logo
ಕನ್ನಡ ಸುದ್ದಿ  /  Nation And-world  /  Nasa Releases Stunning Images Of A Star Studded Cosmic Cloud Captured By Hubble Space Telescope

Hubble Space Telescope: ಹಬಲ್‌ ಕಣ್ಣಿಗೆ ಬಿದ್ದ ಕಾಸ್ಮಿಕ್‌ ಮೋಡದ ಮೋಡಿ: ಬ್ರಹ್ಮಾಂಡದ ಸೌಂದರ್ಯ ನೋಡದೇ ಮಲಗಬೇಡಿ

Nikhil Kulkarni HT Kannada

Dec 17, 2022 10:18 PM IST

NGC 6530 ವಿಹಂಗಮ ನೋಟ

    • ಹಬಲ್‌ ಸ್ಪೇಸ್‌ ಟೆಲಿಸ್ಕೋಪ್‌ NGC 6530 ಹೆಸರಿನ ನೆಬ್ಯುಲಾದ ಅದ್ಭುತ ಚಿತ್ರವೊಂದನ್ನು ಸೆರೆಹಿಡಿದಿದೆ. ಭೂಮಿಯಿಂದ ಸುಮಾರು 4,350 ಜ್ಯೋತಿರ್ವರ್ಷ ದೂರದಲ್ಲಿರುವ NGC 6530, ಧನು ರಾಶಿಯ ದಕ್ಷಿಣ ನಕ್ಷತ್ರಪುಂಜದಲ್ಲಿರುವ ತೆರೆದ ಯುವ ನಕ್ಷತ್ರಗಳ ಸಮೂಹವಾಗಿದೆ. ನಾಕ್ಷತ್ರಿಕ ಮಾರುತಗಳಿಂದಾಗಿ ಅಂತರತಾರಾ ವಲಯದಲ್ಲಿ ಧೂಳು ಮತ್ತು ಅನಿಲದ ದೈತ್ಯಾಕಾರದ ಮೋಡ ರೂಪಗೊಂಡಿರುವುದನ್ನು , ಹಬಲ್‌ ಸ್ಪಷ್ಟವಾಗಿ ಗುರುತಿಸಿದೆ.
NGC 6530 ವಿಹಂಗಮ ನೋಟ
NGC 6530 ವಿಹಂಗಮ ನೋಟ (NASA Twitter)

ವಾಷಿಂಗ್ಟನ್:‌ ಕಳೆದ ಮೂರು ದಶಕಗಳಿಂದ ಬ್ರಹ್ಮಾಂಡದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಹಬಲ್‌ ಬಾಹ್ಯಾಕಾಶ ದೂರದರ್ಶಕ ಯಂತ್ರ, ವಿಶ್ವ ರಚನೆಯ ಕುರಿತ ಮಾನವನ ಜ್ಞಾನವನ್ನು ಅಗಾಧವಾಗಿ ವೃದ್ಧಿಸಿದೆ. ಬ್ರಹ್ಮಾಂಡದ ಅಸ್ತಿತ್ವ ಮತ್ತು ಅನಂತ ವಿಶ್ವದಲ್ಲಿ ನಡೆಯುವ ಖಗೋಳಿಯ ವಿದ್ಯಮಾನಗಳ ಮೇಲೆ ನಿಗಾ ಇರಿಸಿರುವ ಹಬಲ್‌, ಈ ಕುರಿತು ಭೂಮಿಗೆ ರವಾನಿಸುವ ಪ್ರತಿಯೊಂದೂ ಮಾಹಿತಿಯೂ ಅತ್ಯಮೂಲ್ಯವಾಗಿರುತ್ತದೆ.

ಟ್ರೆಂಡಿಂಗ್​ ಸುದ್ದಿ

ಚೆನ್ನೈನಲ್ಲಿ ವಂದೇ ಮೆಟ್ರೋ ರೈಲು ಅನಾವರಣ; ಭಾರತೀಯ ರೈಲ್ವೆ ಮಹತ್ವದ ಮೈಲಿಗಲ್ಲು, ಜುಲೈನಲ್ಲಿ ಮೊದಲ ಪ್ರಾಯೋಗಿಕ ಸಂಚಾರ

ರಣಬಿಸಿಲಿನಿಂದ ರಕ್ಷಣೆಗೆ ಟ್ರಾಫಿಕ್‌ ಸಿಗ್ನಲ್ ಸಮೀಪ ಹಸಿರು ನೆರಳು ಬಲೆ; ಪುದುಚೇರಿ ಪಿಡಬ್ಲ್ಯುಡಿ ಇಲಾಖೆ ಉಪಕ್ರಮಕ್ಕೆ ವ್ಯಾಪಕ ಮೆಚ್ಚುಗೆ

Gold Rate Today: ಇಳಿಕೆಯ ಬೆನ್ನಲ್ಲೇ ಮತ್ತೆ ಏರಿದ ಚಿನ್ನದ ದರ, ತುಸು ಕಡಿಮೆಯಾದ ಬೆಳ್ಳಿ; ಆಭರಣ ಪ್ರಿಯರಿಗಿಲ್ಲ ನೆಮ್ಮದಿ

Lok Sabha Elections: ಲೈಂಗಿಕ ದೌರ್ಜನ್ಯ ಪ್ರಕರಣ ಆರೋಪಿ ಸಂಸದ ಬದಲು ಮಗನಿಗೆ ಟಿಕೆಟ್‌ ನೀಡಿದ ಬಿಜೆಪಿ

ಅದರಂತೆ ಈ ಬಾರಿ ಹಬಲ್‌ ಸ್ಪೇಸ್‌ ಟೆಲಿಸ್ಕೋಪ್‌ NGC 6530 ಹೆಸರಿನ ನೆಬ್ಯುಲಾದ ಅದ್ಭುತ ಚಿತ್ರವೊಂದನ್ನು ಸೆರೆಹಿಡಿದಿದೆ. ಭೂಮಿಯಿಂದ ಸುಮಾರು 4,350 ಜ್ಯೋತಿರ್ವರ್ಷ ದೂರದಲ್ಲಿರುವ NGC 6530, ಧನು ರಾಶಿಯ ದಕ್ಷಿಣ ನಕ್ಷತ್ರಪುಂಜದಲ್ಲಿರುವ ತೆರೆದ ಯುವ ನಕ್ಷತ್ರಗಳ ಸಮೂಹವಾಗಿದೆ.

ಹಬಲ್‌ ಸೆರೆಹಿಡಿದಿರುವ ಈ ಚಿತ್ರದಲ್ಲಿ, ಸಾವಿರಾರು ನಕ್ಷತ್ರಗಳು ಸ್ಪಷ್ಟವಾಗಿ ಗೋಚರವಾಗುತ್ತಿದ್ದು, ಸುಡುವ ಈ ನಕ್ಷತ್ರಗಳಿಂದ ನಾಕ್ಷತ್ರಿಕ ಮಾರುತಗಳು ಮೇಲೆಳುತ್ತಿರುವುದನ್ನು ಗುರುತಿಸಬಹುದಾಗಿದೆ. ಇದರಿಂದ ಈ ಪ್ರದೇಶದಲ್ಲಿ ಅಂತರತಾರಾ ಧೂಳು ಮತ್ತು ಅನಿಲದ ದೈತ್ಯಾಕಾರದ ಮೋಡ ರೂಪಗೊಂಡಿದ್ದು, ಈ ಮೋಡ ಬಹುತೇಕವಾಗಿ ನೆಬ್ಯುಲಾವನ್ನು ಮುಚ್ಚಿದೆ.

ಈ ಕುರಿತು ಮಾಹಿತಿ ನೀಡಿರುವ ನಾಸಾ, ಪ್ರತಿ ದಿಕ್ಕಿನಲ್ಲೂ ಮೋಡದ ಅಲೆಗಳು ಸ್ಪಷ್ಟವಾಗಿ ಕಾಣುತ್ತಿವೆ. ಕೆಂಪು, ಕಿತ್ತಳೆ, ನೀಲಿ, ಹಸಿರು ಮತ್ತು ಹಳದಿ ಬ್ಯಾಂಡ್‌ಗಳು ಒಂದರ ಮೇಲೊಂದು ಅಪ್ಪಳಿಸುತ್ತಿರುವುದನ್ನು ಹಬಲ್‌ ಸೆರೆಹಿಡಿದ ಚಿತ್ರದಲ್ಲಿ ಗುರುತಿಸಬಹುದು ಎಂದು ಹೇಳಿದೆ.

ಹಬಲ್‌ ಬಾಹ್ಯಾಕಾಶ ದೂರದರ್ಶಕ ಯಂತ್ರವು, ಈ ಚಿತ್ರವನ್ನು ತನ್ನ ವೈಡ್ ಫೀಲ್ಡ್ ಪ್ಲಾನೆಟರಿ ಕ್ಯಾಮೆರಾ 3 ಮತ್ತು ಸುಧಾರಿತ ಕ್ಯಾಮೆರಾದೊಂದಿಗೆ ಕ್ಲಿಕ್ಕಿಸಿದೆ. ಯುವ ನಕ್ಷತ್ರಗಳನ್ನು ಸುತ್ತುವರೆದಿರುವ ಅದ್ಭುತ ಡಿಸ್ಕ್‌ಗಳಿಂದಾಗಿ, ನಕ್ಷತ್ರಗಳು ಮತ್ತು ಬಾಹ್ಯ ಗ್ರಹ ವ್ಯವಸ್ಥೆಗಳ ರಚನೆ ಮತ್ತು ಮೂಲವನ್ನು ಅಧ್ಯಯನ ಮಾಡಲು ಇದು ಸಹಕಾರಿ ಎಂದು ನಾಸಾ ಸ್ಪಷ್ಟಪಡಿಸಿದೆ.

ಅತಿಗೆಂಪು ತರಂಗಾಂತರಗಳನ್ನು ವೀಕ್ಷಿಸುವ ಹಬಲ್‌ನ ಸಾಮರ್ಥ್ಯ, ಅದರಲ್ಲೂ ವಿಶೇಷವಾಗಿ ವೈಡ್ ಫೀಲ್ಡ್ ಕ್ಯಾಮೆರಾ 3ಯು, ನಕ್ಷತ್ರದ ಜನನ ಮತ್ತು ಬಾಹ್ಯ ಗ್ರಹ ವ್ಯವಸ್ಥೆಗಳ ಮೂಲವನ್ನು ಅರ್ಥ ಮಾಡಿಕೊಳ್ಳುವಲ್ಲಿ ನೆರವಾಗುತ್ತವೆ ಎಂದು ನಾಸಾ ಮಾಹಿತಿ ನೀಡಿದೆ.

ಪ್ರಸ್ತುತ ಹಬಲ್‌ನ ಉತ್ತರಾಧಿಕಾರಿಯಾಗಿ ಬಾಹ್ಯಾಕಾಶದಲ್ಲಿ ನೆಲೆಗೊಂಡಿರುವ ನಾಸಾದ ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌, ಅತಿಗೆಂಪು ತರಂಗಾಂತರಗಳಲ್ಲಿನ ಅಭೂತಪೂರ್ವ ವೀಕ್ಷಣಾ ಸಾಮರ್ಥ್ಯವನ್ನು ಹೊಂದಿದೆ.

ಹೀಗಾಗಿ ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ನ್ನೂ ಕೂಡ NGC 6530 ನೆಬ್ಯುಲಾದ ಹೆಚ್ಚಿನ ಅಧ್ಯಯನಕ್ಕೆ ಬಳಸಿಕೊಳ್ಳಲು, ನಾಸಾದ ಖಗೋಳಶಾಸ್ತ್ರಜ್ಞರು ತೀರ್ಮಾನಿಸಿದ್ದಾರೆ.

ಹೊಸದಾಗಿ ಹುಟ್ಟಿದ ನಕ್ಷತ್ರಗಳ ಸುತ್ತಲೂ ಧೂಳಿನ ಹೊದಿಕೆಗಳ ಮೂಲಕ ಇಣುಕಿ ನೋಡಲು ಮತ್ತು ನಕ್ಷತ್ರದ ಮಂದವಾದ, ಆರಂಭಿಕ ಹಂತಗಳನ್ನು ತನಿಖೆ ಮಾಡಲು ಜೇಮ್ಸ್‌ ವೆಬ್‌ ಸಹಕರಿಸಲಿದೆ ಎಂದು ನಾಸಾ ತಿಳಿಸಿದೆ.

ಹಬಲ್ ಅವಲೋಕನಗಳಿಗೆ ಪೂರಕವಾಗಿ ಜೇಮ್ಸ್‌ ವೆಬ್‌ನಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ನಾಸಾ ನಿರ್ಧರಿಸಿದ್ದು, NGC 6530 ಒಳಗೊಂಡಿರುವ ರೋಚಕ ರಹಸ್ಯಗಳನ್ನು ಅರಿಯಲು ಜಾಗತಿಕ ಖಗೋಳಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

ಸಂಬಂಧಿತ ಸುದ್ದಿ

Open Star Cluster: ನೋಡಬನ್ನಿ ಬ್ರಹ್ಮಾಂಡದ ಅಚ್ಚರಿ: ಇದು ತೆರೆದ ನಕ್ಷತ್ರ ಸಮೂಹವೆಂಬ ಅದ್ಭುತ ನರ್ಸರಿ..

ನಾಸಾದ ಹಬಲ್‌ ಬಾಹ್ಯಾಕಾಶ ದೂರದರ್ಶಕ ಯಂತ್ರ ಇತ್ತೀಚೆಗೆ NGC 1858 ಎಂಬ ಸುಂದರವಾದ ತೆರೆದ ನಕ್ಷತ್ರ ಸಮೂಹದ ಅದ್ಭುತ ಚಿತ್ರವನ್ನು ಸೆರೆಹಿಡಿದಿದೆ. ಇದು ನಕ್ಷತ್ರ-ರೂಪಿಸುವ ಪ್ರದೇಶವಾಗಿದ್ದು, ಹೊಸ ನಕ್ಷತ್ರಗಳ ವಿಶಾಲ ಸಮೂಹವೊಂದು ದಿಗಂತದಲ್ಲಿ ಮಿನುಗುತ್ತಿರುವ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು