logo
ಕನ್ನಡ ಸುದ್ದಿ  /  Nation And-world  /  Ssc Stenographer Recruitment Exam Pattern Syllabus English General Knowledge Exam Centers In States And Other Details

SSC Recruitment: ಎಸ್‌ಎಸ್‌ಸಿ ಸ್ಟೆನೊಗ್ರಾಫರ್‌ ಹುದ್ದೆಗಳಿಗೆ ಪರೀಕ್ಷೆ ಹೇಗಿರುತ್ತದೆ? ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳು ಯಾವುವು?

Praveen Chandra B HT Kannada

Aug 22, 2022 06:05 PM IST

SSC Recruitment: ಎಸ್‌ಎಸ್‌ಸಿ ಸ್ಟೆನೊಗ್ರಾಫರ್‌ ಹುದ್ದೆಗಳಿಗೆ ಪರೀಕ್ಷೆ ಹೇಗಿರುತ್ತದೆ?

    • ಎಸ್‌ಎಸ್‌ಸಿಯು ದೇಶದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸ್ಟನೊಗ್ರಾಫರ್‌ ಆಯ್ಕೆ ಪರೀಕ್ಷೆ ನಡೆಸಲಿದೆ. ಕರ್ನಾಟಕದಲ್ಲಿ ವಿವಿಧೆಡೆ ಈ ಪರೀಕ್ಷೆ ಆಯೋಜಿಸಲಿದೆ. ಕರ್ನಾಟಕ ಅಭ್ಯರ್ಥಿಗಳಿಗೆ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ ಪರೀಕ್ಷಾ ಕೇಂದ್ರಗಳಲ್ಲಿ ಆಯ್ಕೆ ಪರೀಕ್ಷೆ ನಡೆಸಲಿದೆ.
SSC Recruitment: ಎಸ್‌ಎಸ್‌ಸಿ ಸ್ಟೆನೊಗ್ರಾಫರ್‌ ಹುದ್ದೆಗಳಿಗೆ ಪರೀಕ್ಷೆ ಹೇಗಿರುತ್ತದೆ?
SSC Recruitment: ಎಸ್‌ಎಸ್‌ಸಿ ಸ್ಟೆನೊಗ್ರಾಫರ್‌ ಹುದ್ದೆಗಳಿಗೆ ಪರೀಕ್ಷೆ ಹೇಗಿರುತ್ತದೆ?

SSC Recruitment: ಎಸ್‌ಎಸ್‌ಸಿ ಸ್ಟೆನೊಗ್ರಾಫರ್‌ ಹುದ್ದೆಗಳಿಗೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆರಂಭಿಸಿದ್ದಾರೆ. ಸ್ಟೆನೊಗ್ರಾಫರ್‌ ಹುದ್ದೆಗಳಿಗೆ ಪಿಯುಸಿ ಅಥವಾ ಹನ್ನೆರಡನೇ ತರಗತಿ ವಿದ್ಯಾರ್ಹತೆಯಾಗಿರುವುದು ಮತ್ತು ಸ್ಟೆನೊಗ್ರಾಫಿ ಕಲಿತವರಿಗೆ ಉದ್ಯೋಗ ಪಡೆಯಲು ಒಂದು ಒಳ್ಳೆಯ ಅವಕಾಶವಾಗಿರುವುದರಿಂದ ದೇಶಾದ್ಯಂತ ಈ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಇವಿಎಂ ವಿವಿಪ್ಯಾಟ್ ಪ್ರಕರಣ; ಅಡ್ಡ ಪರಿಶೀಲನೆ ಮಾಡಿ ಎಂದವರ ವಿರುದ್ಧ ಸುಪ್ರೀಂ ಕೋರ್ಟ್ ಗರಂ, ಎಲ್ಲಾ ಅರ್ಜಿಗಳು ವಜಾ

ರಸ್ತೆ ಮೇಲೆ ಕಾಣಸಿಕ್ತು ತಲೆಕೆಳಗಾದ ಕಾರು, ಅಪಘಾತವಾಗಿಲ್ಲ, ಪಲ್ಟಿಯಾಗಿಲ್ಲ, ಕುತೂಹಲ ಕೆರಳಿಸಿದೆ ಈ ವೈರಲ್ ವಿಡಿಯೋ

Chicken or Egg: ಕೋಳಿ ಮೊದಲಾ ಅಥವಾ ಮೊಟ್ಟೆ ಮೊದಲಾ; ದಶಕಗಳ ಪ್ರಶ್ನೆಗೆ ಕೊನೆಗೂ ಸಿಕ್ಕಿದೆ ಉತ್ತರ

ಕರ್ನಾಟಕದ ಅಭ್ಯರ್ಥಿಗಳಿಗೂ ಎಸ್‌ಎಸ್‌ಸಿ ಸ್ಟೆನೊಗ್ರಾಫರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇದು ಉತ್ತಮ ಅವಕಾಶವಾಗಿದೆ. ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿಕೊಂಡು ಅರ್ಜಿ ಸಲ್ಲಿಸಿದರೆ ನೀವು ಪರೀಕ್ಷೆಗೆ ಆಯ್ಕೆಯಾಗಬಹುದು. ಕಂಪ್ಯೂಟರ್‌ ಆಧರಿತ ಪರೀಕ್ಷೆಯು ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ. ನಿಮ್ಮ ಹತ್ತಿರದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆಯಿರಿ.

ಎಸ್‌ಎಸ್‌ಸಿ ನೇಮಕ- ರಾಜ್ಯದಲ್ಲಿ ಪರೀಕ್ಷಾ ಕೇಂದ್ರ ಎಲ್ಲೆಲ್ಲಿದೆ?

ಎಸ್‌ಎಸ್‌ಸಿಯು ದೇಶದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸ್ಟನೊಗ್ರಾಫರ್‌ ಆಯ್ಕೆ ಪರೀಕ್ಷೆ ನಡೆಸಲಿದೆ. ಕರ್ನಾಟಕದಲ್ಲಿ ವಿವಿಧೆಡೆ ಈ ಪರೀಕ್ಷೆ ಆಯೋಜಿಸಲಿದೆ. ಕರ್ನಾಟಕ ಅಭ್ಯರ್ಥಿಗಳಿಗೆ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ ಪರೀಕ್ಷಾ ಕೇಂದ್ರಗಳಲ್ಲಿ ಆಯ್ಕೆ ಪರೀಕ್ಷೆ ನಡೆಸಲಿದೆ. ಪರೀಕ್ಷಾ ಕೇಂದ್ರಗಳ ಕೋಡ್‌ ಈ ಮುಂದಿನಂತೆ ಇದೆ. Belagavi (9002), Bengaluru (9001), Hubballi (9011), Kalaburagi (Gulbarga) (9005), Mangaluru (9008), Mysuru (9009), Shivamogga (9010), Udupi (9012).

ಕರ್ನಾಟಕದ ಎಸ್‌ಎಸ್‌ಸಿ ಪ್ರಾದೇಶಿಕನಿರ್ದೇಶಕರ ವಿಳಾಸ: Regional Director (KKR), Staff Selection Commission, 1st Floor, “E” Wing, Kendriya Sadan, Koramangala, Bengaluru, Karnataka-560034.

ಎಸ್‌ಎಸ್‌ಸಿ ನೇಮಕ: ಪರೀಕ್ಷೆ ಸಿಲೆಬಸ್‌ ಹೇಗಿದೆ?

ಎಸ್‌ಎಸ್‌ಸಿ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಂಪ್ಯೂಟರ್‌ ಆಧರಿತ ಪರೀಕ್ಷೆ ನಡೆಸಲಾಗುತ್ತದೆ. ಒಟ್ಟು 200 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.

೧. ಜನರಲ್‌ ಇಂಟಲಿಜೆನ್ಸ್‌ ಮತ್ತು ರೀಸನಿಂಗ್‌ ಪ್ರಶ್ನೆಪತ್ರಿಕೆಯಲ್ಲಿ 50 ಪ್ರಶ್ನೆಗಳು ಇರುತ್ತವೆ. ತಲಾ ಒಂದೊಂದರಂತೆ ಒಟ್ಟು 50 ಅಂಕಗಳನ್ನು ನಿಗದಿಗೊಳಿಸಲಾಗಿದೆ.

೨. ಜನರಲ್‌ ಅವರ್ನೆಸ್‌ ಅಥವಾ ಸಾಮಾನ್ಯ ಜ್ಞಾನ ಪ್ರಶ್ನೆಪತ್ರಿಕೆಯಲ್ಲಿಯೂ 50 ಅಂಕಗಳ 50 ಪ್ರಶ್ನೆಗಳು ಇರಲಿವೆ.

೩. ಇಂಗ್ಲಿಷ್‌ ಭಾಷೆ ಮತ್ತು ಕಾಂಪ್ರಹೆನ್ಷನ್‌ ಪ್ರಶ್ನೆಪತ್ರಿಕೆಯಲ್ಲಿ 100 ಅಂಕಗಳ 100 ಪ್ರಶ್ನೆಗಳು ಇರಲಿವೆ.

ಒಟ್ಟು ಎರಡು ಗಂಟೆಗಳ ಅವಧಿಯಲ್ಲಿ ಪರೀಕ್ಷೆ ಬರೆಯಬೇಕು. ಪ್ರಶ್ನೆಪತ್ರಿಕೆಗಳು ಬಹುಆಯ್ಕೆ ಆಬ್ಜೆಕ್ಟಿವ್‌ ಟೈಪ್‌ ಮಾದರಿಯಲ್ಲಿ ಇರುತ್ತದೆ. ಪ್ರತಿ ತಪ್ಪು ಉತ್ತರಗಳಿಗೂ 0.25 ನೆಗೆಟಿವ್‌ ಅಂಕಗಳನ್ನು ಕಳೆಯಲಾಗುತ್ತದೆ. ಹೀಗಾಗಿ ಇನ್ನೂರು ಪ್ರಶ್ನೆಗಳಿವೆ ಎಂದು ತಪ್ಪುತಪ್ಪಾಗಿ ಟಿಕ್‌ ಮಾಡುತ್ತ ಹೋಗಬೇಡಿ. ಗಮನವಿಟ್ಟು ಪ್ರಶ್ನೆಪತ್ರಿಕೆಯನ್ನು ಓದಿ, ಅರ್ಥ ಮಾಡಿಕೊಂಡು ಉತ್ತರ ನೀಡಲು ಪ್ರಯತ್ನಿಸಿ.

ಜನರಲ್‌ ಇಂಟಲಿಜೆನ್ಸ್‌ ಮತ್ತು ರೀಸನಿಂಗ್‌ ಪ್ರಶ್ನೆಗಳು ಹೇಗಿರಲಿವೆ?

ವರ್ಬಲ್‌ ಮತ್ತು ನಾನ್‌ ವರ್ಬಲ್‌ ಪ್ರಶ್ನೆಗಳು ಇರಲಿವೆ. analogies, similarities and differences, space visualization, problem solving, analysis, judgment, decision making, visual memory, discriminating observation, relationship

concepts, arithmetical reasoning, verbal and figure classification, arithmetical number series, non-verbal series ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ಪ್ರಶ್ನೆಗಳು ಇರಲಿವೆ. ಈ ವಿಷಯಗಳ ಜ್ಞಾನ ಉತ್ತಮಪಡಿಸಿಕೊಂಡು ಪರೀಕ್ಷೆ ಬರೆಯಿರಿ.

ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆ ಹೇಗಿರಲಿದೆ?

ಅಭ್ಯರ್ಥಿಯ ಸಾಮಾನ್ಯ ಜ್ಞಾನವನ್ನು ಒರೆಗೆ ಹಚ್ಚುವ ಪ್ರಶ್ನೆಪತ್ರಿಕೆ ಇದಾಗಿದೆ. ಇತ್ತೀಚಿನ ಸುದ್ದಿಗಳು, ಪ್ರಮುಖ ಘಟನೆಗಳು, ಸಾಮಾನ್ಯ ಜ್ಞಾನ ವಿಷಯಗಳ ಕುರಿತು ಅಭ್ಯಾಸ ಮಾಡಿಕೊಂಡು ಪರೀಕ್ಷೆಗೆ ಹೋಗಿ. ಕ್ರೀಡೆ, ಇತಿಹಾಸ, ಸಂಸ್ಕೃತಿ, ಭೌಗೋಳಿಕತೆ, ಆರ್ಥಿಕತೆ, ಭಾರತೀಯ ಸಂವಿಧಾನ, ವೈಜ್ಞಾನಿಕ ಸಂಶೋಧನೆಗಳು ಇತ್ಯಾದಿ ವಿಷಯಗಳ ಪ್ರಶ್ನೆಗಳು ಹೆಚ್ಚಿರಲಿವೆ.

ಇಂಗ್ಲಿಷ್‌ ಭಾಷೆ ಮತ್ತು ಕಾಂಪ್ರಹೆನ್ಷನ್‌ ಪ್ರಶ್ನೆಪತ್ರಿಕೆ ಹೇಗಿರಲಿದೆ?

ಇಂಗ್ಲಿಷ್‌ ಭಾಷಾ ಜ್ಞಾನ, ವ್ಯಾಕರಣ ತಿಳಿದಿರುವುವರು ಈ ಪರೀಕ್ಷೆಯನ್ನು ಉತ್ತಮವಾಗಿ ಮಾಡಬಹುದು. ಪದಸಂಪತ್ತು, ವ್ಯಾಕರಣ, ವಾಕ್ಯ ರಚನೆ, ಸಮಾನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು ಮತ್ತು ಅದರ ಸರಿಯಾದ ಬಳಕೆ ಇತ್ಯಾದಿಗಳ ಮೇಲೆ ಪ್ರಶ್ನೆಗಳು ಇರಲಿವೆ. ಹತ್ತನೇ ತರಗತಿ ಅಥವಾ ಪಿಯುಸಿವರೆಗಿನ ಇಂಗ್ಲಿಷ್‌ ಪಠ್ಯ ಪುಸ್ತಕವನ್ನು ಚೆನ್ನಾಗಿ ಓದಿದರೂ ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು