logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Indian Army: ಭಾರತಿಯ ಸೇನೆಯ ಫಿರಂಗಿ ಪಡೆ ಸೇರಿದ 5 ಮಹಿಳಾ ಅಧಿಕಾರಿಗಳು, ಚೀನಾ ಪಾಕ್‌ ಗಡಿ ಸಮೀಪ ನಿಯೋಜನೆ

Indian Army: ಭಾರತಿಯ ಸೇನೆಯ ಫಿರಂಗಿ ಪಡೆ ಸೇರಿದ 5 ಮಹಿಳಾ ಅಧಿಕಾರಿಗಳು, ಚೀನಾ ಪಾಕ್‌ ಗಡಿ ಸಮೀಪ ನಿಯೋಜನೆ

Praveen Chandra B HT Kannada

Apr 29, 2023 04:03 PM IST

Indian Army: ಭಾರತಿಯ ಸೇನೆಯ ಫಿರಂಗಿ ಪಡೆ ಸೇರಿದ 5 ಮಹಿಳಾ ಅಧಿಕಾರಿಗಳು, ಚೀನಾ ಪಾಕ್‌ ಗಡಿ ಸಮೀಪ ನಿಯೋಜನೆ

    • ಇದೇ ಮೊದಲ ಬಾರಿಗೆ ಭಾರತೀಯ ಸೇನೆಯ ಆರ್ಟಿಲರಿ ರೆಜಿಮೆಂಟ್‌ಗೆ (Regiment of Artillery ) ಐದು ಮಹಿಳಾ ಅಧಿಕಾರಿಗಳ ಮೊದಲ ಬ್ಯಾಚ್‌ ಅನ್ನು ಸೇರ್ಪಡೆಗೊಳಿಸಿದೆ.
Indian Army: ಭಾರತಿಯ ಸೇನೆಯ ಫಿರಂಗಿ ಪಡೆ ಸೇರಿದ  5 ಮಹಿಳಾ ಅಧಿಕಾರಿಗಳು, ಚೀನಾ ಪಾಕ್‌ ಗಡಿ ಸಮೀಪ ನಿಯೋಜನೆ
Indian Army: ಭಾರತಿಯ ಸೇನೆಯ ಫಿರಂಗಿ ಪಡೆ ಸೇರಿದ 5 ಮಹಿಳಾ ಅಧಿಕಾರಿಗಳು, ಚೀನಾ ಪಾಕ್‌ ಗಡಿ ಸಮೀಪ ನಿಯೋಜನೆ (ANI)

ನವದೆಹಲಿ: ಭಾರತೀಯ ಸೇನೆಯಲ್ಲಿ (Indian Army) ಪುರುಷ ಸಹವರ್ತಿಗಳಂತೆ ಸಮಾನ ಅವಕಾಶಗಳು ಮತ್ತು ಸವಾಲುಗಳನ್ನು ಮಹಿಳೆಯರಿಗೆ ನೀಡುವ ಉದ್ದೇಶದಿಂದ ರಕ್ಷಣಾ ಪಡೆಯು ಹಲವು ಪ್ರಮುಖ ಹೆಜ್ಜೆಗಳನ್ನಿಟ್ಟಿದೆ. ಇದೇ ಮೊದಲ ಬಾರಿಗೆ ಭಾರತೀಯ ಸೇನೆಯ ಆರ್ಟಿಲರಿ ರೆಜಿಮೆಂಟ್‌ಗೆ (Regiment of Artillery ) ಐದು ಮಹಿಳಾ ಅಧಿಕಾರಿಗಳ ಮೊದಲ ಬ್ಯಾಚ್‌ ಅನ್ನು ಸೇರ್ಪಡೆಗೊಳಿಸಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

ಚೆನ್ನೈನ ಆಫೀಸರ್‌ ಟ್ರೇನಿಂಗ್‌ ಅಕಾಡೆಮಿಯಲ್ಲಿ ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಈ ಮಹಿಳಾ ಅಧಿಕಾರಿಗಳನ್ನು ಫಿರಂಗಿ ರೆಜಿಮೆಂಟ್‌ಗೆ ಸೇರ್ಪಡೆ ಮಾಡಲಾಯಿತು.

ಲೆಫ್ಟಿನೆಂಟ್ ಮೆಹಕ್ ಸೈನಿ, ಲೆಫ್ಟಿನೆಂಟ್ ಸಾಕ್ಷಿ ದುಬೆ, ಲೆಫ್ಟಿನೆಂಟ್ ಅದಿತಿ ಯಾದವ್ ಮತ್ತು ಲೆಫ್ಟಿನೆಂಟ್ ಪಯಸ್ ಮುದ್ಗಿಲ್ ಆರ್ಟಿಲರಿ ರೆಜಿಮೆಂಟ್‌ಗೆ ಸೇರಿದ ಮಹಿಳಾ ಅಧಿಕಾರಿಗಳು ಎಂದು ಮೂಲಗಳು ತಿಳಿಸಿವೆ. ಇವರೊಂದಿಗೆ 19 ಪುರುಷ ಅಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ರೆಜಿಮೆಂಟ್‌ಗೆ ಸೇರ್ಪಡೆಗೊಳಿಸಲಾಗಿದೆ.

ಭಾರತೀಯ ಸೇನೆಯ ಹೋರಾಟ ವಿಭಾಗವಾದ ಆರ್ಟಿಲರಿ ರೆಜಿಮೆಂಟ್‌ನಲ್ಲಿ ಕಾರ್ಯನಿರ್ವಹಿಸಲು ಈ ಯುವ ಮಹಿಳಾ ಅಧಿಕಾರಿಗಳಿಗೆ ಸೂಕ್ತ ತರಬೇತಿ ದೊರಕಲಿದೆ. ರಾಕೆಟ್‌ ನಿರ್ವಹಣೆ, ಮಧ್ಯಮ, ಶತ್ರು ನೆಲ ಮತ್ತು ರಕ್ಷಣಾ ಗುರಿಗೆ ಸಂಬಂಧಪಟ್ಟಂತೆ ಹಲವು ತರಬೇತಿ ನೀಡಲಾಗುತ್ತದೆ. ವಿಶೇಷವಾಗಿ, ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸಲು ಸೂಕ್ತವಾಗುವಂತಹ ತರಬೇತಿ ನೀಡಲಾಗುತ್ತದೆ.

ಆರ್ಟಿಲರಿ ರೆಜಿಮೆಂಟ್‌ಗೆ ಹೊಸದಾಗಿ ಸೇರ್ಪಡೆಯಾದ ಮಹಿಳಾ ಅಧಿಕಾರಿಗಳಲ್ಲಿ ಮೂವರನ್ನು ಚೀನಾದ ಉತ್ತರದ ಗಡಿಯ ಸಮೀಪದಲ್ಲಿರುವ ಘಟಕಗಳಿಗೆ ನಿಯೋಜಿಸಲಾಗುವುದು, ಇತರೆ ಇಬ್ಬರನ್ನು ಪಾಕಿಸ್ತಾನದ ಗಡಿಯ ಸಮೀಪದ ಅತ್ಯಧಿಕ ಸವಾಲಿನ ಸ್ಥಳದಲ್ಲಿ ನಿಯೋಜಿಸಲಾಗುವುದು ಎಂದು ಸೇನೆ ಬಹಿರಂಗಪಡಿಸಿದೆ.

ಇದೇ ವರ್ಷ ಜನವರಿ ತಿಂಗಳಲ್ಲಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಫಿರಂಗಿ ಘಟಕಗಳಿಗೆ ಮಹಿಳಾ ಅಧಿಕಾರಿಗಳನ್ನು ನಿಯೋಜಿಸುವ ನಿರ್ಧಾರವನ್ನು ಪ್ರಕಟಿಸಿದ್ದರು. ಈ ಪ್ರಸ್ತಾಪವನ್ನು ನಂತರ ಸರ್ಕಾರವು ಅನುಮೋದಿಸಿತು.

ಭಾರತೀಯ ಸೇನೆಯು 2024-25ರಲ್ಲಿ ಪುರುಷ ಮತ್ತು ಮಹಿಳಾ ಅಧಿಕಾರಿಗಳಿಗೆ ಕರ್ನಲ್ ಹುದ್ದೆಗೆ ಬಡ್ತಿ ನೀಡಲು ಜಂಟಿ ಆಯ್ಕೆ ಮಂಡಳಿಯನ್ನು ರಚಿಸಲು ಯೋಜಿಸಿದೆ. ಈ ನಿರ್ಧಾರವು ಮಿಲಿಟರಿಯೊಳಗೆ ಲಿಂಗ ಸಮಾನತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ. "ಸಾಮಾನ್ಯ ಆಯ್ಕೆ ಮಂಡಳಿಯ ಆರಂಭ ಪ್ರಗತಿಪರ ನಿರ್ಧಾರ. ತಮ್ಮನ್ನು ಪುರುಷರಿಗೆ ಸರಿಸಮಾನರಾಗಿ ಪರಿಗಣಿಸಬೇಕೆಂದು ಮಹಿಳಾ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ" ಎಂದು ಮಾಜಿ ಮಹಿಳಾ ಅಧಿಕಾರಿ ಕ್ಯಾಪ್ಟನ್ ಶಾಲಿನಿ ಸಿಂಗ್ ಹೇಳಿದ್ದಾರೆ.

2020 ರಲ್ಲಿ ಸೇನೆಯು ಮಹಿಳೆಯರಿಗೆ ಪರ್ಮನೆಂಟ್‌ ಕಮಿಷನ್‌ ಆರಂಭಿಸಿದ ಬಳಿಕ ಕಮಾಂಡ್ ಹುದ್ದೆಗಳನ್ನು ನೀಡುವುದು ಸಾಧ್ಯವಾಗಿದೆ. ಪರ್ಮನೆಂಟ್‌ ಕಮಿಷನ್‌ನ ಅನುದಾನದೊಂದಿಗೆ, ಮಹಿಳಾ ಅಧಿಕಾರಿಗಳು ತಮ್ಮ ಪುರುಷ ಸಹೋದ್ಯೋಗಿಗಳಿಗೆ ಸರಿಸಮಾನವಾದ ಸವಾಲಿನ ನಾಯಕತ್ವದ ಪಾತ್ರಗಳನ್ನು ವಹಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ. "ಸೇನೆಯು ನಾಯಕತ್ವದ ಹುದ್ದೆಗಳನ್ನು ಮಹಿಳಾ ಅಧಿಕಾರಿಗಳಿಗೆ ನೀಡುವ ಮೂಲಕ ಏಕಕಾಲೀನ ಕ್ರಮಗಳ ಸರಣಿಯನ್ನು ಆರಂಭಿಸಿದೆ" ಎಂದು ಅವರು ಹೇಳಿದ್ದಾರೆ. ಈ ಕುರಿತ ವರದಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ