logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bjp Political Strategy: ಕೇಂದ್ರ ಸಂಪುಟ ಪುನಾರಚನೆ ಸಾಧ್ಯತೆ, ಕರ್ನಾಟಕದ ಕಟೀಲ್‌ ಕಥೆಯೇನು; ಗುಜರಾತ್‌ನ ಪಾಟೀಲ್‌ಗೆ ಸಚಿವ ಸ್ಥಾನದ ನಿರೀಕ್ಷೆ

BJP Political Strategy: ಕೇಂದ್ರ ಸಂಪುಟ ಪುನಾರಚನೆ ಸಾಧ್ಯತೆ, ಕರ್ನಾಟಕದ ಕಟೀಲ್‌ ಕಥೆಯೇನು; ಗುಜರಾತ್‌ನ ಪಾಟೀಲ್‌ಗೆ ಸಚಿವ ಸ್ಥಾನದ ನಿರೀಕ್ಷೆ

Umesh Kumar S HT Kannada

Jul 05, 2023 07:05 PM IST

ಕರ್ನಾಟಕ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಪ್ರಧಾನಿ ನರೇಂದ್ರ ಮೋದಿ

  • BJP Political Strategy: ನಾಲ್ಕು ರಾಜ್ಯಗಳ ರಾಜ್ಯಾಧ್ಯಕ್ಷರನ್ನು ಬದಲಾಯಿಸಿದೆ. ಈ ಸಂಘಟನಾತ್ಮಕ ಬದಲಾವಣೆಯು ಪಕ್ಷದ ರಾಜ್ಯವಾರು ತಂತ್ರಗಾರಿಕೆಯ ಸುಳಿವನ್ನು ನೀಡಿದೆ. ಈ ಬದಲಾವಣೆಯ ಸರಣಿಯಲ್ಲಿ ಇನ್ನೂ ಆರು ರಾಜ್ಯಗಳ ಅಧ್ಯಕ್ಷರು ಬದಲಾಗಲಿದ್ದಾರೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು.

ಕರ್ನಾಟಕ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಪ್ರಧಾನಿ ನರೇಂದ್ರ ಮೋದಿ
ಕರ್ನಾಟಕ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಪ್ರಧಾನಿ ನರೇಂದ್ರ ಮೋದಿ

ಲೋಕಸಭೆ ಚುನಾವಣೆ 2024 (Lok Sabha Election 2024) ಸಮೀಪಿಸುತ್ತಿರುವಂತೆ ಬಿಜೆಪಿ ತನ್ನ ರಾಜಕೀಯ ತಂತ್ರಗಾರಿಕೆ (BJP Political Strategy) ಗಳನ್ನು ಒಂದೊಂದಾಗಿ ಬದಲಾಯಿಸಲು ಮುಂದಾಗಿದೆ. ಮಂಗಳವಾರವಷ್ಟೆ ಪಂಜಾಬ್, ತೆಲಂಗಾಣ, ಜಾರ್ಖಂಡ್ ಸೇರಿದಂತೆ ನಾಲ್ಕು ರಾಜ್ಯಗಳ ರಾಜ್ಯಾಧ್ಯಕ್ಷರನ್ನು ಬದಲಾಯಿಸಿದೆ. ಈ ಸಂಘಟನಾತ್ಮಕ ಬದಲಾವಣೆಯು ಪಕ್ಷದ ರಾಜ್ಯವಾರು ತಂತ್ರಗಾರಿಕೆಯ ಸುಳಿವನ್ನು ನೀಡಿದೆ. ಈ ಬದಲಾವಣೆಯ ಸರಣಿಯಲ್ಲಿ ಇನ್ನೂ ಆರು ರಾಜ್ಯಗಳ ಅಧ್ಯಕ್ಷರು ಬದಲಾಗಲಿದ್ದಾರೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾಯಿಸಲು ಹೊರಟಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶ, ಗುಜರಾತ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ ಮತ್ತು ಕೇರಳ ಸೇರಿವೆ. ಈಗ ಹುದ್ದೆ ತೊರೆದ ಮತ್ತು ತೊರೆಯಲಿರುವ ಕೆಲವು ರಾಜ್ಯ ಅಧ್ಯಕ್ಷರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಿಆರ್ ಪಾಟೀಲ್ ವಿಚಾರದಲ್ಲಿ ಬಿಜೆಪಿ ಪ್ಲಾನ್ ಏನು

ಲೋಕಸಭೆ ಸದಸ್ಯರೂ ಆಗಿರುವ ಬಿಜೆಪಿ ಅಧ್ಯಕ್ಷ ಸಿ.ಆರ್.ಪಾಟೀಲ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿರುವ ಕಾರಣ ಅವರಿಗೆ ಮೋದಿ ಸರ್ಕಾರದಲ್ಲಿ ಸಚಿವ ಸಂಪುಟಕ್ಕೆ ಎಂಟ್ರಿ ಕೊಡುವುದು ತಾಂತ್ರಿಕವಾಗಿ ಸುಲಭವಾಗಿದೆ. 2014ರಲ್ಲಿ ನವಸಾರಿ ಕ್ಷೇತ್ರದಿಂದ ಸಿಆರ್ ಪಾಟೀಲ್ ಗೆದ್ದಿದ್ದರು. ನಂತರ 2019 ರಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು 6 ಲಕ್ಷ ಮತಗಳ ದಾಖಲೆಯ ಅಂತರದಿಂದ ಸೋಲಿಸಿದರು. ಸಚಿವ ಸ್ಥಾನದ ಬದಲು ಅವರಿಗೆ ಪಕ್ಷದಲ್ಲೇ ಮಹತ್ವದ ಹುದ್ದೆ ನೀಡಬಹುದು ಎಂಬ ಚರ್ಚೆಯೂ ನಡೆದಿದೆ. ಅವರು ಪ್ರಧಾನಿ ನರೇಂದ್ರ ಮೋದಿಯವರ ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಗುಜರಾತ್ ಬಿಜೆಪಿ ಅಧ್ಯಕ್ಷರಾಗಿರುವ ಅವರ ಅವಧಿ ಇದೇ ತಿಂಗಳು (ಜುಲೈ) ಕೊನೆಗೊಳ್ಳುತ್ತದೆ.

ಸಿ.ಆರ್.ಪಾಟೀಲ್ ಅವರು ಸಂಸ್ಥೆಯಲ್ಲಿ ಉತ್ತಮ ಕಾರ್ಯಾನುಭವ ಹೊಂದಿದ್ದು, ಗುಜರಾತ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಪಕ್ಷದ ನಾಯಕತ್ವವು ಇಡೀ ದೇಶದಲ್ಲಿ ಅವರ ಅನುಭವದ ಲಾಭವನ್ನು ಪಡೆಯಲು ಬಯಸುತ್ತದೆ.

ಮಧ್ಯಪ್ರದೇಶದಲ್ಲಿ ವಿಡಿ ಶರ್ಮಾ ಸ್ಥಾನ ತುಂಬುವವರಾರು

ಪಾಟೀಲ್ ಅವರಲ್ಲದೆ ಮಧ್ಯಪ್ರದೇಶದ ಬಿಜೆಪಿ ರಾಜ್ಯ ಅಧ್ಯಕ್ಷ ವಿ.ಡಿ.ಶರ್ಮಾ ಕೂಡ ಕೇಂದ್ರ ಸಚಿವರಾಗಬಹುದು. ಅವರು ರಾಜ್ಯದ ಖಜುರಾಹೊ ಲೋಕಸಭಾ ಕ್ಷೇತ್ರದ ಸಂಸದರು. ಮಧ್ಯಪ್ರದೇಶದಿಂದ ವಿಡಿ ಶರ್ಮಾ ಅವರನ್ನು ದೆಹಲಿಗೆ ಕರೆಸಲು ನಿರ್ಧರಿಸಲಾಗಿದೆ. ಆದರೆ ಅವರ ಉತ್ತರಾಧಿಕಾರಿಯ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಹಾಗಾಗಿಯೇ ರಾಜ್ಯಾಧ್ಯಕ್ಷರ ಬದಲಾವಣೆ ಘೋಷಣೆಗೆ ವಿಳಂಬವಾಗುತ್ತಿದೆ.

ವಿಡಿ ಶರ್ಮಾ ಬದಲಿಗೆ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಪಟೇಲ್, ಕೈಲಾಶ್ ವಿಜಯವರ್ಗಿಯ ಮತ್ತು ಸಂಸದ ಸುಮೇರ್ ಸಿಂಗ್ ಸೋಲಂಕಿ ಅವರ ಹೆಸರುಗಳು ಚರ್ಚೆಯಲ್ಲಿವೆ. ವಿಡಿ ಶರ್ಮಾ ಅವರ ಸ್ಥಾನಕ್ಕೆ ಯಾರು ಆಯ್ಕೆಯಾಗುತ್ತಾರೆ ಎಂಬ ಮಂಥನ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಾಸ್ತವವಾಗಿ ವಿಡಿ ಶರ್ಮಾ ಬ್ರಾಹ್ಮಣ ಸಮುದಾಯದಿಂದ ಬಂದವರು. ಅಂತಹ ಪರಿಸ್ಥಿತಿಯಲ್ಲಿ ಬಿಜೆಪಿಯು ಅವರ ಸ್ಥಾನದಲ್ಲಿ ಮೇಲ್ಜಾತಿಯ ನಾಯಕನಿಗೆ ಮಾತ್ರ ಆ ಹೊಣೆಗಾರಿಕೆಯನ್ನು ಹಸ್ತಾಂತರಿಸಬಹುದು. ಇದೇ ವೇಳೆ ಚಂಬಲ್ ವಿಭಾಗದಿಂದ ಬಂದಿರುವ ನರೇಂದ್ರ ಸಿಂಗ್ ತೋಮರ್‌ಗೆ ಅವಕಾಶ ಸಿಗಬಹುದು. ಈ ಕ್ಷೇತ್ರದಲ್ಲಿ ಬಿಜೆಪಿಯ ಸ್ಥಾನವೂ ದುರ್ಬಲ ಎನ್ನಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷವು ತೋಮರ್ ಮೂಲಕ ಒಂದಿಷ್ಟು ಸಮಬಲ ಸಾಧಿಸಲು ಬಯಸುವ ಸಾಧ್ಯತೆ ಇದೆ. ಆದರೆ, ಇಲ್ಲಿಯವರೆಗೂ ಯಾವುದೇ ಘೋಷಣೆ ಆಗಿಲ್ಲ.

ಕರ್ನಾಟಕದಲ್ಲಿ ಕಟೀಲ್‌ ಜಾಗಕ್ಕೆ ಯಾರು; ವಿಧಾನಮಂಡಲದಲ್ಲಿ ವಿಪಕ್ಷ ನಾಯಕರು ಯಾರು

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಪಕ್ಷಕ್ಕೆ ಪುನಶ್ಚೇತನ ನೀಡುವಂತಹ ರಾಜ್ಯ ಅಧ್ಯಕ್ಷರ ಆಯ್ಕೆ ಮತ್ತು ವಿಧಾನಮಂಡಲದಲ್ಲಿ ವಿಪಕ್ಷ ನಾಯಕರ ಆಯ್ಕೆ ವಿಳಂಬವಾಗಿದೆ. ಪಕ್ಷದೊಳಗೆ ಎಲ್ಲವೂ ಸರಿ ಇಲ್ಲ ಎಂಬುದನ್ನು ಇದು ತೋರಿಸುತ್ತಿದೆ.

ಪಕ್ಷದ ಕೇಂದ್ರ ನಾಯಕತ್ವದ ಪ್ರತಿನಿಧಿಗಳು ಬಂದು ವಿಪಕ್ಷ ನಾಯಕರ ಆಯ್ಕೆಗೆ ಶಾಸಕರು ಮತ್ತು ಪ್ರಮುಖರ ಅಭಿಪ್ರಾಯ ಸಂಗ್ರಹಿಸಿಕೊಂಡು ಹೋಗಿರುವುದಾಗಿ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಜುಲೈ 4ರಂದು ಹೇಳಿದ್ದಾರೆ. ವಿಧಾನಸಭೆಯ ವಿಪಕ್ಷ ನಾಯಕ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್‌ ಯತ್ನಾಳ್‌ ಹೆಸರು ಜೋರಾಗಿ ಕೇಳುತ್ತಿದೆ.

ಇನ್ನೊಂದೆಡೆ ಪಕ್ಷದ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಅವಧಿ ಮುಗಿದಿದ್ದು, ಹೊಸಬರ ನೇಮಕಕ್ಕೆ ಚಿಂತನ ಮಂಥನ ನಡೆದಿದೆ. ಹಲವು ಹಿರಿಯರ ಹೆಸರು ಕೇಳಿಬಂದಿದೆ. ಆದರೂ ಆಯ್ಕೆ ನಿಖರವಾಗಿಲ್ಲ. ಪಕ್ಷದ ಕಳಪೆ ಪ್ರದರ್ಶನದ ಕಾರಣ ನಳಿನ್‌ ಕುಮಾರ್‌ ಕಟೀಲ್‌ಗೆ ಹೊಸ ಹೊಣೆಗಾರಿಕೆ ನೀಡುವ ಸಾಧ್ಯತೆ ಕಡಿಮೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.

ಮೋದಿ ಸಚಿವ ಸಂಪುಟ ಬದಲಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ

ಸಂಘಟನೆಯಲ್ಲಿ ಪುನಾರಚನೆ ಜತೆಗೆ ಮೋದಿ ಸಚಿವ ಸಂಪುಟ ಬದಲಾವಣೆಯ ಚರ್ಚೆಯೂ ಜೋರಾಗಿದೆ. ಬಿಜೆಪಿಯು ಕಿಶನ್ ರೆಡ್ಡಿ ಅವರನ್ನು ತೆಲಂಗಾಣ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಇಲ್ಲಿಯವರೆಗೆ ಪ್ರವಾಸೋದ್ಯಮ ಸಚಿವರಾಗಿದ್ದರು. ಈಗ ಅವರು ಹುದ್ದೆ ಬಿಟ್ಟರೆ ಖಂಡಿತಾ ಮತ್ತೊಬ್ಬ ನಾಯಕರು ಕೇಂದ್ರ ಸಚಿವರಾಗಿ ಬರುತ್ತಾರೆ. ಇದಲ್ಲದೇ ಇನ್ನೂ ಕೆಲ ನಾಯಕರನ್ನು ಸಚಿವರನ್ನಾಗಿಸಿದರೆ, ಮತ್ತೆ ಕೆಲ ಸಚಿವರು ಪಕ್ಷ ಸಂಘಟನೆಗೆ ಮರಳಬಹುದು ಎನ್ನುತ್ತಿವೆ ಮೂಲಗಳು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ