logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Haryana: ಉರಿಯುತ್ತಿದ್ದ ರಾವಣನ ಪ್ರತಿಕೃತಿ ಬಿದ್ದು ಹಲವರಿಗೆ ಗಾಯ, ವಿಡಿಯೋ ನೋಡಿ

Haryana: ಉರಿಯುತ್ತಿದ್ದ ರಾವಣನ ಪ್ರತಿಕೃತಿ ಬಿದ್ದು ಹಲವರಿಗೆ ಗಾಯ, ವಿಡಿಯೋ ನೋಡಿ

HT Kannada Desk HT Kannada

Oct 05, 2022 08:59 PM IST

ಬಿದ್ದ ರಾವಣನ ಪ್ರತಿಕೃತಿ

    • ರಾವಣ ದಹನ ಕಾರ್ಯಕ್ರಮದ ವೇಳೆ ರಾವಣನ ಪ್ರತಿಕೃತಿ ಸ್ಥಳದಲ್ಲಿ ನೆರೆದಿದ್ದ ಜನರ ಮೇಲೆ ಬಿದ್ದಿದ್ದು, ಹಲವರಿಗೆ ಗಾಯಗಳಾಗಿವೆ.
ಬಿದ್ದ ರಾವಣನ ಪ್ರತಿಕೃತಿ
ಬಿದ್ದ ರಾವಣನ ಪ್ರತಿಕೃತಿ

ಹರಿಯಾಣದ ಯಮುನಾನಗರದಲ್ಲಿ ನಡೆಯುತ್ತಿದ್ದ ದಸರಾ ಸಂಭ್ರಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ರಾವಣ ದಹನ ಕಾರ್ಯಕ್ರಮದ ವೇಳೆ, ರಾವಣನ ಪ್ರತಿಕೃತಿ ಸ್ಥಳದಲ್ಲಿ ನೆರೆದಿದ್ದ ಜನರ ಮೇಲೆ ಬಿದ್ದಿದ್ದು, ಭಾರಿ ಅನಾಹುತ ತಪ್ಪಿದೆ.

ಟ್ರೆಂಡಿಂಗ್​ ಸುದ್ದಿ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

Closing Bell: ಮುಂಬೈ ಷೇರುಪೇಟೆಯ ವಾರಾಂತ್ಯದಲ್ಲಿ ಸೆನ್ಸೆಕ್ಸ್ 732 ಅಂಕಗಳ ಕುಸಿತ; ಈ ಪರಿ ಮಾರುಕಟ್ಟೆ ತಲ್ಲಣಕ್ಕೆ ಕಾರಣವೇನು

ತಿರುಮಲ ತಿರುಪತಿ ಜುಲೈ ತಿಂಗಳ ವಿಶೇಷ ಪ್ರವೇಶ ಟಿಕೆಟ್, ಟಿಟಿಡಿ ವೆಬ್‌ಸೈಟ್ ಮೂಲಕ 300 ರೂಪಾಯಿ ಟಿಕೆಟ್‌

ಚೆನ್ನೈನಲ್ಲಿ ವಂದೇ ಮೆಟ್ರೋ ರೈಲು ಅನಾವರಣ; ಭಾರತೀಯ ರೈಲ್ವೆ ಮಹತ್ವದ ಮೈಲಿಗಲ್ಲು, ಜುಲೈನಲ್ಲಿ ಮೊದಲ ಪ್ರಾಯೋಗಿಕ ಸಂಚಾರ

ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ. ವಿಡಿಯೋದಲ್ಲಿ ಕಾಣುವಂತೆ, ಉರಿಯುತ್ತಿದ್ದ ರಾವಣನ ಪ್ರತಿಕೃತಿ ಬಳಿ ಜನರು ಓಡಿ ಹೋಗಿದ್ದಾರೆ. ಈ ವೇಳೆ ಪ್ರತಿಕೃತಿ ಕೆಳಬಿದ್ದಿದೆ. ಅದರ ಬಳಿಯೇ ಇದ್ದ ಕೆಲಜನರ ಮೇಲೆ ಬಿದ್ದಿರುವ ದೃಶ್ಯ ಕಾಣುತ್ತಿದೆ. ಬಿದ್ದ ತಕ್ಷಣ ಪ್ರತಿಕೃತಿಯೊಂದಿಗೆ ಜೋಡಿಸಲಾಗಿದ್ದ ಪಟಾಕಿಗಳು ಕೂಡಾ ಸಿಡಿದಿದೆ.

ಹಿಂದೂ ಪುರಾಣಗಳ ಪ್ರಕಾರ, ಈ ದಿನದಂದು ಶ್ರೀರಾಮನು ರಾವಣನನ್ನು ಕೊಂದಿದ್ದರಿಂದ ದುಷ್ಟರ ವಿರುದ್ಧ ವಿಜಯ ಸಾಧಿಸಿದ ನೆನಪಿಗಾಗಿ ಪ್ರತಿ ವರ್ಷ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಹೆಚ್ಚಿನ ಕಡೆ ಇದರ ಭಾಗವಾಗಿ ರಾವಣ ದಹನ ನಡೆಯುತ್ತದೆ. ಉತ್ತರ ಭಾರತದಲ್ಲಿ ಈ ಸಂಭ್ರಮ ಜೋರಾಗಿರುತ್ತದೆ.

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ಬಳಿಕ ರಾವಣನ ಪ್ರತಿಕೃತಿಗಳನ್ನು ದಹಿಸುವ ಮೂಲಕ ದೇಶಾದ್ಯಂತ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ನಡುವೆ ಹರಿಯಾಣದಲ್ಲಿ ದುರ್ಘಟನೆ ಸಂಭವಿಸಿದ್ದು, ಹಲವರಿಗೆ ಗಾಯಗಳಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು