logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ssc Recruitment 2022: Sscನಲ್ಲಿ ಹಿಂದಿ ಭಾಷಾಂತರಕಾರ ಹುದ್ದೆಗಳು, ನೇಮಕಾತಿ ಮಾಹಿತಿ

SSC Recruitment 2022: SSCನಲ್ಲಿ ಹಿಂದಿ ಭಾಷಾಂತರಕಾರ ಹುದ್ದೆಗಳು, ನೇಮಕಾತಿ ಮಾಹಿತಿ

HT Kannada Desk HT Kannada

Jul 21, 2022 05:46 PM IST

ಹಿಂದಿ ಭಾಷಾಂತರಕಾರ ಹುದ್ದೆಗಳ ನೇಮಕಾತಿಗಾಗಿ ಎಸ್ ಎಸ್ ಸಿ ಅರ್ಜಿಗಳನ್ನು ಆಹ್ವಾನಿಸಿದೆ. (ಫೋಟೋ-ಸಂಗ್ರಹ)

  • SSC Recruitment 2022: ಹಿಂದಿ ಭಾಷಾಂತರಕಾರ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಜುಲೈ 20ರಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ಹಿಂದಿ ಭಾಷಾಂತರಕಾರ ಹುದ್ದೆಗಳ ನೇಮಕಾತಿಗಾಗಿ ಎಸ್ ಎಸ್ ಸಿ ಅರ್ಜಿಗಳನ್ನು ಆಹ್ವಾನಿಸಿದೆ. (ಫೋಟೋ-ಸಂಗ್ರಹ)
ಹಿಂದಿ ಭಾಷಾಂತರಕಾರ ಹುದ್ದೆಗಳ ನೇಮಕಾತಿಗಾಗಿ ಎಸ್ ಎಸ್ ಸಿ ಅರ್ಜಿಗಳನ್ನು ಆಹ್ವಾನಿಸಿದೆ. (ಫೋಟೋ-ಸಂಗ್ರಹ)

ಬೆಂಗಳೂರು: ಸ್ಟಾಫ್ ಸೆಲೆಕ್ಷನ್ ಕಮಿಷನ್ -SSC ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಜೂನಿಯರ್ ಹಿಂದಿ ಭಾಷಾಂತರಕಾರ, ಕಿರಿಯ ಭಾಷಾಂತರಕಾರ, ಹಿರಿಯ ಹಿಂದಿ ಭಾಷಾಂತರಕಾರರನ್ನು ನೇಮಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಿದೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಜುಲೈ 20ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 4. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ssc.nic.in ನಲ್ಲಿ ಅರ್ಜಿ ಸಲ್ಲಿಸಬಹುದು. ಅಪ್ಲಿಕೇಶನ್ ತಿದ್ದುಪಡಿ ವಿಂಡೋ ಜುಲೈ 6 ರಂದು ಸಕ್ರಿಯವಾಗಿರುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ 2022ರ ಅಕ್ಟೋಬರ್ ನಲ್ಲಿ ನಡೆಯಲಿದೆ.

SSC ನೇಮಕಾತಿ 2022 ಅರ್ಜಿ ಶುಲ್ಕ: ಅರ್ಜಿ ಶುಲ್ಕ 100 ರೂಪಾಯಿ ಇದೆ. ಮಹಿಳಾ ಅಭ್ಯರ್ಥಿಗಳು, ಮೀಸಲಾತಿಗೆ ಅರ್ಹರಾಗಿರುವ / SC/ST/ESM/PwD ಗೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ವಯಸ್ಸಿನ ಮಿತಿ: ಅಭ್ಯರ್ಥಿಗಳು 2022ರ ಜನವರಿ 1ಕ್ಕೆ ಅನ್ವಯವಾಗುವಂತೆ 18 ರಿಂದ 30 ವರ್ಷ ವಯಸ್ಸಿನವರಾಗಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?: ಅಭ್ಯರ್ಥಿಗಳು SSC ಅಧಿಕೃತ ವೆಬ್‌ಸೈಟ್ ssc.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ವಿದ್ಯುತ್‌ ಪರಿವೀಕ್ಷಣಾಲಯದಲ್ಲಿ ಖಾಲಿ ಹುದ್ದೆಗಳ ಭರ್ತಿ: ಕರ್ನಾಟಕ ಲೋಕ ಸೇವಾ ಆಯೋಗವು ಮುಖ್ಯ ವಿದ್ಯುತ್‌ ಪರಿವೀಕ್ಷಣಾಲಯದಲ್ಲಿ ಖಾಲಿ ಇರುವ 30 ಸಹಾಯಕ ವಿದ್ಯುತ್‌ ಪರಿವೀಕ್ಷಕರು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ, ಅರ್ಜಿ ಸಲ್ಲಿಕೆ ಪ್ರಕ್ರಿಯೆ, ವಿದ್ಯಾರ್ಹತೆ, ವೇತನ ಸೇರಿದಂತೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 25 ಜುಲೈ 2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23 ಆಗಸ್ಟ್‌ 2022

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 24 ಆಗಸ್ಟ್‌ 2022

ಅರ್ಜಿ ಸಲ್ಲಿಕೆ ಹೇಗೆ?:

ಕೆಪಿಎಸ್‌ಸಿ ಗ್ರೂಪ್‌ ಸಿ ಉಳಿಕೆ ಮೂಲವೃಂದದ ಈ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್‌ನಲ್ಲಿ ಭಾವಚಿತ್ರ, ಸಹಿ, ವಯೋಮಿತಿ, ವಿದ್ಯಾರ್ಹತೆಗೆ ಸಂಬಂಧಪಟ್ಟ ದಾಖಲೆಗಳನ್ನು ಅಪ್ಲೋಡ್‌ ಮಾಡಿದ ನಂತರ ಅರ್ಜಿ ಶುಲ್ಕವನ್ನು ಯಾವುದೇ ಕಾಮನ್‌ ಸರ್ವೀಸ್‌ ಸೆಂಟರ್‌ಗಳಲ್ಲಿ, ನೆಟ್‌ಬ್ಯಾಂಕಿಂಗ್‌, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.

ಶುಲ್ಕ ಪಾವತಿಸಿದೆ, ದಾಖಲೆ, ಭಾವಚಿತ್ರ, ಸಹಿಯನ್ನು ಅಪ್ಲೋಡ್‌ ಮಾಡದಿರುವ, ಅಸ್ಪಷ್ಟ ದಾಖಲೆಗಳನ್ನು ಅಪ್ಲೋಡ್‌ ಮಾಡಿರುವ ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ಕೆಪಿಎಸ್‌ಸಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಅರ್ಜಿ ಶುಲ್ಕ ಎಷ್ಟು?: ಕೆಪಿಎಸ್‌ಸಿಯ ಈ ಗ್ರೂಪ್‌ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ಅಭ್ಯರ್ಥಿಗಳು 600 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಒಬಿಸಿ ಅಭ್ಯರ್ಥಿಗಳು 300 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಮಾಜಿ ಸೈನಿಕ ಅಭ್ಯರ್ಥಿಗಳಾಗಿದ್ದಲ್ಲಿ ೫೦ ರೂ. ಅರ್ಜಿ ಶುಲ್ಕ ಪಾವತಿಸಿದರೆ ಸಾಕು. ಎಸ್‌ಸಿ/ಎಸ್‌ಟಿ, ಪ್ರವರ್ಗ ೧ ಮತ್ತು ಒಬಿಸಿ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಆದರೆ, ಎಲ್ಲಾ ಅಭ್ಯರ್ಥಿಗಳು ಪ್ರೊಸೆಸಿಂಗ್‌ ಶುಲ್ಕ ೩೫ ರೂಪಾಯಿಯನ್ನು ಕಡ್ಡಾಯವಾಗಿ ಪಾವತಿಸಬೇಕು.

ವಿದ್ಯಾರ್ಹತೆ ಏನು?: ಮುಖ್ಯ ವಿದ್ಯುತ್‌ ಪರಿವೀಕ್ಷಣಾಲಯದಲ್ಲಿ (ಚೀಫ್‌ ಎಲೆಕ್ಟ್ರಿಕಲ್‌ ಇನ್‌ಸ್ಪೆಕ್ಟ್ರೊರೇಟ್‌)ನಲ್ಲಿ ಸಹಾಯಕ ವಿದ್ಯುತ್‌ ಪರಿವೀಕ್ಷಕರು (ಅಸಿಸ್ಟೆಂಟ್‌ ಎಲೆಕ್ಟ್ರಿಕಲ್‌ ಇನ್‌ಸ್ಪೆಕ್ಟರ್‌) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಅಥವಾ ಎಲೆಕ್ಟ್ರಿಕಲ್‌ ಆಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ