logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Jagannath Temple: ಹರಿದ ಜೀನ್ಸ್, ಸ್ಲೀವ್ ಲೆಸ್ ಡ್ರೆಸ್, ಹಾಫ್ ಪ್ಯಾಂಟ್ ಹಾಕ್ಕೊಂಡು ಹೋದರೆ ಜಗನ್ನಾಥ ದೇವಸ್ಥಾನಕ್ಕೆ ನೋ ಎಂಟ್ರಿ

Jagannath Temple: ಹರಿದ ಜೀನ್ಸ್, ಸ್ಲೀವ್ ಲೆಸ್ ಡ್ರೆಸ್, ಹಾಫ್ ಪ್ಯಾಂಟ್ ಹಾಕ್ಕೊಂಡು ಹೋದರೆ ಜಗನ್ನಾಥ ದೇವಸ್ಥಾನಕ್ಕೆ ನೋ ಎಂಟ್ರಿ

HT Kannada Desk HT Kannada

Oct 10, 2023 02:47 PM IST

ಒಡಿಶಾದ ಪುರಿ ಜಗನ್ನಾಥ ದೇವಸ್ಥಾನ

  • ದೇವಾಲಯದ ಘನತೆ ಮತ್ತು ಪಾವಿತ್ರ್ಯವನ್ನು ಕಾಪಾಡುವುದು ದೇವಸ್ಥಾನ ಆಡಳಿತ ಮಂಡಳಿಯ ಹೊಣೆಗಾರಿಕೆ. ದುರದೃಷ್ಟವಶಾತ್, ಕೆಲವರು ಇತರರ ಧಾರ್ಮಿಕ ಭಾವನೆಗಳ ಬಗ್ಗೆ ಕಾಳಜಿ ವಹಿಸದೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಕಂಡುಬಂದಿದೆ ಎಂದು ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ ಮುಖ್ಯಸ್ಥ ರಂಜನ್ ಕುಮಾರ್ ದಾಸ್ ಹೇಳಿದ್ದಾರೆ.

ಒಡಿಶಾದ ಪುರಿ ಜಗನ್ನಾಥ ದೇವಸ್ಥಾನ
ಒಡಿಶಾದ ಪುರಿ ಜಗನ್ನಾಥ ದೇವಸ್ಥಾನ (ANI)

ಭುವನೇಶ್ವರ: ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ (Puri Jagannath Temple in Odisha) ಮುಂದಿನ ವರ್ಷದಿಂದ ಭಕ್ತರಿಗೆ ವಸ್ತ್ರ ಸಂಹಿತೆ (Dress code for devotees) ಜಾರಿಯಾಗಲಿದೆ. ಈ ವಸ್ತ್ರ ಸಂಹಿತೆಯ ನಿಯಮವು ಮುಂದಿನ ವರ್ಷ ಅಂದರೆ 2024ರ ಜನವರಿ 1ರಿಂದ ಚಾಲ್ತಿಗೆ ಬರಲಿದೆ ಎಂದು ಪಿಟಿಐ ವರದಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ದೇವಾಲಯದೊಳಗೆ ಡ್ರೆಸ್ ಕೋಡ್ ಅನ್ನು 2024ರ ಜನವರಿ 1ರಿಂದ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ದೇವಾಲಯದ 'ಸಿಂಹ ದ್ವಾರ'ದಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ಮತ್ತು ದೇವಾಲಯದೊಳಗಿನ ಪ್ರತೀಹಾರಿ ಸೇವಕರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ ಮುಖ್ಯಸ್ಥ ರಂಜನ್ ಕುಮಾರ್ ದಾಸ್ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಜಗನ್ನಾಥ ದೇವಾಲಯದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ ಯಾಕೆ

ಕೆಲವರು "ಅಸಭ್ಯ" ಉಡುಪು ಧರಿಸಿಕೊಂಡು ದೇವಾಲಯ ಪ್ರವೇಶಿಸಿರುವುದನ್ನು ಗಮನಿಸಿದ ಬಳಿಕ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸುವ ನಿರ್ಧಾರವನ್ನು ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿ ತೆಗೆದುಕೊಂಡಿತು.

"ದೇಗುಲದ ಘನತೆ ಮತ್ತು ಪಾವಿತ್ರ್ಯವನ್ನು ಕಾಪಾಡುವುದು ನಮ್ಮ ಹೊಣೆಗಾರಿಕೆಯಾಗಿದೆ. ದುರದೃಷ್ಟವಶಾತ್, ಕೆಲವರು ಇತರರ ಧಾರ್ಮಿಕ ಭಾವನೆಗಳ ಬಗ್ಗೆ ಕಾಳಜಿ ವಹಿಸದೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಕಂಡುಬಂದಿದೆ" ಎಂದು ರಂಜನ್ ಕುಮಾರ್ ದಾಸ್ ಹೇಳಿದ್ದಾರೆ.

ಸಮುದ್ರ ತೀರದಲ್ಲೋ, ಉದ್ಯಾನವನದಲ್ಲೋ ಅಡ್ಡಾಡುವಾಗ ಧರಿಸುವಂತಹ ಹರಿದ ಜೀನ್ಸ್ ಪ್ಯಾಂಟ್, ಸ್ಲೀವ್ ಲೆಸ್ ಡ್ರೆಸ್, ಹಾಫ್ ಪ್ಯಾಂಟ್ ಧರಿಸಿದವರು ಕೆಲವರು ದೇವಸ್ಥಾನದೊಳಗೆ ಬರುತ್ತಿರುವುದು ಕಂಡುಬಂದಿದೆ. ದೇವಸ್ಥಾನ ದೇವರ ವಾಸಸ್ಥಾನವೇ ಹೊರತು ಮನರಂಜನಾ ಸ್ಥಳವಲ್ಲ ಎಂದು ರಂಜನ್ ಕುಮಾರ್ ದಾಸ್ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

ಜಗನ್ನಾಥ ದೇವಾಲಯದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ

ಯಾವ ರೀತಿಯ ಉಡುಪು ಧರಿಸಿದವರಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂಬಿತ್ಯಾದಿ ವಿಚಾರಗಳನ್ನು ಆಡಳಿತ ಮಂಡಳಿ ಶೀಘ್ರವೇ ನಿರ್ಧರಿಸಲಿದೆ.

ದೇವಸ್ಥಾನಕ್ಕೆ ಆಗಮಿಸುವ ಭಕ್ತರಲ್ಲಿ ವಸ್ತ್ರ ಸಂಹಿತೆಯ ಕುರಿತು ಜಾಗೃತಿ ಮೂಡಿಸುವ ಕೆಲಸ ಇಂದು (ಅ.10) ಶುರುವಾಗುತ್ತಿದೆ ಎಂದು ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ ಮುಖ್ಯಸ್ಥ ರಂಜನ್ ಕುಮಾರ್ ದಾಸ್ ವಿವರಿಸಿದ್ದಾರೆ.

ಜಗನ್ನಾಥ ದೇವಾಲಯ ಪ್ರವೇಶಿಸುವ ಭಕ್ತರಿಗೆ 2024ರ ಜನವರಿ 1ರಿಂದ ವಸ್ತ್ರ ಸಂಹಿತೆಗೆ ಜಾರಿ

ಪುರಿಯ ಜಗನ್ನಾಥ ದೇವಾಲಯವನ್ನು ಪ್ರವೇಶಿಸುವ ಭಕ್ತರು 2024ರ ಜನವರಿ 1ರಿಂದ ಹಾಫ್ ಪ್ಯಾಂಟ್, ಹರಿದ ಜೀನ್ಸ್, ಸ್ಕರ್ಟ್‌, ಸ್ಲೀವ್‌ಲೆಸ್ ಉಡುಪುಗಳನ್ನು ಧರಿಸುವಂತೆ ಇಲ್ಲ. ಸಭ್ಯ ಉಡುಪುಗಳನ್ನು ಧರಿಸಿ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯಬಹುದು ಎಂದು ದಾಸ್ ತಿಳಿಸಿದ್ದಾರೆ.

ದೇವಸ್ಥಾನಗಳಲ್ಲಿ ಈ ರೀತಿ ವಸ್ತ್ರ ಸಂಹಿತೆ ಕೆಲವು ಕಡೆ ಕಡ್ಡಾಯ ಚಾಲ್ತಿಯಲ್ಲಿದೆ. ಇತ್ತೀಚೆಗೆ ಜುಲೈನಲ್ಲಿ ಜೈಪುರ ಜಿಲ್ಲೆಯ ಜಾರ್ಖಂಡ್ ಮಹಾದೇವ ದೇವಾಲಯದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆಯನ್ನು ಪರಿಚಯಿಸಲಾಗಿದೆ. ಹರಿದ ಜೀನ್ಸ್, ಶಾರ್ಟ್ಸ್, ಫ್ರಾಕ್‌ಗಳು, ನೈಟ್ ಸೂಟ್‌ ಮತ್ತು ಮಿನಿ ಸ್ಕರ್ಟ್‌ಗಳನ್ನು ಧರಿಸಿ ದೇವಸ್ಥಾನ ಪ್ರವೇಶಿಸಬೇಡಿ ಎಂದು ಭಕ್ತರಲ್ಲಿ ಜಾಗೃತಿ ಮೂಡಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ