logo
ಕನ್ನಡ ಸುದ್ದಿ  /  Nation And-world  /  Kerala Politics The Support Of Catholic Christians Can Be A Gamechanger For Bjp In In Kerala

Kerala Politics: ಕೇರಳದಲ್ಲಿ ಬಿಜೆಪಿಯನ್ನು ಬೆಂಬಲಿಸ್ತಾರಾ ಕ್ಯಾಥೋಲಿಕ್‌ ಕ್ರಿಶ್ಚಿಯನ್ನರು?; ಬಿಜೆಪಿ ಕಾರ್ಯತಂತ್ರ ಏನು?

HT Kannada Desk HT Kannada

Mar 21, 2023 12:24 PM IST

ಕೇರಳದ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸುವುದಕ್ಕೆ ಬೇಕಾದ ಕಾರ್ಯತಂತ್ರಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದಕ್ಕೆ ಬಿಜೆಪಿ ಸಜ್ಜಾಗಿದೆ. (ಕಡತ ಚಿತ್ರ)

  • Kerala Politics: ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ವಿ ನಾಯಕತ್ವ ಇದ್ದರೂ, ಅಮಿತ್‌ ಷಾ ಅವರ ಲೆಕ್ಕಾಚಾರ ಇದ್ದರೂ ಕೇರಳದಲ್ಲಿ ನೆಲೆಯೂರಬೇಕು ಎಂಬ ಪಕ್ಷದ ಪ್ರಯತ್ನಕ್ಕೆ ಇದುವರೆಗೆ ಸರಿಯಾದ ಫಲ ಸಿಕ್ಕಿಲ್ಲ. ಆದಾಗ್ಯೂ, ಅದು ಪ್ರಯತ್ನವನ್ನು ಕೈಬಿಟ್ಟಿಲ್ಲ.

ಕೇರಳದ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸುವುದಕ್ಕೆ ಬೇಕಾದ ಕಾರ್ಯತಂತ್ರಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದಕ್ಕೆ ಬಿಜೆಪಿ ಸಜ್ಜಾಗಿದೆ. (ಕಡತ ಚಿತ್ರ)
ಕೇರಳದ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸುವುದಕ್ಕೆ ಬೇಕಾದ ಕಾರ್ಯತಂತ್ರಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದಕ್ಕೆ ಬಿಜೆಪಿ ಸಜ್ಜಾಗಿದೆ. (ಕಡತ ಚಿತ್ರ) (PTI)

ಭಾರತದ ಅತ್ಯಂತ ಯಶಸ್ವಿ ರಾಜಕೀಯ ಪಕ್ಷಗಳಲ್ಲಿ ಒಂದಾದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕೇರಳದಲ್ಲಿ ಬಹಳ ಹಿನ್ನಡೆ ಅನುಭವಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ವಿ ನಾಯಕತ್ವ ಇದ್ದರೂ, ಅಮಿತ್‌ ಷಾ ಅವರ ಲೆಕ್ಕಾಚಾರ ಇದ್ದರೂ ಕೇರಳದಲ್ಲಿ ನೆಲೆಯೂರಬೇಕು ಎಂಬ ಪಕ್ಷದ ಪ್ರಯತ್ನಕ್ಕೆ ಇದುವರೆಗೆ ಸರಿಯಾದ ಫಲ ಸಿಕ್ಕಿಲ್ಲ. ಆದಾಗ್ಯೂ, ಅದು ಪ್ರಯತ್ನವನ್ನು ಕೈಬಿಟ್ಟಿಲ್ಲ.

ಟ್ರೆಂಡಿಂಗ್​ ಸುದ್ದಿ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು, ಮೇ ತಿಂಗಳ ಉತ್ಸವ ವೇಳಾಪಟ್ಟಿ ಪ್ರಕಟಿಸಿದ ಟಿಟಿಡಿ

Gold Rate Today: ಚಿನ್ನಾಭರಣ ಪ್ರಿಯರಿಗೆ ಇಲ್ಲಿದೆ ಗುಡ್‌ನ್ಯೂಸ್‌; 10ಗ್ರಾಂ ಚಿನ್ನಕ್ಕೆ 1000 ರೂ ಇಳಿಕೆ, ಬೆಳ್ಳಿ ದರವೂ ಕುಸಿತ

RED NOTICE: ಇಂಟರ್‌ಪೋಲ್ ರೆಡ್ ನೋಟಿಸ್‌ ಎಂದರೇನು, ಇದನ್ನು ಯಾರು ಯಾವಾಗ ಪ್ರಕಟಿಸುತ್ತಾರೆ, ಇದರ ಮಹತ್ವವೇನು

Gold Rate Today: ಮೇ ತಿಂಗಳ ಮೊದಲ ದಿನ ಸ್ಥಿರವಾದ ಚಿನ್ನ, ಬೆಳ್ಳಿ ದರ; ಕರ್ನಾಟಕದ ಇಂದಿನ ಬೆಲೆ ಗಮನಿಸಿ

ಕೇರಳದ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸುವುದಕ್ಕೆ ಬೇಕಾದ ಕಾರ್ಯತಂತ್ರಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದಕ್ಕೆ ಬಿಜೆಪಿ ಸಜ್ಜಾಗಿದೆ.

ರಾಜ್ಯವು ದೊಡ್ಡ ಹಿನ್ನಡೆಯಾಗಿದೆ. ಪಕ್ಷವು ಸ್ವಲ್ಪ ಸಮಯದವರೆಗೆ ರಾಜ್ಯದ ರಾಜಕೀಯ ಭೂದೃಶ್ಯವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದೆ ಮತ್ತು ಪಿಎಂ ಮೋದಿಯವರ ವರ್ಚಸ್ವಿ ನಾಯಕತ್ವದಿಂದಲೂ ಬಿಜೆಪಿ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುತ್ತಿಲ್ಲ. ಆದರೆ, ಕೇರಳದ ಸೈರೋ-ಮಲಬಾರ್ ಕ್ಯಾಥೋಲಿಕ್ ಚರ್ಚ್‌ನ ಆರ್ಚ್‌ಬಿಷಪ್ ರಬ್ಬರ್ ಕೃಷಿಕರನ್ನು ಬೆಂಬಲಿಸಿದರೆ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಸವಾಲೆಸೆದಿದ್ದಾರೆ. ಇದು ರಾಜಕೀಯವಾಗಿ ಸಂಚಲನ ಮೂಡಿಸಿದೆ.

ಕ್ಯಾಥೋಲಿಕ್ ಕ್ರೈಸ್ತರು ಕೇರಳದ ರಾಜಕೀಯ ಕ್ಷೇತ್ರದಲ್ಲಿ ಪ್ರಬಲ ಶಕ್ತಿಯಾಗಿದ್ದಾರೆ ಮತ್ತು ರಾಜ್ಯದ 14 ಜಿಲ್ಲೆಗಳ ಪೈಕಿ 9 ಜಿಲ್ಲೆಗಳಲ್ಲಿ ಗಣನೀಯ ಅಸ್ತಿತ್ವವನ್ನು ಹೊಂದಿದ್ದಾರೆ. 37 ಲಕ್ಷಕ್ಕೂ ಹೆಚ್ಚು ಕ್ಯಾಥೋಲಿಕ್ ಮತದಾರರನ್ನು ಹೊಂದಿರುವ ಸಮುದಾಯವು ತಿರುವನಂತಪುರದಲ್ಲಿ ಯಾರು ಅಧಿಕಾರದಲ್ಲಿ ಕುಳಿತುಕೊಳ್ಳಬೇಕು ಎಂಬುದನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಕೇರಳದ ಕ್ರಿಶ್ಚಿಯನ್ನರೊಂದಿಗಿನ ಸಂವಾದ, ಸಂಪರ್ಕವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಬಲಗೊಳಿಸುತ್ತ ಸಾಗಿದೆ. ಈ ವಿಚಾರದಲ್ಲಿ ಆರ್‌ಎಸ್‌ಎಸ್‌ ಜಿಲ್ಲಾ ಮಟ್ಟದ ಕಾರ್ಯವಿಧಾನಗಳನ್ನು ಕೂಡ ಅನುಸರಿಸಿದೆ. ಸಂರಕ್ಷಿತ ಅರಣ್ಯ ಪ್ರದೇಶದ ಒಂದು ಕಿ.ಮೀ. ಬಫರ್ ವಲಯದ ಸುತ್ತಲಿನ ಮಾನವ ಚಟುವಟಿಕೆಗಳನ್ನು ಪರಿಶೀಲಿಸಲು ಉಪಗ್ರಹ ಸಮೀಕ್ಷೆಯನ್ನು ನಡೆಸುವ ನಿರ್ಧಾರ ತೆಗೆದುಕೊಂಡ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ವಿರುದ್ಧ ಕ್ರಿಶ್ಚಿಯನ್ನರ ಇತ್ತೀಚಿನ ಆಕ್ರೋಶದ ಪ್ರಯೋಜನವನ್ನು ಪಡೆದುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ.

ಕೇರಳದ ಕೋಟೆ ಪ್ರವೇಶಿಸುವುದು ಬಿಜೆಪಿಗೆ ಸಾಧ್ಯವಾಗಿಲ್ಲ

ಭಾರತೀಯ ಜನತಾ ಪಾರ್ಟಿ (ಬಿಜೆಪಿ) 2014 ರಿಂದೀಚೆಗೆ ರಾಷ್ಟ್ರ ರಾಜಕಾರಣದಲ್ಲಿ ಅಭೂತಪೂರ್ವ ಯಶಸ್ಸನ್ನು ಕಾಣುತ್ತ ಬಂದಿದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಮತ್ತು ಬಿಜೆಪಿ ಮೈತ್ರಿಯ ಆಡಳಿತ ಇದೆ. ಒಂದು ಕಾಲದಲ್ಲಿ ದಕ್ಷಿಣ ಭಾರತ, ಉತ್ತರ ಭಾರತಗಳಲ್ಲಿ ಕಾರ್ಯಕರ್ತರೇ ಇಲ್ಲದೆ ಒದ್ದಾಡುತ್ತಿದ್ದ ಕಾಲಘಟ್ಟ ಇತ್ತು. ಆ ಸನ್ನಿವೇಶದಿಂದ ಈಗ ಪಕ್ಷ ಬೆಳೆದ ಎತ್ತರ ಗಮನಿಸಿದರೆ, ಈಶಾನ್ಯ ರಾಜ್ಯಗಳಲ್ಲೂ ಸಾಧಿಸಿದ ಸಾಧನೆ ಅಗಾಧ.

ಆದರೆ, ಕೇರಳದಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲುವುದಕ್ಕೂ ಬಿಜೆಪಿಗೆ ಸಾಧ್ಯವಾಗಿಲ್ಲ. ಕಳೆದ ಎರಡು ಲೋಕಸಭೆ ಚುನಾವಣೆಗಳನ್ನು ಗಮನಿಸಿದರೆ ಬಿಜೆಪಿ ಸಾಧನೆ ಶೂನ್ಯ. ಯುಪಿಎ ಇಲ್ಲಿ ಸಂಪೂರ್ಣ ಬಿಗಿ ಹಿಡಿತ ಹೊಂದಿದೆ. ಸ್ಥಾನ ಮತ್ತು ಮತಗಳಿಕೆ ವಿಚಾರದಲ್ಲಿ ಇದು ಯುಪಿಎಯ ಭದ್ರಕೋಟೆ.

ಹಿಂದಿನ ಅಂದರೆ 2016ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಸ್ಥಾನದಲ್ಲಿ ಗೆಲುವು ಸಿಕ್ಕಿತ್ತು. ಆದರೆ, 2021ರ ಚುನಾವಣೆಯಲ್ಲಿ ಅದನ್ನೂ ಕಳೆದುಕೊಂಡಿತು. ಸದ್ಯ ಕೇರಳದ 140 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಗೆ ಧ್ವನಿಯೇ ಇಲ್ಲ.

ರಾಜಕೀಯ ಪರಿಣತರ ಲೆಕ್ಕಾಚಾರ ಪ್ರಕಾರ ಈ ಸೋಲು ಮತ್ತು ಹಿನ್ನಡೆಗೆ ಇರುವ ಕಾರಣ ಬಹಳ ಸರಳ ಎಂಬುದನ್ನು ಎತ್ತಿತೋರಿಸಿದ್ದಾರೆ. ಕೇರಳದ ಭೌಗೋಳಿಕ ವ್ಯವಸ್ಥೆಯಲ್ಲಿ ಜನಸಂಖ್ಯೆ ಗಮನಿಸಿ ನೋಡಿ. ಅಲ್ಲಿ ಕ್ರಿಶ್ಚಿಯನ್ಸ್‌ ಮತ್ತು ಮುಸ್ಲಿಮರದ್ದೇ ಪಾರಮ್ಯ. ಬಿಜೆಪಿಯನ್ನು ಬೆಂಬಲಿಸುವವರ ಸಂಖ್ಯೆ ಬಹಳ ಕಡಿಮೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳು, ಕೆಲಸ ಕಾರ್ಯಗಳಿವೆಯಾದರೂ, ಬಿಜೆಪಿಗೆ ರಾಜಕೀಯವಾಗಿ ಗೆಲುವು ತಂದುಕೊಡುವಷ್ಟರ ಮಟ್ಟಿಗೆ ಪ್ರಭಾವಿಯಾಗಿಲ್ಲ. ಬಿಜೆಪಿ ಕೂಡ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರನ್ನು ಒಲಿಸುವ ಕಡೆಗೆ ಹೊಸ ಕಾರ್ಯತಂತ್ರಗಳನ್ನು ರೂಪಿಸಬೇಕಾದ ಅವಶ್ಯಕತೆ ಇದೆ.

    ಹಂಚಿಕೊಳ್ಳಲು ಲೇಖನಗಳು