logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Revanth Reddy Profile: ಕಾಂಗ್ರೆಸ್ ಸೇರಿದ ಅತಿ ಕಡಿಮೆ ಅವಧಿಯಲ್ಲಿ ಸಿಎಂ ಸ್ಥಾನಕೇರಿದ ರೇವಂತ್ ರೆಡ್ಡಿ ಯಾರು; ರಾಜಕೀಯ ಹಿನ್ನಲೆ ಹೀಗಿದೆ

Revanth Reddy Profile: ಕಾಂಗ್ರೆಸ್ ಸೇರಿದ ಅತಿ ಕಡಿಮೆ ಅವಧಿಯಲ್ಲಿ ಸಿಎಂ ಸ್ಥಾನಕೇರಿದ ರೇವಂತ್ ರೆಡ್ಡಿ ಯಾರು; ರಾಜಕೀಯ ಹಿನ್ನಲೆ ಹೀಗಿದೆ

Raghavendra M Y HT Kannada

Dec 05, 2023 09:57 PM IST

ತೆಲಂಗಾಣ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ರೇವಂತ್ ರೆಡ್ಡಿ

  • ತೆಲಂಗಾಣ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ರೇವಂತ್ ರೆಡ್ಡಿ ಯಾರು, ಅವರ ರಾಜಕೀಯ ಹಾದಿ ಹೇಗಿತ್ತು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ತೆಲಂಗಾಣ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ರೇವಂತ್ ರೆಡ್ಡಿ
ತೆಲಂಗಾಣ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ರೇವಂತ್ ರೆಡ್ಡಿ

ಹೈದರಾಬಾದ್: ತೆಲಂಗಾಣದಲ್ಲಿ ತುಂಬಾ ಟ್ರೆಂಡಿಂಗ್‌ನಲ್ಲಿರುವ ಏಕೈಕ ಹೆಸರು ರೇವಂತ್ ರೆಡ್ಡಿ ಅವರದ್ದು. ಆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಯೂತ್ ಐಕಾನ್ ಎನಿಸಿರುವ ರೆಡ್ಡಿ ವಿರೋಧಿಗಳನ್ನು ಮಣಿಸಲು ಬಿಡುವ ಒಂದೊಂದು ಬಾಣವೂ ಅವರಿಗೆ ಈ ಬಾರಿಯ ಚುನಾವಣೆಲ್ಲಿ ಮತಗಳಾಗಿ ಪರಿವರ್ತನೆಗೊಂಡಿರುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ತಮ್ಮ 55ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಕ್ಕೆ 1 ದಿನ ಬಾಕಿ ಇರುವಂತೆಯೇ ರೆಡ್ಡಿಯವರು ತೆಲಂಗಾಣ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ರೇವಂತ್ ರೆಡ್ಡಿ ತೆಲಂಗಾಣದ ಸಿಎಂ ಎಂದು ಇವತ್ತು (ಡಿಸೆಂಬರ್ 5, ಮಂಗಳವಾರ) ಘೋಷಣೆ ಮಾಡಿದ್ದು, ನಾಡಿದ್ದು (ಡಿಸೆಂಬರ್ 7, ಗುರುವಾರ) ರಾಜ್ಯದ 3ನೇ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. ರೆಡ್ಡಿ ಅವರು ನವೆಂಬರ್ 8 ರಂದು 55ನೇ ವರ್ಷಕ್ಕೆ ಕಾಲಿಡಲಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಅಲ್ಪಾವಧಿಯಲ್ಲೇ ಕೋಟಿ ಕೋಟಿ ತೆಲುಗು ಜನರ ಮನ ಗೆದ್ದು ಉನ್ನತ ಸ್ಥಾನಕ್ಕೇರಿರುವ ರೇವಂತ್ ರೆಡ್ಡಿ ಅವರು ನಡೆದು ಬಂದ ಹಾದಿ ಕಲ್ಲು-ಮುಳ್ಳುಗಳಿಂದ ಕೂಡಿತ್ತು. ಅವರು ಸಿಎಂ ಸ್ಥಾನಕ್ಕೆ ಬರಲು ಎದುರಿಸಿದ ಸವಾಲುಗಳು ಅಷ್ಟಿಷ್ಟಲ್ಲ. ಹೋರಾಟ, ಜೈಲು ಶಿಕ್ಷೆ ಹೀಗೆ ಹತ್ತಾರು ಸಮಸ್ಯೆಗಳನ್ನು ಮೆಟ್ಟಿ ನಿಂತಿದ್ದಾರೆ. ಅಂತಿಮವಾಗಿ ರೇವಂತ್ ರೆಡ್ಡಿಯವರು ತೆಲಂಗಾಣದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧವಾಗಿದ್ದಾರೆ. ಅವರ ನಡೆದು ಬಂದ ಹಾದಿಯನ್ನ ನೋಡೋಣ.

ರೇವಂತ್ ರೆಡ್ಡಿ ಅವರು ಪೂರ್ಣ ಹೆಸರು ಅನುಮುಲಾ ರೇವಂತ್ ರೆಡ್ಡಿ. ಇವರು 1969ರ ನವೆಂಬರ್ 8 ರಂದು ಅನುಮುಲಾ ನರಸಿಂಹ ರೆಡ್ಡಿ ಮತ್ತು ರಾಮ ಚಂದ್ರಮ್ಮ ದಂಪತಿಗೆ ಜನಿಸುತ್ತಾರೆ. ಇವರ ಹುಟ್ಟೂರು ಕೊಂಡ ರೆಡ್ಡಿ ಪಲ್ಲಿ. ಈ ಗ್ರಾಹ ವಣಗೂರು ಪಂಚಾಯಿತಿ, ನಾಗರ್ ಕರ್ನೂಲ್‌ ಜಿಲ್ಲೆಯಲ್ಲಿದೆ. ರೇವಂತ್ ರೆಡ್ಡಿಯವರು ಎವಿ ಕಾಲೇಜಿನಲ್ಲಿ ಪದವಿಯನ್ನು ಮುಗಿಸಿದ್ದಾರೆ. ಇವರ ಪತ್ನಿ ಹೆಸರು ಗೀತಾ ರೆಡ್ಡಿ, ಪುತ್ರಿ ನೈಮಿಷಾ ರೆಡ್ಡಿ ಇದ್ದಾರೆ.

ರೇವಂತ್ ರೆಡ್ಡಿ ರಾಜಕೀಯ ಪ್ರವೇಶವೇ ರೋಚಕ

2007ರಲ್ಲಿ ಮೆಹಬೂಬ ನಗರ ಜಿಲ್ಲೆಯಲ್ಲಿ ನಡೆದಿದ್ದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಅಂದಿನ ಬಲಿಷ್ಠ ಕಾಂಗ್ರೆಸ್, ಟಿಡಿಪಿ, ಟಿಆರ್‌ಎಸ್ ಹಾಗೂ ಬಿಜೆಪಿಯಂತ ಪಕ್ಷಗಳ ಅಭ್ಯರ್ಥಿಗಳನ್ನೇ ಮಣಿಸಿ ಗೆದ್ದು ಬರುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸುತ್ತಾರೆ. ಅಷ್ಟೇ ಅಲ್ಲ ಎಲ್ಲರೂ ತಮ್ಮತ್ತ ತಿರುಗಿ ನೋಡುವಂತೆ ಮಾಡುತ್ತಾರೆ.

ಆ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರೇವಂತ್ ರೆಡ್ಡಿ ಎಎಂಎಲ್‌ಸಿ ಆಗಿ ಗೆಲುವನ್ನು ಕಾಣುತ್ತಾರೆ. ಅಂದಿನ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಅವರು ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡುತ್ತಾರೆ. ಆದರೆ ಈ ವೈಎಸ್‌ಆರ್ ಅವರ ಆಹ್ವಾನವನ್ನು ನಯವಾಗಿ ತರಿಸ್ಕರಿಸಿ ಚಂದ್ರಬಾಬು ನೇತೃತ್ವದ ಟಿಡಿಪಿ ಸೇರುತ್ತಾರೆ.

ಘಟಾನುಘಟಿಗಳಿಗೆ ಸೋಲುಣಿಸಿದ್ದ ಅಚ್ಚರಿ ಮೂಡಿಸಿದ್ದ ಯುವ ನಾಯಕ

2009ರಲ್ಲಿ ಕೊಡಂಗಲ್ ನಿಂದ ತೆಲುಗು ದೇಶಂ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರೇವಂತ್ ರೆಡ್ಡಿ ಅವರು ಕಾಂಗ್ರೆಸ್‌ ನಾಯಕ ಹಿರಿಯ ನಾಯಕ ರಾವುಲಪಲ್ಲಿ ಗುರ್ನಾಥ್ ರೆಡ್ಡಿ ಅವರನ್ನೇ ಮಣಿಸಿ ಕೈ ಪಕ್ಷಕ್ಕೆ ದೊಡ್ಡ ಅಚ್ಚರಿ ಮೂಡಿಸುತ್ತಾರೆ. ಅಲ್ಲದೆ, ವಿಧಾನಸಭೆಯನ್ನು ಪ್ರವೇಶಿಸುತ್ತಾರೆ.

ನಂತರ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯಾದ ಬಳಿಕ ಅಂದರೆ 2014ರಲ್ಲಿ ಟಿಡಿಪಿ ಶಾಸಕರಾಗಿ ಗೆಲುವು ಕಂಡಿದ್ದ ರೇವತ್ ರೆಡ್ಡಿ ಅವರು 2017ರ ವರೆಗೆ ಟಿಡಿಪಿ ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರಿದಿದ್ದರು. 2017ರ ಅಕ್ಟೋಬರ್‌ನಲ್ಲಿ ಟಿಡಿಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುತ್ತಾರೆ. ಕೈ ಪಕ್ಷವನ್ನು ಸೇರಿದ ಮೂರು ವರ್ಷಗಳ ಕಾಲ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಾ ಹೋರಾಟ ಮಾಡುತ್ತಾರೆ.

ರೇವಂತ್ ಅವರಲ್ಲಿನ ಪ್ರತಿಭೆ ಮತ್ತು ಜನರಲ್ಲಿ ಗಳಿಸಿದ್ದ ಮನ್ನಣೆಯನ್ನು ಅರಿತುಕೊಂಡ ಕಾಂಗ್ರೆಸ್ ಇವರಿಗೆ ನಾಯಕತ್ವದ ಜೊತೆಗೆ ಪ್ರಮುಖ ಜವಾಬ್ದಾರಿಗಳನ್ನು ವಹಿಸಿತು. 2018ರ ವಿಧಾನಸಭಾ ಚುನಾವಣೆಯಲ್ಲಿ ಕೊಡಂಗಲ್‌ನಿಂದ ಸ್ಪರ್ಧಿಸಿ ಸೋಲು ಕಾಣುತ್ತಾರೆ. ನಂತರ ಲೋಕಸಭೆ ಚುನಾವಣೆಯಲ್ಲಿ ಮಲ್ಕಾಜ್‌ಗಿರಿಯಿಂದ ಸಂಸದರಾಗಿ ಆಯ್ಕೆಯಾಗಿ ಬರುತ್ತಾರೆ.

2021ರ ಜೂನ್ 26 ರಂದು ಕಾಂಗ್ರೆಸ್ ಹೈಕಮಾಂಡ್ ರೇವಂತ್ ರೆಡ್ಡಿ ಅವರನ್ನು ತೆಲಂಗಾಣದ ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನು ನೇಮಕ ಮಾಡುತ್ತದೆ. 2021ರ ಜುಲೈ 7 ರಂದು ಟಿಪಿಸಿಸಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಇದಕ್ಕೆ ತೆಲಂಗಾಣ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಾಣಿಕ್ಯ ಠಾಕೂರ್ ಕೂಡ ಸಾಕ್ಷಿಯಾಗುತ್ತಾರೆ.

ಮಾಧ್ಯಮಗಳಿಗೆ ಶಪಥ ಮಾಡಿ ಗೆದ್ದ ಯೂತ್ ಐಕಾನ್

ರೇವಂತ್ ರೆಡ್ಡಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ ಬಳಿಕ ರಾಜ್ಯ ಪ್ರವಾಸ ಮಾಡುತ್ತಾರೆ. ಪಕ್ಷದ ಎಲ್ಲಾ ನಾಯಕರನ್ನು ಒಗ್ಗೂಟಿಸುವ ಕೆಲಸ ಮಾಡುತ್ತಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಹೈಕಮಾಂಡ್ ಹಾಗೂ ಪಕ್ಕದ ಕರ್ನಾಟಕ ಕಾಂಗ್ರೆಸ್ ನಾಯಕರ ನೆರವಿನಿಂದ ಅಬ್ಬರ ಪ್ರಚಾರವನ್ನು ಮಾಡುತ್ತಾರೆ. ಸಭೆ, ಸಮಾರಂಭಗಳು, ರಾಲಿಯಗಳ ಆಯೋಜಿಸುತ್ತಾರೆ. ಸಿಎಂ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಸರ್ಕಾರ ತಪ್ಪುಗಳನ್ನು ಜನರಿಗೆ ಮನ ಮುಟ್ಟುವಂತೆ ವಿವರಿಸುತ್ತಾರೆ. ಕಾಂಗ್ರೆಸ್ ಪಕ್ಷಕ್ಕೊಂದು ಅವಕಾಶ ಕೊಟ್ಟು ನೋಡಿ ಅಂತ ಮತದಾನರ ಮನವೊಲಿಸುತ್ತಾರೆ. ಅಂತಿಮವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ 64 ಸೀಟುಗಳನ್ನು ಗೆದ್ದೇ ಬಿಡುತ್ತದೆ.

ಮಲ್ಲು ಭಟ್ಟಿ ವಿಕ್ರಮಾರ್ಕ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಹೈಕಮಾಂಡ್ ಮಟ್ಟದ ನಾಯಕರ ಸತತ ಸಭೆ, ಚರ್ಚೆಗಳ ನಂತರ ಸಿಎಲ್‌ಪಿ ನಾಯಕನಾಗಿ ರೇವಂತ್ ರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿತ್ತು, ಇವರೇ ತೆಲಂಗಾಣದ ಮುಖ್ಯಮಂತ್ರಿ ಎಂದು ಕೈಕಮಾಂಡ್ ಘೋಷಣೆ ಮಾಡಿದೆ. ಆ ಮೂಲಕ ರೇವಂತ್ ರೆಡ್ಡಿ ಅವರು ಸದ್ಯದ ಮಟ್ಟಿಗೆ ಎದುರಾಗಿದ್ದ ಸವಾಲುಗಳನ್ನು ಎದುರಿಸಿ ಗುರುವಾರ (ಡಿಸೆಂಬರ್) ತೆಲಂಗಾಣದ 3ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆ ಬಳಿಕ ಎದುರಾಗುವ ಸವಾಲುಗಳನ್ನು ಹೇಗೆ ಶಮನ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ