logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Karnataka Assembly Polls: ಈ ಬಾರಿ ಮತಗಟ್ಟೆಗಳನ್ನು ನಿರ್ವಹಿಸಲಿದ್ದಾರೆ ಮಹಿಳೆಯರು, ಯುವಕರು, ವಿಶೇಷ ಚೇತನರು..

Karnataka Assembly Polls: ಈ ಬಾರಿ ಮತಗಟ್ಟೆಗಳನ್ನು ನಿರ್ವಹಿಸಲಿದ್ದಾರೆ ಮಹಿಳೆಯರು, ಯುವಕರು, ವಿಶೇಷ ಚೇತನರು..

HT Kannada Desk HT Kannada

Mar 29, 2023 02:54 PM IST

ಸಂಗ್ರಹ ಚಿತ್ರ

  • ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಮಾಡಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ) , ಮತದಾನದ ಅನುಭವವನ್ನು ಹೆಚ್ಚಿಸಲು ಮತ್ತು ಮತದಾರರನ್ನು ಮತದಾನ ಕೇಂದ್ರಗಳಿಗೆ ಬರುವಂತೆ ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮಹಿಳೆಯರು, ಯುವಕರು ಹಾಗೂ ವಿಶೇಷ ಚೇತನರು ಮತಗಟ್ಟೆಗಳನ್ನು ನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಮಾಡಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ) , ಮತದಾನದ ಅನುಭವವನ್ನು ಹೆಚ್ಚಿಸಲು ಮತ್ತು ಮತದಾರರನ್ನು ಮತದಾನ ಕೇಂದ್ರಗಳಿಗೆ ಬರುವಂತೆ ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮಹಿಳೆಯರು, ಯುವಕರು ಹಾಗೂ ವಿಶೇಷ ಚೇತನರು ಮತಗಟ್ಟೆಗಳನ್ನು ನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

ತಿರುಮಲ ತಿರುಪತಿ ಜುಲೈ ತಿಂಗಳ ವಿಶೇಷ ಪ್ರವೇಶ ಟಿಕೆಟ್, ಟಿಟಿಡಿ ವೆಬ್‌ಸೈಟ್ ಮೂಲಕ 300 ರೂಪಾಯಿ ಟಿಕೆಟ್‌

ಚೆನ್ನೈನಲ್ಲಿ ವಂದೇ ಮೆಟ್ರೋ ರೈಲು ಅನಾವರಣ; ಭಾರತೀಯ ರೈಲ್ವೆ ಮಹತ್ವದ ಮೈಲಿಗಲ್ಲು, ಜುಲೈನಲ್ಲಿ ಮೊದಲ ಪ್ರಾಯೋಗಿಕ ಸಂಚಾರ

ರಣಬಿಸಿಲಿನಿಂದ ರಕ್ಷಣೆಗೆ ಟ್ರಾಫಿಕ್‌ ಸಿಗ್ನಲ್ ಸಮೀಪ ಹಸಿರು ನೆರಳು ಬಲೆ; ಪುದುಚೇರಿ ಪಿಡಬ್ಲ್ಯುಡಿ ಇಲಾಖೆ ಉಪಕ್ರಮಕ್ಕೆ ವ್ಯಾಪಕ ಮೆಚ್ಚುಗೆ

ಮಹಿಳೆಯರು ಮತ್ತು ವಿಶೇಷ ಚೇತನರು

ನವದೆಹಲಿಯ ವಿಜ್ಞಾನ ಭವನದ ಪ್ಲೀನರಿ ಹಾಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್, ಕರ್ನಾಟಕದಾದ್ಯಂತ ಸುಮಾರು 1,320 ಮತಗಟ್ಟೆಗಳನ್ನು ಮಹಿಳೆಯರೇ ಪ್ರತ್ಯೇಕವಾಗಿ ನಿರ್ವಹಿಸಲಿದ್ದಾರೆ. ಅದೇ ರೀತಿ, ಸುಮಾರು 100 ಬೂತ್‌ಗಳನ್ನು ಸಂಪೂರ್ಣವಾಗಿ ವಿಶೇಷ ಚೇತನರು ನಿರ್ವಹಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಯುವ ಸರ್ಕಾರಿ ನೌಕರರು

ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲ್ಗೊಳ್ಳಲು ಮತದಾನ ಕೇಂದ್ರಗಳಲ್ಲಿ ಯುವ ಸರ್ಕಾರಿ ನೌಕರರನ್ನು ನೇಮಿಸಿಕೊಳ್ಳಲು ಇಸಿಐ ನಿರ್ಧರಿಸಿದೆ. ಪ್ರತಿ ಜಿಲ್ಲೆಯಲ್ಲಿ ನೇಮಕಗೊಂಡ ಅತ್ಯಂತ ಕಿರಿಯ ನೌಕರನಿಗೆ ಬೂತ್‌ಗಳನ್ನು ನಿರ್ವಹಿಸಲು ತರಬೇತಿ ನೀಡಿ ನೇಮಕ ಮಾಡಿಕೊಳ್ಳಲಾಗುವುದು. ಅಂತಹ 224 ಬೂತ್‌ಗಳನ್ನು ಸ್ಥಾಪಿಸಲಾಗುವುದು, ಇದನ್ನು ಸರ್ಕಾರದ ಅತ್ಯಂತ ಕಿರಿಯ ನೌಕರರು ಮಾತ್ರ ನಿರ್ವಹಿಸುತ್ತಾರೆ ಎಂದು ರಾಜೀವ್ ಕುಮಾರ್ ತಿಳಿಸಿದ್ದಾರೆ.

ಜನಾಂಗೀಯ ಮತಗಟ್ಟೆ

ಅಂತೆಯೇ, ರಾಜ್ಯಾದ್ಯಂತ ಸುಮಾರು 240 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು, ಇದು ಪರಿಸರ ಸ್ನೇಹಿ ಮತ್ತು ಹಸಿರು ಮತಗಟ್ಟೆಗಳಾಗಿರುತ್ತದೆ. ಪ್ರತಿಯೊಬ್ಬರೂ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು, ವಿಶೇಷವಾಗಿ ದುರ್ಬಲ ಬುಡಕಟ್ಟು ಸಮುದಾಯದ ಜನರು. ಇವರು ಶೇ.100 ರಷ್ಟು ಮತದಾನ ಮಾಡಲು, ಅವರ ಸ್ವಂತ ಸಾಮಾಜಿಕ ಪರಿಸರದಲ್ಲಿ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲು ಸುಮಾರು 40 'ಜನಾಂಗೀಯ ಮತಗಟ್ಟೆ'ಗಳನ್ನು ಸಹ ಸ್ಥಾಪಿಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಟ್ರಾನ್ಸ್ಜೆಂಡರ್ ಮತದಾರರು

42,756 ತೃತೀಯ ಲಿಂಗಿಗಳ ಪೈಕಿ 41,312 ಟ್ರಾನ್ಸ್‌ಜೆಂಡರ್ ಮತದಾರರನ್ನು ನೋಂದಾಯಿಸಲಾಗಿದೆ. ಕರ್ನಾಟಕದಲ್ಲಿ ಒಟ್ಟು 4,699 ತೃತೀಯ ಲಿಂಗಿ ಮತದಾರರಿದ್ದಾರೆ. ಚುನಾವಣೆಯಲ್ಲಿ ಕೆಲವರು ತಮ್ಮನ್ನು 'ಟ್ರಾನ್ಸ್ಜೆಂಡರ್' ಎಂದು ಗುರುತಿಸಲು ಬಯಸದ ಕೆಲವರು ಇದ್ದಾರೆ. ಹೀಗಾಗಿ ಅವರು ತಮ್ಮನ್ನು ತಾವು ಗುರುತಿಸಿಕೊಳ್ಳಲು ಬಯಸುವ ಯಾವುದೇ ರೂಪದಲ್ಲಿ ಅಥವಾ ಸೂಕ್ಷ್ಮತೆಯಲ್ಲಿ ನಾವು ಅವರನ್ನು ಮತದಾನ ಪಟ್ಟಿಯಲ್ಲಿ ಸೇರಿಸುತ್ತೇವೆ ಎಂದು ಚುನಾವಣಾ ಆಯೋಗ ಭರವಸೆ ನೀಡಿದೆ.

ಒಟ್ಟು ಮತದಾರರು

ಕರ್ನಾಟಕದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಘೋಷಣೆಯಾಗಲಿದೆ. ರಾಜ್ಯದಲ್ಲಿ ಒಟ್ಟು 5,21,73,579 (5.2 ಕೋಟಿ) ಜನ ಮತದಾರರಿದ್ದು, ಇವರಲ್ಲಿ 2,62,42,561 (2.62 ಕೋಟಿ) ಜನ ಪುರುಷ ಮತದಾರರು ಹಾಗೂ 2,59,26,319 (2.59 ಕೋಟಿ) ಮಹಿಳಾ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟವರು 12,15,763 ಜನರಿದ್ದು, ಇವರಲ್ಲಿ 100 ವರ್ಷ ಮೇಲ್ಪಟ್ಟ 16,976 ಮತದಾರರಿದ್ದಾರೆ. 9,17,241 ಮಂದಿ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ.

ವೋಟ್‌ ಫ್ರಮ್‌ ಹೋಮ್‌

80 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ವೋಟ್‌ ಫ್ರಮ್‌ ಹೋಮ್‌ ಸೌಲಭ್ಯ ಪರಿಚಯಿಸಲಾಗುತ್ತಿದೆ. ಇವರು ಮತದಾನಕ್ಕೂ 5 ದಿನಕ್ಕೂ ಮೊದಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.ಇವರ ಮನೆಗೇ ತೆರಳುವ ಚುನಾವಣಾ ಸಿಬ್ಬಂದಿ, ಅಲ್ಲಿಂದಲೇ ಅವರ ಮತವನ್ನು ದಾಖಲಿಸುತ್ತಾರೆ. ಹೆಸರು ನೋಂದಾವಣೆ ಮಾಡಿಕೊಳ್ಳದ ಹಿರಿಯ ಮತ್ತು ವಿಶೇಷ ಚೇತನ ಮತದಾರರು, ಮತಗಟ್ಟೆಗೆ ತೆರಳಿ ಮತದಾನ ಮಾಡುವುದು ಕಡ್ಡಾಯವಾಗಿದೆ.

    ಹಂಚಿಕೊಳ್ಳಲು ಲೇಖನಗಳು