logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Nobel Award 2022: ಸ್ವಾಂಟೆ ಪಾಬೊಗೆ ನೋಬೆಲ್‌ ಪ್ರಶಸ್ತಿ, ಅಪ್ಪನಂತೆ ಮಗನಿಗೂ ನೋಬೆಲ್‌, ಸ್ವಿಡನ್‌ನ ಈ ವಿಜ್ಞಾನಿಯ ಬಗ್ಗೆ ನಿಮಗಷ್ಟು ಗೊತ್ತು

Nobel Award 2022: ಸ್ವಾಂಟೆ ಪಾಬೊಗೆ ನೋಬೆಲ್‌ ಪ್ರಶಸ್ತಿ, ಅಪ್ಪನಂತೆ ಮಗನಿಗೂ ನೋಬೆಲ್‌, ಸ್ವಿಡನ್‌ನ ಈ ವಿಜ್ಞಾನಿಯ ಬಗ್ಗೆ ನಿಮಗಷ್ಟು ಗೊತ್ತು

Praveen Chandra B HT Kannada

Oct 03, 2022 04:27 PM IST

Nobel Award 2022: ಸ್ವಾಂಟೆ ಪಾಬೊಗೆ ನೊಬೆಲ್‌ ಪ್ರಶಸ್ತಿ, ಅಪ್ಪನಂತೆ ಮಗನಿಗೂ ನೋಬೆಲ್‌

    • ವಿಜ್ಞಾನಿ ಸ್ವಾಂಟೆ ಪಾಬೊ (Scientist Svante Paabo) ಅವರು ಈ ಬಾರಿಯ ಮೆಡಿಸಿನ್‌ ವಿಭಾಗದ ನೊಬೆಲ್‌ ಪ್ರಶಸ್ತಿ (2022 Nobel Prize)ಗೆ ಭಾಜನರಾಗಿದ್ದಾರೆ. ಕೆಲವು ದಶಕದ ಹಿಂದೆ ಇವರ ತಂದೆಗೂ ನೊಬೆಲ್‌ ಪ್ರಶಸ್ತಿ ದೊರಕಿತ್ತು ಎಂಬ ಸಂಗತಿ ನಿಮಗೆ ಗೊತ್ತೆ?
Nobel Award 2022: ಸ್ವಾಂಟೆ ಪಾಬೊಗೆ ನೊಬೆಲ್‌ ಪ್ರಶಸ್ತಿ, ಅಪ್ಪನಂತೆ ಮಗನಿಗೂ ನೋಬೆಲ್‌
Nobel Award 2022: ಸ್ವಾಂಟೆ ಪಾಬೊಗೆ ನೊಬೆಲ್‌ ಪ್ರಶಸ್ತಿ, ಅಪ್ಪನಂತೆ ಮಗನಿಗೂ ನೋಬೆಲ್‌ (AFP)

ಸ್ಟಾಕ್‌ಹೋಮ್‌: ವಿಜ್ಞಾನಿ ಸ್ವಾಂಟೆ ಪಾಬೊ (Scientist Svante Paabo) ಅವರು ಈ ಬಾರಿಯ ಮೆಡಿಸಿನ್‌ ವಿಭಾಗದ ನೊಬೆಲ್‌ ಪ್ರಶಸ್ತಿ (2022 Nobel Prize)ಗೆ ಭಾಜನರಾಗಿದ್ದಾರೆ. ಮಾನವ ವಿಕಾಸದ ವಂಶವಾಹಿ ಮತ್ತು ಅಳಿವಿನಂಚಿನಲ್ಲಿರುವ ಹೋಮಿನಿನ್‌ಗಳ ಕುರಿತಾದ ಸಂಶೋಧನೆಗೆ ಶರೀರಶಾಸ್ತ್ರ/ವೈದ್ಯಕೀಯ ನೊಬೆಲ್‌ ಅನ್ನು ಇವರಿಗೆ ನೀಡಲಾಗಿದೆ ಎಂದು ನೊಬೆಲ್‌ ಪ್ರಶಸ್ತಿ ಸಂಸ್ಥೆ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

Closing Bell: ಮುಂಬೈ ಷೇರುಪೇಟೆಯ ವಾರಾಂತ್ಯದಲ್ಲಿ ಸೆನ್ಸೆಕ್ಸ್ 732 ಅಂಕಗಳ ಕುಸಿತ; ಈ ಪರಿ ಮಾರುಕಟ್ಟೆ ತಲ್ಲಣಕ್ಕೆ ಕಾರಣವೇನು

ತಿರುಮಲ ತಿರುಪತಿ ಜುಲೈ ತಿಂಗಳ ವಿಶೇಷ ಪ್ರವೇಶ ಟಿಕೆಟ್, ಟಿಟಿಡಿ ವೆಬ್‌ಸೈಟ್ ಮೂಲಕ 300 ರೂಪಾಯಿ ಟಿಕೆಟ್‌

ಚೆನ್ನೈನಲ್ಲಿ ವಂದೇ ಮೆಟ್ರೋ ರೈಲು ಅನಾವರಣ; ಭಾರತೀಯ ರೈಲ್ವೆ ಮಹತ್ವದ ಮೈಲಿಗಲ್ಲು, ಜುಲೈನಲ್ಲಿ ಮೊದಲ ಪ್ರಾಯೋಗಿಕ ಸಂಚಾರ

ನೊಬೆಲ್‌ ಪ್ರಶಸ್ತಿಯು ಜಗತ್ತಿನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ. ಇದನ್ನು ಸ್ವೀಡನ್‌ನ ಕರೊಲಿನ್ಸಕ ಇನ್‌ಸ್ಟಿಟ್ಯೂಟ್‌ ಪ್ರಧಾನ ಮಾಡುರತ್ತದೆ. ಈ ಪ್ರಶಸ್ತಿಯು 10 ದಶಲಕ್ಷ ಸ್ವೀಡಿಸ್‌ ಕ್ರೌನ್ಸ್‌ (900,357 ಡಾಲರ್‌) ಬಹುಮಾನ ಮೊತ್ತವನ್ನು ಹೊಂದಿದೆ. ಅಂದಹಾಗೆ, ಈಗ ನೀಡುತ್ತಿರುವುದು ಈ ವರ್ಷದ ಮೊದಲ ಪ್ರಶಸ್ತಿಯಾಗಿದೆ.

ಯಾರು ಸ್ವಾಂಟೆ ಪಾಬೊ? (svante paabo profile)

ನೊಬೆಲ್‌ ಪ್ರಶಸ್ತಿಗೆ ಭಾಜನರಾಗಿರುವ ಸ್ವಾಂಟೆ ಪಾಬೊ ಅವರು ಸ್ವೀಡನ್‌ನ ಜೆನೆಟಿಸ್ಟ್‌. ಇವರು 1955ರ ಏಪ್ರಿಲ್‌ 20ರಂದು ಜನಿಸಿದರು. ಪಾಲೆಜೆನೆಟಿಕ್ಸ್‌ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ಇವರು ನಿಯೆಂಡರ್ಥಲ್‌ ಜಿನೋಮ್‌ ಬಗ್ಗೆ ಕೆಲಸ ಮಾಡಿದ್ದಾರೆ. ಮ್ಯಾಕ್ಸ್‌ ಪ್ಲಾನ್ಸ್ಕ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇವಲ್ಯೂಟಿನರಿ ಆಂಥ್ರಪಾಲಜಿಯ ಜೆನೆಟಿಕ್ಸ್‌ ವಿಭಾಗದ ನಿರ್ದೇಶಕರಾಗಿದ್ದಾರೆ. ಈ ಸಂಸ್ಥೆ ಜರ್ಮನಿಯಲ್ಲಿದೆ. ಜಪಾನ್‌ನ ಒಕಿನವ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಆಂಡ್‌ ಟೆಕ್ನಾಲಜಿಯ ಪ್ರೊಫೆಸರ್‌ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಪಾಬೊ ಅವರು ಸ್ಟಾಕ್‌ಹೋಮ್‌ನಲ್ಲಿ ಜನಿಸಿದರು. ಇವರ ತಂದೆ ಸುನೆ ಬೆರ್ಮ್‌ಸ್ಟ್ರೋಮ್‌ ಅವರು ಬಯೊಕೆಮಿಸ್ಟ್‌. ವಿಶೇಷವೆಂದರೆ, ಇವರ ತಂದೆಗೂ 1982ರಲ್ಲಿ ನೊಬೆಲ್‌ ಪ್ರಶಸ್ತಿ ಪಡೆದಿತ್ತು. ಅವರು ಆ ಸಮಯದಲ್ಲಿ ಮೆಡಿಸಿನ್‌ ವಿಭಾಗದ ನೊಬೆಲ್‌ ಅನ್ನು ಬೆಂಗಟ್‌ ಸುಮೆಸ್ಲೆನ್‌ ಮತ್ತು ಜಾನ್‌ ಆರ್‌ ವಾನೆ ಜತೆ ಹಂಚಿಕೊಂಡಿದ್ದರು. ಇದೀಗ ಅವರ ಮಗನಿಗೂ ನೊಬೆಲ್‌ ಪ್ರಶಸ್ತಿ ದೊರಕಿದೆ.

ಪಾಬೊ ಅವರು ಉಪಶಾಲಾ ಯುನಿವರ್ಸಿಟಿಯಲ್ಲಿ ಪಿಎಚ್‌.ಡಿ ಪದವಿ ಪಡೆದಿದ್ದಾರೆ.

ನೊಬೆಲ್‌ ಪ್ರಶಸ್ತಿಯ ಕುರಿತು

ನೊಬೆಲ್‌ ಪ್ರಶಸ್ತಿಯನ್ನು ಸ್ವಿಡನ್‌ನ ಕೈಗಾರಿಕೋದ್ಯಮಿ ಆಲ್‌ಫ್ರೆಡ್‌ ನೋಬೆಲ್‌ ಅವರು ಆರಂಭಿಸಿದರು. ಅವರು ಡೈನಾಮೈಟ್‌ನ ಅನ್ವೇಷಕರು. 1901ರಲ್ಲಿ ಮೊದಲ ಬಾರಿಗೆ ನೊಬೆಲ್‌ ಪ್ರಶಸ್ತಿ ನೀಡಲಾಯಿತು. ನೋಬೆಲ್‌ ಅವರು ಮರಣ ಹೊಂದಿದ ಐದು ವರ್ಷಗಳ ತರುವಾಯ ಮೊದಲ ನೊಬೆಲ್‌ ಪ್ರಶಸ್ತಿ ಘೋಷಿಸಲಾಯಿತು.

ಮೊದಲ ದಿನ ಮೆಡಿಸಿನ್‌ ವಿಭಾಗದಲ್ಲಿ ನೋಬೆಲ್‌ ಘೋಷಣೆಯಾಗುತ್ತದೆ. ಮರುದಿನ ಅಂದರೆ, ನಾಳೆ ಕೆಮಿಸ್ಟ್ರಿ ವಿಭಾಗದ ನೊಬೆಲ್‌ ಘೋಷಣೆಯಾಗುತ್ತದೆ. ಬಳಿಕ ಸಾಹಿತ್ಯಕ್ಕೆ ನೋಬೆಲ್‌ ಘೋಷಣೆಯಾಗುತ್ತದೆ. ಅಕ್ಟೋಬರ್‌ 10ರಂದು ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿ ಘೋಷಿಸಲಾಗುತ್ತದೆ.

ಪ್ರತಿ ನೊಬೆಲ್‌ ಪ್ರಶಸ್ತಿಯು 10 ದಶಲಕ್ಷ ಕ್ರೊನೊರ್‌ ಮೊತ್ತವನ್ನು ಹೊಂದಿರುತ್ತದೆ. ಅಂದರೆ, ಇದು 9 ಲಕ್ಷ ಡಾಲರ್‌ಗೆ ಸಮ. ಡಿಸೆಂಬರ್‌ ಹತ್ತರಂದು ನೋಬೆಲ್‌ ಪಡೆದವರಿಗೆ ಪ್ರಶಸ್ತಿ ಸರ್ಟಿಫಿಕೇಟ್‌ ಮತ್ತು ಚಿನ್ನದ ಪದಕವನ್ನೂ ನೀಡಲಾಗುತ್ತದೆ. ಡಿಸೆಂಬರ್‌ 10ರಂದು ಅಲ್ಬರ್ಡ್‌ ನೋಬೆಲ್‌ ಮೃತಪಟ್ಟ ದಿನವಾಗಿದೆ.

1901ರಲ್ಲಿ ನೊಬೆಲ್‌ ಪ್ರಶಸ್ತಿ ಆರಂಭಿಸಿದ ಸಮಯದಲ್ಲಿ ಇಲ್ಲದ ವಿವಿಧ ವಿಭಾಗಗಳಿಗೂ ನೊಬೆಲ್‌ ಪ್ರಶಸ್ತಿ ನೀಡುವ ಪರಿಪಾಠವಿದೆ. ಅರ್ಥಶಾಸ್ತ್ರ ವಿಭಾಗಕ್ಕೆ ನೊಬೆಲ್‌ ಪ್ರಶಸ್ತಿಯನ್ನು 1968ರಲ್ಲಿ ಆರಂಭಿಸಲಾಗಿತ್ತು.

ನಾರ್ವೆಯ ಓಸ್ಲೊದ ಓಸ್ಲೊ ಸಿಟಿ ಹಾಲ್‌ನಲ್ಲಿ ನೋಬೆಲ್‌ ಪ್ರಶಸ್ತಿ ವಿತರಣೆ ಸಮಾರಂಭ ನಡೆಯುತ್ತದೆ. ಆಸಕ್ತಿದಾಯಕ ವಿಷಯವೆಂದರೆ ನಾರ್ವೆಯ ಓಸ್ಲೊದಲ್ಲಿ ನೊಬೆಲ್‌ ಶಾಂತಿ ಪ್ರಶಸ್ತಿ ಕಾರ್ಯಕ್ರಮ ಮಾತ್ರ ನಡೆಯುತ್ತದೆ. ಉಳಿದ ವಿಭಾಗದ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಸ್ವೀಡನ್‌ನಲ್ಲಿ ನಡೆಯುತ್ತದೆ. ಇದೇ ರೀತಿ ನಡೆಯಬೇಕೆಂದು ನೋಬೆಲ್‌ ಬಯಸಿದ್ದರು.

ಯಾರಿಗೆ ನೊಬೆಲ್‌ ಪ್ರಶಸ್ತಿ ದೊರಕಲಿದೆ ಎಂದು ಮೊದಲೇ ಊಹಿಸುವುದು ಮತ್ತು ತಿಳಿಯುವುದು ಕಡುಕಷ್ಟ. ನೊಬೆಲ್‌ ಪ್ರಶಸ್ತಿ ಕಾನೂನಿನ ಪ್ರಕಾರ, ಪ್ರಶಸ್ತಿ ಪಡೆಯಲಿರುವರ ಕುರಿತು ನೋಬೆಲ್‌ ಜಡ್ಜ್‌ಗಳು ಬಹಿರಂಗವಾಗಿ ಚರ್ಚಿಸುವಂತಿಲ್ಲ. ಪಡೆಯುವವರ ಕುರಿತು ಬಹಿರಂಗವಾಗಿ ಚರ್ಚಿಸುವುದನ್ನು ನೊಬೆಲ್‌ ಜಡ್ಜ್‌ಗಳಿಗೆ ನಿಷೇಧಿಸಲಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು