logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Happy New Year 2024: ಹಬ್ಬದ ಡೂಡಲ್‌ನೊಂದಿಗೆ ಗೂಗಲ್‌ ಹ್ಯಾಪಿ ನ್ಯೂ ಇಯರ್ 2024 ಸಂಭ್ರಮ, ವರ್ಷದ ಮೊದಲ ದಿನ ಎಲೆಲ್ಲಿ ಸಡಗರ

Happy New Year 2024: ಹಬ್ಬದ ಡೂಡಲ್‌ನೊಂದಿಗೆ ಗೂಗಲ್‌ ಹ್ಯಾಪಿ ನ್ಯೂ ಇಯರ್ 2024 ಸಂಭ್ರಮ, ವರ್ಷದ ಮೊದಲ ದಿನ ಎಲೆಲ್ಲಿ ಸಡಗರ

HT Kannada Desk HT Kannada

Jan 01, 2024 08:03 AM IST

ಹೊಸ ವರ್ಷ 2024ರ ಗೂಗಲ್ ಡೂಡಲ್‌

  • ಹೊಸ ವರ್ಷಾಚರಣೆ ಸಂಭ್ರಮ ನಾಡಿನಾದ್ಯಂತ ಪಸರಿಸಿದೆ. ಸರ್ಚ್ ಇಂಜಿನ್‌ ದಿಗ್ಗಜ ಕಂಪನಿ ಗೂಗಲ್ ಹೊಸ ವರ್ಷ 2024ರ ಡೂಡಲ್‌ ಅನ್ನು ಪ್ರಕಟಿಸಿದ್ದು, ಆಕರ್ಷಕವಾಗಿದೆ. ದೇಶದ ವಿವಿಧೆಡೆ ಇಂದು ನಡೆದಿರುವ ಕೆಲವು ಸಂಭ್ರಮಾಚರಣೆಗಳ ವಿಡಿಯೋಗಳು ಇಲ್ಲಿವೆ.

ಹೊಸ ವರ್ಷ 2024ರ ಗೂಗಲ್ ಡೂಡಲ್‌
ಹೊಸ ವರ್ಷ 2024ರ ಗೂಗಲ್ ಡೂಡಲ್‌

ಹೊಸ ಕ್ಯಾಲೆಂಡರ್ ವರ್ಷ 2024 ಶುರುವಾಗಿದೆ. ಜನಪ್ರಿಯ ಸರ್ಚ್‌ ಇಂಜಿನ್‌ ಗೂಗಲ್‌ ತನ್ನ ಲಾಂಛನದ ಜಾಗದಲ್ಲಿ ಹಬ್ಬದ ಮನಸ್ಥಿತಿಯನ್ನು ಪ್ರದರ್ಶಿಸುವ ಡೂಡಲ್ ಅನ್ನು ಪ್ರಕಟಿಸಿ, ಹೊಸ ವರ್ಷದ ಸಂಭ್ರಮವನ್ನು ಬಿಂಬಿಸಿದೆ. ಗೂಗಲ್‌ ಡೂಡಲ್ 2024 ಆಕರ್ಷಕವಾಗಿದ್ದು, ಮಿನುಗುವ ಡಿಸ್ಕೋ ಬಾಲ್‌ಗಳನ್ನು, ಮಿನುಗುವ ಪೇಪರ್‌ ಚೂರುಗಳನ್ನು ಸಿಡಿಸಿದ ಮತ್ತು ಒಟ್ಟು ಸಂಭ್ರಮವನ್ನು ವ್ಯಕ್ತಪಡಿಸುವಂತೆ ಇದೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಜಗತ್ತಿನ ಕೋಟ್ಯಂತರ ಜನರು ಪಟಾಕಿ ಮತ್ತು ಹಬ್ಬದ ಬೆಳಕಿನ ಸಂಭ್ರಮದೊಂದಿಗೆ 2023ಕ್ಕೆ ವಿದಾಯ ಹೇಳಿ, 2024ಕ್ಕೆ ಹೊಸ ವರ್ಷ ಆರಂಭದ ಮುನ್ನಾದಿನವಾದ ಭಾನುವಾರ ಮಧ್ಯರಾತ್ರಿ ಸಂಭ್ರಮಾಚರಣೆ ಮಾಡಿದ್ದರು.

ದೇಶಾದ್ಯಂತ ಜನರು ಪರಸ್ಪರ ಶುಭಹಾರೈಸಿ, ಶುಭ ಸಂದೇಶಗಳನ್ನು ರವಾನಿಸುತ್ತಿದ್ದಾರೆ.

ವರ್ಷದ ಮೊದಲ ದಿನ ಅಮೃತಸರದ ಸ್ವರ್ಣ ಮಂದಿರ ಗುರುದ್ವಾರದಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು. ಶಿರೋಮಣಿ ಅಕಾಲಿದಳ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್‌, ಅವರ ಪತ್ನಿ ಸಂಸದೆ ಹರ್‌ಸಿಮ್ರತ್‌ ಕೌರ್ ಬಾದಲ್‌ ಭಾನುವಾರ ರಾತ್ರಿ ಪ್ರಾರ್ಥನೆ ಸಲ್ಲಿಸಿದರು.

ಇದೇ ರೀತಿ, ವರ್ಷದ ಕೊನೆಯ ದಿನ ಕೇರಳದ ಶಬರಿಮಲೆ ಶ್ರೀ ಧರ್ಮ ಶಾಸ್ತಾ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದರು. ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದೇವಾಲಯವು ವರ್ಷದ ಕೊನೆಯ ದಿನದಂದು ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ಭಕ್ತರು ಸೇರುವುದನ್ನು ಸಹ ವೀಕ್ಷಿಸಿದರು.

ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾರತಿ ಮತ್ತು ಸೂರ್ಯಾರತಿಯನ್ನು ನೆರವೇರಿಸಲಾಗಿತ್ತು.

ಇನ್ನೊಂದೆಡೆ ದೆಹಲಿಯ ಕನೌಟ್ ಪ್ಲೇಸ್‌ನಲ್ಲಿ ಝಂಡೇವಾಲನ್ ದೇವಿ ದೇವಸ್ಥಾನದಲ್ಲಿ ಹೊಸ ವರ್ಷದ ಆರತಿಯನ್ನು, ಪೂಜೆಯನ್ನು ನೆರವೇರಿಸಲಾಗಿತ್ತು.

ತಮಿಳುನಾಡಿನ ರಾಮೇಶ್ವರಂನ ಚರ್ಚ್‌ಗಳಲ್ಲಿ ಭಾನುವಾರ ಹೊಸ ವರ್ಷ 2024 ರ ಆರಂಭ ನಿಮಿತ್ತ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಯಿತು.

ಅದೇ ರೀತಿ, ಚೆನ್ನೈನ ಕಾಮರಾಜರ್ ಸಲೈಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಶಿಮ್ಲಾದ ಮಾಲ್ ರಸ್ತೆಯು ಹೊಸ ವರ್ಷವನ್ನು ಸ್ವಾಗತಿಸುವ ಜನರಿಂದ ತುಂಬಿತ್ತು.

ಹೊಸ ವರ್ಷದ ಸಂದರ್ಭದಲ್ಲಿ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿಯ ಬ್ಲೂ ಫ್ಲಾಗ್ ಬೀಚ್‌ನಲ್ಲಿ 25 ಅಡಿ ಎತ್ತರದ ಜಗನ್ನಾಥನ ಮರಳಿನ ಶಿಲ್ಪವನ್ನು ರಚಿಸಿದರು.

ಇದೇ ರೀತಿ, ಗೋವಾ, ಬೆಂಗಳೂರು, ಮುಂಬೈ ನಗರಗಳಲ್ಲಿ ಪಟಾಕಿ ಸಿಡಿಸಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಹೊಸ ವರ್ಷವನ್ನು ಬರಮಾಡಿಕೊಂಡರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ