logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Indians Abducted In California: ಕ್ಯಾಲಿಫೋರ್ನಿಯಾದಲ್ಲಿ ನಾಲ್ವರು ಭಾರತೀಯರ ಅಪಹರಣ: 8 ತಿಂಗಳ ಮಗುವನ್ನೂ ಹೊತ್ತೊಯ್ದ ಪಾಪಿಗಳು!

Indians Abducted In California: ಕ್ಯಾಲಿಫೋರ್ನಿಯಾದಲ್ಲಿ ನಾಲ್ವರು ಭಾರತೀಯರ ಅಪಹರಣ: 8 ತಿಂಗಳ ಮಗುವನ್ನೂ ಹೊತ್ತೊಯ್ದ ಪಾಪಿಗಳು!

HT Kannada Desk HT Kannada

Oct 04, 2022 09:52 AM IST

ಅಪಹೃತಗೊಂಡ ಭಾರತೀಯರು

    • 8 ತಿಂಗಳ ಮಗುವೂ ಸೇರಿದಂತೆ ನಾಲ್ವರು ಭಾರತೀಯ ಮೂಲದ ಅಮೆರಿಕನ್‌ ಪ್ರಜೆಗಳನ್ನು ಕ್ಯಾಲಿಫೋರ್ನಿಯಾದಲ್ಲಿ ಅಪಹರಿಸಲಾಗಿದೆ. ಇಲ್ಲಿನ ಮರ್ಸೀಡ್‌ ಕೌಂಟಿ ಪ್ರದೇಶದಲ್ಲಿ ನಾಲ್ವರು ಭಾರತೀಯರನ್ನು ಅಪಹರಿಸಲಾಗಿದ್ದು, ಈ ಪೈಕಿ 8 ತಿಂಗಳ ಮಗು ಮತ್ತು ಅದರ ಪೋಷಕರು ಸೇರಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಪಹರಣಕ್ಕೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲವಾದರೂ, ಹಣಕ್ಕಾಗಿಯೇ ಅಪಹರಣ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ಧಾರೆ.
ಅಪಹೃತಗೊಂಡ ಭಾರತೀಯರು
ಅಪಹೃತಗೊಂಡ ಭಾರತೀಯರು

ಕ್ಯಾಲಿಫೋರ್ನಿಯಾ: 8 ತಿಂಗಳ ಮಗುವೂ ಸೇರಿದಂತೆ ನಾಲ್ವರು ಭಾರತೀಯ ಮೂಲದ ಅಮೆರಿಕನ್‌ ಪ್ರಜೆಗಳನ್ನು ಕ್ಯಾಲಿಫೋರ್ನಿಯಾದಲ್ಲಿ ಅಪಹರಿಸಲಾಗಿದೆ. ಇಲ್ಲಿನ ಮರ್ಸೀಡ್‌ ಕೌಂಟಿ ಪ್ರದೇಶದಲ್ಲಿ ನಾಲ್ವರು ಭಾರತೀಯರನ್ನು ಅಪಹರಿಸಲಾಗಿದ್ದು, ಈ ಪೈಕಿ 8 ತಿಂಗಳ ಮಗು ಮತ್ತು ಅದರ ಪೋಷಕರು ಸೇರಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

36 ವರ್ಷದ ಜಸ್‌ದೀಪ್‌ ಸಿಂಗ್‌, ಅವರ ಪತ್ಮಿ 27 ವರ್ಷದ ಜಸ್‌ಲೀನ್‌ ಕೌರ್‌ ಹಾಗೂ ದಂಪತಿಯ 8 ತಿಂಗಳ ಮಗು ಅರೋಹಿ ಮತ್ತು 39 ವರ್ಷದ ಅಮನ್‌ದೀಪ್‌ ಸಿಂಗ್ ಎಂಬುವವರೇ ಅಪಹರಣಕ್ಕೆ ಒಳಗಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಹರಣಕ್ಕೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲವಾದರೂ, ಹಣಕ್ಕಾಗಿಯೇ ಅಪಹರಣ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ಧಾರೆ.

ಅಪಹರಣಕಾರರು ಶಸ್ತ್ರಧಾರಿಗಳಾಗಿದ್ದರು ಎಂದು ತಿಳಿದಬಂದಿದ್ದು, ಅವರ ವರ್ತನೆಯಿಂದ ಸಂಘಟಿತ ಅಪರಾಧ ಗುಂಪಿಗೆ ಸೇರಿದವರು ಎಂಬ ಅನುಮಾನವಿದೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಅಪಹರಣಕಾರರ ಜಾಡು ಹಿಡಿದು ಶೋಧ ಕಾರ್ಯ ಆರಂಭಿಸಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.

2019ರಲ್ಲಿ ಕ್ಯಾಲಿಫೊರ್ನಿಯಾದಲ್ಲಿ ನೆಲೆಸಿದ್ದ ತುಷಾರ್‌ ಆತ್ರೆ ಎಂಬ ಭಾರತೀಯ ಮೂಲದ ಅಮೆರಿಕನ್‌ ಪ್ರಜೆಯನ್ನು ಅಪಹರಿಸಲಾಗಿತ್ತು. ಆದರೆ ಅಪಹರಣಗೊಂಡ ಕೆಲವೇ ಗಂಟೆಗಳಲ್ಲಿ ತುಷಾರ್‌ ಆತ್ರೆ ಶವ ಅವರ ಗೆಳತಿಯ ಕಾರಿನಲ್ಲಿ ಸಿಕ್ಕಿತ್ತು. ಇದೀಗ ಒಂದೇ ಕುಟುಂಬದ ನಾಲ್ವರು ಭಾರತೀಯ ಮೂಲದ ಅಮೆರಿಕನ್‌ ಪ್ರಜೆಗಳನ್ನು ಅಪಹರಿಸಲಾಗಿದ್ದು, ಆತಂಕ ಮನೆ ಮಾಡಿದೆ.

ಸದ್ಯ ಅಪಹರಣಕ್ಕೀಡಾಗಿರುವವರ ಭಾವಚಿತ್ರಗಳನ್ನು ಬಿಡುಗಡೆ ಮಾಡಿರುವ ಪೊಲೀಸರು, ಈವರ ಬಗ್ಗೆ ಯಾವುದೇ ಮಾಹಿತಿ ಇದ್ದರೂ, ಕೂಡಲೇ ತಮ್ಮನ್ನು ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ