logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Itbp Constable Jobs 2022: ಐಟಿಬಿಪಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ಎಸ್‌ಎಸ್‌ಎಲ್‌ಸಿ ಓದಿರುವವರು ಅರ್ಜಿ ಸಲ್ಲಿಸಿ

ITBP Constable Jobs 2022: ಐಟಿಬಿಪಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ಎಸ್‌ಎಸ್‌ಎಲ್‌ಸಿ ಓದಿರುವವರು ಅರ್ಜಿ ಸಲ್ಲಿಸಿ

Praveen Chandra B HT Kannada

Aug 30, 2022 10:01 AM IST

ITBP Constable Jobs 2022: ಐಟಿಬಿಪಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ (Photo by Sant Arora / Hindustan Times)

    • ITBP Constable Jobs 2022: ಭಾರತ ಸರಕಾರದ ಗೃಹ ಸಚಿವಾಲಯದ ಅಧೀನದ ಇಂಡೋ ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌ ಫೋರ್ಸ್‌ (ಐಟಿಬಿಪಿ)ನಲ್ಲಿ ಕಾನ್ಸ್‌ಟೇಬಲ್‌ (ಅನಿಮಲ್‌ ಟ್ರಾನ್ಸ್‌ಪೋರ್ಟ್‌) ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ವಯೋಮಿತಿ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ITBP Constable Jobs 2022: ಐಟಿಬಿಪಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ (Photo by Sant Arora / Hindustan Times)
ITBP Constable Jobs 2022: ಐಟಿಬಿಪಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ (Photo by Sant Arora / Hindustan Times)

ITBP Constable Jobs 2022: ಭಾರತ ಸರಕಾರದ ಗೃಹ ಸಚಿವಾಲಯದ ಅಧೀನದ ಇಂಡೋ ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌ ಫೋರ್ಸ್‌ (ಐಟಿಬಿಪಿ)ನಲ್ಲಿ ಕಾನ್ಸ್‌ಟೇಬಲ್‌ (ಅನಿಮಲ್‌ ಟ್ರಾನ್ಸ್‌ಪೋರ್ಟ್‌) ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ವಯೋಮಿತಿ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಇದು ನಾನ್‌ ಮಿನಿಸ್ಟ್ರಿಯಲ್‌ ಗ್ರೂಪ್‌ ಸಿ ಹುದ್ದೆಗಳಾಗಿದ್ದು, ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗಪೊಂಡಿದ್ದು, 27ಸೆಪ್ಟೆಂಬರ್‌ 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಹುದ್ದೆಗಳ ವಿವರ

ಒಟ್ಟು 52 ಕಾನ್ಸ್‌ಟೇಬಲ್‌ (ಅನಿಮಲ್‌ ಟ್ರಾನ್ಸ್‌ಪೋರ್ಟ್‌) ಹುದ್ದೆಗಳಿವೆ. ಇವುಗಳಲ್ಲಿ ಪುರುಷ ಅಭ್ಯರ್ಥಿಗಳಿಗೆ 44 ಮತ್ತು ಮಹಿಳಾ ಅಭ್ಯರ್ಥಿಗಳಿಗೆ 8 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಪುರುಷ ಅಭ್ಯರ್ಥಿಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 28, ಇಡಬ್ಲ್ಯುಎಸ್‌ ಅಭ್ಯರ್ಥಿಗಳಿಗೆ 4, ಎಸ್‌ಸಿ-2 ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 10 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಮಹಿಳಾ ಅಭ್ಯರ್ಥಿಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 5, ಇಡಬ್ಲ್ಯುಎಸ್‌ 1, ಎಸ್‌ಟಿ-2 ಹುದ್ದೆಗಳನ್ನು ಮೀಸಲಿರಿಸಲಾಗಿದೆ.

ವೇತನ ಎಷ್ಟು?

ಆಯ್ಕೆಯಾದ ಅಭ್ಯರ್ಥಿಗಳಿಗೆ ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ಲೆವೆಲ್‌ 3 ವೇತನ ನೀಡಲಾಗುತ್ತದೆ. ಅಂದರೆ, 21,700- 69100 ರೂ. ವೇತನ ಇರಲಿದೆ.

ಅರ್ಹತೆಗಳೇನಿರಬೇಕು?

ವಯೋಮಿತಿ: ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ನೀಡಲಾಗುತ್ತದೆ.

ವಿದ್ಯಾರ್ಹತೆ: ಅರ್ಜಿ ಸಲ್ಲಿಸಲು ಮೆಟ್ರಿಕ್ಯುಲೇಷನ್‌ ವಿದ್ಯಾರ್ಹತೆ ಬಯಸಲಾಗಿದೆ. ಅಂದರೆ, ಹತ್ತನೇ ತರಗತಿ ಅಥವಾ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಪೂರೈಸಿದವರು ಅರ್ಜಿ ಸಲ್ಲಿಸಬಹುದು.

ದೈಹಿಕ ಸದೃಢತೆ: ಪುರುಷರು 170 ಸೆಂ.ಮೀ. ಮತ್ತು ಮಹಿಳೆಯರು 157 ಕನಿಷ್ಠ ಎತ್ತರ ಹೊಂದಿರಬೇಕು. ಎದೆಯ ಸುತ್ತಳತೆ- ವಿಸ್ತರಿಸದೆ ಇರುವಾಗ 80 ಮತ್ತು ವಿಸ್ತರಿಸುವಾಗ 85 ಸೆಂ.ಮೀ. ಇರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಐಟಿಬಿಪಿ ರಿಕ್ರೂಟ್‌ಮೆಂಟ್‌ ವೆಬ್‌ಸೈಟ್‌ಗೆ ಹೋಗಿ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಅಭ್ಯರ್ಥಿಗಳು, ಒಬಿಸಿ ಅಭ್ಯರ್ಥಿಗಳು, ಇಬಿಎಸ್‌ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ, ಎಸ್‌ಟಿ, ಮಹಿಳೆ ಮತ್ತು ಮಾಜಿ ಸೈನಿಕರಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ

ಮೊದಲು ಫಿಸಿಕಲ್‌ ಎಫಿಸಿಯೆನ್ಸಿ ಟೆಸ್ಟ್‌ (ಪಿಇಟಿ) ನಡೆಸಲಾಗುತ್ತದೆ. ಪುರುಷ ಅಭ್ಯರ್ಥಿಗಳಿಗೆ 1.6 ಕಿ.ಮೀ. ರೇಸ್‌, ಲಾಂಗ್‌ ಜಂಪ್‌, ಹೈ ಜಂಪ್‌ ಇರುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ 800 ಮೀಟರ್‌ ಓಟ, ಲಾಂಗ್‌ ಜಂಪ್‌, ಹೈಜಂಪ್‌ ಇರುತ್ತದೆ. ಇದು ಅರ್ಹತಾ ಉದ್ದೇಶಕ್ಕೆ ನಡೆಸುವ ಟೆಸ್ಟ್‌ ಆಗಿದ್ದು, ಯಾವುದೇ ಅಂಕಗಳನ್ನು ನೀಡಲಾಗುವುದಿಲ್ಲ. ಫೇಸ್‌ 2 ನಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಸಾಮಾನ್ಯ ಜ್ಞಾನ, ಎಲಿಮೆಂಟರಿ ಗಣಿತ, ಅನಾಲಿಟಿಕಲ್‌ ಆಪ್ಟಿಟ್ಯೂಡ್‌, ಇಂಗ್ಲಿಷ್‌/ಹಿಂದಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಂತೆ 100 ಅಂಕಗಳ 100 ಪ್ರಶ್ನೆಗಳು ಇರುತ್ತವೆ.

ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ