logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Apps Banned: 22 ಅನಧಿಕೃತ ಬೆಟ್ಟಿಂಗ್‌ ಆಪ್‌ಗಳಿಗೆ ಕೇಂದ್ರ ಬ್ರೇಕ್‌: ಮಹದೇವ್‌ ಬುಕ್‌ ಆಪ್‌ ಕೂಡ ನಿಷೇಧ

Apps Banned: 22 ಅನಧಿಕೃತ ಬೆಟ್ಟಿಂಗ್‌ ಆಪ್‌ಗಳಿಗೆ ಕೇಂದ್ರ ಬ್ರೇಕ್‌: ಮಹದೇವ್‌ ಬುಕ್‌ ಆಪ್‌ ಕೂಡ ನಿಷೇಧ

HT Kannada Desk HT Kannada

Nov 06, 2023 08:52 AM IST

ಕೇಂದ್ರ ಸರ್ಕಾರವು ಅನಧಿಕೃತ 22 ಆಪ್‌ಗಳನ್ನು ನಿಷೇಧಿಸಿದೆ.

    • Apps Ban in India ಭಾರತದಲ್ಲಿ ವಿವಾದ ಸೃಷ್ಟಿಸಿದ್ದ ಮಹದೇವ್‌ ಬುಕ್‌ ಆಪ್‌ (Mahadev book app) ಸೇರಿ ಒಟ್ಟು 22 ಆಪ್‌ ಹಾಗೂ ವೆಬ್‌ಸೈಟ್‌ಗಳನ್ನು ನಿಷೇಧಿಸಿ ಕೇಂದ್ರ ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯು ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರವು ಅನಧಿಕೃತ  22 ಆಪ್‌ಗಳನ್ನು ನಿಷೇಧಿಸಿದೆ.
ಕೇಂದ್ರ ಸರ್ಕಾರವು ಅನಧಿಕೃತ 22 ಆಪ್‌ಗಳನ್ನು ನಿಷೇಧಿಸಿದೆ.

ದೆಹಲಿ: ಛತ್ತೀಸಗಡ ವಿಧಾನಸಭೆ ಚುನಾವಣೆ ನಡುವೆಯೇ ತೀವ್ರ ವಿವಾದ ಸೃಷ್ಟಿಸಿದ್ದ ಮಹದೇವ್‌ ಬುಕ್‌ ಆಪ್‌ ಸಹಿತ 22 ಅನಧಿಕೃತ ಆಪ್‌ಗಳನ್ನು ಕೇಂದ್ರ ಸರ್ಕಾರವು ನಿಷೇಧಿಸಿ ಆದೇಶ ಹೊರಡಿಸಿದೆ.

ಟ್ರೆಂಡಿಂಗ್​ ಸುದ್ದಿ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ( MeitY) ಈ ಕುರಿತು ಭಾನುವಾರ ಅಧಿಕೃತ ಆದೇಶವನ್ನು ಹೊರಡಿಸಿದ್ದು ಬೆಟ್ಟಿಂಗ್‌ಗೆ ಸಂಬಂಧಿಸಿದ 22 ಆಪ್‌ ಹಾಗೂ ವೆಬ್‌ಸೈಟ್‌ ಗಳನ್ನು ಬ್ಲಾಕ್‌ ಮಾಡಲಾಗಿದೆ.

ಮಾಹಿತಿ ತಂತ್ರಜ್ಞಾನ ಕಾಯಿದೆ 69ಎ ಪ್ರಕಾರ ಈ ಆದೇಶ ಜಾರಿಯಾಗಿದ್ದು, ಜಾರಿ ನಿರ್ದೇಶನಾಲಯ( ED) ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

ಕೆಲ ದಿನಗಳ ಹಿಂದೆ ಛತ್ತೀಸಗಡ ಮುಖ್ಯಮಂತ್ರಿ ಅವರಿಗೆ ಕೋಟ್ಯಂತರ ರೂ. ಹಣವನ್ನು ಮಹದೇವ್‌ ಆಪ್‌ ಮೂಲಕ ವರ್ಗಾಯಿಸಿದ್ದ ಗಂಭೀರ ಆರೋಪ ಕೇಳಿ ಬಂದಿತ್ತು, ಈ ಕುರಿತು ಜಾರಿ ನಿರ್ದೇಶನಾಲಯ ಹಲವು ಕಡೆಗಳಲ್ಲಿ ದಾಳಿ ಕೂಡ ಮಾಡಿತ್ತು. ಮಹದೇವ್‌ ಬುಕ್‌ ಆಪ್‌ ಅನಧಿಕೃತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನ್ನು ಪತ್ತೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಕ್ರಮ ಆಗಿದೆ.

ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ಈ ಕುರಿತು ಹೇಳಿಕೆ ನೀಡಿದ್ದು, ಜಾರಿ ನಿರ್ದೇಶನಾಲಯದಿಂದ ಆಪ್‌ ನಿಷೇಧಕ್ಕೆ ಪತ್ರ ಬರೆಯಲಾಗಿತ್ತು. ಇದನ್ನು ಆಧರಿಸಿ ಆಪ್‌, ವೆಬ್‌ಸೈಟ್‌ಗಳ ಬಂದ್‌ಗೆ ಕ್ರಮ ವಹಿಸಲಾಗಿದೆ. ಮಹದೇವ್‌ ಆಪ್‌ ನ ಮುಖ್ಯಸ್ಥರನ್ನು ಈಗಾಗಲೇ ಬಂಧಿಸಲಾಗಿದ್ದು. ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇಂತಹ ಅನಧಿಕೃತ ಆಪ್‌ಗಳ ನಿಷೇಧಕ್ಕೆ ಶಿಫಾರಸು ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ. ಛತ್ತೀಸಗಡ ರಾಜ್ಯ ಸರ್ಕಾರದಿಂದ ಆಪ್‌ ನಿಷೇಧದ ಯಾವುದೇ ಬೇಡಿಕೆ ಬಂದಿರಲಿಲ್ಲ. ಒಂದೂವರೆ ವರ್ಷದಿಂದಲೂ ಅನಧಿಕೃತ ಆಪ್‌ಗಳ ಕುರಿತಾಗಿ ವಿಚಾರಣೆಗಳು ನಡೆಯುತ್ತಲೇ ಇವೆ. ಹೀಗಿದ್ದರೂ ಛತ್ತೀಸಗಡ ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವ ಗೋಜಿಗೂ ಹೋಗಲಿಲ್ಲ. ಜಾರಿ ನಿರ್ದೇಶನಾಲಯದಿಂದ ಶಿಫಾರಸ್ಸು ಬಂದ ಕಾರಣಕ್ಕೆ ಕ್ರಮ ವಹಿಸಿದ್ದೇವೆ ಎಂದು ರಾಜೀವ್‌ ಚಂದ್ರ ಶೇಖರ್‌ ಸ್ಪಷ್ಟಪಡಿಸಿದರು.

508 ಕೋಟಿ ರೂ.ಗಳನ್ನು ಮಹದೇವ್‌ ಬುಕ್‌ ಆಪ್‌ ಪ್ರಮೋಟರ್ಸ್‌ ಛತ್ತೀಸಗಡ ಸಿಎಂ ಅವರಿಗೆ ನೀಡಿದ್ಧಾರೆ ಎಂದು ಇಡಿ ಹೇಳಿತ್ತು. ಇದನ್ನು ನಿರಾಕರಿಸಿದ್ದ ಸಿಎಂ ಭುಪೇಶ್‌ ಬಗೇಲ್‌ ಅವರು, ಕೆಲವು ಕೇಂದ್ರೀಯ ಏಜೆನ್ಸಿಗಳನ್ನು ಬಳಸಿಕೊಂಡು ಬಿಜೆಪಿ ಅಧಿಕಾರ ಹಿಡಿಯಲು ಇಂತಹ ಹುನ್ನಾರಗಳನ್ನು ನಡೆಸಿದೆ. ಯಾವುದೇ ವಹಿವಾಟು ಮಹದೇವ್‌ ಬುಕ್‌ ಆಪ್‌ನವರೊಂದಿಗೆ ನಡೆದಿಲ್ಲ ಎಂದು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ