logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಹಿಳಾ ಮೀಸಲಾತಿ ಮಸೂದೆ ಕುರಿತು ಸೋನಿಯಾ ಗಾಂಧಿ, ಸ್ಮೃತಿ ಇರಾನಿ, ಮಹುವಾ ಮೊಯಿತ್ರಾ ಲೋಕಸಭೆಯಲ್ಲಿ ಹೇಳಿರುವುದೇನು, ಇಲ್ಲಿದೆ ವಿವರ

ಮಹಿಳಾ ಮೀಸಲಾತಿ ಮಸೂದೆ ಕುರಿತು ಸೋನಿಯಾ ಗಾಂಧಿ, ಸ್ಮೃತಿ ಇರಾನಿ, ಮಹುವಾ ಮೊಯಿತ್ರಾ ಲೋಕಸಭೆಯಲ್ಲಿ ಹೇಳಿರುವುದೇನು, ಇಲ್ಲಿದೆ ವಿವರ

Umesh Kumar S HT Kannada

Sep 20, 2023 09:52 PM IST

ರಾಜ್ಯ ಸಭೆಯ ದೃಶ್ಯ (ಕಡತ ಚಿತ್ರ)

  • ಲೋಕಸಭೆಯಲ್ಲಿ ಮಹತ್ವದ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದೆ. ಸಂಸತ್ತಿನ ವಿಶೇಷ ಅಧಿವೇಶನದ ಭಾಗವಾಗಿ ಇಂದು ಲೋಕಸಭೆಯಲ್ಲಿ ಈ ಮಸೂದೆ ಕುರಿತು ಸದಸ್ಯರು ಬಿಸಿಬಿಸಿ ಚರ್ಚೆಯಲ್ಲಿ ಭಾಗವಹಿಸಿದರು. ಸೋನಿಯಾ ಗಾಂಧಿ, ಸ್ಮೃತಿ ಇರಾನಿ, ಮಹುವಾ ಮೊಯಿತ್ರಾ ಏನೇನು ಹೇಳಿದ್ರು, ಇಲ್ಲಿದೆ ವಿವರ. 

ರಾಜ್ಯ ಸಭೆಯ ದೃಶ್ಯ (ಕಡತ ಚಿತ್ರ)
ರಾಜ್ಯ ಸಭೆಯ ದೃಶ್ಯ (ಕಡತ ಚಿತ್ರ) (PTI / HT_PRINT )

ಹೊಸ ಸಂಸತ್ ಭವನದಲ್ಲಿ ನಡೆದ ಲೋಕ ಸಭಾ ಕಲಾಪದಲ್ಲಿ ಬುಧವಾರ (ಸೆ.20) ಮಹಿಳಾ ಮೀಸಲಾತಿ ಮಸೂದೆ ಮೇಲಿನ ಚರ್ಚೆ ಬಿಸಿಬಿಸಿ ವಾಕ್ಸಮರಕ್ಕೆ ಕಾರಣವಾಯಿತು. ಆದರೂ, ಇಬ್ಬರ ವಿರೋಧದ ನಡುವೆ 454 ಮತ ಪಡೆದು ಮಸೂದೆ ಅಂಗೀಕಾರವಾಗಿದೆ.

ಟ್ರೆಂಡಿಂಗ್​ ಸುದ್ದಿ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

ಮಹಿಳಾ ಮೀಸಲಿ ಮಸೂದೆ ಬಗ್ಗೆ ಮಾತನಾಡಿದ ಮಹಿಳಾ ಸದಸ್ಯರ ಪೈಕಿ ಟಿಎಂಸಿಯ ಮೊಹುವಾ ಮೊಯಿತ್ರಾ, ಎನ್‌ಸುಪಿಯ ಸುಪ್ರಿಯಾ ಸುಲೆ, ಕಾಂಗ್ರೆಸ್‌ ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಸೇರಿ ಹಲವರು ಮಾತನಾಡಿದರು. ಎಲ್ಲರ ಟೀಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಕ್ಕ ಪ್ರತ್ಯುತ್ತರ ನೀಡಿ ಗಮನಸೆಳೆದರು.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಮಹಿಳಾ ಮೀಸಲಾತಿ ಮಸೂದೆ ಕುರಿತ ಚರ್ಚೆಯನ್ನು ಶುರುಮಾಡಿದರು. ಮಹಿಳಾ ಮೀಸಲಾತಿ ಮಸೂದೆಯು ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿಯನ್ನು ಪ್ರಸ್ತಾಪಿಸುತ್ತದೆ. ಆದರೆ, 2029ರ ಚುನಾವಣೆಯ ನಂತರವೇ ಮೀಸಲಾತಿ ಜಾರಿಯಾಗಲಿದೆ. ಇತರ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಪ್ರತ್ಯೇಕ ಕೋಟಾದ ಬೇಡಿಕೆಯನ್ನು ಅವರು ಮಂಡಿಸಿದರು.

ಇದನ್ನೂ ಓದಿ| ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ 454 ಮತಗಳೊಂದಿಗೆ ಅಂಗೀಕಾರ, ಆಡಳಿತ ಮತ್ತು ವಿಪಕ್ಷಗಳ ಸಹಮತ

ಇದಾದ ಬಳಿಕ, ಆಡಳಿತಾರೂಢ ಬಿಜೆಪಿ ಸರ್ಕಾರದ ಪರವಾಗಿ ಸಂಸದ ನಿಶಿಕತ್ ದುಬೆ ಪಾಯಿಂಟ್ಸ್ ಅನ್ನು ಮಂಡಿಸಿದರು. ಈ ಕ್ರಮವನ್ನು ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿದ್ದವು. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನಿಶಿಕಾಂತ್ ದುಬೆ ಭಾಷಣಕ್ಕೆ ಅಡ್ಡಿಪಡಿಸಿದರು. ಆದರೆ, ಗೃಹ ಸಚಿವ ಅಮಿತ್ ಶಾ ಅವರನ್ನು ಲೇವಡಿ ಮಾಡುತ್ತ, "ಪುರುಷರು ಮಹಿಳೆಯರ ವಿಷಯಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲವೇ?" ಎಂದು ಪ್ರಶ್ನಿಸಿದ್ದೂ ನಡೆಯಿತು.

‘‘ಭಾರತೀಯ ಮಹಿಳೆಯರೊಂದಿಗೆ ಇಂತಹ ವರ್ತನೆ ಸೂಕ್ತವೇ?’ ಎಂಬುದು ಸೋನಿಯಾ ಗಾಂಧಿ ಪ್ರಶ್ನೆ

ಸದನ್ನು ಉದ್ಧೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮಹಿಳಾ ಮೀಸಲಾತಿ ಮಸೂದೆ ಕುರಿತು ಸಹಮತ ವ್ಯಕ್ತಪಡಿಸಿದರು. ಅಲ್ಲದೆ, ಮೀಸಲಾತಿಯಲ್ಲಿ ಒಬಿಸಿ ಮಹಿಳೆಯರಿಗೆ ಪ್ರತ್ಯೇಕ ಮೀಸಲು ಒದಗಿಸಬೇಕು ಎಂದು ಆಗ್ರಹಿಸಿದರು.

ವಿಪಕ್ಷಗಳ ಸಾಲಿನಿಂದ ಮಹಿಳಾ ಮೀಸಲಾತಿ ಮಸೂದೆ ಕುರಿತ ಚರ್ಚೆಗೆ ಸೋನಿಯಾ ಗಾಂಧಿ ಚಾಲನೆ ನೀಡಿದರು. ಮೀಸಲಾತಿ ತರುವಲ್ಲಿನ ಯಾವುದೇ ವಿಳಂಬವು ಭಾರತೀಯ ಮಹಿಳೆಗೆ ಮಾಡಿದ ಅನ್ಯಾಯವಾಗಿರಲಿದೆ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದರು.

ಇದನ್ನೂ ಓದಿ| ಮಹಿಳಾ ಮೀಸಲು ಮಸೂದೆ ಪ್ರಸ್ತಾಪ ಅಂಗೀಕರಿಸಿದ ಕೇಂದ್ರ ಸಚಿವ ಸಂಪುಟ

"ರಾಜೀವ್ ಗಾಂಧಿಯವರ ಕನಸು ಅರ್ಧ ಮಾತ್ರ ಈಡೇರಿದೆ. ಈ ಮಸೂದೆ ಅಂಗೀಕಾರದಿಂದ ಅದು ಪೂರ್ಣಗೊಳ್ಳಲಿದೆ. ಕಾಂಗ್ರೆಸ್ ಈ ಮಸೂದೆಯನ್ನು ಬೆಂಬಲಿಸುತ್ತದೆ. ಈ ಮಸೂದೆ ಅಂಗೀಕಾರದಿಂದ ನಮಗೆ ಸಂತೋಷವಾಗುತ್ತದೆ ಆದರೆ ನಮಗೂ ಕಾಳಜಿ ಇದೆ. ನಾನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಕಳೆದ 13 ವರ್ಷಗಳಿಂದ, ಭಾರತೀಯ ಮಹಿಳೆಯರು ತಮ್ಮ ರಾಜಕೀಯ ಜವಾಬ್ದಾರಿಗಳಿಗಾಗಿ ಕಾಯುತ್ತಿದ್ದಾರೆ ಮತ್ತು ಈಗ ಅವರನ್ನು ಇನ್ನೂ ಕೆಲವು ವರ್ಷಗಳ - ಎರಡು ವರ್ಷ, ನಾಲ್ಕು ವರ್ಷ, ಆರು ವರ್ಷ, ಎಂಟು ವರ್ಷಗಳ - ಕಾಲ ಕಾಯಲು ಕೇಳಲಾಗುತ್ತಿದೆ ”ಎಂದು ಸೋನಿಯಾ ಗಾಂಧಿ ಅಸಮಾಧಾನ ತೋಡಿಕೊಂಡರು.

"ಈ ಮಸೂದೆಯನ್ನು ತಕ್ಷಣವೇ ಜಾರಿಗೊಳಿಸಬೇಕು ಎಂಬುದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬೇಡಿಕೆಯಾಗಿದೆ... ಆದರೆ, ಅದರೊಂದಿಗೆ ಜಾತಿ ಗಣತಿ ನಡೆಸಿದ ನಂತರ ಎಸ್‌ಸಿ, ಎಸ್‌ಟಿ, ಒಬಿಸಿ ಮಹಿಳೆಯರ ಮೀಸಲಾತಿಗೆ ಅವಕಾಶ ಕಲ್ಪಿಸಬೇಕು" ಎಂದು ಸೋನಿಯಾ ಗಾಂಧಿ ಹೇಳಿದರು.

‘ಐತಿಹಾಸಿಕ ಮಸೂದೆ ಅಲ್ಲ, ಇದೊಂದು ನೆಪ’ ಎಂದು ಮಹುವಾ ಮೊಯಿತ್ರಾ ಅಭಿಮತ

ಮಹಿಳಾ ಮೀಸಲಾತಿ ಮಸೂದೆಯನ್ನು `ನೆಪ' ಎಂದು ಬಣ್ಣಿಸಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ನಿಗದಿತ ಮಿತಿಗಳೊಂದಿಗೆ ಮಸೂದೆಯನ್ನು ಪರಿಚಯಿಸುತ್ತಿರುವ ಕ್ರಮವು “ಕಾನೂನುಬದ್ಧವಾಗಿ-ನಿರ್ದೇಶಿತ ಮುಂದೂಡುವಿಕೆಯ ಕ್ರವಾಗಿ ಕಂಡುಬರುತ್ತಿದೆ” ಎಂದು ಟೀಕಿಸಿದರು.

“ಭಾರತದ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಕುರಿತು ಮಾತನಾಡುತ್ತಿರುವುದು ಒಂದೆಡೆ ನನಗೆ ಹೆಮ್ಮೆ ಮತ್ತು ಮತ್ತೊಂದೆಡೆ ನಾಚಿಕೆಗೇಡಿನ ಸಂಗತಿಯಾಗಿದೆ. ನಾನು ಅಖಿಲ ಭಾರತ ತೃಣಮೂಲ ಕಾಂಗ್ರೆಸ್, ತನ್ನ ಸದಸ್ಯರಲ್ಲಿ 37 ಪ್ರತಿಶತದಷ್ಟು ಮಹಿಳೆಯರನ್ನು ಸಂಸತ್ತಿಗೆ ಕಳುಹಿಸಿದ ಪಕ್ಷಕ್ಕೆ ಸೇರಿದ್ದೇನೆ ಎಂಬುದು ನನ್ನ ಹೆಮ್ಮೆ. ., ಆದರೆ ನಾನು ಶೇಕಡ 15ಕ್ಕಿಂತ ಕಡಿಮೆ ಮಹಿಳಾ ಸದಸ್ಯರು ಇರುವ ಲೋಕಸಭೆಗೆ ಸೇರಿದ್ದೇನೆ ಎಂಬುದು ನನ್ನ ದುಃಖದ ಸಂಗತಿಯಾಗಿದೆ. ಇದು ಜಾಗತಿಕ ಸರಾಸರಿಯಾದ 26.5 ಪ್ರತಿಶತಕ್ಕಿಂತ ಕಡಿಮೆ ಮತ್ತು ಏಷ್ಯಾದ ಪ್ರಾದೇಶಿಕ ಸರಾಸರಿ 21 ಪ್ರತಿಶತಕ್ಕಿಂತ ಕಡಿಮೆ” ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ | ಮಹಿಳಾ ಮೀಸಲು ಜಾರಿ ಯಾವಾಗ, ಮುಂದಿನ ಲೋಕಸಭಾ ಚುನಾವಣೆಗೆ ಸಾಧ್ಯವಾ, ಇಲ್ಲಿದೆ ಸಂಕ್ಷಿಪ್ತ ವಿವರಣೆ

"ಈ ಸರ್ಕಾರವು ವಿವಿಧ ಜಾಗತಿಕ ಕೋಷ್ಟಕಗಳಲ್ಲಿನ ಶ್ರೇಯಾಂಕಗಳ ಮೇಲೆ ತನ್ನನ್ನು ತಾನೇ ತಟ್ಟಿಕೊಂಡಂತೆ, ಅದೇ ಭಾರತವು ಮಹಿಳಾ ಮೀಸಲಾತಿಯಲ್ಲಿ ಇಂಟರ್ ಪಾರ್ಲಿಮೆಂಟರಿ ಯೂನಿಯನ್ ಕೋಷ್ಟಕಗಳಲ್ಲಿ 196 ರಲ್ಲಿ 140 ರಲ್ಲಿ 140 ನೇ ಸ್ಥಾನದಲ್ಲಿದೆ ಎಂದು ನಾಚಿಕೆಗೇಡಿನ ರೀತಿಯಲ್ಲಿ ತಲೆ ತಗ್ಗಿಸುವಂತೆ ಮಾಡಿದೆ" ಎಂದು ಮೊಯಿತ್ರಾ ಅಸಮಾಧಾನ ಹೊರಹಾಕಿದರು.

‘ಯಶಸ್ಸಿಗೆ ಹಲವು ಅಪ್ಪಂದಿರು, ಸೋಲಿಗಾರೂ ಇಲ್ಲ' ಎಂಬ ಮಾತು ಒಂದಿದೆ ಎಂದು ಹೇಳಿದ ಸ್ಮೃತಿ ಇರಾನಿ

ವಿಪಕ್ಷ ಸದಸ್ಯರ ಟೀಕೆ ಟಿಪ್ಪಣಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ವಿಶೇಷವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಟಾಂಗ್ ನೀಡಿದರಲ್ಲದೆ, ಮಸೂದೆಯ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿರುವ ಪ್ರತಿಯೊಬ್ಬರನ್ನೂ ಟೀಕಿಸಿದರು.

"ಅದೊಂದು ಮಾತಿದೆ. ಯಶಸ್ಸು ಬಂದಾಗ ಅದಕ್ಕೆ ಅನೇಕ ಅಪ್ಪಂದಿರು ಇರುತ್ತಾರೆ. ಆದರೆ ಸೋಲಿಗೆ ಹಾಗಲ್ಲ. ಯಾರೂ ಇಲ್ಲ ಎಂಬ ಮಾತದು. ಹಾಗಾಗಿ ಮಸೂದೆ ಅಂಗೀಕರಿಸಲ್ಪಡುವುದು ಖಚಿತವಾಗುತ್ತಿದ್ದಂತೆ ಕೆಲವರು ಅದು `ನಮ್ಮ ಮಸೂದೆ' ಎಂದು ಹೇಳಿದರು. ಇನ್ನು ಕೆಲವರು ಅದರ ಬಗ್ಗೆ ಪತ್ರ ಬರೆದಿರುವುದಾಗಿ ಹೇಳಿದರು. ಅಲ್ಲದೆ, ಸಂವಿಧಾನದ ಚೌಕಟ್ಟು ಒದಗಿಸಿಕೊಟ್ಟದ್ದು ನಾವು ಎಂದೂ ಅವರು ಹೇಳಿದರು ಎಂಬುದನ್ನು ಕೇಂದ್ರ ಸಚಿವ ಸ್ಮೃತಿ ಇರಾನಿ ಉಲ್ಲೇಖಿಸಿದರು.

ಮಸೂದೆಯ ಕ್ರೆಡಿಟ್ ತೆಗೆದುಕೊಂಡಿದ್ದಕ್ಕಾಗಿ ಅವರು ಸೋನಿಯಾ ಗಾಂಧಿಯವರನ್ನೂ ಟಾರ್ಗೆಟ್ ಮಾಡಿ ವಾಗ್ದಾಳಿ ನಡೆಸಿದರು.

"ಗೌರವಾನ್ವಿತ ನಾಯಕಿ (ಸೋನಿಯಾ ಗಾಂಧಿ) ಅವರು ಸದನದಲ್ಲಿ ತಮ್ಮ ಭಾಷಣವನ್ನು ಮಾಡಿದರು. ಈ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಿದಾಗ ಕೆಲವರು ಇದು ನಮ್ಮ ಮಸೂದೆ ಎಂದು ಹೇಳಿದರು. ಆದರೆ ನಾನು ಅವರಿಗೆ ವಿಶೇಷವಾಗಿ ಕೃತಜ್ಞನಾಗಿದ್ದೇನೆ. ವಿಶೇಷ ಕುಟುಂಬವು ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಗಳನ್ನು ಅಂಗೀಕರಿಸಿದೆ ಎಂದು ನಮಗೆ ಪದೇಪದೆ ಹೇಳಲಾಗುತ್ತದೆ. ಆದರೆ ಈ ಉದಾತ್ತ ಕೆಲಸವನ್ನು ಪಿ.ವಿ.ನರಸಿಂಹರಾವ್ ಅವರು ಮಾಡಿದ್ದಾರೆ ಎಂಬುದನ್ನು ನೆನಪಿಸಲು ನಾನು ಬಯಸುತ್ತೇನೆ. ಅದೇ ರೀತಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಅವರ (ಪಿ.ವಿ. ನರಸಿಂಹ ರಾವ್) ನಿಧನದ ನಂತರ ಅವರಿಗೆ (ಪಿ.ವಿ. ನರಸಿಂಹ ರಾವ್) ನಮನ ಸಲ್ಲಿಸಲು ಆ ಪಕ್ಷದ ಪ್ರಧಾನ ಕಚೇರಿಯಲ್ಲಿ ಯಾವುದೇ ಅವಕಾಶವನ್ನು ನೀಡಲಿಲ್ಲ" ಎಂದು ಸ್ಮೃತಿ ಇರಾನಿ ಟೀಕಾ ಪ್ರಹಾರ ಮಾಡಿದರು.

"ಸೋನಿಯಾ ಗಾಂಧಿ ಪ್ರಸ್ತಾವಿತ ಮಸೂದೆಯ ಲೇಖನದಲ್ಲಿ "ಮೂರನೇ ಸಾರ್ವತ್ರಿಕ ಚುನಾವಣೆಯಲ್ಲಿ ಎಸ್‌ಸಿ / ಎಸ್‌ಟಿಗೆ ಸೇರಿದ ಮಹಿಳೆಯರಿಗೆ ಯಾವುದೇ ಸ್ಥಾನವನ್ನು ಮೀಸಲಿಡಬಾರದು ಎಂದು ಹೇಳಿದ್ದರು ... ಆದರೆ ಈ ಸರ್ಕಾರವು ತಂದ ಮಸೂದೆಯು ಈ ಮಸೂದೆಯ ಅನುಷ್ಠಾನದ ನಂತರ 15 ವರ್ಷಗಳವರೆಗೆ ಮಹಿಳೆಯರಿಗೆ ಮೀಸಲಾತಿಯನ್ನು ಖಾತರಿಪಡಿಸುತ್ತದೆ ಎಂಬುದನ್ನು ಸ್ಮೃತಿ ಇರಾನಿ ನೆನಪಿಸಿದರು.

ಮಹಿಳಾ ಮೀಸಲಾತಿ ಮಸೂದೆಯನ್ನು ಜುಮ್ಲಾ ಎಂದು ಕರೆದ ಕಾಂಗ್ರೆಸ್‌ ನಾಯಕರು, ಅದಕ್ಕಾಗಿ ಹಲವಾರು ಪತ್ರಗಳನ್ನು ಬರೆದ ಕಾರಣ ಆ ರೀತಿ ಆಗಿದೆ. ಆ ಮಸೂದೆ ಈಗ ಸಾಕಾರವಾಗಿರುವುದಕ್ಕೆ ಅವರನ್ನು (ಪಿಎಂ ಮೋದಿ) ಅವಮಾನಿಸಲಾಗುತ್ತಿದೆ ಎಂಬುದನ್ನು ಒಪ್ಪಿಕೊಂಡಂತೆ ಆಗಿದೆ. ಪ್ರಧಾನಿ ಮೋದಿ ಅವರನ್ನು ಅವಮಾನಿಸುತ್ತಿದ್ದರೂ, ಅವರು ತಮ್ಮ ಸಂವಹನದ ಮೂಲಕ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸುತ್ತಲೇ ಇದ್ದರು ಎಂದು ಸ್ಮೃತಿ ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ