logo
ಕನ್ನಡ ಸುದ್ದಿ  /  Nation And-world  /  Lucile Randon: Worlds Oldest Person, French Nun Sister Andre, Dies Aged 118

Sister Andre: ಜಗತ್ತಿನ ಹಿರಿಯಜ್ಜಿ ಖ್ಯಾತಿಯ ಸಿಸ್ಟರ್‌ ಆ್ಯಂಡ್ರೆ ನಿಧನ, ಸಮಾಜಕ್ಕಾಗಿ ಮಿಡಿದ 118 ವರ್ಷದ ಅಜ್ಜಿಗೆ ನಮನ

Praveen Chandra B HT Kannada

Jan 18, 2023 01:05 PM IST

Sister Andre: ಜಗತ್ತಿನ ಹಿರಿಯಜ್ಜಿ ಖ್ಯಾತಿಯ ಸಿಸ್ಟರ್‌ ಆ್ಯಂಡ್ರೆ ನಿಧನ

    • ಜಗತ್ತಿನ ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದ ಫ್ರಾನ್ಸ್‌ನ ಲ್ಯೂಸೈಲ್​ ರ್ಯಾಂಡನ್​ ನಿಧನರಾಗಿದ್ದಾರೆ. ಅವರಿಗೆ 118 ವರ್ಷ ವಯಸ್ಸಾಗಿತ್ತು. ಇವರು Sister Andre ಎಂದೇ ಜನಪ್ರಿಯರಾಗಿದ್ದರು.
Sister Andre: ಜಗತ್ತಿನ ಹಿರಿಯಜ್ಜಿ ಖ್ಯಾತಿಯ ಸಿಸ್ಟರ್‌ ಆ್ಯಂಡ್ರೆ ನಿಧನ
Sister Andre: ಜಗತ್ತಿನ ಹಿರಿಯಜ್ಜಿ ಖ್ಯಾತಿಯ ಸಿಸ್ಟರ್‌ ಆ್ಯಂಡ್ರೆ ನಿಧನ (AFP)

ಜಗತ್ತಿನ ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದ ಫ್ರಾನ್ಸ್‌ನ ಲ್ಯೂಸೈಲ್​ ರ್ಯಾಂಡನ್​ ನಿಧನರಾಗಿದ್ದಾರೆ. ಅವರಿಗೆ 118 ವರ್ಷ ವಯಸ್ಸಾಗಿತ್ತು. ಇವರು Sister Andre ಎಂದೇ ಜನಪ್ರಿಯರಾಗಿದ್ದರು. ಕಳೆದ ವರ್ಷ ನಿಧನರಾದ ಜಪಾನ್‌ನ 119 ವರ್ಷದ ಕೇನ್ ತನಕಾ ಜಗತ್ತಿನ ಹಿರಿಯ ವಯಸ್ಸಾಗಿದ್ದರು. ಅವರ ನಿಧನದ ಬಳಿಕ ಸಿಸ್ಟರ್‌ ಆ್ಯಂಡ್ರೆ ಅವರು ಜಗತ್ತಿನ ಹಿರಿಯ ಮಹಿಳೆಯೆಂಬ ಖ್ಯಾತಿಗೆ ಪಾತ್ರರಾಗಿದ್ದರು.

ಟ್ರೆಂಡಿಂಗ್​ ಸುದ್ದಿ

Gold Rate Today: ಸೋಮವಾರ ತಟಸ್ಥವಾಗುವ ಮೂಲಕ ಕೊಂಚ ನೆಮ್ಮದಿ ಮೂಡಿಸಿದ ಹಳದಿ ಲೋಹ, ಇಂದು ಬೆಳ್ಳಿ ದರವೂ ಇಳಿಕೆ

Tik Tok Star Murder: ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಭೀಕರ ಹತ್ಯೆ, ಕಾರಣವೇನು

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಇವಿಎಂ ವಿವಿಪ್ಯಾಟ್ ಪ್ರಕರಣ; ಅಡ್ಡ ಪರಿಶೀಲನೆ ಮಾಡಿ ಎಂದವರ ವಿರುದ್ಧ ಸುಪ್ರೀಂ ಕೋರ್ಟ್ ಗರಂ, ಎಲ್ಲಾ ಅರ್ಜಿಗಳು ವಜಾ

ಸಿಸ್ಟರ್​ ಆ್ಯಂಡ್ರೆ ಅವರು ದಕ್ಷಿಣ ಆಫ್ರಿಕಾದಲ್ಲಿ 1904ರ ಫೆ. 11ರಂದು ಜನಿಸಿದ್ದು, ಜಗತ್ತಿನ ಎರಡು ವಿಶ್ವ ಯುದ್ಧಗಳಿಗೆ ಸಾಕ್ಷಿಯಾಗಿದ್ದಾರೆ. ಎರಡನೇ ವಿಶ್ವಯುದ್ಧದ ಕಾಲದಲ್ಲಿ ಇವರು ಶಿಕ್ಷಕಿಯಾಗಿ ಮಕ್ಕಳಿಗಾಗಿ ಪಾಢ ಮಾಡುತ್ತಿದ್ದರು.

ಎಷ್ಟು ವರ್ಷ ಬದುಕಿದ್ದಿ ಅನ್ನುವುದಕ್ಕಿಂತ ಎಷ್ಟು ವರ್ಷ ಹೇಗೆ ಬದುಕಿದ್ದಿ ಎನ್ನುವುದು ಮುಖ್ಯ. ಇದಕ್ಕೆ ತಕ್ಕಂತೆ ಸಿಸ್ಟರ್​ ಆ್ಯಂಡ್ರೆ ಸಮಾಜ ಸೇವೆಯ ಮೂಲಕ ತನ್ನ ಬದುಕಿಗೆ ಅರ್ಥ ಕಂಡುಕೊಂಡರು. ಕ್ಯಾಥೊಲಿಕ್​ ಸನ್ಯಾಸಿನಿಯಾಗುವ ಮೊದಲು ಮೂವತ್ತು ವರ್ಷಗಳ ಕಾಲ ಫ್ರಾನ್ಸ್​ನ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಕ್ಯಾಥೊಲಿಕ್​ ಸನ್ಯಾಸಿನಿಯಾಗಿ ಸಮಾಜ ಸೇವೆ ಮುಂದುವರೆಸಿದರು.

"ಸಿಸ್ಟರ್​ ಆ್ಯಂಡ್ರೆ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿ ತನ್ನ ಪ್ರೀತಿಯ ಸಹೋದರನೆಡೆಗೆ ಪ್ರಯಾಣ ಬೆಳೆಸಿದರು. ಅವರಿಗೆ ತನ್ನ ಸಹೋದರನೆಡೆಗೆ ಹೋಗುವ ಬಯಕೆ ಇತ್ತು. ಅದು ಈಡೇರಿತುʼʼ ಎಂದು ಸೇಂಟ್​ ಕ್ಯಾಥರೀನ್​ ಲೇಬರ್ ನರ್ಸಿಂಗ್​ ಹೋಂನ ಡೇವಿಡ್​ ತವೆಲ್ಲಾ ಅವರು ಸಿಸ್ಟರ್​ ಆ್ಯಂಡ್ರೆ ಅವರ ಸಾವಿನ ಸುದ್ದಿ ಪ್ರಕಟಿಸಿದ್ದಾರೆ.

ಸಿಸ್ಟರ್​ ಆ್ಯಂಡ್ರೆ ಅವರ ಹೆಸರು ಗಿನ್ನೀಸ್​ ವಿಶ್ವದಾಖಲೆ ಪಟ್ಟಿಯಲ್ಲಿ 2022ರ ಏಪ್ರಿಲ್​ನಲ್ಲಿ ಸೇರಿತ್ತು.

1918ರಲ್ಲಿ ಸ್ಪ್ಯಾನಿಷ್​ ಫ್ಲ್ಯೂ ಎಂಬ ಸಾಂಕ್ರಾಮಿಕ ಇವರಿಗೆ ಬಾಧಿಸಿತ್ತು. ಆದರೆ, ಅದರಿಂದ ಚೇತರಿಸಿಕೊಂಡರು. 2021ರ ಜನವರಿ 16ರಂದು ಕೊರೊನಾ ಪಾಸಿಟೀವ್‌ ಆಗಿದ್ದರೂ ಚೇತರಿಸಿಕೊಂಡರು. ಕೊರೊನಾ ಸಮಯದಲ್ಲಿ ಇವರ ಆರೋಗ್ಯದ ಕುರಿತು ಆತಂಕ ಇತ್ತು. ಆದರೆ, ಕೊರೊನಾಕ್ಕೆ ಬೆದರದ ಇವರು ನಿನ್ನೆ ರಾತ್ರಿ ಸಹಜ ಮರಣ ಹೊಂದಿದರು.

ಇವರ ನಿಧನಕ್ಕೆ ಜಗತ್ತಿನ ವಿವಿಧ ಪ್ರಮುಖರು ಕಂಬನಿ ಮಿಡಿದಿದ್ದಾರೆ.

ಕಳೆದ ವರ್ಷ ಹಿರಿಯಜ್ಜ ನಿಧನ

ಜಗತ್ತಿನ ಅತಿ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದ ಪಶ್ಚಿಮ ಜಪಾನ್‌ನ ಜಿರೊಮನ್ ಕಿಮುರ ಅವರು ವಯೋ ಸಹಜ ಕಾರಣಗಳಿಂದ ಕಳೆದ ವರ್ಷ ನಿಧನರಾಗಿದ್ದರು. 1987ರ ಏಪ್ರಿಲ್ 19ರಂದು ಕಿಮುರ ಕ್ಯೂಟೊದಲ್ಲಿ ಜನಿಸಿದ್ದರು. ಜಪಾನ್ ಅಂಚೆ ಕಚೇರಿಯಲ್ಲಿ 45 ವರ್ಷ ಸೇವೆ ಸಲ್ಲಿಸಿ 65ನೇ ವರ್ಷದಲ್ಲಿ ನಿವೃತ್ತರಾಗಿದ್ದರು. 2011ರಲ್ಲಿ ವಿಶ್ವದ ಹಿರಿಯ ವ್ಯಕ್ತಿ ಎಂದು ಗಿನ್ನಿಸ್ ದಾಖಲೆಯಲ್ಲಿ ಹೆಸರು ಸೇರ್ಪಡೆಗೊಂಡಿತ್ತು. ಅವರ ನಿಧನದ ಬಳಿಕ ಸಿಸ್ಟರ್‌ ಆ್ಯಂಡ್ರೆ ಜಗತ್ತಿನ ಹಿರಿಯ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು.

    ಹಂಚಿಕೊಳ್ಳಲು ಲೇಖನಗಳು