logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Women Money Savings: ಉದ್ಯೋಗಸ್ಥ ಮಹಿಳೆಗೆ ಹಣ ಉಳಿತಾಯ ಮಾಡಲು 50:30:20 ನಿಯಮ, ಈ ರೂಲ್‌ ಫಾಲೋ ಮಾಡಿ ನೋಡಿ

Women Money Savings: ಉದ್ಯೋಗಸ್ಥ ಮಹಿಳೆಗೆ ಹಣ ಉಳಿತಾಯ ಮಾಡಲು 50:30:20 ನಿಯಮ, ಈ ರೂಲ್‌ ಫಾಲೋ ಮಾಡಿ ನೋಡಿ

Praveen Chandra B HT Kannada

Jun 02, 2023 05:30 PM IST

google News

Women Money Savings: ಉದ್ಯೋಗಸ್ಥ ಮಹಿಳೆಗೆ ಹಣ ಉಳಿತಾಯ ಮಾಡಲು 50:30:20 ನಿಯಮ

    • Money Management Tips: ಉದ್ಯೋಗಸ್ಥ ಮಹಿಳೆ ಹಣ ಉಳಿತಾಯ ಮಾಡಲು ಸುವರ್ಣ ನಿಯಮವೊಂದಿದೆ. ನಿಮ್ಮ ವೇತನವನ್ನು ಮೂರು ಭಾಗವಾಗಿಸಿ ಅದನ್ನು ಉಳಿತಾಯ ಮತ್ತು ಅವಶ್ಯಕತೆಗೆ ಬಳಸಬಹುದು. ಈ ಕುರಿತು ವಿಶೇಷ ಲೇಖನ ಇಲ್ಲಿದೆ.
Women Money Savings: ಉದ್ಯೋಗಸ್ಥ ಮಹಿಳೆಗೆ ಹಣ ಉಳಿತಾಯ ಮಾಡಲು 50:30:20 ನಿಯಮ
Women Money Savings: ಉದ್ಯೋಗಸ್ಥ ಮಹಿಳೆಗೆ ಹಣ ಉಳಿತಾಯ ಮಾಡಲು 50:30:20 ನಿಯಮ

ಭಾರತೀಯ ಮಹಿಳೆ ಕೇವಲ ಗೃಹಿಣಿಯಲ್ಲ. ಆಕೆ ವೇತನ ಪಡೆಯುವ ಉದ್ಯೋಗಿ, ಹೂಡಿಕೆದಾರಳೂ ಹೌದು. ಇಷ್ಟು ಮಾತ್ರವಲ್ಲದೆ ಸಣ್ಣ ಕಂಪನಿಯಿಂದ ಹಿಡಿದು ದೊಡ್ಡ ಕಂಪನಿಯನ್ನೂ ಮುನ್ನಡೆಸುತ್ತಿದ್ದಾರೆ. ಉಳಿತಾಯದ ವಿಷಯದಲ್ಲಿ ಪುರುಷರಿಗಿಂತ ಮಹಿಳೆಯರು ಒಂದು ಹೆಜ್ಜೆ ಮುಂದು. ಹನಿ ಹನಿಗೂಡಿದರೆ ಹಳ್ಳ ಎಂದು ತಿಳಿದುಕೊಂಡ ಮಹಿಳೆಯರು ಜತನದಿಂದ ಹಣ ಉಳಿತಾಯ ಮಾಡುತ್ತಾರೆ. ಮಹಿಳೆಯರು ಇನ್ನಷ್ಟು ಉತ್ತಮವಾಗಿ ಹಣ ಉಳಿತಾಯ ಮಾಡಲು 50:30:20 ಎಂಬ ಗೋಲ್ಡನ್‌ ನಿಯಮವನ್ನು ಇಲ್ಲಿ ಪರಿಚಯಿಸಲಾಗಿದೆ.

ಏನಿದು ಹಣ ಉಳಿತಾಯದ ನಿಯಮ?

50:30:20 ಎಂದರೆ ಅಗತ್ಯ, ಆಸೆಗಳು ಮತ್ತು ಉಳಿತಾಯ. ಈ ಮೂರು ವಿಷಯದಲ್ಲಿ ವೇತನದ ಹಣವನ್ನು ಹೊಂದಾಣಿಕೆ ಮಾಡುವುದಾಗಿದೆ. ಕೇವಲ ಉಳಿತಾಯ ಮಾಡಿದರೆ ಆಸೆಗಳು ಮನಸ್ಸಿನಲ್ಲಿಯೇ ಉಳಿಯುತ್ತದೆ. ಅಗತ್ಯವಾಗಿರುವುದಕ್ಕೆ ಖರ್ಚು ಮಾಡದೆ ಇದ್ದರೆ ಜೀವನಕ್ಕೆ ಅರ್ಥ ಇರುವುದಿಲ್ಲ. ಈ ಮೂರರ ಹೊಂದಾಣಿಕೆ ಅಗತ್ಯ.

"ಹಣದ ನಿರ್ವಹಣೆಗೆ 50:30:20 ಸುವರ್ಣ ನಿಯಮವಾಗಿದೆ. ವಿಶೇಷವಾಗಿ ವೇತನ ಪಡೆಯುವ ಮಹಿಳೆಯರು ಈ ನಿಯಮ ಫಾಲೋ ಮಾಡಬೇಕು. ನಿಮ್ಮ ವೇತನದ ಶೇಕಡ 50 ಭಾಗವನ್ನು ಅವಶ್ಯಕತೆಗಾಗಿ ಖರ್ಚು ಮಾಡಿ. ಶೇಕಡ 30 ಅನ್ನು ಬಯಕೆಗಳಿಗೆ ಖರ್ಚು ಮಾಡಿ. ಶೇಕಡ 20ನ್ನು ಉಳಿತಾಯ ಮತ್ತು ಹೂಡಿಕೆಗಾಗಿ ಬಳಸಿ ಎಂದು ಎಲ್‌ಎಕ್ಸ್‌ಎಂಇ ಸ್ಥಾಪಕರಾದ ಪ್ರೀತಿ ರಥಿ ಗುಪ್ತಾ ಹೇಳಿದ್ದಾರೆ. ನಿಮ್ಮ ಅವಶ್ಯಕತೆ, ಅಗತ್ಯಗಳಿಗೆ ತಕ್ಕಂತೆ ಶೇಕಡ 20 ನ್ನು ಹೆಚ್ಚಿಸಿಕೊಳ್ಳಬಹುದು. ಅಂದರೆ, ಅವಶ್ಯಕತೆಗೆ ಶೇಕಡ 50 ವೇತನ ಬೇಡ ಅಂದಾಗಿದ್ದರೆ ಅದರ ಕೊಂಚ ಭಾಗವನ್ನು ಉಳಿತಾಯಕ್ಕೆ ಹಾಕಬಹುದು. ಅದೇ ರೀತಿ ಬಯಕೆಗಳ ಖರ್ಚು ಕಡಿಮೆ ಮಾಡಲು ಬಯಸಿದರೆ ಅದನ್ನೂ ಹೂಡಿಕೆಗೆ ಹಾಕಬಹುದು.

ಉದಾಹರಣೆಗೆ ಅಪರ್ಣಾ ಎಂಬ ಮಹಿಳೆ ತಿಂಗಳಿಗೆ 25 ಸಾವಿರ ರೂಪಾಯಿ ದುಡಿಯುತ್ತಾಳೆ ಎಂದಿರಲಿ. 50-30-20 ನಿಯಮದ ಪ್ರಕಾರ 12,500 ರೂಪಾಯಿ ಅಗತ್ಯ ಖರ್ಚುಗಳಿಗೆ ಹೋಗಲಿ. ಅಂದ್ರೆ, ಮನೆ ಬಾಡಿಗೆ, ಆಹಾರ, ಬಟ್ಟೆಬರೆ ಇತ್ಯಾದಿಗಳಿಗೆ ಖರ್ಚು ಮಾಡಬೇಕು. ಶೇಕಡ 30 ಹಣ ಅಂದರೆ 7,500 ರೂಪಾಯಿಯನ್ನು ಬಯಕೆಗಳಿಗೆ ಅಂದರೆ ಶಾಪಿಂಗ್‌, ಸಿನಿಮಾ, ಡಿನ್ನಿಂಗ್‌ ಇತ್ಯಾದಿಗಳಿಗೆ ಖರ್ಚು ಮಾಡಬಹುದು. ಉಳಿದ ಶೇಕಡ 5 ಸಾವಿರ ರೂಪಾಯಿಯನ್ನು ಉಳಿತಾಯ ಮಾಡಬೇಕು. ಅಯ್ಯೋ ನನಗೆ ಕೇವಲ 25 ಸಾವಿರ ರೂ. ವೇತನ, ಯಾವುದಕ್ಕೂ ಸಾಲೋದಿಲ್ಲ ಎಂದುಕೊಳ್ಳುವುದಕ್ಕಿಂತ ಈ ರೀತಿ ಬಜೆಟ್‌ ಸಿದ್ಧಪಡಿಸಿಕೊಳ್ಳುವುದು ಒಳ್ಳೆಯದು. ಮುಂದಿನ ದಿನಗಳಲ್ಲಿ ನೀವು ಖಂಡಿತಾ ಒಳ್ಳೆಯ ವೇತನ ಪಡೆಯುವಿರಿ, ಅಲ್ಲಿಯವರೆಗೆ ತಾಳ್ಮೆ ಇರಲಿ. ಜತೆಗೆ, ಒಳ್ಳೆಯ ವೇತನ ಪಡೆಯುವ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತ ಇರಿ, ಇದಕ್ಕೆ ಬೇಕಾದ ಸ್ಕಿಲ್‌ಗಳನ್ನು ಕಲಿಯುತ್ತ ಇರಿ.

ಹೂಡಿಕೆ ಮಾಡಲು ಬಯಸುವವರಿಗೆ ಮ್ಯೂಚುವಲ್‌ ಫಂಡ್‌ ಎಐಪಿ(ಸಿಪ್‌), ಈಕ್ವಿಟಿ ಷೇರುಗಳು, ಪ್ರಾವಿಡೆಂಟ್‌ ಫಂಡ್‌ಗಳು, ಪೆನ್ಷನ್‌ ಸ್ಕೀಮ್‌ಗಳು, ಬಾಂಡ್‌ಗಳು ಲಭ್ಯ ಇವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಇಂತಹ ಆಯ್ಕೆಗಳನ್ನು ಪರಿಶೀಲಿಸಬಹುದು. ನಮ್ಮಲ್ಲಿರುವ ಉಳಿತಾಯ ಹಣವು ತುರ್ತು ಪರಿಸ್ಥಿತಿಯ ಸಮಯದಲ್ಲಿಯೂ ನೆರವಾಗುತ್ತದೆ. ಸಡನ್‌ ಆರೋಗ್ಯ ಕೆಟ್ಟರೆ ಯಾರೂ ನೆರವಿಗೆ ಬರೋದಿಲ್ಲ, ನಮ್ಮ ಉಳಿತಾಯ ಹಣವೇ ನಮ್ಮನ್ನು ಕಾಪಾಡುತ್ತದೆ.

50-30-20 ನಿಯಮ ಮಾಡಿಕೊಂಡ ಮಹಿಳೆಯರಿಗೆ ರಥಿ ಅವರು ಈ ಮುಂದಿನ ಸಲಹೆಗಳನ್ನು ನೀಡಿದ್ದಾರೆ.

  1. ಈ ರೀತಿ ಉಳಿತಾಯ ಮಾಡಿಕೊಳ್ಳಲು ಆರಂಭಿಸಿದ ಬಳಿಕ ನೀವು ಕಡಿಮೆ ಅಲ್ಪಾವಧಿಯ ಗುರಿಗಳು (1 ವರ್ಷಕ್ಕಿಂತ ಕಡಿಮೆ), ಅಲ್ಪಾವಧಿಯ ಗುರಿಗಳು (1-3 ವರ್ಷ) , ದೀರ್ಘಕಾಲದ ಗುರಿಗಳನ್ನು (3 ವರ್ಷಕ್ಕಿಂತ ಹೆಚ್ಚು) ಹಾಕಿಕೊಳ್ಳಬಹುದು.
  2. ನಿಮಗೆ ಎಷ್ಟು ಸಾಧ್ಯವೋ ಅಷ್ಟು ಉಳಿತಾಯ ಮಾಡಲು ಆರಂಭಿಸಿ. ಸಣ್ಣ ಉಳಿತಾಯ ಮತ್ತು ಸಣ್ಣ ಹೂಡಿಕೆಯಿಂದಲೇ ಆರಂಭಿಸಿ.
  3. ನಿಮ್ಮ ಆರು ತಿಂಗಳ ವೇತನಕ್ಕೆ ಸರಿಸಮಾನಾದ ತುರ್ತು ನಿಧಿ ಸಂಗ್ರಹಿಸಿ. ಹಣಕಾಸು ಬಿಕ್ಕಟ್ಟಿನ ಸಮಯದಲ್ಲಿ ಇದು ಸಹಾಯಕ್ಕೆ ಬರುತ್ತದೆ.
  4. ಎಲ್ಲಾ ಮೊಟ್ಟೆಯನ್ನು ಒಂದೇ ಬಾಸ್ಕೆಟ್‌ಗೆ ಹಾಕಬೇಡಿ. ಹೂಡಿಕೆ ಮಾಡುವಾಗ ವಿವಿಧ ಕ್ಷೇತ್ರ, ವಿಭಾಗಗಳಲ್ಲಿ ಹೂಡಿಕೆ ಮಾಡಬೇಡಿ. ಅಂದ್ರೆ ಪೂರ್ತಿ ಹಣವನ್ನು ಷೇರು ಪೇಟೆಗೆ ಸುರಿಯಬೇಡಿ. ಷೇರುಪೇಟೆ, ಮ್ಯೂಚುಯಲ್‌ ಫಂಡ್‌, ಚಿನ್ನ ಹೀಗೆ ವೈವಿಧ್ಯಮಯ ಹೂಡಿಕೆಗೆ ಆದ್ಯತೆ ನೀಡಿ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ