logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kerala Governorʼs Order: ವಿಸಿಗಳ ರಾಜೀನಾಮೆಗೆ ರಾಜ್ಯಪಾಲರಿಂದ 24 ಗಂಟೆ ಗಡುವು; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ: ಕುತೂಹಲಕಾರಿ ಬೆಳವಣಿಗೆ

Kerala Governorʼs order: ವಿಸಿಗಳ ರಾಜೀನಾಮೆಗೆ ರಾಜ್ಯಪಾಲರಿಂದ 24 ಗಂಟೆ ಗಡುವು; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ: ಕುತೂಹಲಕಾರಿ ಬೆಳವಣಿಗೆ

Umesh Kumar S HT Kannada

Oct 24, 2022 03:49 PM IST

ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ (Kerala Governor Arif Mohammed Khan )

    • Explainer - Kerala Governorʼs order: ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ ಸೇರಿ 9 ವಿಶ್ವವಿದ್ಯಾಲಯಗಳ ಕುಲಪತಿಗಳು 24 ಗಂಟೆ ಒಳಗೆ ರಾಜೀನಾಮೆ ಸಲ್ಲಿಸಬೇಕು ಎಂದು ಕೇರಳ ರಾಜ್ಯಪಾಲರು ನಿನ್ನೆ ಆದೇಶ ನೀಡಿದ್ದರು. ಈ ಪ್ರಕರಣ ಇಂದು ಹೈಕೋರ್ಟ್‌ ಮೆಟ್ಟಿಲೇರಿದ್ದು, ಸಂಜೆ 4ಕ್ಕೆ ವಿಚಾರಣೆ ನಡೆಯಲಿದೆ. 
 ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ (Kerala Governor Arif Mohammed Khan )
ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ (Kerala Governor Arif Mohammed Khan ) (HT_PRINT)

ತಿರುವನಂತಪುರ: ಯೂನಿವರ್ಸಿಟಿ ಆಫ್‌ ಕೇರಳ, ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ ಸೇರಿ 9 ವಿಶ್ವವಿದ್ಯಾಲಯಗಳ ಕುಲಪತಿಗಳು 24 ಗಂಟೆ ಒಳಗೆ ರಾಜೀನಾಮೆ ಸಲ್ಲಿಸಬೇಕು ಎಂದು ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ (Kerala Governor Arif Mohammed Khan ) ನಿನ್ನೆ ಆದೇಶ ನೀಡಿದ್ದರು. ಇದರ ಪ್ರಕಾರ, ಇಂದು ಬೆಳಗ್ಗೆ 11 ಗಂಟೆಗೆ ಈ ಗಡುವು ಮುಗಿದಿದೆ.

ಟ್ರೆಂಡಿಂಗ್​ ಸುದ್ದಿ

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ; ಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್‌

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಈ ನಡುವೆ, ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದ್ದು, ಸಂಜೆ 4ಕ್ಕೆ ವಿಚಾರಣೆ ನಡೆಯಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಈ ಬಗ್ಗೆ ಹೇಳಿಕೆ ನೀಡಿದ್ದು, ರಾಜ್ಯಪಾಲರು ಆರೆಸ್ಸೆಸ್‌ನ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯಪಾಲರ ಕಚೇರಿಯ ಟ್ವೀಟ್‌ನಲ್ಲಿರುವುದೇನು?

ಗೌರವಾನ್ವಿತ ಸುಪ್ರೀಂ ಕೋರ್ಟ್‌ 2022ರ ಅಕ್ಟೋಬರ್‌ 21ರಂದು ನೀಡಿದ ತೀರ್ಪಿನ ಪ್ರಕಾರ ( Civil Appeal Nos.7634-7635 of 2022(@ SLP(c)Nos.21108-21109 of 2021) ತೆಗೆದುಕೊಳ್ಳುತ್ತಿರುವ ಕ್ರಮ. ಗೌರವಾನ್ವಿತ ರಾಜುಪಾಲ ಆರೀಫ್‌ ಮೊಹಮ್ಮದ್‌ ಖಾನ್‌ ಅವರು ಕೇರಳದ ಒಂಬತ್ತು ವಿವಿಗಳ ವೈಸ್‌ ಚಾನ್ಸಲರ್‌ಗಳಿಗೆ ರಾಜೀನಾಮೆ ನೀಡಲು ಸೂಚಿಸಿದ್ದಾರೆ ಎಂದು ಕೇರಳ ರಾಜ್‌ಭವನದ ಪಿಆರ್‌ಒ ಟ್ವೀಟ್‌ ಹೇಳಿದೆ.

ಯಾವುದು ಆ ಒಂಬತ್ತು ವಿವಿಗಳು

1. ಕೇರಳ ವಿವಿ

2. ಮಹಾತ್ಮ ಗಾಂಧಿ ಯೂನಿವರ್ಸಿಟಿ

3. ಕೊಚ್ಚಿನ ಯೂನಿವರ್ಸಿಟಿ ಆಫ್‌ ಸೈನ್ಸ್‌ & ಟೆಕ್ನಾಲಜಿ

4. ಕೇರಳ ಯೂನಿವರ್ಸಿಟಿ ಆಫ್‌ ಫಿಶರೀಸ್‌ & ಓಷಿಯನ್‌ ಸ್ಟಡೀಸ್‌

5. ಕಣ್ಣೂರು ವಿವಿ

6. ಅಬ್ದುಲ್ ಕಲಾಂ ತಾಂತ್ರಿಕ ವಿವಿ

7. ಶ್ರೀ ಶಂಕರಾಚಾರ್ಯ ಸಂಸ್ಕೃತ ವಿವಿ

8. ಕಲ್ಲಿಕೋಟೆ ವಿವಿ

9. ತುಂಙತ್‌ ಎಯುತ್ತಚ್ಚನ್‌ ಮಲಯಾಳಂ ವಿವಿ

ಏನಿದು ಕುತೂಹಲಕಾರಿ ಬೆಳವಣಿಗೆ?

ಎಲ್‌ಡಿಎಫ್‌ (ಎಡರಂಗ)ವು ರಾಜ್ಯಪಾಲರ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸುವುದಾಗಿ ಭಾನುವಾರ ಘೋಷಿಸಿದ ಕೆಲವೇ ಗಂಟೆಗಳ ಅವಧಿಯಲ್ಲಿ ರಾಜ್ಯಪಾಲರ ಈ ಆದೇಶ ಜಾರಿಯಾಗಿದೆ. ಈ ಬೆಳವಣಿಗೆ ವಿಚಾರದಲ್ಲಿ ಕಾನೂನು ತಜ್ಞರು ಕೂಡ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿವಿಗಳ ವೈಸ್‌ ಚಾನ್ಸಲರ್‌ಗಳ ಪೈಕಿ ಕೇರಳ ವಿಶ್ವವಿದ್ಯಾಲಯದ V P ಮಹದೇವನ್ ಪಿಳ್ಳೈ ಅವರ ಅವಧಿಯು ಇಂದೇ ಕೊನೆಗೊಳ್ಳುತ್ತಿರುವುದು ವಿಶೇಷ. ರಾಜೀನಾಮೆ ನೀಡದಂತೆ ರಾಜ್ಯ ಸರ್ಕಾರ ವಿಸಿಗಳಿಗೆ ಸೂಚಿಸಿದೆ. ರಾಜಕೀಯವಾಗಿ ಗಮನಸೆಳೆದಿರುವ ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದೆ.

ಯುಜಿಸಿ ನಿಯಮಗಳಿಗೆ ವಿರುದ್ಧವಾಗಿ ರಚಿಸಲಾದ ವಿಸಿ ಸರ್ಚ್‌-ಕಮ್- ಸೆಲೆಕ್ಷನ್‌ ಕಮಿಟಿ ಅಥವಾ ಏಕ-ಹೆಸರಿನ ಫಲಕದ ಆಧಾರದ ಮೇಲೆ ಮಾಡಿದ ನೇಮಕಾತಿ "ಕಾನೂನುಬಾಹಿರ ಮತ್ತು ಅನೂರ್ಜಿತವಾಗಿದೆ" ಎಂದು ತೀರ್ಪಿನಲ್ಲಿ ಕೋರ್ಟ್‌ ಹೇಳಿದೆ. ರಾಜ್ಯಪಾಲ ಆರೀಫ್‌ ಮೊಹಮ್ಮದ್‌ ಖಾನ್‌ ಅವರು ಈ ವಿಚಾರವಾಗಿ ವಿಸಿ ಸರ್ಚ್‌-ಕಮ್- ಸೆಲೆಕ್ಷನ್‌ ಕಮಿಟಿ ವಿರುದ್ಧ ಬಹಿರಂಗ ಟೀಕೆ ಮಾಡಿದ್ದರು.

ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ವಿಸಿ ನೇಮಕವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಶುಕ್ರವಾರದ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯಪಾಲ ಆರೀಫ್‌ ಮೊಹಮ್ಮದ್‌ ಖಾನ್ ಅವರು ಒಂಬತ್ತು ವಿವಿಗಳ ವಿಸಿಗಳಿಗೆ ಪತ್ರ ಬರೆದು ರಾಜೀನಾಮೆ ನೀಡುವಂತೆ ಆದೇಶ ನೀಡಿದ್ದರು.

ಇಂದು ಸಂಜೆ 4ಕ್ಕೆ ವಿಚಾರಣೆ

ರಾಜ್ಯಪಾಲರ ಆದೇಶ ಪ್ರಶ್ನಿಸಿ ಒಂಬತ್ತು ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ 11:30 ರೊಳಗೆ ರಾಜೀನಾಮೆ ನೀಡುವಂತೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಆದೇಶ ಹೊರಡಿಸಿದ್ದರು. ಆದರೆ, ವಿಸಿಗಳು ಯಾರೂ ರಾಜೀನಾಮೆ ನೀಡಿಲ್ಲ. ಸೋಮವಾರ ರಜೆ ಇದ್ದರೂ ಹೈಕೋರ್ಟ್ ಸಂಜೆ 4 ಗಂಟೆಗೆ ವಿಶೇಷ ಕಲಾಪ ನಡೆಸಲಿದೆ. ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ