logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜಿಮೇಲ್‌ನಲ್ಲಿ ಬರಲಿದೆ ಹೊಸ ಮ್ಯಾನೇಜ್‌ಮೆಂಟ್‌ ಸಬ್‌ಸ್ಕ್ರಿಪ್ಶನ್ ಫೀಚರ್‌; ಇದರ ಕೆಲಸ ಹೇಗಿರಲಿದೆ- 5 ಅಂಶಗಳು

ಜಿಮೇಲ್‌ನಲ್ಲಿ ಬರಲಿದೆ ಹೊಸ ಮ್ಯಾನೇಜ್‌ಮೆಂಟ್‌ ಸಬ್‌ಸ್ಕ್ರಿಪ್ಶನ್ ಫೀಚರ್‌; ಇದರ ಕೆಲಸ ಹೇಗಿರಲಿದೆ- 5 ಅಂಶಗಳು

Umesh Kumar S HT Kannada

Apr 15, 2024 02:25 PM IST

ಜಿಮೇಲ್‌ನಲ್ಲಿ ಹೊಸ ಚಂದಾದಾರಿಕೆ ನಿರ್ವಹಣೆಯ ಫೀಚರ್‌ (ಸಾಂಕೇತಿಕ ಚಿತ್ರ)

  • ಜಿಮೇಲ್‌ನಲ್ಲಿ ಹೊಸ ಮ್ಯಾನೇಜ್‌ಮೆಂಟ್‌ ಸಬ್‌ಸ್ಕ್ರಿಪ್ಶನ್ ಫೀಚರ್‌ ಬರಲಿದೆ ಎಂಬುದೇ ಬಳಕೆದಾರರಲ್ಲಿ ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಜನವರಿಯಲ್ಲಿ ಇದು ಒಮ್ಮೆ ಬಳಕೆಗೆ ಸಿಕ್ಕಿತ್ತಾದರೂ, ಬಳಕೆ ಸಾಧ್ಯವಾಗಿರಲಿಲ್ಲ ಎಂಬ ಅಂಶವೂ ಚರ್ಚೆಗೆ ಒಳಗಾಗಿದೆ. ಈ ಹೊಸ ಫೀಚರ್‌ ಕೆಲಸ ಹೇಗಿರಲಿದೆ ಎಂಬುದರ ಕುರಿತು 5 ಅಂಶಗಳು ಹೀಗಿವೆ. 

ಜಿಮೇಲ್‌ನಲ್ಲಿ ಹೊಸ ಚಂದಾದಾರಿಕೆ ನಿರ್ವಹಣೆಯ ಫೀಚರ್‌ (ಸಾಂಕೇತಿಕ ಚಿತ್ರ)
ಜಿಮೇಲ್‌ನಲ್ಲಿ ಹೊಸ ಚಂದಾದಾರಿಕೆ ನಿರ್ವಹಣೆಯ ಫೀಚರ್‌ (ಸಾಂಕೇತಿಕ ಚಿತ್ರ) (Unsplash)

ನವದೆಹಲಿ/ ಬೆಂಗಳೂರು: ನಿಮ್ಮ ಇಮೇಲ್‌ಗಳ ಪೈಕಿ ಮುಖ್ಯವಾದವು ಯಾವುವು, ನಿರ್ಲಕ್ಷಿಸಬಹುದಾದ್ದು ಯಾವುವು ಎಂಬುದನ್ನು ಗುರುತಿಸಿ ಪ್ರತ್ಯೇಕಿಸುವುದೇ ದೊಡ್ಡ ಸವಾಲು ಎಂದು ನಿಮಗನ್ನಿಸುತ್ತಿದೆಯೇ?. ಸಬ್‌ಸ್ಕ್ರಿಪ್ಶನ್‌ ಹೆಚ್ಚಾದಷ್ಟೂ ಈ ಸವಾಲು ಬೃಹದಾಕಾರಾವಾಗಿ ಬೆಳೆಯತ್ತ ಸಾಗುವುದು ಸಹಜ. ಇನ್ನು ಈ ಕುರಿತು ಚಿಂತೆ ಮಾಡಬೇಡಿ. ನಿಮ್ಮ ಜಿಮೇಲ್‌ ಚಂದಾದಾರಿಕೆ ನಿರ್ವಹಣೆಗಾಗಿ (Gmail subscription management feature) ಜಿಮೇಲ್ ಹೊಸ ಫೀಚರ್‌ ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಹೊಸ ಫೀಚರ್‌ ಅಭಿವೃದ್ಧಿ ಹಂತದಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಬಹುತೇಕ ಸಂದರ್ಭಗಳಲ್ಲಿ, ನಮ್ಮ ಇಮೇಲ್ ಸ್ಪ್ಯಾಮ್ ಇಮೇಲ್‌ಗಳು ಅಥವಾ ನ್ಯೂಸ್‌ಲೆಟರ್‌ಗಳಿಂದ ತುಂಬಿರುತ್ತದೆ. ಆದಾಗ್ಯೂ, ಇಮೇಲ್‌ಗಳನ್ನು ಒಂದೊಂದಾಗಿ ಅಳಿಸುವುದು ಅಥವಾ ಅನ್‌ಸಬ್‌ಸ್ಕ್ರೈಬ್ ಮಾಡುವುದು ಸುಲಭದ ಕೆಲಸವಲ್ಲ. ಇದು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ.

ಆದ್ದರಿಂದ, ಜಿಮೇಲ್‌ ಬಳಕೆದಾರರು ತಮ್ಮ ಇನ್‌ಬಾಕ್ಸ್‌ನಲ್ಲಿ ಹೆಚ್ಚಿನ ಆದ್ಯತೆಯ ಯಾವ ಇಮೇಲ್‌ಗಳನ್ನು ನೋಡಲು ಬಯಸುತ್ತಾರೆ ಎಂಬುದರ ಮೇಲೆ ಸಂಪೂರ್ಣ ನಿಯಂತ್ರಣವನ್ನು ನೀಡುತ್ತದೆ. ಗೂಗಲ್‌ ಈಗ "ಚಂದಾದಾರಿಕೆ ನಿರ್ವಹಣೆ" (Manage Subscriptions) ಫೀಚರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಅದು ಬಳಕೆದಾರರು ತಮ್ಮ ಇಮೇಲ್‌ಗಳನ್ನು ಸಂಘಟಿಸುವ ಪ್ರಯತ್ನವನ್ನು ಸುಲಭಗೊಳಿಸುತ್ತದೆ. ಈ ಫೀಚರ್‌ ಕುರಿತು ನಮಗೆ ತಿಳಿದಿರುವ ಮಾಹಿತಿ ಇಷ್ಟು -

ಜಿಮೇಲ್‌ ಚಂದಾದಾರಿಕೆ ನಿರ್ವಹಣೆ ಫೀಚರ್

ಪಿಯುನಿಕಾವೆಬ್ ವರದಿಯ ಪ್ರಕಾರ, ಜಿಮೇಲ್‌ನ ಹೊಸ ಆವೃತ್ತಿಯಲ್ಲಿ ಹೊಸ ಚಂದಾದಾರಿಕೆ ನಿರ್ವಹಣೆ (manage subscriptions) ಫೀಚರ್ ಇರುವುದು ಕಂಡುಬಂದಿದೆ. ಈ ವರದಿಯಲ್ಲಿ ಗಮನ ಸೆಳೆದ 5 ಅಂಶಗಳಿವು

1) ಜಿಮೇಲ್‌ನ ಸೈಡ್‌ಬಾರ್‌ನಲ್ಲಿ ಈ ಫೀಚರ್‌ ಕಂಡುಬರುವ ನಿರೀಕ್ಷೆ ಇದೆ. ಕೆಲವು ಮಾನದಂಡಗಳಿಗೆ ಅನುಗುಣವಾಗಿ ಬಳಕೆದಾರರು ಸಬ್‌ಸ್ಕ್ರೈಬ್ ಮಾಡಿದ ಇಮೇಲ್‌ಗಳನ್ನು ನಿರ್ವಹಿಸುವುದಕ್ಕೆ ನೆರವಾಗಬಹುದು.

2) ಈ ಫೀಚರ್‌ ಇಮೇಲ್ ಸ್ಪೇಸ್‌ ಅನ್ನು ತನ್ನಿಂತಾನೇ ಸಂಘಟಿಸುವ, ನಿರ್ವಹಿಸುವ ನಿರೀಕ್ಷೆ ಇದೆ. ಅದರ ಮೂಲಕ ಬಳಕೆದಾರರು ತುರ್ತು ಗಮನ ಹರಿಸಬೇಕಾದ ಇಮೇಲ್ ಅನ್ನು ನೇರವಾಗಿ ಪರಿಶೀಲಿಸಬಹುದು.

3) ಸ್ಪ್ಯಾಮರ್‌ ಮತ್ತು ಪ್ರಚಾರದ ಇಮೇಲ್‌ಗಳನ್ನು ಈ ಫೀಚರ್ ಮೊದಲೇ ಗುರುತಿಸಲಿದೆ. ಅದಕ್ಕೆ ಅನುಗುಣವಾಗಿ ಅವುಗಳನ್ನು ವರ್ಗೀಕರಿಸುವ ಕೆಲಸ ಮಾಡಲಿದೆ.

4) ಇಮೇಲ್ ಕಳುಹಿಸುವವರ ಹೆಸರು, ಲೋಗೋ ಜೊತೆಗೆ ಅನ್‌ಸಬ್‌ಸ್ಕ್ರೈಬ್‌ ಬಟನ್ ಅನ್ನು ಈ ಫೀಚರ್ ಒದಗಿಸಲಿದೆ. ಇದು ಬಳಕೆದಾರರಿಗೆ ಅನಗತ್ಯ ಇಮೇಲ್‌ಗಳ ವಿರುದ್ಧ ತ್ವರಿತ ಕ್ರಮ ತೆಗೆದುಕೊಳ್ಳಲು ಅನುವು ಮಾಡಿಕೊಡಲಿದೆ.

5) ಅಸೆಂಬಲ್ ಡಿಬಗ್‌ ಮೂಲಕ ಈ ಚಂದಾದಾರಿಕೆ ನಿರ್ವಹಣೆ ಫೀಚರ್ ಕಾಣಿಸಿಕೊಂಡಿತ್ತು. ಇದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದು ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ.

ರೆಡ್ಡಿಟ್ ಬಳಕೆದಾರರು ಹೇಳಿಕೊಂಡಿರುವುದೇನು

ಪ್ರಸ್ತುತ ಮಾಹಿತಿ ಪ್ರಕಾರ, ಜಿಮೇಲ್‌ನ ಚಂದಾದಾರಿಕೆ ನಿರ್ವಹಣೆ (Gmail manage subscriptions) ಫೀಚರ್ ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಈ ನಡುವೆ, ಸೈಡ್‌ಬಾರ್‌ನಲ್ಲಿ ಹೊಸ ನಿರ್ವಹಣಾ ಚಂದಾದಾರಿಕೆಗಳ ಫೀಚರ್‌ ಅನ್ನು ಪ್ರದರ್ಶಿಸುವ ಮೂಲಕ ರೆಡ್ಡಿಟ್ ಬಳಕೆದಾರರು ಪಾಪ್-ಅಪ್ ಪ್ರಕಟಣೆಯ ಕುರಿತು ಹೇಳಿಕೊಂಡಿದ್ದಾರೆ. "ಈಗಲೇ ಪ್ರಯತ್ನಿಸಿ" ಬಟನ್ ಅನ್ನು ಕ್ಲಿಕ್ ಮಾಡಿದ ನಂತರ ಅದು ಲೋಡಿಂಗ್ ಮೋಡ್‌ಗೆ ಹೋಯಿತೇ ವಿನಾ ಬೇರೇನೂ ಆಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಜಿಮೇಲ್‌ನಲ್ಲಿ ಈ ಹೊಸ ಚಂದಾದಾರಿಕೆ ನಿರ್ವಹಣೆ ಫೀಚರ್‌ ಒಂದು ಭರವಸೆಯಂತೆ ಕಾಣುತ್ತದೆ. ಏಕೆಂದರೆ ಇದು ಇಮೇಲ್ ಸಂಸ್ಥೆಯ ಉತ್ಪನ್ನದ ಬಳಕೆಯನ್ನು ಸುಗಮಗೊಳಿಸುತ್ತದೆ. ಅನಗತ್ಯ ಇಮೇಲ್‌ಗಳನ್ನು ತಪ್ಪಿಸಲು ತ್ವರಿತ ಕ್ರಿಯೆಯ ಬಟನ್‌ಗಳನ್ನು ಬಳಕೆದಾರರಿಗೆ ಒದಗಿಸುತ್ತದೆ.

ಈ ರೀತಿಯಲ್ಲಿ ಬಳಕೆದಾರರು ತಮ್ಮ ತುರ್ತು ಗಮನ ಅಗತ್ಯವಿರುವ ಪ್ರಮುಖ ಇಮೇಲ್‌ಗಳನ್ನು ಹುಡುಕುವಾಗ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈಗಿನಂತೆ, ಹೊಸ ಜಿಮೇಲ್‌ ಫೀಚರ್‌ ಅನ್ನು ಅಧಿಕೃತವಾಗಿ ಯಾವಾಗ ಹೊರತರಲಾಗುತ್ತದೆ ಎಂಬುದು ಖಚಿತವಾಗಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ