logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kite String Deaths: ಜೀವಕ್ಕೆ ಕುತ್ತು ತಂದ ಸಂಕ್ರಾಂತಿ ಸಂಭ್ರಮ.. ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ ಮೂವರು ಮಕ್ಕಳು ಸೇರಿ ನಾಲ್ವರು ಸಾವು

Kite string deaths: ಜೀವಕ್ಕೆ ಕುತ್ತು ತಂದ ಸಂಕ್ರಾಂತಿ ಸಂಭ್ರಮ.. ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ ಮೂವರು ಮಕ್ಕಳು ಸೇರಿ ನಾಲ್ವರು ಸಾವು

HT Kannada Desk HT Kannada

Jan 16, 2023 05:54 PM IST

ಸಾಂದರ್ಭಿಕ ಚಿತ್ರ (pixabay)

    • ನೇಕ ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬದಂದು ಗಾಳಿಪಟ ಹಾರಿಸುವ ಸಂಪ್ರದಾಯವಿದೆ. ಆದರೆ ಗಾಳಿಪಟ ಹಾರಿಸುವ ನಿಮ್ಮ ಸಂಭ್ರಮ ಎಷ್ಟೋ ಬಾರಿ ಇತರರ ಜೀವಗಳನ್ನು ಬಲಿ ಪಡೆಯುತ್ತದೆ ಎಂದರೆ ನೀವು ನಂಬಲೇ ಬೇಕು. ನಿಷೇಧಿತ ಪ್ಲಾಸ್ಟಿಕ್ ದಾರದ ಗಾಳಿಪಟ (ಚೀನೀ ಮಾಂಜಾ)ವನ್ನು ಹಾರಿಸುತ್ತಿದ್ದರೆ ಒಮ್ಮೆ ಈ ಸುದ್ದಿ ಓದಿ.
ಸಾಂದರ್ಭಿಕ ಚಿತ್ರ (pixabay)
ಸಾಂದರ್ಭಿಕ ಚಿತ್ರ (pixabay)

ಗುಜರಾತ್: ಅನೇಕ ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬದಂದು ಗಾಳಿಪಟ ಹಾರಿಸುವ ಸಂಪ್ರದಾಯವಿದೆ. ಆದರೆ ಗಾಳಿಪಟ ಹಾರಿಸುವ ನಿಮ್ಮ ಸಂಭ್ರಮ ಎಷ್ಟೋ ಬಾರಿ ಇತರರ ಜೀವಗಳನ್ನು ಬಲಿ ಪಡೆಯುತ್ತದೆ ಎಂದರೆ ನೀವು ನಂಬಲೇ ಬೇಕು. ನಿಷೇಧಿತ ಪ್ಲಾಸ್ಟಿಕ್ ದಾರದ ಗಾಳಿಪಟ (ಚೀನೀ ಮಾಂಜಾ)ವನ್ನು ಹಾರಿಸುತ್ತಿದ್ದರೆ ಒಮ್ಮೆ ಈ ಸುದ್ದಿ ಓದಿ.

ಟ್ರೆಂಡಿಂಗ್​ ಸುದ್ದಿ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

ಹೌದು,, ನಿಷೇಧಿತ ಪ್ಲಾಸ್ಟಿಕ್ ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ ಜನರು ಮೃತಪಟ್ಟಿರುವ ಅನೇಕ ಘಟನೆಗಳು ಈ ಹಿಂದೆ ನಮ್ಮ ದೇಶದಲ್ಲಿ ನಡೆದಿವೆ. ಈ ಬಾರಿಯ ಸಂಕ್ರಾಂತಿಯಲ್ಲಿ ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಗುಜರಾತ್​ನಲ್ಲಿ ಹಾಗೂ ಒಬ್ಬರು ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಗುಜರಾತ್​​ನ ಭಾವನಗರದಲ್ಲಿ ಎರಡೂವರೆ ವರ್ಷದ ಕಂದಮ್ಮ ತಮ್ಮ ಪೋಷಕರ ಜೊತೆ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಗಾಳಿಪಟದ ದಾರ ಆಕೆಯ ಕುತ್ತಿಗೆಗೆ ಸಿಕ್ಕಿಕೊಂಡು ಮೃತಪಟ್ಟಿದ್ದಾಳೆ. ಮತ ಬಾಲಕಿಯನ್ನು ಭಾವನಗರದ ಲಾಲ್ ಟಕಿ ಪ್ರದೇಶದಲ್ಲಿ ವಾಸವಾಗಿದ್ದ ಉತ್ತರ ಪ್ರದೇಶದ ವಲಸೆ ಕಾರ್ಮಿಕನ ಮಗಳು ಕೀರ್ತಿ ಎಂದು ಗುರುತಿಸಲಾಗಿದೆ.

ಮೆಹ್ಸಾನಾ ಜಿಲ್ಲೆಯ ವಿಸ್‌ನಗರ ಪಟ್ಟಣದಲ್ಲಿ ಮೂರು ವರ್ಷದ ಬಾಲಕಿ ಮಧ್ಯಾಹ್ನ ತನ್ನ ತಾಯಿಯೊಂದಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ ಆಕೆ ಸಾವನ್ನಪ್ಪಿದ್ದಾಳೆ. ಮೃತ ಕಂದಮ್ಮನನ್ನು ಕೃಷ್ಣ ಠಾಕೋರ್ ಎಂದು ಗುರುತಿಸಲಾಗಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದಳು.

ವಡೋದರಾ ನಗರದ ಛಾನಿ ಪ್ರದೇಶದಲ್ಲಿ ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ ಸ್ವಾಮೀಜಿ ಯಾದವ್ (35) ಎಂಬವರು ಮೃತಪಟ್ಟಿದ್ದಾರೆ ಎಂದು ಚಾನಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ರಾಜ್ಯದಲ್ಲಿ ಸಂಕ್ರಾಂತಿ ಸಂಭ್ರಮದ ವೇಳೆ ಗಾಳಿಪಟ ದಾರದಿಂದ 92 ಜನರು ಗಾಯಗೊಂಡಿದ್ದಾರೆ. ಗಾಳಿಪಟ ಹಾರಿಸುವ ವೇಳೆ ಎತ್ತರದ ಸ್ಥಳದಿಂದ ಕೆಳಗೆ ಬಿದ್ದು 164 ಜನರು ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, 336 ಪಕ್ಷಿಗಳು ಮತ್ತು 723 ಪ್ರಾಣಿಗಳು ಗಾಳಿಪಟದ ದಾರ ಸಿಲುಕಿ ಗಾಯಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದ ಘಟನೆಯಲ್ಲಿ ಅಪ್ಪನ ಜೊತೆ ಬೈಕ್​ನಲ್ಲಿ ತೆರಳುತ್ತಿದ್ದ ನಾಲ್ಕು ವರ್ಷದ ಬಾಲಕಿಯ ಕತ್ತನ್ನು ಗಾಳಿಪಟ ದಾರ ಸೀಳಿ ಆಕೆ ಮೃತಪಟ್ಟಿದ್ದಾಳೆ.

ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಅಪಾಯಕಾರಿಯಾದ ಪ್ಲಾಸ್ಟಿಕ್ ಹಾಗೂ ಗಾಜಿನ ಪುಡಿ ಲೇಪಿತವಾದ ಚೀನಾ ಗಾಳಿಪಟದ ದಾರಗಳನ್ನು (ಮಾಂಜಾ) ಭಾರತದಲ್ಲಿ ನಿಷೇಧಿಸಲಾಗಿದ್ದು, ಇದರ ಮಾರಾಟ ಕಾನೂನುಬಾಹಿರವಾಗಿದೆ. ಆದರೂ ಅಕ್ರಮವಾಗಿ ಇದನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ಆನ್​​ಲೈನ್​​ಗಳಲ್ಲಿಯೂ ಇದನ್ನು ಮಾರಾಟ ಮಾಡಲಾಗುತ್ತಿದೆ. ಈ ದಾರಗಳು ಕುತ್ತಿಗೆಗೆ ಸಿಲುಕಿದರೆ ಕತ್ತು ಸೀಳಿ ಬಿಡುತ್ತವೆ.

2016 ರಲ್ಲಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) 'ಚೀನೀ ಮಾಂಜಾ'ವನ್ನು ನಿಷೇಧಿಸಿತ್ತು. ಈ ಉತ್ಪನ್ನವನ್ನು ಮಾರಾಟ ಮಾಡುವವರಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷದವರೆಗೆ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು ಎಂದು ತೀರ್ಪು ಹೇಳಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ