logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Agnipath Scheme: ಏನಿದು ಅಗ್ನಿಪಥ ಯೋಜನೆ? ಅರ್ಜಿ ಸಲ್ಲಿಸುವುದು ಹೇಗೆ? ಯಾರಿಗೆ ಅನ್ವಯ, ಸಂಬಳ ಎಷ್ಟು? ಇಲ್ಲಿದೆ ಮಾಹಿತಿ...

Agnipath Scheme: ಏನಿದು ಅಗ್ನಿಪಥ ಯೋಜನೆ? ಅರ್ಜಿ ಸಲ್ಲಿಸುವುದು ಹೇಗೆ? ಯಾರಿಗೆ ಅನ್ವಯ, ಸಂಬಳ ಎಷ್ಟು? ಇಲ್ಲಿದೆ ಮಾಹಿತಿ...

Jun 16, 2022 05:14 PM IST

ಏನಿದು ಅಗ್ನಿಪಥ ಯೋಜನೆ? ಅರ್ಜಿ ಸಲ್ಲಿಸುವುದು ಹೇಗೆ? ಯಾರಿಗೆ ಅನ್ವಯ, ಸಂಬಳ ಎಷ್ಟು? ಇಲ್ಲಿದೆ ಮಾಹಿತಿ...

    • ಕೇಂದ್ರ ಸರ್ಕಾರ ಸೇನೆಗೆ ಸೇರಲು ಬಯಸುವವರಿಗೆ ಹೊಸ ಅವಕಾಶವೊಂದನ್ನು ನೀಡಿದೆ. ಅಗ್ನಿಪಥ ಯೋಜನೆ ಅಡಿಯಲ್ಲಿ ಸೇನೆಗೆ ಸೇರುವ ಅಗ್ನಿವೀರರಿಗೆ ಕೌಶಲ ಆಧರಿತ ಮೂರು ವರ್ಷಗಳ ತರಬೇತಿ ಕೋರ್ಸ್‌ ನೀಡಲು ಮುಂದೆ ಬಂದಿದೆ. ಕೇಂದ್ರ ಶಿಕ್ಷಣ ಸಚಿವಾಲಯ ಈ ತರಬೇತಿ ಜವಾಬ್ದಾರಿ ಹೊತ್ತಿದ್ದು, ಇಂದಿರಾಗಾಂಧಿ ಮುಕ್ತ ವಿವಿ ಈ ಕೋರ್ಸ್‌ ಆರಂಭಿಸಲಿದೆ. ಭೂಸೇನೆ, ನೌಕಾ ಸೇನೆ ಮತ್ತು ವಾಯು ಸೇನೆಯಲ್ಲಿಯೂ ನಾಲ್ಕು ವರ್ಷ ಕೆಲಸ ಮಾಡಬಹುದಾಗಿದೆ. ಹಾಗಾದರೆ ಇದರ ನೇಮಕಾತಿ ಪ್ರಕ್ರಿಯೆ ಹೇಗೆ, ಸಂಬಳ ಎಷ್ಟು, ಏನೆಲ್ಲ ಅನುಕೂಲಗಳಿವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಏನಿದು ಅಗ್ನಿಪಥ ಯೋಜನೆ? ಅರ್ಜಿ ಸಲ್ಲಿಸುವುದು ಹೇಗೆ? ಯಾರಿಗೆ ಅನ್ವಯ, ಸಂಬಳ ಎಷ್ಟು? ಇಲ್ಲಿದೆ ಮಾಹಿತಿ...
ಏನಿದು ಅಗ್ನಿಪಥ ಯೋಜನೆ? ಅರ್ಜಿ ಸಲ್ಲಿಸುವುದು ಹೇಗೆ? ಯಾರಿಗೆ ಅನ್ವಯ, ಸಂಬಳ ಎಷ್ಟು? ಇಲ್ಲಿದೆ ಮಾಹಿತಿ...

ನವದೆಹಲಿ: ಕೇಂದ್ರ ಸರ್ಕಾರ ಸೇನೆಗೆ ಸೇರಲು ಬಯಸುವವರಿಗೆ ಹೊಸ ಅವಕಾಶವೊಂದನ್ನು ನೀಡಿದೆ. ಅಗ್ನಿಪಥ ಯೋಜನೆ ಅಡಿಯಲ್ಲಿ ಸೇನೆಗೆ ಸೇರುವ ಅಗ್ನಿವೀರರಿಗೆ ಕೌಶಲ ಆಧರಿತ ಮೂರು ವರ್ಷಗಳ ತರಬೇತಿ ಕೋರ್ಸ್‌ ನೀಡಲು ಮುಂದೆ ಬಂದಿದೆ. ಕೇಂದ್ರ ಶಿಕ್ಷಣ ಸಚಿವಾಲಯ ಈ ತರಬೇತಿ ಜವಾಬ್ದಾರಿ ಹೊತ್ತಿದ್ದು, ಇಂದಿರಾಗಾಂಧಿ ಮುಕ್ತ ವಿವಿ ಈ ಕೋರ್ಸ್‌ ಆರಂಭಿಸಲಿದೆ. ಭೂಸೇನೆ, ನೌಕಾ ಸೇನೆ ಮತ್ತು ವಾಯು ಸೇನೆಯಲ್ಲಿಯೂ ನಾಲ್ಕು ವರ್ಷ ಕೆಲಸ ಮಾಡಬಹುದಾಗಿದೆ. ಹಾಗಾದರೆ ಇದರ ನೇಮಕಾತಿ ಪ್ರಕ್ರಿಯೆ ಹೇಗೆ, ಸಂಬಳ ಎಷ್ಟು, ಏನೆಲ್ಲ ಅನುಕೂಲಗಳಿವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ಯುವಕ ಯುವತಿಯರನ್ನು ಗಮನದಲ್ಲಿಟ್ಟುಕೊಂಡೇ ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಸೇನಾ ಪದ್ಧತಿಗಳಲ್ಲಿ ಅಗ್ನಿಪಥ್‌ ಒಂದಾಗಿದೆ. ಈ ಹೊಸ ಮಾದರಿಯ ಯೋಜನೆಯಲ್ಲಿ ಸೇನೆಯ ಮೂರು ವಿಭಾಗಗಳಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು 17ರಿಂದ 21 ವರ್ಷ ವಯೋಮಿತಿ ಒಳಗಿನವರಿಗೆ ನೀಡಲಾಗಿದೆ.

ಒಟ್ಟು 46 ಸಾವಿರ ಹುದ್ದೆಗಳು

ಅಗ್ನಿಪಥ್‌ ಯೋಜನೆಯಡಿ ವಾರ್ಷಿಕ 46 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಕೇಂದ್ರ ನಿರ್ಧರಿಸಿದೆ. ಇದೇ ತಿಂಗಳಲ್ಲಿ ಅರ್ಜಿ ಸಲ್ಲಿಸುವಿಕೆ ಪ್ರಕ್ರಿಯೆ ಆರಂಭವಾಗಿಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟು ನಾಲ್ಕು ವರ್ಷದ ಅವಧಿಕೆಗೆ ಈ ಪಡೆಗೆ ಸೇರಿಕೊಳ್ಳಬಹುದು. ನಾಲ್ಕು ವರ್ಷಗಳ ಸೇವೆಯ ನಂತರ, ಅಗ್ನಿವೀರ್ ಅವರ ಆದಾಯದ ಜತೆಗೆ ನಿವೃತ್ತಿ ಪ್ಯಾಕೇಜ್ ಅನ್ನು ನೀಡಲಾಗುತ್ತದೆ. ವಾರ್ಷಿಕ 46,000 ಹೊಸ ಸೈನಿಕರ ಸೇರ್ಪಡೆಯಾಗಲಿದ್ದು, ಅವುಗಳಲ್ಲಿ ಕಾಲು ಭಾಗದಷ್ಟು ಸೈನಿಕರು ಕಾಯಂ ನೇಮಕರಾಗಿ ಮುಂದಿನ 15 ವರ್ಷಗಳವರೆಗೆ ಸೇವೆ ಸಲ್ಲಿಸಲಿದ್ದಾರೆ. ನಾಲ್ಕು ವರ್ಷ ಪೂರೈಸಿದವರಿಗೆ ಸರ್ಕಾರದ ವತಿಯಿಂದ ಸೇವಾ ನಿಧಿ ಸಹ ಸಿಗಲಿದೆ.

ಕನಸು ನನಸು ಮಾಡಿಕೊಳ್ಳಿ

1. ಭಾರತೀಯ ಸೇನೆಯು ಭಾರತೀಯ ನಾಗರಿಕರಿಗೆ ಮೂರು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುವ ಆಯ್ಕೆಯನ್ನು ಒದಗಿಸುತ್ತದೆ.

2. ಅಭ್ಯರ್ಥಿಗಳಿಗೆ ಅವರ ಅತ್ಯುತ್ತಮ ಕಾರ್ಯಕ್ಷಮತೆಯ ಆಧಾರದ ಮೇಲೆ ಸೇನೆಯಲ್ಲಿ ಖಾಯಂ ಸ್ಥಾನಗಳನ್ನು ನೀಡಲಾಗುತ್ತದೆ.

3. 4 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ CAPF ನೇಮಕಾತಿ ಪ್ರಯೋಜನ ಸಿಗಲಿದೆ

4. ಭಾರತೀಯ ಸೇನೆಯ ಅಗ್ನಿಪಥ್‌ಗೆ ಸೇರುವ ಮೂಲಕ ಯುವಕರು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದು.

5. ಸೇವೆ ಮತ್ತು ತರಬೇತಿಯಲ್ಲಿಉತ್ತಮ ಫಲಿತಾಂಶ ನೀಡಿದರೆ, ಸೇವೆಯಲ್ಲಿ ಮುಂದುವರಿಯಬಹುದು.

ಸಂಬಳ ಸ್ಟ್ರಕ್ಚರ್‌ ಹೇಗಿರಲಿದೆ?

ಒಟ್ಟು ನಾಲ್ಕು ವರ್ಷದ ಈ ತರಬೇತಿಯಲ್ಲಿ ಆಯ್ಕೆಯಾದ ಅಗ್ನಿವೀರರಿಗೆ ಸಂಬಳದ ವಿಚಾರದಲ್ಲಿಯೂ ಏರಿಳಿತಗಳಿವೆ. ಒಂದು ವರ್ಷ ಸೇವೆಯಲ್ಲಿದ್ದರೆ, ತಿಂಗಳಿಗೆ ಒಟ್ಟು 30 (21,000 ಕೈಗೆ ದಕ್ಕಲಿದೆ) ಸಾವಿರ ಸಂಬಳ, ಎರಡು ವರ್ಷ ಸೇವೆಯಲ್ಲಿದ್ದರೆ ತಿಂಗಳಿಗೆ ಒಟ್ಟು 33,000 (23,100 ಕೈಗೆ ಸಿಗಲಿದೆ), ಮೂರು ವರ್ಷದ ಸೇವೆಗೆ ಒಟ್ಟು 36,500 (25,580 ಕೈಗೆ ಸಿಗಲಿದೆ) ನಾಲ್ಕು ವರ್ಷ ಸೇವೆಯಲ್ಲಿದ್ದರೆ 40 ಸಾವಿರ (28,000 ಕೈ ಗೆ ಸಿಗಲಿದೆ) ನಿಗದಿಪಡಿಸಲಿದೆ. ಇದರಲ್ಲಿ ಕಡಿತಗೊಂಡ ಮೊತ್ತ ಅಗ್ನಿವೀರ್ ಕಾರ್ಪಸ್ ಫಂಡ್‌ಗೆ ಹೋಗಲಿದ್ದು, ಸೇವಾವಧಿ ಮುಗಿದ ಬಳಿಕ ಆ ಹಣ ಸಿಗಲಿದೆ. ಉಚಿತ ವೈದ್ಯಕೀಯ ವಿಮೆ ಸಹ ದೊರೆಯಲಿದೆ. ನಾಲ್ಕು ವರ್ಷ ಸೇವೆ ಸಲ್ಲಿಸಿ ಬಿಡುಗಡೆ ಹೊಂದುವ ಅಗ್ನಿವೀರರಿಗೆ 11.70 ಲಕ್ಷ ಸೇವಾ ನಿಧಿ ಸಿಗಲಿದೆ. ಇದಕ್ಕೆ ತೆರಿಗೆ ಇರುವುದಿಲ್ಲ. ಒಂದು ವೇಳೆ ಹುತಾತ್ಮರಾದರೆ ಆ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ಸಿಗಲಿದೆ.

ಯಾರೆಲ್ಲ ಇದಕ್ಕೆ ಅರ್ಜಿ ಸಲ್ಲಿಸಬಹುದು? ವಿದ್ಯಾರ್ಹತೆ ಏನು

1. ಭಾರತೀಯ ಪ್ರಜೆಯಾಗಿರಬೇಕು

2. 17.5 ರಿಂದ 21 ವರ್ಷ ವಯೋಮಿತಿ ಹೊಂದಿರಬೇಕು

3. ದೈಹಿಕವಾಗಿ ಫಿಟ್‌ ಆಗಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು

4. Soldier General Duty ಹುದ್ದೆಗೆ SSLCಯಲ್ಲಿ ಶೇ 45ಕ್ಕಿಂತ ಅಧಿಕ ಅಂಕ ಪಡೆದಿರಬೇಕು.

5. Soldier Technical ಹುದ್ದೆಗೆ SSLC ಮತ್ತು PUC ವಿಜ್ಞಾನ ವಿಷಯದಲ್ಲಿ Physics, Chemistry, Maths ಮತ್ತು English ವಿಷಯಗಳಲ್ಲಿ ಕಡ್ಡಾಯವಾಗಿ ಉತ್ತೀರ್ಣ ಹೊಂದಿರಬೇಕು

6. Soldier Clerk / Store Keeper Technical ಹುದ್ದೆಗೆ ಪಿಯುಸಿಯಲ್ಲಿ ಯಾವುದೇ (ಕಲಾ, ವಾಣಿಜ್ಯ, ವಿಜ್ಞಾನ) ವಿಭಾಗದಲ್ಲಿ ಶೇ. 50 ಅಂಕ ಪಡೆದಿರಬೇಕು.

7. Soldier Nursing Assistant ಹುದ್ದೆಗೆ ಪಿಯುಸಿ ವಿಜ್ಞಾನ ವಿಷಯದಲ್ಲಿ Physics, Chemistry, Biology ಮತ್ತು Englishನಲ್ಲಿ ಶೇ. 50 ಅಂಕ ಪಡೆದು ಪಾಸಾಗಿರಬೇಕು.

8. joinindianarmy.nic.in ವೆಬ್‌ಸೈಟ್‌ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ