟಾರಿಯಾ ಅವರ ಕಾಲಿಗೆರಗಿದರು.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ಅರೆ ಪ್ರೊಟೋಕಾಲ್ ಪ್ರಕಾರ, ಉಪರಾಷ್ಟ್ರಪತಿ ಸ್ಥಾನದಲ್ಲಿರುವವರು ರಾಜ್ಯಪಾಲರ ಕಾಲು ಹಿಡಿದು ನಮಸ್ಕರಿಸುವುದು ಎಂದರೆ! ಅಚ್ಚರಿ ಅನಿಸುತ್ತೆ ಅಲ್ವ. ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಈ ನಡವಳಿಕೆಯನ್ನು ಹೇಗೆ ಸಮರ್ಥಿಸಿಕೊಂಡಿರಬಹುದು ಕುತೂಹಲ ಇದೆ ಅಲ್ವ.

ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ 72 ವರ್ಷ ವಯಸ್ಸು. ಅಸ್ಸಾಂ ರಾಜ್ಯಪಾಲ ಗುಲಾಬ್‌ ಚಂದ್‌ ಕಟಾರಿಯಾ ಅವರಿಗೆ 79 ವರ್ಷ ವಯಸ್ಸು. ಭಾರತೀಯ ಪರಂಪರೆಯ ಪ್ರಕಾರ ವಯಸ್ಸಿನಲ್ಲಿ ಹಿರಿಯರಾದವರ ಆಶೀರ್ವಾದ ಪಡೆಯವುದು ವಾಡಿಕೆ. ಅದೇ ಸಂಪ್ರದಾಯವನ್ನು ಇಲ್ಲಿ ಪಾಲಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ವಿಶೇಷ ಎಂದರೆ ಇಬ್ಬರೂ ರಾಜಸ್ಥಾನ ಮೂಲದವರು ಎಂದು ಇಂಡಿಯಾ ಟುಡೇ ತನ್ನ ಗ್ಲಾಸ್‌ಹೌಸ್ ನಿಯತ ಲಘುದಾಟಿಯ ಕಾಲಂನಲ್ಲಿ ತಿಳಿಸಿದೆ.

ಹಾಗೆ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಜನ್ಮದಿನದ ವಿಚಾರ ಪ್ರಸ್ತಾಪವಾಯಿತು. ಅವರು ಫೆಬ್ರವರಿ 1ರಂದು ಜನಿಸಿದವರು. ಫೆಬ್ರವರಿ 1 ನನ್ನ ಪಾಲಿಗೆ ಕರಾಳ ದಿನ. ಅದು ನನ್ನ ಬದುಕಿನ ದುರಂತ ದಿನ ಎಂದು ಮಾತು ನಿಲ್ಲಿಸಿದರು.

ಹೌದು ಅವರ ಮಾತು ನಿಂತ ಕೂಡಲೇ ನೆರೆದ ಸಭಿಕರೆಲ್ಲರ ಅಚ್ಚರಿಯಿಂದ ಹುಬ್ಬೇರಿಸಿದರೆ, ಅಲ್ಲೆಲ್ಲ ಒಂದು ರೀತಿಯ ಕಸಿವಿಸಿಯ ವಾತಾವರಣ. ಕಾರಣ ಇಷ್ಟೆ- ಅವರು ಹಿಮಂತ ಬಿಸ್ವಾ ಶರ್ಮಾ ಅವರ ಜನ್ಮದಿನ ಅವರ ಬದುಕಿನ ಕರಾಳ ದಿನ ಎಂದು ಹೇಳಿದ್ದು ಗೊಂದಲ ಸೃಷ್ಟಿಸಿತ್ತು.

ಅಲ್ಪ ವಿರಾಮದ ಬಳಿಕ ಮಾತು ಮುಂದುವರಿಸಿದ ಉಪರಾಷ್ಟ್ರಪತಿ ಜಗದೀಪ್ ಧನಕರ್, "ನಿಮಗೆ ಗೊತ್ತಿರಲಿ. ಅದೇ ದಿನ ನಾನು ಮದುವೆಯಾದ ದಿನ" ಎಂದು ಹೇಳಿದರು. ಆಗ ಅಲ್ಲೊಂದು ತಿಳಿಹಾಸ್ಯದ ವಾತಾವರಣ ನಿರ್ಮಾಣವಾಗಿ ಉದ್ವಿಗ್ನತೆ ತಿಳಿಯಾಯಿತು. ಬಹುಶಃ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಹಾಸ್ಯಪ್ರಜ್ಞೆ ಕೊಂಡಾಡಲು ಅವರ ಶ್ರೀಮತಿಯವರು ಅಲ್ಲಿರಲಿಲ್ಲ ಅಂತ ಅನ್ಸುತೆ..

ರಾಮನಗರ ಹೆಸರಿನಲ್ಲೇನಿದೆ - ಡಿಕೆ ಶಿವಕುಮಾರ್ ಮತ್ತು ಹೆಚ್‌ ಡಿ ಕುಮಾರಸ್ವಾಮಿ ಅವರಿಗೆ ಎಲ್ಲವೂ ಅದರಲ್ಲೇ ಇದೆಯಂತೆ!

ಡಿಸಿಎಂ ಡಿಕೆ ಶಿವಕುಮಾರ್ vs ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು ಮಹಾನಗರದ ದಕ್ಷಿಣಕ್ಕೆ ಇರುವಂತಹ ಜಿಲ್ಲೆ ರಾಮನಗರ. ರಾಜಕೀಯ ಅಂದ್ರೆ ಕೇಳಬೇಕಾ? ಒಬ್ಬರನ್ನೊಬ್ಬರು ಕೆಣಕುವುದು, ಕಾಲೆಳೆಯುವುದು ಇದ್ದೇ ಇರುತ್ತದೆ. ಕಳೆದ ವಾರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕನಕಪುರ ತಾಲೂಕು ಬೆಂಗಳೂರಿನ ಭಾಗ ಎಂದು ಹಲವರ ತಲೆಗೆ ಹುಳಬಿಟ್ಟರು. ಇದಕ್ಕೆ ಮೊದಲ ಪ್ರತಿಕ್ರಿಯೆ ರಾಮನಗರ ಜಿಲ್ಲೆ ರಚನೆಗೆ ಮುತುವರ್ಜಿವಹಿಸಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರದ್ದು.

ಅಲ್ಲಿಗೆ ಡಿಕೆ ಶಿವಕುಮಾರ್ ರಾಜಕೀಯ ಟಾರ್ಗೆಟ್ ಸ್ಪಷ್ಟವಾಯಿತು. ರಾಮನಗರ ಜಿಲ್ಲೆಯಲ್ಲಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಅವರು ರಾಜಕೀಯವಾಗಿ ಅತ್ಯಂತ ಪ್ರಭಾವಿಗಳು. ಕನಕಪುರ ತಾಲೂಕು ಮತ್ತು ಸುತ್ತಮುತ್ತ ಡಿಕೆ ಶಿವಕುಮಾರ್ ಪ್ರಭಾವಿಯಾದರೆ ಕುಮಾರಸ್ವಾಮಿಯೂ ಕಡಿಮೆ ಇಲ್ಲ. ಈ ನಡುವೆ, ರಾಮನಗರ ಜಿಲ್ಲೆಯ ಹೆಸರು ಮರುನಾಮಕರಣದ ವಿಚಾರವೂ ಪ್ರಸ್ತಾಪವಾಯಿತು ನೋಡಿ.

ಹಿಂದೊಮ್ಮೆ 2007ರಲ್ಲಿ ಬೆಂಗಳೂರು ಗ್ರಾಮಾಂತರದ ಭಾಗವಾಗಿದ್ದ ರಾಮನಗರ, ಕನಕಪುರ ಸೇರಿ ಕೆಲವು ತಾಲೂಕುಗಳನ್ನು ಪ್ರತ್ಯೇಕಿಸಿ ರಾಮನಗರ ಜಿಲ್ಲೆಯನ್ನು ರಚಿಸಲಾಗಿತ್ತು. ಇದು ಹೆಚ್ ಡಿ ಕುಮಾರಸ್ವಾಮಿ ಆಗಿದ್ದಾಗಲೇ ನಡೆದಿತ್ತು. ಈಗ ರಾಮನಗರ ಜಿಲ್ಲೆ ಮರುನಾಮಕರಣ, ಕನಕಪುರ ಬೆಂಗಳೂರು ಸೇರ್ಪಡೆ ಕುಮಾರಸ್ವಾಮಿ ಅವರಿಗೆ ರಾಜಕೀಯ ಸವಾಲಾಗಿ ಕಾಡಿದ್ದು, ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ.

ರಾಮನಗರ ಎಂದಾಕ್ಷಣ ನೆನಪಾಗುವುದು 1970ರ ದಶಕದ ಶೋಲೆ ಚಿತ್ರ ಮತ್ತು ಗಬ್ಬರ್ ಸಿಂಗ್. ಈಗ ಗಬ್ಬರ್ ಸಿಂಗ್ ಬಂದರೂ ಈ ಹೆಸರಿನ ವಿವಾದ ಬಗೆಹರಿಸುವುದು ಕಷ್ಟವೋ ಏನೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ!

ಆರೋಗ್ಯ, ಸೌಂದರ್ಯ, ಜ್ಯೋತಿಷ್ಯ, ಹಬ್ಬ, ದೇಗುಲ... ಬದುಕಿನ ಸಂಭ್ರಮ ಹೆಚ್ಚಿಸುವ ಸಮಗ್ರ ಮಾಹಿತಿಗಾಗಿ "ಎಚ್‌ಟಿ ಕನ್ನಡ ಸಂಭ್ರಮ" ಕಮ್ಯುನಿಟಿಗೆ ಸೇರಿ. ಕಮ್ಯುನಿಟಿಗೆ ಸೇರಲು ಲಿಂಕ್: https://chat.whatsapp.com/JD3PfTHJMw6E4n53xdjBdu

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ