logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Mps Resign: ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಇಬ್ಬರು ಕೇಂದ್ರ ಸಚಿವರ ಸಹಿತ 10 ಸಂಸದರ ರಾಜೀನಾಮೆ

MPs Resign: ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಇಬ್ಬರು ಕೇಂದ್ರ ಸಚಿವರ ಸಹಿತ 10 ಸಂಸದರ ರಾಜೀನಾಮೆ

HT Kannada Desk HT Kannada

Dec 06, 2023 04:25 PM IST

ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಕೇಂದ್ರ ಸಚಿವರ ಸಹಿತ ಸಂಸದರನ್ನು ಸಂಸತ್‌ ಅಧಿವೇಶನದಲ್ಲಿ ಅಭಿನಂದಿಸಲಾಯಿತು.

    • Assembly elections ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ( assembly elections) ಗೆದ್ದಿರುವ ಕೇಂದ್ರ ಸಚಿವರ( Union ministers) ಸಹಿತ ಹಲವರು ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಕೇಂದ್ರ ಸಚಿವರ ಸಹಿತ ಸಂಸದರನ್ನು ಸಂಸತ್‌ ಅಧಿವೇಶನದಲ್ಲಿ ಅಭಿನಂದಿಸಲಾಯಿತು.
ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಕೇಂದ್ರ ಸಚಿವರ ಸಹಿತ ಸಂಸದರನ್ನು ಸಂಸತ್‌ ಅಧಿವೇಶನದಲ್ಲಿ ಅಭಿನಂದಿಸಲಾಯಿತು.

ದೆಹಲಿ: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿರುವ ಇಬ್ಬರು ಕೇಂದ್ರ ಸಚಿವರ ಸಹಿತ 10 ಸಂಸದರು ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನಿಬ್ಬರು ಕೇಂದ್ರ ಸಚಿವರ ಸಹಿತ ಮೂವರು ಸಂಸದರು ಸಂಜೆ ಒಳಗೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.

ಟ್ರೆಂಡಿಂಗ್​ ಸುದ್ದಿ

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ; ಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್‌

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಈ ಬಾರಿ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢ ವಿಧಾನಸಭೆ ಚುನಾವಣೆಯಲ್ಲಿ 21 ಸಂಸತ್‌ ಸದಸ್ಯರು ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಇವರಲ್ಲಿ 14 ಮಂದಿ ಗೆದ್ದು 6 ಸಂಸದರು ಸೋತಿದ್ದಾರೆ.

ಅದರಲ್ಲಿ ಬಿಜೆಪಿಯಿಂದಲೇ ಅಧಿಕ ಸಂಖ್ಯೆಯ ಸಂಸದರು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪಣಕ್ಕಿಟ್ಟಿದ್ದರು. ಇದರಲ್ಲಿ ಕೇಂದ್ರ ಸಚಿವರ ಸಹಿತ ಕೆಲವರು ಸೋತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ.

ಯಾವುದೇ ಸದಸ್ಯ ಒಂದು ಸದನದ ಸದಸ್ಯನಾಗಲು ಸಂವಿಧಾನದಲ್ಲಿ ಅವಕಾಶವಿದೆ. ಲೋಕಸಭೆ ಸ್ಥಾನ ಇಲ್ಲವೇ ವಿಧಾನಸಭೆ ಸ್ಥಾನವನ್ನು ಅವರು ಉಳಿಸಿಕೊಳ್ಳಬೇಕು. ಈ ಬಾರಿ ಗೆದ್ದ ಬಿಜೆಪಿಯ ಸಂಸದರೆಲ್ಲರೂ ಶಾಸಕ ಸ್ಥಾನವನ್ನೇ ಉಳಿಸಿಕೊಳ್ಳಬೇಕು ಎನ್ನುವ ಸೂಚನೆ ಇರುವುದರಿಂದ ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅದರಲ್ಲೂ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ಆಹಾರ ಸಂಸ್ಕರಣಾ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌ ಅವರು ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದು ಅವರು ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಂಜೆ ಒಳಗೆ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡುವ ಸಾಧ್ಯತೆಯಿದೆ.

ಇನ್ನಿಬ್ಬರು ಕೇಂದ್ರ ಸಚಿವರಾದ ಛತ್ತೀಸಗಢದ ರೇಣುಕಾ ಸಿಂಗ್‌ ಹಾಗೂ ಗೋಮತಿ ಸಾಯಿ ಕೂಡ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದು ಅವರೂ ಸಂಸತ್‌ ಸ್ಥಾನ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಾಕಿಯಿದೆ.

ಅದೇ ರೀತಿ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಸಂಸದರಲ್ಲಿ ಮಹಾಂತ ಬಾಲಕನಾಥ ಯೋಗಿ ಅವರು ರಾಜೀನಾಮೆ ನೀಡಿಲ್ಲ. ಅವರೂ ನಾಳೆಯೊಳಗೆ ರಾಜೀನಾಮೆ ನೀಡಬಹುದು ಎನ್ನಲಾಗುತ್ತಿದೆ. ಉಳಿದಂತೆ ಅಲ್ಲಿ ಗೆದ್ದಿರುವ ದಿಯಾಕುಮಾರಿ, ಕಿರೋಡಿ ಲಾಲ್‌ ಮೀನಾ, ಮಧ್ಯಪ್ರದೇಶದ ವಿ.ಡಿ.ಶರ್ಮ ಅವರೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕೇಂದ್ರ ಸಚಿವರಲ್ಲಿ ಮಧ್ಯಪ್ರದೇಶದಲ್ಲಿ ಸ್ಪರ್ಧಿಸಿದ್ದ ಫಗನ್‌ ಸಿಂಗ್‌ ಕುಲಸ್ತೆ ಅವರು ಸೋಲನುಭವಿಸಿರುವುದರಿಂದ ಅವರು ಸಂಸದರಾಗಿ ಮುಂದುವರಿಯಲು ಅಡ್ಡಿಯಿಲ್ಲ. ಛತ್ತೀಸಗಢದಲ್ಲಿ ಬಿಜೆಪಿ ಅಧ್ಯಕ್ಷ ಅರುಣ್‌ ಸಾಹೋ ಅವರು ಗೆದ್ದಿದ್ದು ಅವರೂ ಸಂಸತ್‌ ಸ್ಥಾನ ತೊರೆದಿದ್ದಾರೆ. ಆದರೆ ಸಿಎಂ ಭೂಪೇಶ್‌ ಬಾಘೇಲ್‌ ವಿರುದ್ದ ಸೋತ ಅವರ ಅಳಿಯ ವಿಜಯ್‌ ಬಾಘೇಲ್‌ ಅವರು ಸಂಸದ ಸ್ಥಾನ ಉಳಿಸಿಕೊಂಡಿದ್ದಾರೆ.

ತೆಲಂಗಾಣದಲ್ಲೂ ಇಬ್ಬರು ಸಂಸದರಾದ ರೇವಂತರೆಡ್ಡಿ ಹಾಗೂ ಉತ್ತಮಕುಮಾರ ರೆಡ್ಡಿ ಅವರನ್ನು ಕಣಕ್ಕಿಳಿಸಲಾಗಿತ್ತು. ಅವರಿಬ್ಬರೂ ಗೆದ್ದಿರುವುದರಿಂದ ಇಬ್ಬರೂ ಸಂಸತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಾಕಿಯಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ