logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Artemis-i: ನೋಡು ಬಾ ಚಂದಿರ..ನಾಸಾ ಆರ್ಟೆಮಿಸ್‌ ಸೆರೆಹಿಡಿದ ಚಿತ್ರ ಅದೆಷ್ಟು ಸುಂದರ..

Artemis-I: ನೋಡು ಬಾ ಚಂದಿರ..ನಾಸಾ ಆರ್ಟೆಮಿಸ್‌ ಸೆರೆಹಿಡಿದ ಚಿತ್ರ ಅದೆಷ್ಟು ಸುಂದರ..

Nikhil Kulkarni HT Kannada

Nov 25, 2022 08:54 AM IST

ಚಂದ್ರನ ವಿಹಂಗಮ ನೋಟ

    • ನಾಸಾದ ಆರ್ಟೆಮಿಸ್‌-I ಯೋಜನೆಯ ಓರಾಯನ್ ಕ್ಯಾಪ್ಸುಲ್ ಚಂದ್ರನ ಅದ್ಭುತ ಚಿತ್ರಗಳನ್ನು ಸೆರೆಹಿಡಿದ್ದು, ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹದ ಅತ್ಯಂತ ಸಮೀಪದ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಓರಾಯನ್ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈಯಿಂದ ಸುಮಾರು 130 ಕಿ.ಮೀ (80 ಮೈಲುಗಳು) ಅಂತರದಿಂದ ಈ ಅದ್ಭುತ ಚಿತ್ರಗಳನ್ನು ಸೆರೆಹಿಡಿದಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.
ಚಂದ್ರನ ವಿಹಂಗಮ ನೋಟ
ಚಂದ್ರನ ವಿಹಂಗಮ ನೋಟ (Verified Instagram)

ವಾಷಿಂಗ್ಟನ್:‌ ಚಂದ್ರನ ನೆಲ ಮುತ್ತಿಕ್ಕುವ ತನ್ನ ಯೋಜನೆಗೆ ಚಾಲನೆ ನೀಡಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಆರ್ಟೆಮಿಸ್-I ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿದೆ. ಈ ಮೂಲಕ ಬರೋಬ್ಬರಿ ಅರ್ಧ ಶತಮಾನಗಳ ಬಳಿಕ ನಾಸಾ ಮತ್ತೆ ಚಂದ್ರನ ನೆಲಕ್ಕೆ ಕಾಲಿಟ್ಟಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಚಂದ್ರನ ನೆಲಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಆರ್ಟೆಮಿಸ್‌ ಯೋಜನೆಗೆ ಚಾಲನೆ ನೀಡಿರುವ ನಾಸಾ, ಇದಕ್ಕೂ ಮೊದಲು ಆರ್ಟೆಮಿಸ್-I ಮಾನವರಹಿತ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆರ್ಟೆಮಿಸ್-II ಯೋಜನೆಯಲ್ಲಿ ಗಗನಯಾತ್ರಿಗಳು ಚಂದ್ರನತ್ತ ತೆರಳಲಿದ್ದು, ಆ ಸಮಯದಲ್ಲಿ ಗಗನಯಾತ್ರಿಗಳಿಗೆ ಅವಶ್ಯವಾಗಿರುವ ಅಗತ್ಯ ಸಾಮಾನು ಸರಂಜಾಮುಗಳನ್ನು ಆರ್ಟೆಮಿಸ್-I‌ ಹೊತ್ತೊಯ್ದಿದೆ.

ಈ ಮಧ್ಯೆ ನಾಸಾದ ಓರಾಯನ್ ಕ್ಯಾಪ್ಸುಲ್ ಚಂದ್ರನ ಅದ್ಭುತ ಚಿತ್ರಗಳನ್ನು ಸೆರೆಹಿಡಿದ್ದು, ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹದ ಅತ್ಯಂತ ಸಮೀಪದ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ಓರಾಯನ್ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈಯಿಂದ ಸುಮಾರು 130 ಕಿ.ಮೀ (80 ಮೈಲುಗಳು) ಅಂತರದಿಂದ ಈ ಅದ್ಭುತ ಚಿತ್ರಗಳನ್ನು ಸೆರೆಹಿಡಿದಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.

ಓರಾಯನ್‌ ಕ್ಯಾಪ್ಸೂಲ್‌ನ ಆಪ್ಟಿಕಲ್ ನ್ಯಾವಿಗೇಷನಲ್ ಸಿಸ್ಟಮ್‌, ಚಂದ್ರನ ನೆಲದ ಕಪ್ಪು-ಬಿಳುಪು ಚಿತ್ರಗಳನ್ನು ಸೆರೆಹಿಡಿದಿದೆ. ಚಂದ್ರನ ವಿವಿಧ ಪ್ರದೇಶಗಳ ಒಟ್ಟು ನಾಲ್ಕು ಚಿತ್ರಗಳನ್ನು ಓರಾಯನ್‌ ಕ್ಯಾಪ್ಸೂಲ್‌ ಭೂಮಿಗೆ ರವಾನಿಸಿದ್ದು, ಈ ಚಿತ್ರಗಳು 1975ರಲ್ಲಿ ಅಪೊಲೋ ಕಾರ್ಯಕ್ರಮ ಕೊನೆಗೊಂಡ ನಂತರ, ಇದೇ ಮೊಟ್ಟ ಮೊದಲ ಬಾರಿಗೆ ಕ್ಲಿಕ್ಕಿಸಿದ ಚಂದ್ರನ ಅತ್ಯಂತ ಹತ್ತಿರದ ಚಿತ್ರಗಳಾಗಿವೆ ಎಂದು ನಾಸಾ ಸ್ಪಷ್ಟಪಡಿಸಿದೆ.

ಓರಾಯನ್ ಕ್ಯಾಪ್ಸೂಲ್‌ ಈ ಹಿಂದೆ ನಾಸಾದ ಅಪೊಲೋ 11, 12 ಮತ್ತು 14ಬ್ಯಾಹಾಕಾಶ ನೌಕೆಗಳು ಚಂದ್ರನ ಮೇಲ್ಮೈ ಮೇಲೆ ಇಳಿದಿದ್ದ ಸ್ಥಳಗಳ ಮೇಲೆಯೂ ಹಾರಾಟ ನಡೆಸಿದೆ. ಸದ್ಯ ಓರಾಯನ್‌ ಕ್ಯಾಪ್ಸೂಲ್ ದೂರದ ಹಿಮ್ಮುಖ ಕಕ್ಷೆಯತ್ತ ಸಾಗುತ್ತಿ‌ದ್ದು, ಚಂದ್ರನ ಮತ್ತೊಂದು ಪಾರ್ಶ್ವದ ಚಿತ್ರಗಳು ಕೂಡ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ನಾಸಾ ಮಾಹಿತಿ ನೀಡಿದೆ.

ಆರ್ಟೆಮಿಸ್-I ಗಗನಯಾತ್ರಿಗಳು ಭವಿಷ್ಯದ ಕಾರ್ಯಾಚರಣೆಗೆ ತೆರಳುವ ಮೊದಲು, ನಾಸಾದ ಬಾಹ್ಯಾಕಾಶ ಉಡಾವಣಾ ವ್ಯವಸ್ಥೆಯ ರಾಕೆಟ್ ಮತ್ತು ಓರಾಯನ್ ಕ್ಯಾಪ್ಸೂಲ್‌ನ್ನು ಪರೀಕ್ಷಿಸಲು ವಿನ್ಯಾಸಗೊಳಿಸಲಾದ ಸಿಬ್ಬಂದಿಗಳಿಲ್ಲದ ಕಾರ್ಯಾಚರಣೆಯಾಗಿದೆ. 2024ರಲ್ಲಿ ಆರ್ಟೆಮಿಸ್‌-II ಯೋಜನೆಯ ಮೂಲಕ, ಚಂದ್ರನ ನೆಲಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ನಾಸಾ ಸಜ್ಜಾಗಿದೆ. ಈ ಗಗನಯಾತ್ರಿಗಳ ತಂಡದಲ್ಲೀ ಓರ್ವ ಮಹಿಳೆಯೂ ಇರಲಿದ್ದು, ಯೋಜನೆಯು ಯಶಸ್ವಿಯಾದರೆ, ಚಂದ್ರನ ನೆಲವನ್ನು ಮೊಟ್ಟ ಮೊದಲ ಬಾರಿಗೆ ಮಹಿಳಾ ಗಗನಯಾತ್ರಿಯೊಬ್ಬರು ಮುತ್ತಿಕ್ಕಲಿದ್ದಾರೆ.

ಕೆಲವೇ ದಿನಗಳ ಹಿಂದೆ ಚಂದ್ರನ ಮೇಲ್ಮೈನಿಂದ ಭೂಮಿಯ ಸುಂದರ ಫೋಟೋಗಳನ್ನು ಓರಾಯನ್‌ ಕ್ಯಾಪ್ಸೂಲ್‌ ರವಾನಿಸಿತ್ತು. ಚಂದ್ರನ ಮೇಲ್ಮೈನಿಂದ ನೀಲಿ ಬಣ್ಣದ ಚಿಕ್ಕ ಚೆಂಡಿನಂತೆ ಕಾಣುತ್ತಿದ್ದ ಭೂಮಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದವು.

ಅಪೊಲೋ ಮಿಷನ್‌ ಇತಿಹಾಸ:

ಅಮೆರಿಕ ಮತ್ತು ರಷ್ಯಾ(ಅಂದಿನ ಯುಎಸ್‌ಎಸ್‌ಆರ್) ನಡುವಣ ಶೀತಲ ಯುದ್ಧದ ಸಂದರ್ಭದಲ್ಲಿ, ಬಾಹ್ಯಾಕಾಶ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವ ಸ್ಪೇಸ್‌ ರೇಸ್‌ ಆರಂಭವಾಗಿತ್ತು. ಎರಡೂ ದೇಶಗಳು ತಮ್ಮ ಬಾಹ್ಯಾಕಾಶ ತಂತ್ರಜ್ಞಾನದ ಶ್ರೇಷ್ಠತೆಯನ್ನು ಪ್ರದರ್ಶಿಸಲು ಸ್ಪರ್ಧೆಗೆ ಇಳಿದಿದ್ದವು.

ಯುಎಸ್‌ಎಸ್‌ಆರ್‌ ಮಾನವ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಚಂದ್ರನ ನೆಲಕ್ಕೆ ಸ್ಪುಟ್ನಿಕ್‌ ಹೆಸರಿನ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿ ಇತಿಹಾಸ ಬರೆಯಿತು. ಇದಾದ ಬಳಿಕ ಯುಎಸ್‌ಎಸ್‌ಆರ್‌ ಯುರಿ ಗಗಾರಿನ್‌ ಎಂಬ ಗಗನಾಯತ್ರಿಯನ್ನು, ಬಾಹ್ಯಾಕಾಶಕ್ಕೆ ಕಳುಹಿಸಿತು. ಈ ಮೂಲಕ ಯುರಿ ಗಗಾರಿನ್‌ ಬಾಹ್ಯಾಕಾಶ ತಲುಪಿದ ಮೊಟ್ಟ ಮೊದಲ ಮಾನವ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ರಷ್ಯಾದ ಸಾಧನೆಯಿಂದ ಚಿಂತೆಗೀಡಾದ ಅಮೆರಿಕ, ೧೯೬೦ರ ದಶಕದಲ್ಲಿ ಚಂದ್ರನ ನೆಲಕ್ಕೆ ಮಾನವರನ್ನು ಕಳುಹಿಸುವ ಘೋಷಣೆ ಮಾಡಿತು. ಅದರಂತೆ ಅಪೊಲೋ ಮಿಷನ್‌ ಹೆಸರಿನ ಯೋಜನೆ ಜಾರಿಗೊಳಿಸಿತು. ಜುಲೈ 20, 1969ರಲ್ಲಿ ನಾಸಾದ ನೀಲ್‌ ಆರ್ಮ್‌ ಸ್ಟ್ರಾಂಗ್‌ ನೇತೃತ್ವದ ಮೂವರು ಗಗನಯಾತ್ರಿಗಳ ತಂಡ, ಮೊಟ್ಟ ಮೊದಲ ಬಾರಿಗೆ ಚಂದ್ರನ ನೆಲವನ್ನು ತಲುಪಿ ಹೊಸ ಇತಿಹಾಸವನ್ನೇ ಬರೆಯಿತು.

ಡಿಸೆಂಬರ್‌ 1972ರಲ್ಲಿ ಕೊನೆಯ ಅಪೊಲೋ ಮಿಷನ್‌ ಭಾಗವಾಗಿ ನಾಸಾ ಚಂದ್ರನ ನೆಲಕ್ಕೆ ಗಗನಯಾತ್ರಿಗಳನ್ನು ಕಳುಹಿಸಿತ್ತು. ಇದೀಗ ಅರ್ಧ ಶತಮಾನಗಳ ಬಳಿಕ ಆರ್ಟೆಮಿಸ್‌ ಯೋಜನೆ ಮೂಲಕ, ಮತ್ತೆ ಚಂದ್ರನ ನೆಲಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ನಾಸಾ ಸಜ್ಜಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ