logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆರಿಕದಲ್ಲಿ ಯದ್ವಾತದ್ವಾ ಗುಂಡು ಹಾರಿಸಿ 18 ಜನರನ್ನು ಕೊಂದಾತ ಶವವಾಗಿ ಪತ್ತೆ

ಅಮೆರಿಕದಲ್ಲಿ ಯದ್ವಾತದ್ವಾ ಗುಂಡು ಹಾರಿಸಿ 18 ಜನರನ್ನು ಕೊಂದಾತ ಶವವಾಗಿ ಪತ್ತೆ

Meghana B HT Kannada

Oct 28, 2023 11:03 AM IST

ಆರೋಪಿ ರಾಬರ್ಟ್ ಕಾರ್ಡ್

    • America shooting: ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದ ಈತನನ್ನು 40 ವರ್ಷದ ರಾಬರ್ಟ್ ಕಾರ್ಡ್ ಎಂದು ಗುರುತಿಸಲಾಗಿತ್ತು. ಘಟನೆಯಲ್ಲಿ 18 ಮಂದಿ ಮೃತಪಟ್ಟರೆ, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಆರೋಪಿ ರಾಬರ್ಟ್ ಕಾರ್ಡ್
ಆರೋಪಿ ರಾಬರ್ಟ್ ಕಾರ್ಡ್

ಮೈನೆ (ಅಮೆರಿಕ): ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಅತ್ಯಂತ ಭೀಕರ ಸಾಮೂಹಿಕ ಗುಂಡಿನ ದಾಳಿಯ ಆರೋಪಿ ಇದೀಗ ಶವವಾಗಿ ಪತ್ತೆಯಾಗಿದ್ದಾನೆ. ಅಕ್ಟೋಬರ್​ 25 ರಂದು ಈತ ಯದ್ವಾತದ್ವಾ ಗುಂಡು ಹಾರಿಸಿದ್ದ ಪರಿಣಾಮ 18 ಜನರು ಪ್ರಾಣಬಿಟ್ಟಿದ್ದರು.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಲೆವಿಸ್ಟನ್ ಪ್ರಾಂತ್ಯದ ಮೈನೆಯ ಬೌಲಿಂಗ್ ಅಲ್ಲೆ ಮತ್ತು ಬಾರ್ & ರೆಸ್ಟೋರೆಂಟ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದ ಈತನನ್ನು 40 ವರ್ಷದ ರಾಬರ್ಟ್ ಕಾರ್ಡ್ ಎಂದು ಗುರುತಿಸಲಾಗಿತ್ತು. ಘಟನೆಯಲ್ಲಿ 18 ಮಂದಿ ಮೃತಪಟ್ಟರೆ, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಈತನ ಪತ್ತೆಗೆ ಪೊಲೀಸ್​ ತಂಡಗಳನ್ನು ರಚಿಸಲಾಗಿತ್ತು. ಆದರೆ ಇದೀಗ ಆರೋಪಿ ನಿನ್ನೆ (ಅ.27) ರಾತ್ರಿ ರಾಬರ್ಟ್ ಕಾರ್ಡ್ ಶವವಾಗಿ ಪತ್ತೆಯಾಗಿದ್ದಾನೆ. ಸ್ವತಃ ತಾನೇ ಗುಂಡುಹಾರಿಸಿಕೊಂಡು ಈತ ಸಾವನ್ನಪ್ಪಿರುವುದಾಗಿ ಮೈನೆ ಸಾರ್ವಜನಿಕ ಸುರಕ್ಷತಾ ಆಯುಕ್ತ ಮೈಕ್ ಸೌಶುಕ್ ಹೇಳಿದ್ದಾರೆ.

ರಾಬರ್ಟ್ ಕಾರ್ಡ್ ಒಬ್ಬ ಆರ್ಮಿ ರಿಸರ್ವಿಸ್ಟ್ ಆಗಿದ್ದು, ಆತನನ್ನು ಇನ್ನೂ ಯಾವುದೇ ಯುದ್ಧ ವಲಯದಲ್ಲಿ ನಿಯೋಜಿಸಲಾಗಿರಲಿಲ್ಲ. ಈತನನ್ನು ಇತ್ತೀಚೆಗೆ ಮನೋವೈದ್ಯಕೀಯ ಚಿಕಿತ್ಸೆಗೆ ಕಳುಹಿಸಲಾಗಿದೆ ಎಂದು ಯುಎಸ್ ಮಾಧ್ಯಮವೊಂದು ವರದಿ ಮಾಡಿದೆ.

ಯುನೈಟೆಡ್​ ಸ್ಟೇಟ್ಸ್​​ನಲ್ಲಿ ಬಂದೂಕು ಎಂಬುದು ಆಟಿಕೆಯ ವಸ್ತುವಂತಾಗಿದ್ದು, ಗುಂಡಿನ ದಾಳಿಗಳು ಪದೇ ಪದೇ ನಡೆಯುತ್ತಿರುತ್ತವೆ. 2017ರಲ್ಲಿ ಲಾಸ್ ವೇಗಾಸ್‌ನಲ್ಲಿ ಕಿಕ್ಕಿರಿದ ಸಂಗೀತೋತ್ಸವದಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ 60 ಜನರನ್ನು ಕೊಂದಿದ್ದನು. ಆನಂತರ ನಡೆದ ಅತಿ ಭೀಕರ ಗುಂಡಿನ ದಾಳಿ ಇದಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ