logo
ಕನ್ನಡ ಸುದ್ದಿ  /  Nation And-world  /  Karnataka, Maharashtra Governors To Chair Inter-state Meet Today

Karnataka Maharashtra meet: ಕರ್ನಾಟಕ-ಮಹಾರಾಷ್ಟ್ರ ನಡುವೆ ಇಂದು ಮಹತ್ವದ ಸಮನ್ವಯ ಸಭೆ, ಗಡಿ ಅಭಿವೃದ್ಧಿಯತ್ತ ನಿರೀಕ್ಷೆ

HT Kannada Desk HT Kannada

Nov 04, 2022 11:04 AM IST

Karnataka Maharashtra meet: ಕರ್ನಾಟಕ-ಮಹಾರಾಷ್ಟ್ರ ನಡುವೆ ಇಂದು ಮಹತ್ವದ ಸಮನ್ವಯ ಸಭೆ

    • ಕರ್ನಾಟಕ ಮತ್ತು ಮಹಾರಾಷ್ಟ್ರ ಎಂದಾಕ್ಷಣ ಪ್ರತಿಬಾರಿಯೂ ಗಡಿ ವಿವಾದ, ಇತರೆ ತಗಾದೆಗಳದ್ದೇ ಸುದ್ದಿ. ಆದರೆ, ಇಂದು ಈ ರಾಜ್ಯಗಳ ನಡುವೆ ಮಹತ್ವದ ಸಭೆಯೊಂದು ನಡೆಯಲಿದೆ.
Karnataka Maharashtra meet: ಕರ್ನಾಟಕ-ಮಹಾರಾಷ್ಟ್ರ ನಡುವೆ ಇಂದು ಮಹತ್ವದ ಸಮನ್ವಯ ಸಭೆ
Karnataka Maharashtra meet: ಕರ್ನಾಟಕ-ಮಹಾರಾಷ್ಟ್ರ ನಡುವೆ ಇಂದು ಮಹತ್ವದ ಸಮನ್ವಯ ಸಭೆ

ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರ ಎಂದಾಕ್ಷಣ ಪ್ರತಿಬಾರಿಯೂ ಗಡಿ ವಿವಾದ, ಇತರೆ ತಗಾದೆಗಳದ್ದೇ ಸುದ್ದಿ. ಆದರೆ, ಇಂದು ಈ ರಾಜ್ಯಗಳ ನಡುವೆ ಮಹತ್ವದ ಸಭೆಯೊಂದು ನಡೆಯಲಿದೆ. ಕರ್ನಾಟಕ- ಮಹಾರಾಷ್ಟ್ರ ನಡುವೆ ಶುಕ್ರವಾರ ಮಹತ್ವದ ಸಭೆ ಆಯೋಜನೆಗೊಂಡಿದ್ದು, ಎರಡೂ ರಾಜ್ಯಗಳ ನಡುವೆ ಸೌಹಾರ್ದತೆ ಬೆಸೆಯುವ ಆಶಯ ವ್ಯಕ್ತವಾಗಿದೆ. ಕರ್ನಾಟಕ- ಮಹಾರಾಷ್ಟ್ರ ರಾಜ್ಯಗಳ ರಾಜ್ಯಪಾಲರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ನಿರ್ಲಕ್ಷಿತ ಗಡಿ ಪ್ರದೇಶದ ಮೇಲೆ ಅಭಿವೃದ್ಧಿಯ ಬೆಳಕು ಹರಿಯುವ ನಿರೀಕ್ಷೆ ಮೂಡಿಸಿದೆ.

ಟ್ರೆಂಡಿಂಗ್​ ಸುದ್ದಿ

Lok Sabha Election 2024: ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸುತ್ತಿರುವ ಶ್ಯಾಮ್ ರಂಗೀಲ ಯಾರು; 10 ಪ್ರಮುಖ ಅಂಶಗಳಿವು

20 ವರ್ಷಗಳಲ್ಲಿ 115 ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ; ಅಗ್ರ ಸ್ಥಾನದಲ್ಲಿರುವ ಮದ್ರಾಸ್‌ನಲ್ಲಿ 26 ಸಾವು, ಆರ್‌ಟಿಐನಿಂದ ಮಾಹಿತಿ ಬಹಿರಂಗ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು, ಮೇ ತಿಂಗಳ ಉತ್ಸವ ವೇಳಾಪಟ್ಟಿ ಪ್ರಕಟಿಸಿದ ಟಿಟಿಡಿ

Gold Rate Today: ಚಿನ್ನಾಭರಣ ಪ್ರಿಯರಿಗೆ ಇಲ್ಲಿದೆ ಗುಡ್‌ನ್ಯೂಸ್‌; 10ಗ್ರಾಂ ಚಿನ್ನಕ್ಕೆ 1000 ರೂ ಇಳಿಕೆ, ಬೆಳ್ಳಿ ದರವೂ ಕುಸಿತ

ಸಭೆ ನಡೆಯುವುದೆಲ್ಲಿ?: ಮಹಾರಾಷ್ಟ್ರದ ಕೊಲ್ಲಾಪುರ ನಗರದ ಛತ್ರಪತಿ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ- ಮಹಾರಾಷ್ಟ್ರ ರಾಜ್ಯಗಳ ರಾಜ್ಯಪಾಲರ ನೇತೃತ್ವದಲ್ಲಿ ಸಮನ್ವಯ ಸಭೆ ನಡೆಯಲಿದೆ. ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹೋಟ್, ಮಹಾರಾಷ್ಟ್ರ ರಾಜ್ಯಪಾಲ ಭಗತ್‌ಸಿಂಗ್ ಕೊಶ್ಯಾರಿ ನೇತೃತ್ವತದಲ್ಲಿ ಬೆಳಗಾವಿ, ಧಾರವಾಡ, ಕಾರವಾರ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್ ಸೇರಿದಂತೆ ಗಡಿ ಕರ್ನಾಟಕ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪ್ರಮುಖ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಎರಡು ರಾಜ್ಯಗಳ ಸಮಸ್ಯೆಗೆ ಪರಿಹಾರ

ಗಡಿ ಪ್ರದೇಶದ ಹಲವು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಸಭೆ ಮಹತ್ವ ಪಡೆದಿದೆ. ಕರ್ನಾಟಕ-ಮಹಾರಾಷ್ಟ್ರ ನಡುವಿನ ಪ್ರದೇಶಗಳಲ್ಲಿ ಮೂಲಸೌಕರ್ಯಗಳು ಕೆಟ್ಟದ್ದಾಗಿದೆ. ಎರಡೂ ರಾಜ್ಯಗಳ ಗಡಿ ಪ್ರದೇಶದ ಜನರು ಸರಕಾರದ ವಿರುದ್ಧ ಆಗಾಗ ಪ್ರತಿಭಟನೆ ನಡೆಸುತ್ತಿದ್ದಾರೆ.

ಎರಡೂ ರಾಜ್ಯಗಳು ಗಡಿ ವಿವಾದದ ಕುರಿತು ಮಾತನಾಡುತ್ತವೆ ಹೊರತು ಅಲ್ಲಿನ ಜನರ ಸಮಸ್ಯೆಗಳತ್ತ ಕಣ್ಣಾಡಿಸುವುದಿಲ್ಲ ಎಂಬ ದೂರಿದೆ. ಈ ಕುರಿತು ಅಲ್ಲಿನ ಜನರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಇಂದಿನ ಸಭೆಯಲ್ಲಿ ತೀರ್ಮಾನಗಳು ಆಗಬಹುದು ಎಂದು ಜನರು ನಿರೀಕ್ಷೆಯಲ್ಲಿದ್ದಾರೆ.

ಬೇಸಿಗೆಯಲ್ಲಿ ಕೃಷ್ಣಾ ನದಿಗೆ 2 ಟಿಎಂಸಿ ನೀರು ಬಿಡುಗಡೆ ಬೇಡಿಕೆಗೆ ಮಹಾರಾಷ್ಟ್ರ ಸರಕಾರ ಪ್ರತಿಯಾಗಿ ಆಲಮಟ್ಟಿ ಜಲಾಶಯದಿಂದ ಅಷ್ಟೇ ಪ್ರಮಾಣದ ನೀರು ಕೇಳುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರದ ತುರ್ತು ಅಗತ್ಯತೆ ಇದೆ ಈ ಕುರಿತು ಇಂದಿನ ಸಭೆಯಲ್ಲಿ ಮಾತುಕತೆಗಳಾಗುವ ನಿರೀಕ್ಷೆಯಿದೆ.

ನಗಾರಾಭಿವೃದ್ಧಿ ಕೈಗಾರಿಕೆಗಳಿಗೆ ಪೂರಕವಾಗಿ ಹೊಸ ರೈಲುಗಳ ಓಡಾಟದ ಜತೆಗೆ ಪ್ರವಾಸೋದ್ಯಮ ಬೆಳೆಯಬೇಕಾಗಿದೆಯಾದರೂ ಸಮನ್ವಯತೆ ಕೊರತೆ ಅಡ್ಡಿಯಾಗುತ್ತಿದೆ. ಈ ಸಮಸ್ಯೆಗಳನ್ನು ನಿವಾರಿಸಲು ಈ ಸಭೆ ನೆರವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಗಡಿ ಭಾಗದಲ್ಲಿ ರಸ್ತೆ ಸಂಪರ್ಕ, ಬಸ್ ಓಡಾಟ, ಭೂಮಿ ಖಾತೆ ಸಮಸ್ಯೆ, ಗಡಿ ಭಾಗದಲ್ಲಿ ಶಾಲಾ ಮಕ್ಕಳ ಕಲಿಕೆಗೆ ಸಂಬಂಧಿಸಿದ ವಿಷಯಗಳು, ಅಕ್ರಮ ಅಕ್ಕಿ, ಮದ್ಯ ಸಾಕಾಣಿಕೆ, ಅಪರಾಧ ಪ್ರಕರಣಗಳು ಇತ್ಯಾದಿ ಹಲವು ವಿಷಯಗಳನ್ನು ಇಂದಿನ ಸಭೆಯಲ್ಲಿ ಚರ್ಚಿಸುವ ನಿರೀಕ್ಷೆಯಿದೆ.

ಜಿಲ್ಲೆಯಲ್ಲಿನ ಪಡಿತರ ಅಂಗಡಿಯಲ್ಲಿ ವಿತರಿಸಲಾಗುವ ಅಕ್ಕಿ ಮಹಾರಾಷ್ಟ್ರದ ಉಮರ್ಗಾ ರೈಸ್ ಮಿಲ್‍ಗಳಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಸಭೆಯಲ್ಲಿ ಚರ್ಚಿಸಲಾಗುವುದು. ಈ ಕುರಿತು ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳು ಮತ್ತು ಅಕ್ರಮ ಸಾಗಾಣಿಕ ಪ್ರಮಾಣದ ಕುರಿತು ಮಾಹಿತಿ ನೀಡುವಂತೆ ಆಹಾರ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಗುಣಕಿ ಅವರಿಗೆ ಡಿ.ಸಿ. ಸೂಚಿಸಿದ್ದರು. ಈ ಕುರಿತೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.

    ಹಂಚಿಕೊಳ್ಳಲು ಲೇಖನಗಳು