logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tcs Rule Update: ವಿದೇಶದಲ್ಲಿ 7 ಲಕ್ಷ ರೂಪಾಯಿವರೆಗಿನ ಪಾವತಿಗೆ ತೆರಿಗೆ ವಿಧಿಸಲಾಗುವುದಿಲ್ಲ; ಸ್ಪಷ್ಟೀಕರಣ ನೀಡಿದ ಕೇಂದ್ರ ಸರ್ಕಾರ

TCS rule update: ವಿದೇಶದಲ್ಲಿ 7 ಲಕ್ಷ ರೂಪಾಯಿವರೆಗಿನ ಪಾವತಿಗೆ ತೆರಿಗೆ ವಿಧಿಸಲಾಗುವುದಿಲ್ಲ; ಸ್ಪಷ್ಟೀಕರಣ ನೀಡಿದ ಕೇಂದ್ರ ಸರ್ಕಾರ

HT Kannada Desk HT Kannada

May 20, 2023 07:08 AM IST

7 ಲಕ್ಷ ರೂಪಾಯಿಗಿಂತ ಹೆಚ್ಚಿನ ವಿದೇಶಿ ವಹಿವಾಟುಗಳಿಗೆ ಕ್ರೆಡಿಟ್ ಕಾರ್ಡ್ ಬಳಸಿದರೆ ಆ ವಹಿವಾಟಿನ ಮೇಲೆ 20 ಪ್ರತಿಶತ ಟಿಸಿಎಸ್‌ ಕಡಿತ

  • TCS rule update: ವಿದೇಶದಲ್ಲಿ ಕ್ರೆಡಿಟ್‌ ಕಾರ್ಡ್‌ ಬಳಸಿ ಮಾಡುವ ವಹಿವಾಟುಗಳ ಪೈಕಿ 7 ಲಕ್ಷ ರೂಪಾಯಿಗಿಂತ ಹೆಚ್ಚಿನ ವಹಿವಾಟುಗಳಿಗೆ ಮಾತ್ರ 20 ಪ್ರತಿಶತ ಮೂಲದಲ್ಲಿ ತೆರಿಗೆ ಸಂಗ್ರಹ (Tax Collection at Source) ಅಥವಾ ಟಿಸಿಎಸ್‌ (TCS) ಅನ್ವಯಿಸುತ್ತದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟೀಕರಣ ನೀಡಿದೆ. ಸ್ಪಷ್ಟತೆಗಾಗಿ ಉದಾಹರಣೆ ಸಹಿತ ವಿವರಣೆ ಇಲ್ಲಿದೆ.

7 ಲಕ್ಷ ರೂಪಾಯಿಗಿಂತ ಹೆಚ್ಚಿನ ವಿದೇಶಿ  ವಹಿವಾಟುಗಳಿಗೆ ಕ್ರೆಡಿಟ್ ಕಾರ್ಡ್ ಬಳಸಿದರೆ ಆ ವಹಿವಾಟಿನ ಮೇಲೆ 20 ಪ್ರತಿಶತ ಟಿಸಿಎಸ್‌ ಕಡಿತ
7 ಲಕ್ಷ ರೂಪಾಯಿಗಿಂತ ಹೆಚ್ಚಿನ ವಿದೇಶಿ ವಹಿವಾಟುಗಳಿಗೆ ಕ್ರೆಡಿಟ್ ಕಾರ್ಡ್ ಬಳಸಿದರೆ ಆ ವಹಿವಾಟಿನ ಮೇಲೆ 20 ಪ್ರತಿಶತ ಟಿಸಿಎಸ್‌ ಕಡಿತ (HT)

ವಿದೇಶದಲ್ಲಿ ಕ್ರೆಡಿಟ್‌ ಕಾರ್ಡ್‌ ವಹಿವಾಟುಗಳ ಪೈಕಿ 7 ಲಕ್ಷ ರೂಪಾಯಿಗಿಂತ ಹೆಚ್ಚಿನ ವಹಿವಾಟುಗಳಿಗೆ ಮಾತ್ರ 20 ಪ್ರತಿಶತ ಮೂಲದಲ್ಲಿ ತೆರಿಗೆ ಸಂಗ್ರಹ (Tax Collection at Source) ಅಥವಾ ಟಿಸಿಎಸ್‌ (TCS) ಅನ್ವಯಿಸುತ್ತದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟೀಕರಣ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ಈ ಅಧಿಕೃತ ಸ್ಪಷ್ಟೀಕರಣವು, 2023ರ ಜುಲೈ 1ರಿಂದ ಅನ್ವಯವಾಗಲಿರುವ ಉದಾರೀಕೃತ ರವಾನೆ ಯೋಜನೆ (Liberalized Remittance Scheme) ಅಥವಾ ಎಲ್‌ಆರ್‌ಎಸ್‌ (LRS)ನ ಸಣ್ಣ ವಹಿವಾಟುಗಳಿಗೆ ಸಂಬಂಧಿಸಿದ ಟಿಸಿಎಸ್‌ ಅನ್ವಯವಾಗುವ ಕುರಿತಾದ ಕಳವಳವನ್ನು ಪರಿಹರಿಸಿದೆ. ಕಾರ್ಯವಿಧಾನದ ಅಸ್ಪಷ್ಟತೆಯನ್ನು ತೊಡೆದುಹಾಕಲು, ಅಂತರರಾಷ್ಟ್ರೀಯ ಡೆಬಿಟ್ ಅನ್ನು ಬಳಸಿಕೊಂಡು ಪ್ರತಿ ಹಣಕಾಸು ವರ್ಷಕ್ಕೆ 7 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಪಾವತಿಗಳನ್ನು ಮಾಡಲು ಅವಕಾಶವಿದೆ. ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಎಲ್‌ಆರ್‌ಎಸ್‌ ಮಿತಿಗಳಿಂದ ಹೊರಗಿಡಲಾಗುತ್ತದೆ. ಆದ್ದರಿಂದ ಅದು ಟಿಸಿಎಸ್‌ಗೆ ಒಳಪಟ್ಟಿರುವುದಿಲ್ಲ.

ಶಿಕ್ಷಣ ಮತ್ತು ಆರೋಗ್ಯ ಪಾವತಿಗಳಿಗೆ ಅಸ್ತಿತ್ವದಲ್ಲಿರುವ ಪ್ರಯೋಜನಕಾರಿ ಟಿಸಿಎಸ್ ಅನ್ವಯಿಸುವಿಕೆ ಮುಂದುವರಿಯುತ್ತದೆ. ಇದಲ್ಲದೆ, ನಿಯಮಗಳಿಗೆ ಯಾವುದೇ ಅಗತ್ಯ ಬದಲಾವಣೆಗಳು (ವಿದೇಶಿ ವಿನಿಮಯ ನಿರ್ವಹಣೆ (ಕರೆಂಟ್ ಅಕೌಂಟ್ ಟ್ರಾನ್ಸಾಕ್ಷನ್ಸ್ ನಿಯಮಗಳು), 2000) ಬೇಕಾದಲ್ಲಿ ಅದನ್ನು ಪ್ರತ್ಯೇಕವಾಗಿ ಮಾಡಲಾಗುವುದು ಎಂಬುದನ್ನು ಸರ್ಕಾರದ ಆದೇಶವು ದೃಢಪಡಿಸಿದೆ.

ಈ ಹಿಂದೆ ಗುರುವಾರ, ಸರ್ಕಾರವು ಎಲ್‌ಆರ್‌ಎಸ್‌ ಪ್ರಕಾರ, ವಿದೇಶಿ ಕರೆನ್ಸಿಯಲ್ಲಿ ಕ್ರೆಡಿಟ್ ಕಾರ್ಡ್ ವಹಿವಾಟುಗಳನ್ನು ಸೇರಿಸುವುದಾಗಿ ಘೋಷಿಸಿತು. 2023ರ ಜುಲೈ 1 ರಿಂದ ಶೇಕಡ 20 ಟಿಸಿಎಸ್‌ ಜಾರಿಗೆ ಬರುವುದಾಗಿ ತಿಳಿಸಿತ್ತು. ಈ ವಹಿವಾಟುಗಳನ್ನು ಈ ಹಿಂದೆ ಎಲ್ಆರ್‌ಎಸ್‌ನ ಚೌಕಟ್ಟಿನ ಭಾಗವೆಂದು ಪರಿಗಣಿಸಲಾಗಿರಲಿಲ್ಲ.

ಸಾಗರೋತ್ತರ ಕ್ರೆಡಿಟ್‌ ಕಾರ್ಡ್‌ನಲ್ಲಿ 7 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತದ ವಹಿವಾಟುಗಳ ಮೇಲೆ 20% ಟಿಸಿಎಸ್‌: ನೀವು ತಿಳಿದಿರಬೇಕಾದ್ದು ಇಷ್ಟು

ವಿದೇಶಿ ಕರೆನ್ಸಿಯ ಕ್ರೆಡಿಟ್ ಕಾರ್ಡ್ ವಹಿವಾಟುಗಳು, ಹಿಂದೆ ಎಲ್‌ಆರ್‌ಎಸ್‌ನ ಭಾಗವೆಂದು ಪರಿಗಣಿಸಲಾಗಿಲ್ಲ. ಈಗ ಅದರ ವ್ಯಾಪ್ತಿಗೆ ಸೇರಿಸಲಾಗಿದೆ. ಎಲ್‌ಆರ್‌ಎಸ್‌ ಫ್ರೇಮ್‌ವರ್ಕ್ ಭಾರತೀಯ ನಿವಾಸಿಗಳಿಗೆ ಶಿಕ್ಷಣದ ವೆಚ್ಚಗಳು, ಪ್ರಯಾಣ ಮತ್ತು ಹೂಡಿಕೆಗಳಂತಹ ನಿರ್ದಿಷ್ಟ ಉದ್ದೇಶಗಳಿಗಾಗಿ ನಿರ್ದಿಷ್ಟ ಮಿತಿಯವರೆಗೆ (ಪ್ರಸ್ತುತ $250,000 ಪ್ರತಿ ಹಣಕಾಸು ವರ್ಷಕ್ಕೆ) ಹಣವನ್ನು ವಿದೇಶಕ್ಕೆ ಕಳುಹಿಸಲು ಅನುಮತಿಸುತ್ತದೆ.

ನವೀಕೃತ ನಿಯಮ ಪ್ರಕಾರ, ವಿದೇಶಗಳಲ್ಲಿ ಕ್ರೆಡಿಟ್‌ ಕಾರ್ಡ್‌ ವ್ಯವಹಾರ 7 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ ಅಂತಹ ವಹಿವಾಟುಗಳಿಗೆ ಶೇಕಡ 20 ಟಿಸಿಎಸ್‌ ಅನ್ವಯವಾಗಲಿದೆ.

ಟಿಸಿಎಸ್‌ ಎನ್ನುವುದು ಹಣಕಾಸು ವಹಿವಾಟಿನ ಮೂಲದಲ್ಲಿಯೇ ನೇರವಾಗಿ ಸಂಗ್ರಹಿಸುವ ತೆರಿಗೆ. ಪಾವತಿಯನ್ನು ಸ್ವೀಕರಿಸುವ ಘಟಕವು ವಹಿವಾಟಿನ ಮೊತ್ತದ ಶೇಕಡಾವಾರು ಮೊತ್ತವನ್ನು ತೆರಿಗೆಯಾಗಿ ಸಂಗ್ರಹಿಸುತ್ತದೆ ಮತ್ತು ಅದನ್ನು ಸರ್ಕಾರಕ್ಕೆ ಸಲ್ಲಿಸುತ್ತದೆ. ಇಲ್ಲಿ ತೆರಿಗೆದಾರ ನಂತರ ತೆರಿಗೆ ಪಾವತಿಸುವ ಆಯ್ಕೆ ಇಲ್ಲ.

ನವೀಕೃತ ಕ್ರೆಡಿಟ್‌ ಕಾರ್ಡ್‌ ನಿಯಮ ಅರ್ಥಮಾಡಿಕೊಳ್ಳುವುದಕ್ಕೆ ಒಂದು ಉದಾಹರಣೆ

ಎಲ್‌ಆರ್‌ಎಸ್‌ನ ಹೊಸ ನಿಯಮಗಳು ವಿದೇಶಿ ವಹಿವಾಟುಗಳಿಗೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಬಳಕೆಯ ನಡುವೆ ಸಮಾನತೆಯನ್ನು ತರುವ ಗುರಿಯನ್ನು ಹೊಂದಿವೆ. ಈ ಕ್ರಮವು ಮೂಲಭೂತವಾಗಿ ತಮ್ಮ ವಿದೇಶ ಪ್ರವಾಸದ ಸಮಯದಲ್ಲಿ ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ಗಳ ಮೂಲಕ ವಹಿವಾಟುಗಳನ್ನು ಕೈಗೊಳ್ಳುವ ವ್ಯಕ್ತಿಗಳು ವಹಿವಾಟುಗಳ ಮೇಲಿನ ನಿರ್ಬಂಧಗಳ ಬಗ್ಗೆ ತಿಳಿದಿರಬೇಕಾಗುತ್ತದೆ. ಹಾಗಾಗಿ ಈ ಉದಾಹರಣೆ ಸಹಿತ ವಿವರಣೆ ಗಮನಿಸಿ.

ನೀವು ಭಾರತದಿಂದ ಯುನೈಟೆಡ್ ಸ್ಟೇಟ್ಸ್‌ಗೆ ಪ್ರಯಾಣಿಸುತ್ತಿದ್ದೀರಿ ಎಂದು ಊಹಿಸಿಕೊಳ್ಳಿ. ಅಲ್ಲಿ 7 ಲಕ್ಷ ರೂಪಾಯಿಗಿಂತ ಹೆಚ್ಚಿನ ವೆಚ್ಚಗಳನ್ನು ಪಾವತಿಸಲು ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಬಳಸುತ್ತಿದ್ದೀರಿ (ಆರೋಗ್ಯ, ಶಿಕ್ಷಣದಂತಹ ವೆಚ್ಚಗಳನ್ನು ಹೊರತುಪಡಿಸಿ) ಎಂದಿಟ್ಟುಕೊಳ್ಳಿ. ಆಗ ಈ ವಹಿವಾಟುಗಳು ವಿದೇಶಿ ಕರೆನ್ಸಿಯ ರೂಪದಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಮೂಲ ನಡೆಸಿದ ವಹಿವಾಟು ಎಂದೆನಿಸಿಕೊಳ್ಳುತ್ತವೆ. ಸರಳವಾಗಿ ಹೇಳುವುದಾದರೆ, ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ರೂಪಾಯಿ ಬದಲಾಗಿ ಅಮೆರಿಕನ್‌ ಡಾಲರ್‌ಗಳಲ್ಲಿ ಪಾವತಿ ಮಾಡಲು ಬಳಸಿದಿರಿ ಎಂದು ಅರ್ಥ.

ವಿದೇಶಿ ವ್ಯಾಪಾರಿಗಳಿಗೆ ಆನ್‌ಲೈನ್‌ ಮೂಲಕ ಮಾಡಿದ ವಿದೇಶಿ ಕರೆನ್ಸಿ ವಹಿವಾಟುಗಳಿಗೂ ಈ ಹೊಸ ತೆರಿಗೆ ಅನ್ವಯಿಸುತ್ತದೆ. ನೀವು ಅಂತರರಾಷ್ಟ್ರೀಯ ವೆಬ್‌ಸೈಟ್‌ಗಳಿಂದ ಆನ್‌ಲೈನ್ ಖರೀದಿ ಮಾಡಿದರೆ ಮತ್ತು ಯುಎಸ್ ಡಾಲರ್ ಅಥವಾ ಯುರೋಗಳಂತಹ ವಿದೇಶಿ ಕರೆನ್ಸಿಯಲ್ಲಿ ಪಾವತಿಸುವುದಕ್ಕೆ ನಿಮ್ಮ ಕ್ರೆಡಿಟ್ ಕಾರ್ಡ್‌ ಬಳಸಿದರೆ, ಅಂತಹ ವಹಿವಾಟನ್ನು ವಿದೇಶಿ ಕರೆನ್ಸಿಯಲ್ಲಿ ನಡೆಸಿದ ಕ್ರೆಡಿಟ್ ಕಾರ್ಡ್ ವಹಿವಾಟು ಎಂದು ವರ್ಗೀಕರಿಸಲಾಗುತ್ತದೆ. ಇಂತಹ ವಹಿವಾಟಿನ ಮೊತ್ತವು 7 ಲಕ್ಷ ರೂಪಾಯಿಯನ್ನು ಮೀರಿದರೆ ಆಗ ಶೇಕಡ 20 ಟಿಸಿಎಸ್‌ ಅನ್ವಯವಾಗುತ್ತದೆ.

ಮೇಲಿನ ಎರಡೂ ಸನ್ನಿವೇಶಗಳಲ್ಲಿ, ಕ್ರೆಡಿಟ್ ಕಾರ್ಡ್ ಒದಗಿಸುವವರು ಪ್ರಸ್ತುತ ವಿನಿಮಯ ದರವನ್ನು ಬಳಸಿಕೊಂಡು ವಹಿವಾಟಿನ ಸಮಯದಲ್ಲಿ ವಿದೇಶಿ ಕರೆನ್ಸಿ ಮೊತ್ತವನ್ನು ರೂಪಾಯಿಗಳಾಗಿ ಪರಿವರ್ತಿಸುತ್ತಾರೆ ಎಂಬುದನ್ನು ಗಮನಿಸಬೇಕು.

ಅನುವಾದ - ಉಮೇಶ್‌ ಕುಮಾರ್‌ ಶಿಮ್ಲಡ್ಕ, ಸುದ್ದಿ ಸಂಪಾದಕ, ಹಿಂದುಸ್ತಾನ್‌ ಟೈಮ್ಸ್‌ ಕನ್ನಡ

ಮೂಲ ಲೇಖಕ - ಸಿಂಗ್‌ ರಾಹುಲ್‌ ಸುನಿಲ್‌ ಕುಮಾರ್‌, ಹಿಂದುಸ್ತಾನ್‌ ಟೈಮ್ಸ್‌

ಮೂಲ ಲೇಖನ ಓದಲು ಇಲ್ಲಿ ಕ್ಲಿಕ್‌ ಮಾಡಿ - Govt clarifies payments abroad for up to 7 lakh will not be taxed

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ