logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Twitter Polls: ಏಪ್ರಿಲ್‌ 15ರಿಂದ ದೃಢೀಕೃತ ಖಾತೆಗಳಿದ್ದವರಿಗೆ ಮಾತ್ರ ಟ್ವಿಟ್ಟರ್‌ ಮತಗಣನೆಯಲ್ಲಿ ಪಾಲ್ಗೊಳ್ಳಲು ಅವಕಾಶ

Twitter polls: ಏಪ್ರಿಲ್‌ 15ರಿಂದ ದೃಢೀಕೃತ ಖಾತೆಗಳಿದ್ದವರಿಗೆ ಮಾತ್ರ ಟ್ವಿಟ್ಟರ್‌ ಮತಗಣನೆಯಲ್ಲಿ ಪಾಲ್ಗೊಳ್ಳಲು ಅವಕಾಶ

HT Kannada Desk HT Kannada

Mar 28, 2023 10:40 AM IST

Twitter polls: ಏಪ್ರಿಲ್‌ 15ರಿಂದ ದೃಢೀಕೃತ ಖಾತೆಗಳಿದ್ದವರಿಗೆ ಮಾತ್ರ ಟ್ವಿಟ್ಟರ್‌ ಮತಗಣನೆಯಲ್ಲಿ ಪಾಲ್ಗೊಳ್ಳಲು ಅವಕಾಶ

  • ಆರ್ಟಿಫಿಶಿಯಲ್‌ ಬಾಟ್ಸ್‌ಗಳಿಂದ ಸ್ವಯಂಚಾಲಿತವಾಗಿ ಅಥವಾ ಕೃತಕವಾಗಿ ಮತ ಚಲಾಯಿಸುವಂತಹ ಅಪಾಯಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಎಲಾನ್‌ ಮಸ್ಕ್‌ ಹೇಳಿದ್ದಾರೆ.

Twitter polls: ಏಪ್ರಿಲ್‌ 15ರಿಂದ ದೃಢೀಕೃತ ಖಾತೆಗಳಿದ್ದವರಿಗೆ ಮಾತ್ರ ಟ್ವಿಟ್ಟರ್‌ ಮತಗಣನೆಯಲ್ಲಿ ಪಾಲ್ಗೊಳ್ಳಲು ಅವಕಾಶ
Twitter polls: ಏಪ್ರಿಲ್‌ 15ರಿಂದ ದೃಢೀಕೃತ ಖಾತೆಗಳಿದ್ದವರಿಗೆ ಮಾತ್ರ ಟ್ವಿಟ್ಟರ್‌ ಮತಗಣನೆಯಲ್ಲಿ ಪಾಲ್ಗೊಳ್ಳಲು ಅವಕಾಶ (REUTERS)

ಟೆಸ್ಲಾ, ಸ್ಪೇಸ್‌ ಎಕ್ಸ್‌ ಮಾಲೀಕರಾದ ಎಲಾನ್‌ ಮಸ್ಕ್‌ ಅವರು ಟ್ವಿಟ್ಟರ್‌ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಮೈಕ್ರೊಬ್ಲಾಗಿಂಗ್‌ ತಾಣದಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಇದೀಗ ಹೊಸ ನಿರ್ಧಾರವೊಂದನ್ನು ಅವರು ಪ್ರಕಟಿಸಿದ್ದು, ಏಪ್ರಿಲ್‌ 15ರಿಂದ ದೃಢೀಕೃತ ಖಾತೆಗಳಿದ್ದವರಿಗೆ ಮಾತ್ರ ಟ್ವಿಟ್ಟರ್‌ ಪೋಲ್ಸ್‌ (Twitter polls)ನಲ್ಲಿ ಮತ ಹಾಕಲು ಅವಕಾಶ ನೀಡಲಾಗುತ್ತದೆ ಎಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಆರ್ಟಿಫಿಶಿಯಲ್‌ ಬಾಟ್ಸ್‌ಗಳಿಂದ ಸ್ವಯಂಚಾಲಿತವಾಗಿ ಅಥವಾ ಕೃತಕವಾಗಿ ಮತ ಚಲಾಯಿಸುವಂತಹ ಅಪಾಯಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಎಲಾನ್‌ ಮಸ್ಕ್‌ ನಂಬಿದ್ದಾರೆ.

ಇದರೊಂದಿಗೆ ದೃಢೀಕೃತ ಟ್ವಿಟ್ಟರ್‌ ಖಾತೆಗಳಿಗೆ ಮಾತ್ರ ಶಿಫಾರಸು ಮಾಡಲಾದ ಟ್ವೀಟ್‌ಗಳು (For You recommendations) ಕಾಣಿಸಲಿದೆ ಎಂದು ಹೇಳಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಟ್ವಿಟ್ಟರ್‌ನಿಂದ ಪಡೆಯಲು ಸುದ್ದಿಸಂಸ್ಥೆ ರಾಯಿಟರ್ಸ್‌ ಪ್ರಯತ್ನಿಸಿದೆ. ಆದರೆ, ತಕ್ಷಣಕ್ಕೆ ಟ್ವಿಟ್ಟರ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ನೀತಿ ನಿರೂಪಣೆಗಳಿಗೆ ಸಂಬಂಧಪಟ್ಟ ಟ್ವಿಟ್ಟರ್‌ ಪೋಲ್‌ಗಳಲ್ಲಿ ಭಾಗವಹಿಸಲು ಬ್ಲೂಟಿಕ್‌ ಚಂದದಾರರಿಗೆ ಮಾತ್ರ ಅವಕಾಶ ನೀಡುವುದಾಗಿ ಮಸ್ಕ್‌ ಕಳೆದ ವರ್ಷ ಹೇಳಿದ್ದರು.

ಇತ್ತೀಚಿನ ಅಧ್ಯಯನಗಳ ಪ್ರಕಾರ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ 5 ತಿಂಗಳಲ್ಲೇ ಟ್ವಿಟ್ಟರ್‌ನ ಮೌಲ್ಯ ಶೇಕಡ 50ರಷ್ಟು ಕುಸಿತವಾಗಿದೆ. ಎಲಾನ್ ಮಸ್ಕ್ ತಾವು ಖರೀದಿಸಿದಾಗ 44 ಬಿಲಿಯನ್ ಡಾಲರ್ ಇದ್ದ ಟ್ವಿಟರ್ ನ ಮೌಲ್ಯವನ್ನು ಈಗ 20 ಬಿಲಿಯನ್ ಡಾಲರ್ ಗೆ ಇಳಿಕೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಮೇರಿಕಾದ ಸುದ್ದಿ ಸಂಸ್ಥೆಯೊಂದು ಟ್ವಿಟ್ಟರ್‌ನ ಆಂತರಿಕ ಇಮೇಲ್‌ ಮಾಹಿತಿಯ ಆಧಾರದಲ್ಲಿ ಈ ವರದಿ ಮಾಡಿದೆ. ಉದ್ಯೋಗಿಗಳಿಗೆ ನೀಡುವ ಷೇರು ಪರಿಹಾರದ ಇಮೇಲ್‌ನಲ್ಲಿ ಈ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

ಸಾಮಾಜಿಕ ಮಾಧ್ಯಮ ಮತ್ತು ಮೈಕ್ರೋಬ್ಲಾಗಿಂಗ್ ನೆಟ್‌ವರ್ಕಿಂಗ್ ಕಂಪನಿ ಟ್ವಿಟರ್ ಕಳೆದ ತಿಂಗಳು ಉದ್ಯೋಗ ಕಡಿತ ಮಾಡುವುದಾಗಿ ತಿಳಿಸಿತ್ತು. ಎಲಾನ್ ಮಸ್ಕ್ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಕಳೆದ ವರ್ಷ ನವೆಂಬರ್‌ನಲ್ಲಿ ಟ್ಟಿಟರ್ ಸಂಸ್ಥೆಯಲ್ಲಿನ ಶೇ. 50 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ್ದರು. ಆ ಬಳಿಕ ಇನ್ಮುಂದೆ ಮುಂದೆ ಉದ್ಯೋಗಿಗಳನ್ನು ವಜಾಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆ ನಂತರವೂ ಟ್ವಿಟರ್‌ ನೌಕರರನ್ನು ಹಂತ ಹಂತವಾಗಿ ತೆಗೆದುಹಾಕುತ್ತಿದೆ.

ತನ್ನ ಕಂಪನಿಯು ಪ್ರಸ್ತುತ 2,300 ಸಕ್ರಿಯ ಉದ್ಯೋಗಿಗಳನ್ನು ಹೊಂದಿದೆ ಎಂದು ಎಲೋನ್ ಮಸ್ಕ್ ಕಳೆದ ತಿಂಗಳು ಘೋಷಿಸಿದ್ದರು. ಇತ್ತೀಚೆಗೆ ಉದ್ಯೋಗ ಕಡಿತದೊಂದಿಗೆ ಆ ಸಂಖ್ಯೆಯು ಮತ್ತಷ್ಟು ಕಡಿಮೆಯಾಗಿದೆ ಎಂದ ಹೇಳಿದ್ದರು.

ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಕಳೆದ ವರ್ಷ ಅಕ್ಟೋಬರ್ ಅಂತ್ಯದಲ್ಲಿ ಟ್ವಿಟರ್ ಅನ್ನು 44 ಬಿಲಿಯನ್ ಡಾಲರ್‌ಗಳಿಗೆ ಸ್ವಾಧೀನಪಡಿಸಿಕೊಂಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ