logo
ಕನ್ನಡ ಸುದ್ದಿ  /  Nation And-world  /  Meerut As Nathuram Godse Nagar: Will Rename Meerut As Nathuram Godse Nagar If Elected Says Hindu Mahasabha

Meerut as Nathuram Godse Nagar: ಚುನಾವಣೇಲಿ ಗೆದ್ದರೆ ಮೇರಠ್‌ಗೆ ನಾಥುರಾಮ್‌ ಗೋಡ್ಸೆ ನಗರ ಎಂದು ಮರುನಾಮಕರಣ; ಹಿಂದು ಮಹಾಸಭಾ ಭರವಸೆ!

HT Kannada Desk HT Kannada

Nov 23, 2022 11:52 AM IST

ಮೇರಠ್‌ ಜಿಲ್ಲೆಯ ಹಿಂದೂ ಮಹಾಸಭಾದ ನೂತನ ಮುಖ್ಯಸ್ಥ ಅಭಿಷೇಕ್ ಅಗರ್ವಾಲ್, ಸಂಘಟನೆಯು ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ಎಲ್ಲ ವಾರ್ಡ್‌ಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದರು.

  • Meerut as Nathuram Godse Nagar: ಉತ್ತರ ಪ್ರದೇಶದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಡಿಸೆಂಬರ್‌ನಲ್ಲಿ ನಡೆಯಲಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಿಂದು ಮಹಾಸಭಾ ಕೂಡ ಚುನಾವಣೆಗೆ ಸಜ್ಜಾಗಿದ್ದು, ಗೆದ್ದರೆ ಮೇರಠ್‌ ನಗರದ ಹೆಸರನ್ನು ನಾಥುರಾಮ್‌ ಗೋಡ್ಸೆ ನಗರ ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿ ಗಮನಸೆಳೆದಿದೆ. 

ಮೇರಠ್‌ ಜಿಲ್ಲೆಯ ಹಿಂದೂ ಮಹಾಸಭಾದ ನೂತನ ಮುಖ್ಯಸ್ಥ ಅಭಿಷೇಕ್ ಅಗರ್ವಾಲ್, ಸಂಘಟನೆಯು ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ಎಲ್ಲ ವಾರ್ಡ್‌ಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದರು.
ಮೇರಠ್‌ ಜಿಲ್ಲೆಯ ಹಿಂದೂ ಮಹಾಸಭಾದ ನೂತನ ಮುಖ್ಯಸ್ಥ ಅಭಿಷೇಕ್ ಅಗರ್ವಾಲ್, ಸಂಘಟನೆಯು ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ಎಲ್ಲ ವಾರ್ಡ್‌ಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದರು. (Dheeraj Dhawan/ HT)

ಮೇರಠ್‌: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಅಧಿಕಾರ ಚುಕ್ಕಾಣಿ ಹಿಡಿದರೆ ಖಚಿತವಾಗಿ ಮೇರಠ್‌ ನಗರದ ಹೆಸರನ್ನು ನಾಥುರಾಮ್‌ ಗೋಡ್ಸೆ ನಗರ ಎಂದು ಮರುನಾಮಕರಣ ಮಾಡುತ್ತೇವೆ ಎಂದು ಹಿಂದು ಮಹಾಸಭಾ ಘೋಷಿಸಿದೆ.

ಟ್ರೆಂಡಿಂಗ್​ ಸುದ್ದಿ

Closing Bell: ಮುಂಬೈ ಷೇರುಪೇಟೆಯ ವಾರಾಂತ್ಯದಲ್ಲಿ ಸೆನ್ಸೆಕ್ಸ್ 732 ಅಂಕಗಳ ಕುಸಿತ; ಈ ಪರಿ ಮಾರುಕಟ್ಟೆ ತಲ್ಲಣಕ್ಕೆ ಕಾರಣವೇನು

ತಿರುಮಲ ತಿರುಪತಿ ಜುಲೈ ತಿಂಗಳ ವಿಶೇಷ ಪ್ರವೇಶ ಟಿಕೆಟ್, ಟಿಟಿಡಿ ವೆಬ್‌ಸೈಟ್ ಮೂಲಕ 300 ರೂಪಾಯಿ ಟಿಕೆಟ್‌

ಚೆನ್ನೈನಲ್ಲಿ ವಂದೇ ಮೆಟ್ರೋ ರೈಲು ಅನಾವರಣ; ಭಾರತೀಯ ರೈಲ್ವೆ ಮಹತ್ವದ ಮೈಲಿಗಲ್ಲು, ಜುಲೈನಲ್ಲಿ ಮೊದಲ ಪ್ರಾಯೋಗಿಕ ಸಂಚಾರ

ರಣಬಿಸಿಲಿನಿಂದ ರಕ್ಷಣೆಗೆ ಟ್ರಾಫಿಕ್‌ ಸಿಗ್ನಲ್ ಸಮೀಪ ಹಸಿರು ನೆರಳು ಬಲೆ; ಪುದುಚೇರಿ ಪಿಡಬ್ಲ್ಯುಡಿ ಇಲಾಖೆ ಉಪಕ್ರಮಕ್ಕೆ ವ್ಯಾಪಕ ಮೆಚ್ಚುಗೆ

ಮುಂಬರುವ ಮುನ್ಸಿಪಲ್‌ ಚುನಾವಣೆಯಲ್ಲಿ ಹಿಂದು ಮಹಾಸಭಾದ ಅಭ್ಯರ್ಥಿ ಮೇಯರ್‌ ಆಗಿ ಆಯ್ಕೆ ಆದರೆ ಈ ಕೆಲಸ ನಡೆಯಲಿದೆ ಎಂದು ಮಹಾಸಭಾ ಮಂಗಳವಾರ ಹೇಳಿದೆ.

ಇದಲ್ಲದೆ, ಮೇರಠ್‌ನ ಹಲವೆಡೆ ಇಸ್ಲಾಮಿಕ್‌ ಹೆಸರುಗಳಿವೆ. ಹಿಂದು ಬಾಹುಳ್ಯದ ಪ್ರದೇಶಗಳಲ್ಲೂ ಇಸ್ಲಾಮಿಕ್‌ ಹೆಸರುಗಳಿವೆ. ಅವೆಲ್ಲವನ್ನೂ ಬದಲಾಯಿಸಲಾಗುವುದು. ಮುನ್ಸಿಪಲ್‌ ಚುನಾವಣೆಗೆ ಸಂಬಂಧಿಸಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಇದೆಲ್ಲವನ್ನೂ ಉಲ್ಲೇಖಿಸಲಾಗಿದೆ ಎಂದು ಮಹಾಸಭಾ ಹೇಳಿದೆ.

ಭಾರತವನ್ನು “ಹಿಂದು ರಾಷ್ಟ್ರ”ವನ್ನಾಗಿ ಮಾಡುವುದು ಮಹಾಸಭಾದ ಮೊದಲ ಆದ್ಯತೆ. ಇದಾಗಿ ಗೋಮಾತೆಯ ರಕ್ಷಣೆ ಎರಡನೇ ಕಾರ್ಯಸೂಚಿ ಎಂದು ಮಹಾಸಭಾ ಸ್ಪಷ್ಟಪಡಿಸಿದೆ.

ಬಿಜೆಪಿ ಮತ್ತು ಶಿವಸೇನೆಗಳನ್ನು ಟೀಕಿಸಿದ ಮಹಾಸಭಾ, ಈ ಎರಡೂ ಪಕ್ಷಗಳು ತಮ್ಮ ಮೂಲ ಸಿದ್ಧಾಂತ ಮರೆತು ಮುಂದುವರಿಯುತ್ತಿವೆ. ಎರಡೂ ಪಕ್ಷಗಳಲ್ಲಿ ಇತರೆ ಸಮುದಾಯವರ ಸಂಖ್ಯೆ ಹೆಚ್ಚಾಗಿದೆ. ಅದು ಅವುಗಳ ಸಿದ್ಧಾಂತ ದುರ್ಬಲವಾಗಲು ಕಾರಣ ಎಂದು ಹೇಳಿದೆ.

'ಹಿಂದೂ ಮಹಾಸಭಾ ಸಾಕಷ್ಟು ಕೌನ್ಸಿಲರ್‌ಗಳನ್ನು ಪಡೆದು ಮೇಯರ್ ಸ್ಥಾನವನ್ನು ಗೆದ್ದರೆ, ಮೇರಠ್‌ನ ಹೆಸರನ್ನು ನಾಥುರಾಮ್ ಗೋಡ್ಸೆ ನಗರ ಎಂದು ಬದಲಾಯಿಸಲಾಗುವುದು ಮತ್ತು ನಗರದ ವಿವಿಧ ಸ್ಥಳಗಳ ಇಸ್ಲಾಮಿಕ್ ಹೆಸರುಗಳು ಮತ್ತು ಜಿಲ್ಲೆಗೆ ಹಿಂದೂ ಮಹಾನ್ ಪುರುಷರ ಹೆಸರನ್ನು ಇಡಲಾಗುವುದು,' ಎಂದು ಹಿಂದು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಪಂಡಿತ್ ಅಶೋಕ್ ಶರ್ಮಾ ಹೇಳಿದರು.

ಮೇರಠ್‌ ಜಿಲ್ಲೆಯ ಹಿಂದೂ ಮಹಾಸಭಾದ ನೂತನ ಮುಖ್ಯಸ್ಥ ಅಭಿಷೇಕ್ ಅಗರ್ವಾಲ್, ಸಂಘಟನೆಯು ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ಎಲ್ಲ ವಾರ್ಡ್‌ಗಳಲ್ಲಿ ಸ್ಪರ್ಧಿಸಲಿದೆ. "ದೇಶಭಕ್ತ" ಅಭ್ಯರ್ಥಿಗಳನ್ನು ಗುರುತಿಸಲಾಗುವುದು ಮತ್ತು ಅವರು ಸಂಘಟನೆಯ ಮಹತ್ವಾಕಾಂಕ್ಷೆಗಳನ್ನು ಮುಂದುವರಿಸಲು ಬದ್ಧರಾಗಿರುತ್ತಾರೆ ಎಂದು ಅವರು ಪ್ರತಿಜ್ಞೆ ನೀಡಬೇಕು ಎಂದು ಹೇಳಿದರು.

ಮಹಾಸಭಾದ ಪ್ರಣಾಳಿಕೆಯನ್ನು ಪ್ರಕಟಿಸಿದ ಅಗರ್ವಾಲ್, "ಭಾರತವನ್ನು 'ಹಿಂದೂ ರಾಷ್ಟ್ರ'ವನ್ನಾಗಿ ಮಾಡುವುದು ಮೊದಲ ಭರವಸೆಯಾಗಿದೆ ಮತ್ತು ಎರಡನೇ ಕಾರ್ಯವು ಪ್ರತಿಯೊಬ್ಬ ಹಿಂದೂ ಗೋಮಾತೆಯ ಆರೈಕೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಸಂಘಟನೆಯು ಧಾರ್ಮಿಕ ಮತಾಂತರಗಳನ್ನು ನಿಲ್ಲಿಸಲು ಮತ್ತು "ಇಸ್ಲಾಮಿಕ್ ತುಷ್ಟೀಕರಣ ರಾಜಕೀಯ" ವನ್ನು ಬೆಳೆಸಲು ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.

"ಬಿಜೆಪಿ ತನ್ನನ್ನು ತಾನು ಹಿಂದೂ ಪಕ್ಷ ಎಂದು ಕರೆದುಕೊಳ್ಳುತ್ತಿತ್ತು, ಆದರೆ ಇಂದು ಅದು ಇತರ ಸಮುದಾಯಗಳ ಜನರ ಪ್ರಾಬಲ್ಯ ಹೆಚ್ಚುತ್ತಿದೆ. ಅದೇ ರೀತಿಯಲ್ಲಿ, ಶಿವಸೇನೆ ಕೂಡ ಇಸ್ಲಾಮಿಕ್ ತುಷ್ಟೀಕರಣದ ರಾಜಕೀಯದತ್ತ ಸಾಗುತ್ತಿದೆ" ಎಂದು ಅವರು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು