logo
ಕನ್ನಡ ಸುದ್ದಿ  /  Nation And-world  /  Soldier's Leg Amputated After Tte Pushes Him From Moving Train In Bareilly

TTE pushes soldier from train: ಚಲಿಸುತ್ತಿದ್ದ ರೈಲಿನಿಂದ ಯೋಧನನ್ನು ತಳ್ಳಿದ ಟಿಟಿಇ: ಎರಡೂ ಕಾಲು ಕಳೆದುಕೊಂಡ ಸೈನಿಕ

HT Kannada Desk HT Kannada

Nov 17, 2022 06:51 PM IST

ಸಾಂದರ್ಭಿಕ ಚಿತ್ರ

    • ಚಲಿಸುತ್ತಿದ್ದ ರೈಲಿನಿಂದ ಯೋಧನನ್ನು ಟಿಕೆಟ್​ ಪರೀಕ್ಷಕ (ಟಿಟಿಇ) ತಳ್ಳಿದ್ದು, ಪರಿಣಾಮ ಯೋಧನ ಎರಡೂ ಕಾಲುಗಳು ಕಟ್​ ಆಗಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬರೇಲಿ (ಉತ್ತರ ಪ್ರದೇಶ): ಚಲಿಸುತ್ತಿದ್ದ ರೈಲಿನಿಂದ ಯೋಧನನ್ನು ಟಿಕೆಟ್​ ಪರೀಕ್ಷಕ (ಟಿಟಿಇ) ತಳ್ಳಿದ್ದು, ಪರಿಣಾಮ ಯೋಧನ ಎರಡೂ ಕಾಲುಗಳು ಕಟ್​ ಆಗಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಟ್ರೆಂಡಿಂಗ್​ ಸುದ್ದಿ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

Closing Bell: ಮುಂಬೈ ಷೇರುಪೇಟೆಯ ವಾರಾಂತ್ಯದಲ್ಲಿ ಸೆನ್ಸೆಕ್ಸ್ 732 ಅಂಕಗಳ ಕುಸಿತ; ಈ ಪರಿ ಮಾರುಕಟ್ಟೆ ತಲ್ಲಣಕ್ಕೆ ಕಾರಣವೇನು

ತಿರುಮಲ ತಿರುಪತಿ ಜುಲೈ ತಿಂಗಳ ವಿಶೇಷ ಪ್ರವೇಶ ಟಿಕೆಟ್, ಟಿಟಿಡಿ ವೆಬ್‌ಸೈಟ್ ಮೂಲಕ 300 ರೂಪಾಯಿ ಟಿಕೆಟ್‌

ಚೆನ್ನೈನಲ್ಲಿ ವಂದೇ ಮೆಟ್ರೋ ರೈಲು ಅನಾವರಣ; ಭಾರತೀಯ ರೈಲ್ವೆ ಮಹತ್ವದ ಮೈಲಿಗಲ್ಲು, ಜುಲೈನಲ್ಲಿ ಮೊದಲ ಪ್ರಾಯೋಗಿಕ ಸಂಚಾರ

ಘಟನೆಯ ನಂತರ, ಯೋಧನ ಸಹ ಸೈನಿಕರು ಟಿಟಿಇಯನ್ನು ಥಳಿಸಿ ರೈಲನ್ನು ನಿಲ್ಲಿಸಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ ಯೋಧನು ಬರೇಲಿ ರೈಲು ನಿಲ್ದಾಣದಲ್ಲಿ ದಿಬ್ರುಗಢದಿಂದ ನವದೆಹಲಿಗೆ ಹೊರಟಿದ್ದ ರಾಜಧಾನಿ ಎಕ್ಸ್‌ಪ್ರೆಸ್ ಅನ್ನು ಹತ್ತಲು ಬಂದಿದ್ದಾರೆ. ಚಲಿಸುತ್ತಿದ್ದ ರೈಲನ್ನೇ ಹತ್ತಲು ಯತ್ನಿಸಿದ್ದಾರೆ. ಈ ವೇಳೆ ಟಿಟಿಇ ಯೋಧನನ್ನು ಹತ್ತಲು ಬಿಡದೆ ದೂಕಿದ್ದಾರೆ.

ಗಾಯಗೊಂಡ ಯೋಧನನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಟಿಇ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಜಿಆರ್‌ಪಿ ಇನ್ಸ್‌ಪೆಕ್ಟರ್, ಅಜಿತ್ ಪ್ರತಾಪ್ ಸಿಂಗ್ ಹೇಳಿದ್ದಾರೆ.

ಟೆಸ್ಲಾ ಕಾರಿನ ಬ್ರೇಕ್​ ಫೇಲ್ಯೂರ್.. ಶಾಲಾ ಬಾಲಕಿ ಸೇರಿ ಇಬ್ಬರ ಜೀವ ಬಲಿ

ಟೆಸ್ಲಾ ಕಾರಿನ ಬ್ರೇಕ್​ ಫೇಲ್ಯೂರ್ ಆಗಿ ನಿಯಂತ್ರಣ ಕಳೆದುಕೊಂಡ ಪರಿಣಾಮ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿರುವ ಘಟನೆ ಚೀನಾದಲ್ಲಿ ನಡೆದಿದೆ. ಕಾರು ಚಾಲಕ ಕಾರನ್ನು ಪಾರ್ಕ್​ ಮಾಡಲು ಮುಂದಾಗುವ ವೇಳೆ ಬ್ರೇಕ್​ ಫೇಲ್ಯೂರ್ ಆಗಿದೆ. ಹೆಚ್ಚಿನ ವೇಗದಲ್ಲಿ ಕಾರು ಟೇಕ್ ಆಫ್ ಆಗಿ ರಸ್ತೆಯಲ್ಲಿ ಸಿಕ್ಕಸಿಕ್ಕ ವಾಹನಗಳಿಗೆ ಗುದ್ದಿಕೊಂಡು ಹೋಗಿದೆ. ಘಟನೆಯಲ್ಲಿ ಶಾಲಾ ಬಾಲಕಿ ಸೇರಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.

ಟಿಎಂಸಿ ಸಂಸದನ ಕಾರು ಡಿಕ್ಕಿ ಹೊಡೆದು 4 ವರ್ಷದ ಮಗು ಸಾವು

ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಸಂಸದನ ಕಾರು ಡಿಕ್ಕಿ ಹೊಡೆದು ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ನಲ್ಲಿ ನಡೆದಿದೆ. ಮುರ್ಷಿದಾಬಾದ್ ಸಂಸದ ಅಬು ತಾಹೆರ್ ಖಾನ್ ಅವರ ಕಾರು ಇದಾಗಿದ್ದು, ಅಪಘಾತವಾದ ತಕ್ಷಣವೇ ಬಾಲಕನನ್ನು ಅಬು ತಾಹೆರ್ ಖಾನ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಇತ್ತ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು