logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆರಿಕದ ಶಾಲೆಯೊಂದರಲ್ಲಿ ಗುಂಡಿನ ದಾಳಿ; ಒಬ್ಬ ವಿದ್ಯಾರ್ಥಿ ಸಾವು, 5 ಮಂದಿಗೆ ಗಾಯ

ಅಮೆರಿಕದ ಶಾಲೆಯೊಂದರಲ್ಲಿ ಗುಂಡಿನ ದಾಳಿ; ಒಬ್ಬ ವಿದ್ಯಾರ್ಥಿ ಸಾವು, 5 ಮಂದಿಗೆ ಗಾಯ

Reshma HT Kannada

Jan 05, 2024 08:07 AM IST

ಪೆರ್ರಿ ಮಿಡಲ್‌ ಸ್ಕೂಲ್‌ (ಸಾಂಕೇತಿಕ ಚಿತ್ರ)

    • ಅಮೆರಿಕಾದ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು 1 ವಿದ್ಯಾರ್ಥಿ ಸಾವನ್ನಪ್ಪಿದ್ದು, 5 ಮಂದಿ ಗಾಯಗೊಂಡಿದ್ದಾರೆ. ಸಹಕಾರಿಯೇ ಬಂದೂಕಿನಿಂದ ಇತರ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗುತ್ತಿದೆ. 
ಪೆರ್ರಿ ಮಿಡಲ್‌ ಸ್ಕೂಲ್‌ (ಸಾಂಕೇತಿಕ ಚಿತ್ರ)
ಪೆರ್ರಿ ಮಿಡಲ್‌ ಸ್ಕೂಲ್‌ (ಸಾಂಕೇತಿಕ ಚಿತ್ರ) (NDTV)

ಅಮೆರಿಕಾದ ಅಯೋವಾದಲ್ಲಿ ಹದಿ ವಯಸ್ಸಿನ ವಿದ್ಯಾರ್ಥಿಯೊಬ್ಬ ಬಂದೂಕು ಹಾಗೂ ಶಾಟ್‌ಗನ್‌ನಿಂದ ದಾಳಿ ನಡೆಸಿದ್ದು, ತನ್ನ ಸಹಪಾಠಿಯನ್ನು ಕೊಂದಿದ್ದಾನೆ. ಅಲ್ಲದೆ ಈ ಘಟನೆಯಲ್ಲಿ 5 ಮಂದಿ ಗಾಯಗೊಂಡಿದ್ದಾರೆ ಎಂದು ಇಲ್ಲಿನ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ; ಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್‌

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಗುರುವಾರ ಬೆಳಿಗ್ಗೆ ಸುಮಾರು 5.30ರ ವೇಳೆಗೆ ಈ ಘಟನೆ ನಡೆದಿದೆ. ಈ ಹೊತ್ತಿಗೆ ಶಾಲೆ ಇನ್ನೂ ಆರಂಭವಾಗಿರಲಿಲ್ಲ.

ಘಟನೆಯಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 11 ರಿಂದ 12 ವರ್ಷದವನು ಎನ್ನಲಾಗುತ್ತಿದೆ. ಬೆಳಗಿನ ಹೊತ್ತು ಉಪಾಹಾರ ಸೇವಿಸುವ ಸಲುವಾಗಿ ಶಾಲೆಗೆ ಬಂದಿರಬಹುದು ಎಂದು ಇಲ್ಲಿನ ಸ್ಥಳೀಯ ತನಿಖಾ ವಿಭಾಗದ ಅಧಿಕಾರಿ ಮಿಚ್ ಮೊರ್ಟ್ವೆಡ್ ಹೇಳಿದ್ದಾರೆ.

17 ವರ್ಷದ ಯುವಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಹಾಗೂ ಶಾಲೆಯ ನಿರ್ವಾಹಕರು ಸೇರಿದ್ದಾರೆ ಎನ್ನಲಾಗುತ್ತಿದೆ. ಈ ಘಟನೆ ನಂತರ ಶಾಲೆಯಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಶಾಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನವೊಂದು ಸಿಕ್ಕಿದ್ದು, ಅದನ್ನು ನಿಷ್ಕ್ರೀಯಗೊಳಿಸಲಾಗಿದೆ.

ಕೂಡಲೇ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಆರೋಪಿಯನ್ನು ಹಿಡಿಯಲು ಪ್ರಯತ್ನಿಸಿದ್ದರು, ಆದರೆ ಆ ಹೊತ್ತಿಗಾಗಲೇ ವಿದ್ಯಾರ್ಥಿ ತಾನು ಗುಂಡು ಹಾರಿಸಿಕೊಂಡಿದ್ದ ಎಂದು ಅಧಿಕಾರಿಗಳು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆರೋಪಿ ಸಾವಿನ ಬಗ್ಗೆ ಯಾವುದೇ ಮಾಹಿತಿ ಸ್ವಷ್ಪವಾಗಿಲ್ಲ.

ಈ ಘಟನೆ ಬಗ್ಗೆ ಸ್ಥಳಿಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಶಾಲೆಯ ವಿದ್ಯಾರ್ಥಿಯೊಬ್ಬಳು ʼಗುಂಡಿನ ದಾಳಿ ನಡೆದ ವೇಳೆ ನಾನು ಕ್ಲಾಸ್‌ರೂಮ್‌ನಲ್ಲಿದ್ದೆ. ಹೊರ ಬಂದು ನೋಡಿದಾಗ ಎಲ್ಲೆಡೆ ಗಾಜಿನ ತುಂಡುಗಳು, ರಕ್ತ ಹರಿದಿತ್ತು. ಕೂಡಲೇ ನಾನು ಸ್ಟಾಫ್‌ರೂಮ್‌ ಕಡೆಗೆ ಓಡಿದೆʼ ಎಂದು ಹೇಳಿದ್ದಾಳೆ.

ಘಟನೆಯಲ್ಲಿ ಗಾಯಗೊಂಡವರ ಜೀವಕ್ಕೆ ಯಾವುದೇ ರೀತಿಯ ಅಪಾಯ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಶಾಲೆಯು ಪೆರ್ರಿ ರಾಜ್ಯದ ರಾಜಧಾನಿ ಡೆಸ್ ಮೊಯಿನ್ಸ್‌ನಿಂದ ಸುಮಾರು 35 ಮೈಲಿಗಳು (55 ಕಿಲೋಮೀಟರ್) ದೂರದಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ