logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Congress Leaders Changed: ಮಾಜಿ ಸಿಎಂಗಳಿಗೆ ಕೊಕ್‌: ಮಧ್ಯಪ್ರದೇಶ, ಛತ್ತೀಸಗಢದಲ್ಲಿ ಹೊಸಬರಿಗೆ ಮಣೆ ಹಾಕಿದ ಕಾಂಗ್ರೆಸ್‌

Congress leaders changed: ಮಾಜಿ ಸಿಎಂಗಳಿಗೆ ಕೊಕ್‌: ಮಧ್ಯಪ್ರದೇಶ, ಛತ್ತೀಸಗಢದಲ್ಲಿ ಹೊಸಬರಿಗೆ ಮಣೆ ಹಾಕಿದ ಕಾಂಗ್ರೆಸ್‌

HT Kannada Desk HT Kannada

Dec 17, 2023 11:05 AM IST

ವಿಧಾನಸಭೆ ಚುನಾವಣೆ ಬಳಿಕ ಮಧ್ಯಪ್ರದೇಶ ಹಾಗೂ ಛತ್ತೀಸಗಢದಲ್ಲಿ ಕಾಂಗ್ರೆಸ್‌ ನಾಯಕತ್ವದಲ್ಲಿ ಬದಲಾವಣೆ ಮಾಡಲಾಗಿದೆ.

    • Congress leadership change  ಈಗಷ್ಟೇ ಮುಗಿದಿರುವ ಮಧ್ಯಪ್ರದೇಶ ಹಾಗೂ ಛತ್ತೀಸಗಢ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡು ನಂತರ ಕಾಂಗ್ರೆಸ್‌ ಹೊಸ ನಾಯಕತ್ವಕ್ಕೆ ಮಣೆ ಹಾಕಿದೆ. ಏನೇನು ಬದಲಾವಣೆ ಆಗಿವೆ. ಇಲ್ಲಿದೆ ವಿವರ..
ವಿಧಾನಸಭೆ ಚುನಾವಣೆ ಬಳಿಕ ಮಧ್ಯಪ್ರದೇಶ ಹಾಗೂ ಛತ್ತೀಸಗಢದಲ್ಲಿ ಕಾಂಗ್ರೆಸ್‌ ನಾಯಕತ್ವದಲ್ಲಿ ಬದಲಾವಣೆ ಮಾಡಲಾಗಿದೆ.
ವಿಧಾನಸಭೆ ಚುನಾವಣೆ ಬಳಿಕ ಮಧ್ಯಪ್ರದೇಶ ಹಾಗೂ ಛತ್ತೀಸಗಢದಲ್ಲಿ ಕಾಂಗ್ರೆಸ್‌ ನಾಯಕತ್ವದಲ್ಲಿ ಬದಲಾವಣೆ ಮಾಡಲಾಗಿದೆ.

ದೆಹಲಿ: ವಿಧಾನಸಭೆ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್‌ ಹಿರಿತಲೆಗಳಿಗೆ ವಿರಾಮ ನೀಡಲು ಮುಂದಾಗಿದೆ. ಮಧ್ಯಪ್ರದೇಶ ಹಾಗೂ ಛತ್ತೀಸಗಢ ಮೂಲಕ ಕಾಂಗ್ರೆಸ್‌ ನಾಯಕತ್ವ ಬದಲಾವಣೆ ಆರಂಭಿಸಿದೆ.

ಟ್ರೆಂಡಿಂಗ್​ ಸುದ್ದಿ

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ; ಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್‌

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಮಧ್ಯಪ್ರದೇಶದಲ್ಲಿ ನಾಯಕತ್ವ ಕಚ್ಚಾಟದಿಂದ ಸೋಲು ಕಂಡ ಕಾಂಗ್ರೆಸ್‌ ಅಲ್ಲಿ ಸಂಪೂರ್ಣ ಬದಲಾವಣೆಗೆ ಮುಂದಾಗಿದೆ.

ಪಕ್ಷದ ಚುಕ್ಕಾಣಿ ಹಿಡಿದಿದ್ದ ಮಾಜಿ ಸಿಎಂ ಕಮಲನಾಥ್‌ ಅವರನ್ನು ಬದಲಾಯಿಸಲಾಗಿದೆ. ಬ್ರಾಹ್ಮಣ ಸಮುದಾಯದ ಕಮಲನಾಥ್‌ ಬದಲಿಗೆ ಹಿಂದುಳಿದ ವರ್ಗಗಳ ನಾಯಕ ಜಿತು ಪಟ್ವಾರಿ ಅವರನ್ನು ಮಧ್ಯಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಒಂಬತ್ತು ಬಾರಿ ಸಂಸದರಾಗಿ ಕೇಂದ್ರದ ಸಚಿವರಾಗಿ ಸುಧೀರ್ಘ ಅಧಿಕಾರದಲ್ಲಿದ್ದ, ಐದು ವರ್ಷದಿಂದ ಮಧ್ಯಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿದ್ದ ಕಮಲನಾಥ್‌ ಅವರ ರಾಜಕೀಯ ಈ ಮೂಲಕ ಅಂತ್ಯವಾಗುವ ಸೂಚನೆ ದೊರೆತಿದೆ.

ಈಗಾಗಲೇ ಬಿಜೆಪಿ ಮಧ್ಯಪ್ರದೇಶದ ಚುನಾವಣೆಯಲ್ಲಿ ಗೆದ್ದು ಹಿಂದುಳಿದ ವರ್ಗದ ಮೋಹನ್‌ ಯಾದವ್‌ ಅವರನ್ನು ಸಿಎಂ ಮಾಡಿದೆ. ಈ ಹಿನ್ನೆಲೆಯಲ್ಲಿ ಬದಲಾವಣೆಯಾಗಿದೆ.

ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಪಟ್ವಾರಿ ಅವರು ಬಿಜೆಪಿಯ ಅಭ್ಯರ್ಥಿಯನ್ನು ಭಾರೀ ಅಂತರದಲ್ಲಿ ಮಣಿಸಿ ವಿಧಾನಸಭೆಗೆ ಆರಿಸಿ ಬಂದು ಗಮನ ಸೆಳೆದಿದ್ದರು. ಮುಂದಿನ ಲೋಕಸಭೆ ತಯಾರಿ ಭಾಗವಾಗಿ ಮಧ್ಯಪ್ರದೇಶ ಕಾಂಗ್ರೆಸ್‌ನಲ್ಲಿ ಬದಲಾವಣೆಗಳು ಆಗುತ್ತಿವೆ ಎಂದು ಮುಖಂಡರು ಹೇಳಿದ್ದಾರೆ.

ಇನ್ನು ಮಧ್ಯಪ್ರದೇಶ ವಿಧಾನಸಭೆಯ ನಾಯಕರನ್ನಾಗಿ ಉಮಂಗ್‌ ಸಿಂಘರ್‌ ಹಾಗೂ ಉಪನಾಯಕರಾಗಿ ಹೇಮಂತ್‌ ಖಟಾರೆ ಅವರನ್ನು ನಿಯೋಜಿಸಲಾಗಿದೆ.

ಆದಿವಾಸಿ ಸಮುದಾಯದ ಉಮಂಗ್‌ ಅವರು ಕಾಂಗ್ರೆಸ್‌ನ ಹಿರಿಯ ನಾಯಕಿ ಜಮುನಾದೇವಿ ಸಂಬಂಧಿಯೂ ಹೌದು. ಅದೇ ರೀತಿ ಕಮಲನಾಥ್‌ ಪರ್ಯಾಯವಾಗಿ ಹಾಗೂ ಬ್ರಾಹ್ಮಣ ಮತ ಗಮನದಲ್ಲಿಟ್ಟುಕೊಂಡು ಹೇಮಂತ್‌ ಅವರನ್ನು ನಿಯೋಜಿಸಲಾಗಿದೆ. ಹೇಮಂತ್‌ ಈ ಬಾರಿ ಮಧ್ಯಪ್ರದೇಶದ ಸಹಕಾರ ಸಚಿವ ಅರವಿಂದ ಸಿಂಗ್‌ ಅವರನ್ನು ಭಾರೀ ಅಂತರದಲ್ಲಿ ಮಣಿಸಿ ಗಮನ ಸೆಳೆದಿದ್ದರು. ಹೇಮಂತ್‌ ತಂದೆ ಸತ್ಯದೇವ್‌ ಕಟಾರೆ ಸಚಿವರಾಗಿ,ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದರು.

ಛತ್ತೀಸಗಢದಲ್ಲಿ ವಿಧಾನಸಭೆಯ ನಾಯಕ ಹಾಗೂ ಪ್ರತಿಪಕ್ಷ ನಾಯಕ ಸ್ಥಾನವನ್ನು ಈವರೆಗೂ ಮುಖ್ಯಮಂತ್ರಿಯಾಗಿದ್ದ ಭೂಪೇಶ್‌ ಭಾಘೇಲ್‌ಗೆ ನೀಡಿಲ್ಲ. ಬದಲಿಗೆ ಛತ್ತೀಸಗಢ ಮಾಜಿ ಸ್ಪೀಕರ್‌ ಹಾಗೂ ಹಿಂದುಳಿದ ವರ್ಗಗಳ ನಾಯಕ ಚರಣ್‌ ದಾಸ್‌ ಮಹಾಂತ್‌ ಅವರನ್ನು ಈ ಹುದ್ದೆಗೆ ನಿಯೋಜಿಸಲಾಗಿದೆ. ಈ ಮೂಲಕ ಇಲ್ಲಿಯೂ ಬದಲಾವಣೆ ಮಾಡಲಾಗಿದೆ. ಛತ್ತೀಸಗಢ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌ ಸೋಲು ಅನುಭವಿಸಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ