logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆರಿಕದಲ್ಲಿ ಬಂದೂಕುಧಾರಿಯ ಅಟ್ಟಹಾಸ; ಸಾಮೂಹಿಕ ಗುಂಡಿನ ದಾಳಿಗೆ 22 ಜನರು ಸಾವು

ಅಮೆರಿಕದಲ್ಲಿ ಬಂದೂಕುಧಾರಿಯ ಅಟ್ಟಹಾಸ; ಸಾಮೂಹಿಕ ಗುಂಡಿನ ದಾಳಿಗೆ 22 ಜನರು ಸಾವು

Meghana B HT Kannada

Oct 26, 2023 08:17 AM IST

ಬಂದೂಕುಧಾರಿಯಿಂದ ಗುಂಡಿನ ದಾಳಿ

    • America shooting: ಆಂಡ್ರೊಸ್ಕೊಗಿನ್ ಕೌಂಟಿ ಶೆರಿಫ್ ಕಚೇರಿಯು ಶಂಕಿತ ಆರೋಪಿ ಗನ್ ಹಿಡಿದುಕೊಂಡಿರುವ ಫೋಟೋಗಳನ್ನು ಬಿಡುಗಡೆ ಮಾಡಿದ್ದು, ಆತನನ್ನು ನಿಖರವಾಗಿ ಗುರುತಿಸಲು ಸಹಾಯವನ್ನು ಕೋರಿದೆ. ಶಂಕಿತ ವ್ಯಕ್ತಿ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಫೇಸ್​ಬುಕ್​​ನಲ್ಲಿ ಬರೆದುಕೊಂಡಿದೆ.
ಬಂದೂಕುಧಾರಿಯಿಂದ ಗುಂಡಿನ ದಾಳಿ
ಬಂದೂಕುಧಾರಿಯಿಂದ ಗುಂಡಿನ ದಾಳಿ

ಮೈನೆ (ಅಮೆರಿಕ): ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಮತ್ತೆ ಬಂದೂಕು ರಾರಾಜಿಸಿದೆ. ಲೆವಿಸ್ಟನ್ ಪ್ರಾಂತ್ಯದ ಮೈನೆಯಲ್ಲಿ ಕಳೆದ ರಾತ್ರಿ (ಅ.25) ಬಂದೂಕುಧಾರಿಯೊಬ್ಬ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದು, 22 ಜನರು ಸಾವನ್ನಪ್ಪಿದ್ದಾರೆ. 12ಕ್ಕೂಬ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ; ಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್‌

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಮೈನೆ ಸ್ಟೇಟ್ ಪೊಲೀಸರು ಶಂಕಿತ ಆರೋಪಿಯನ್ನು 40 ವರ್ಷದ ರಾಬರ್ಟ್ ಕಾರ್ಡ್ ಎಂದು ಗುರುತಿಸಿದ್ದಾರೆ. ಫೇಸ್‌ಬುಕ್​​ನಲ್ಲಿ ಲೆವಿಸ್ಟನ್ ಜನತೆಯನ್ನು ಎಚ್ಚರಿಸಿದ ಮೈನೆ ಸ್ಟೇಟ್ ಪೊಲೀಸರು, "ಲೆವಿಸ್ಟನ್ ನಗರದಲ್ಲಿ ಶೂಟರ್ ಸಕ್ರಿಯವಾಗಿದ್ದು, ಯಾರೂ ಮನೆಯಿಂದ ಹೊರಗಡೆ ಬರಬೇಡಿ. ಬಾಗಿಲು ಹಾಕಿಕೊಂಡು ಒಳಗಡೆ ಇರಿ. ಕಾನೂನು ಜಾರಿ ಅಧಿಕಾರಿಗಳನ್ನು ಬೆಂಬಲಿಸಿ. ನೀವು ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ವ್ಯಕ್ತಿಗಳನ್ನು ನೋಡಿದರೆ ದಯವಿಟ್ಟು 911 ಗೆ ಕರೆ ಮಾಡಿ" ಎಂದು ಪೋಸ್ಟ್ ಮಾಡಿದ್ದರು.

ಬೌಲಿಂಗ್ ಅಲ್ಲೆ ಹಾಗೂ ಇತರ ಹಲವು ಸ್ಥಳಗಳಲ್ಲಿ ಕೂಡ ಗುಂಡಿನ ದಾಳಿ ನಡೆದಿದ್ದು, 50ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಆಂಡ್ರೊಸ್ಕೊಗಿನ್ ಕೌಂಟಿ ಶೆರಿಫ್ ಕಚೇರಿಯು ಶಂಕಿತ ಆರೋಪಿ ಗನ್ ಹಿಡಿದುಕೊಂಡಿರುವ ಫೋಟೋಗಳನ್ನು ಬಿಡುಗಡೆ ಮಾಡಿದ್ದು, ಆತನನ್ನು ನಿಖರವಾಗಿ ಗುರುತಿಸಲು ಸಹಾಯವನ್ನು ಕೋರಿದೆ. ಶಂಕಿತ ವ್ಯಕ್ತಿ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಫೇಸ್​ಬುಕ್​​ನಲ್ಲಿ ಬರೆದುಕೊಂಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ