logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Mv Ganga Vilas: ಬೃಹತ್‌ ನದಿ ಹಡಗು ಗಂಗಾ ವಿಲಾಸ್‌ಗೆ ಚಾಲನೆ, ಬನ್ನಿ ವಿದೇಶಿಗರೇ, ಭಾರತದ ಕಂಪು ಅನ್ವೇಷಿಸಿ ಎಂದ ಪ್ರಧಾನಿ ನರೇಂದ್ರ ಮೋದಿ

MV Ganga Vilas: ಬೃಹತ್‌ ನದಿ ಹಡಗು ಗಂಗಾ ವಿಲಾಸ್‌ಗೆ ಚಾಲನೆ, ಬನ್ನಿ ವಿದೇಶಿಗರೇ, ಭಾರತದ ಕಂಪು ಅನ್ವೇಷಿಸಿ ಎಂದ ಪ್ರಧಾನಿ ನರೇಂದ್ರ ಮೋದಿ

Praveen Chandra B HT Kannada

Jan 13, 2023 11:51 AM IST

MV Ganga Vilas: ಬೃಹತ್‌ ನದಿ ಹಡಗು ಗಂಗಾ ವಿಲಾಸ್‌ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

    • Ganga Vilas: ಈ ಕ್ರೂಸ್‌ ಹಡಗಿನ ಮೂಲಕ ಭಾರತದ ಕಂಪು ಅನ್ವೇಷಿಸುವಂತೆ ಈ ಸಂದರ್ಭದಲ್ಲಿ ವಿದೇಶಿ ಪ್ರವಾಸಿಗರನ್ನು ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದಾರೆ.
MV Ganga Vilas: ಬೃಹತ್‌ ನದಿ ಹಡಗು ಗಂಗಾ ವಿಲಾಸ್‌ಗೆ ಚಾಲನೆ ನೀಡಿದ ಪ್ರಧಾನಿ ಮೋದಿ
MV Ganga Vilas: ಬೃಹತ್‌ ನದಿ ಹಡಗು ಗಂಗಾ ವಿಲಾಸ್‌ಗೆ ಚಾಲನೆ ನೀಡಿದ ಪ್ರಧಾನಿ ಮೋದಿ (HT_PRINT)

ವಾರಣಾಸಿ: ವಿಶ್ವದ ದೀರ್ಘ ನದಿ ಪ್ರಯಾಣ ಕ್ರೂಸ್‌ ಹಡಗೆಂದು ಖ್ಯಾತಿ ಪಡೆದಿರುವ ಗಂಗಾ ವಿಲಾಸ್‌ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದ 27 ನದಿ ವ್ಯವಸ್ಥೆಗಳಲ್ಲಿ ಸುಮಾರು 3,200 ಕಿ.ಮೀ. ಪ್ರಯಾಣ ಬೆಳೆಸುವ ಎಂವಿ ಗಂಗಾ ವಿಲಾಸ್‌ ದೇಶದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಜತೆಗೆ ಹೊಸ ಉದ್ಯೋಗ ಸೃಷ್ಟಿಗೂ ಕಾರಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಭಾರತದಲ್ಲಿ ನಿರ್ಮಿಸಿರುವ ಮೊದಲ ಬೃಹತ್‌ ನದಿ ಪ್ರಯಾಣದ ಕ್ರೂಸ್‌ ಹಡಗು ಇದಾಗಿದೆ. ಉತ್ತರ ಪ್ರದೇಶದ ವಾರಣಾಸಿಯಿಂದ ಬಾಂಗ್ಲಾದ ದಿಬ್ರುಗಡಕ್ಕೆ ಇದು ಅಸ್ಸಾಂ ಮುಖಾಂತರ ಪ್ರಯಾಣ ಬೆಳೆಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗಂಗಾ ನದಿಯಲ್ಲಿ ಕ್ರೂಸ್ ಸೇವೆಯ ಆರಂಭವು ಒಂದು ಹೆಗ್ಗುರುತಾಗಿದೆ ಮತ್ತು ಇದು ಭಾರತದಲ್ಲಿ ಪ್ರವಾಸೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಈ ಕ್ರೂಸ್‌ ಹಡಗಿನ ಮೂಲಕ ಭಾರತದ ಕಂಪು ಅನ್ವೇಷಿಸುವಂತೆ ಈ ಸಂದರ್ಭದಲ್ಲಿ ವಿದೇಶಿ ಪ್ರವಾಸಿಗರನ್ನು ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದಾರೆ.

ನೂತನ ನದಿ ಹಡಗು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ ಮತ್ತು ಹೊಸ ಉದ್ಯೋಗ ಸೃಷ್ಟಿಸಲಿದೆ ಎಂದು ಮೋದಿ ಹೇಳಿದರು.

ಭಾರತದ ವಿವಿಧ ಭಾಗಗಳಲ್ಲಿ ನದಿ ಕ್ರೂಸ್‌ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಃಏಳಿದ್ದಾರೆ.

ಸುಮಾರು 36 ಪ್ರಯಾಣಿಕರು ಹಾಯಾಗಿ ಮತ್ತು ಐಷಾರಾಮಿ ಸೌಕರ್ಯಗಳೊಂದಿಗೆ ಪ್ರಯಾಣಿಸಲು ಅನುವಾಗುವಂತೆ ಈ ಕ್ರೂಸ್‌ ಹಡಗು ನಿರ್ಮಿಸಲಾಗಿದೆ ಎಂದು ಸರಕಾರದವು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದು ಒಟ್ಟು 32 ಸ್ವಿಡ್ಜರ್‌ಲೆಂಡ್‌ನ ಪ್ರಯಾಣಿಕರು ಈ ಕ್ರೂಸ್‌ ಹಡಗಿನಲ್ಲಿ ಯಾನ ಬೆಳೆಸಿದ್ದಾರೆ.

ಈ ಕ್ರೂಸ್‌ ಹಡಗು ಸುದೀರ್ಘವಾದ 50 ದಿನಗಳ ಪ್ರಯಾಣ ಕೈಗೊಳ್ಳಲಿದೆ. ಯಾನದ ಸಂದರ್ಭದಲ್ಲಿ ಈ ಕ್ರೂಸ್‌ ಹಲವು ಹೆರಿಟೇಜ್‌ ತಾಣಗಳಲ್ಲಿ ನಿಂತು ಪ್ರಯಾಣ ಮುಂದುವರೆಸಲಿದೆ.

ವಾರಣಾಸಿಯಿಂದ ತನ್ನ ಪ್ರಯಾಣ ಆರಂಭಿಸಲಿದೆ. ಘಾಜಿಪುರ, ಬುಕ್ಸಾರ್‌ ಮತ್ತು ಪಾಟ್ನಾ ಮೂಲಕ ಕೋಲ್ಕತ್ತಾಕ್ಕೆ ಪ್ರಯಾಣ ಬೆಳೆಸಲಿದೆ. ಒಂದು ರಾತ್ರಿ ಬಾಂಗ್ಲಾದೇಶದ ನದಿಯಲ್ಲಿ ಉಳಿದು ಬಳಿಕ ಗುವಾಹಟಿ ಮೂಲಕ ದಿಬ್ರುಗಡ ತಲುಪಲಿದೆ.

ಸುಂದರ್‌ ಬನ, ಕಾಝಿರಂಗ ನ್ಯಾಷನಲ್‌ ಪಾರ್ಕ್‌ ಮುಂತಾದ ಕಡೆ ನಿಂತು ಪ್ರಯಾಣ ಬೆಳೆಸಲಿದೆ. ಹಡಗು ಜನಪ್ರಿಯ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಸುಂದರಬನ್ಸ್‌ ಡೆಲ್ಟಾ ಸೇರಿದಂತೆ ಇನ್ನು ಅನೇಕ ರಾಷ್ಟ್ರೀಯ ಉದ್ಯಾನವನಗಳು ಮತ್ತು ಶ್ರೀಮಂತ ಜೀವ ವೈವಿಧ್ಯತೆಗಳನ್ನು ಒಳಗೊಂಡ ಅಭಯಾರಣ್ಯಗಳ ಮೂಲಕ ಹಾದು ಹೋಗುತ್ತದೆ. ಈ ಗಂಗಾ ವಿಲಾಸದ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ