logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Iphone 15 Pro Max: ಹೊಸ ಐಫೋನ್‌ 15 ಪ್ರೊ ಮ್ಯಾಕ್ಸ್‌ ಲಾಂಚ್‌ಗೆ ಮುನ್ನ ವದಂತಿ, ಹೀಗಿರಲಿದೆಯಂತೆ ವಿನ್ಯಾಸ ಸ್ಪೆಸಿಫಿಕೇಷನ್‌, ದರ ವಿವರ

IPhone 15 Pro Max: ಹೊಸ ಐಫೋನ್‌ 15 ಪ್ರೊ ಮ್ಯಾಕ್ಸ್‌ ಲಾಂಚ್‌ಗೆ ಮುನ್ನ ವದಂತಿ, ಹೀಗಿರಲಿದೆಯಂತೆ ವಿನ್ಯಾಸ ಸ್ಪೆಸಿಫಿಕೇಷನ್‌, ದರ ವಿವರ

Praveen Chandra B HT Kannada

Jun 13, 2023 01:14 PM IST

IPhone 15 Pro Max: ಹೊಸ ಐಫೋನ್‌ 15 ಪ್ರೊ ಮ್ಯಾಕ್ಸ್‌ ಲಾಂಚ್‌ಗೆ ಮುನ್ನ ವದಂತಿ, ಹೀಗಿರಲಿದೆಯಂತೆ ವಿನ್ಯಾಸ ಸ್ಪೆಸಿಫಿಕೇಷನ್‌, ದರ ವಿವರ

  • iPhone 15 series: ಆಪಲ್‌ ಕಂಪನಿಯು ತನ್ನ ಮುಂದಿನ ಕಾರ್ಯಕ್ರಮದಲ್ಲಿ ಮುಂದಿನ ಐಫೋನ್‌ ಸರಣಿಗಳನ್ನು ಬಿಡುಗಡೆ ಮಾಡಿದೆ. ವಿಶೇಷವಾಗಿ, ಐಫೋನ್‌ 15 ಸರಣಿಯ ಹೊಸ ಐಫೋನ್‌ ಪರಿಚಯಿಸಲಿದೆ. 

IPhone 15 Pro Max: ಹೊಸ ಐಫೋನ್‌ 15 ಪ್ರೊ ಮ್ಯಾಕ್ಸ್‌ ಲಾಂಚ್‌ಗೆ ಮುನ್ನ ವದಂತಿ, ಹೀಗಿರಲಿದೆಯಂತೆ ವಿನ್ಯಾಸ ಸ್ಪೆಸಿಫಿಕೇಷನ್‌, ದರ ವಿವರ
IPhone 15 Pro Max: ಹೊಸ ಐಫೋನ್‌ 15 ಪ್ರೊ ಮ್ಯಾಕ್ಸ್‌ ಲಾಂಚ್‌ಗೆ ಮುನ್ನ ವದಂತಿ, ಹೀಗಿರಲಿದೆಯಂತೆ ವಿನ್ಯಾಸ ಸ್ಪೆಸಿಫಿಕೇಷನ್‌, ದರ ವಿವರ (Pexels)

iPhone 15 series: ಆಪಲ್‌ ಕಂಪನಿಯು ತನ್ನ ಮುಂದಿನ ಕಾರ್ಯಕ್ರಮದಲ್ಲಿ ಮುಂದಿನ ಐಫೋನ್‌ ಸರಣಿಗಳನ್ನು ಬಿಡುಗಡೆ ಮಾಡಿದೆ. ವಿಶೇಷವಾಗಿ, ಐಫೋನ್‌ 15 ಸರಣಿಯ ಹೊಸ ಐಫೋನ್‌ ಪರಿಚಯಿಸಲಿದೆ. ಆಪಲ್‌ನ ಮುಂಬರುವ ಐಫೋನ್‌ ಸರಣಿಗಳ ಕುರಿತು ವದಂತಿಗಳು ಹರಿದಾಡುತ್ತಿವೆ. ಹೊಸ ಐಫೋನ್‌ಗಳು ಹೇಗಿರಲಿವೆ? ದರ ಎಷ್ಟಿರಲಿದೆ? ಏನೆಲ್ಲ ಸ್ಪೆಸಿಫಿಕೇಷನ್‌ಗಳು ಇರಲಿವೆ ಎಂಬ ಮಾಹಿತಿಗಳು ಟೆಕ್‌ ಸುದ್ದಿ ಲೋಕದಲ್ಲಿ ಓಡಾಡುತ್ತಿದೆ. ಅಂದಹಾಗೆ, ಮುಂದಿನ ಐಫೋನ್‌ ಮೂರು ತಿಂಗಳಲ್ಲಿ ಲಾಂಚ್‌ ಆಗಲಿದೆ. ಐಫೋನ್‌ 15 ಸರಣಿಯಲ್ಲಿ ಬಿಡುಗಡೆಯಾಗುವ ನೂತನ ಫೋನ್‌ಗಳ ವಿನ್ಯಾಸ ಮತ್ತು ಕ್ಯಾಮೆರಾದಲ್ಲಿ ಪ್ರಮುಖ ಬದಲಾವಣೆ ಇರುವ ಸಾಧ್ಯತೆಯಿದೆ. ವಿಶೇಷವಾಗಿ iPhone 15 Pro Max ಸಾಕಷ್ಟು ಬದಲಾವಣೆ ಇರುವ ನಿರೀಕ್ಷೆಯಿದೆ.

ಟ್ರೆಂಡಿಂಗ್​ ಸುದ್ದಿ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಹೇಗಿರಲಿದೆ ವಿನ್ಯಾಸ

ನೂತನ iPhone 15 Pro Max ಕರ್ವ್ಡ್‌ ವಿನ್ಯಾಸ ಹೊಂದಿರಲಿದೆ ಎಂದು ಹಲವು ಟೆಕ್‌ ವರದಿಗಾರರು ಹೇಳಿದ್ದಾರೆ. ಇವರೆಲ್ಲ ಲೀಕ್‌ ಆಗಿರುವ ಡಮ್ಮಿ ಸ್ಮಾರ್ಟ್‌ಫೋನ್‌ ನೋಡಿಕೊಂಡು ಈ ವಿವರ ನೀಡುತ್ತಿದ್ದಾರೆ. ShrimpApplePro ಪ್ರಕಾರ ನೂತನ ಐಫೋನ್‌ ಬಾಗಿದ ಬದಿಗಳನ್ನು ಹೊಂದಿರಲಿದೆ. ಮುಂಭಾಗ ಫ್ಲಾಟ್‌ ಆಗಿಯೇ ಮುಂದುವರೆಯಲಿದೆ. ಬದಿಗಳು ಹೆಚ್ಚು ಬಾಗಿರುವ ಕಾರಣ ಅತ್ಯಂತ ತೆಳ್ಳನೆಯ ಫೋನ್‌ ಎಂಬ ಫೀಲ್‌ ನೀಡಲಿದೆ. 9to5Mac ಮಾಹಿತಿ ಪ್ರಕಾರ ಐಫೋನ್‌ 15 ಪ್ರೊ ಮ್ಯಾಕ್ಸ್‌ ಅತ್ಯಂತ ತೆಳ್ಳಗಿನ ಐಫೋನ್‌ ಆಗಿರಲಿದೆ.

ಐರೋಪ್ಯ ನಿಯಂತ್ರಕರ ನಿಯಮಗಳಿಗೆ ತಕ್ಕಂತೆ ಐಫೋನ್‌ನಲ್ಲಿ ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಬರಲಿದೆ. ಆದರೆ, ಬೇರೆ ಚಾರ್ಜರ್‌ಗಳು ಮತ್ತು ಕೇಬಲ್‌ಗಳಲ್ಲಿ ಚಾರ್ಜಿಂಗ್‌ ಸ್ಪೀಡ್‌ ಕಡಿಮೆ ಇರಲಿದೆ. ಅತ್ಯುತ್ತಮ ಸ್ಪೀಡ್‌ ದೊರಕಬೇಕಿದ್ದರೆ MFi-certified accessories ಬಳಸಬೇಕು. ಇಷ್ಟು ಮಾತ್ರವಲ್ಲದೆ ಐಫೋನ್‌ 15 ಪ್ರೊ ಮ್ಯಾಕ್ಸ್‌ನಲ್ಲಿ ಟೈಟಾನಿಯಂ ಪ್ರೇಮ್‌ ಇರಲಿದ್ದು, ಆಕರ್ಷಕ ವಾಲ್ಯುಂ ಬಟನ್‌ಗಳು ಇರಲಿವೆ. ಆಪಲ್‌ ವಾಚ್‌ ಅಲ್ಟ್ರಾದಲ್ಲಿರುವಂತಹೆ ನ್ಯೂ ಆಕ್ಷನ್‌ ಬಟನ್‌ ಇರಲಿದೆ ಎಂದು ಇನ್ನೊಂದು ವರದಿ ತಿಳಿಸಿದೆ.

ಸ್ಪೆಸಿಫಿಕೇಷನ್ಸ್‌

iPhone 15 Pro ಮತ್ತು iPhone 15 Pro Maxಗಳು ಕಂಪನಿಯ ನೂತನ ಎ17 ಬಯೋನಿಕ್‌ ಚಿಪ್‌ಸೆಟ್‌ ಹೊಂದಿರಲಿದೆ. ಇದು 3nm ಪ್ರೊಸೆಸ್‌ ಟೆಕ್ನಾಲಜಿ ಹೊಂದಿದೆ. ಇವೆರಡು ಐಫೋನ್‌ಗಳಿಗೆ ಮಾತ್ರ ಈ ಚಿಪ್‌ಸೆಟ್‌ ಇರಲಿದೆ ಎಂದು ಆಪಲ್‌ ವಿಶ್ಲೇಷಕ ಮಿಂಗ್‌ ಚಿ ಕುಹೊ ಹೇಳಿದ್ದಾರೆ. ಇದರ RAM ಎಂಟು ಜಿಬಿ ಇರಲಿದೆ. ಮೆಕ್‌ರೂಮರ್ಸ್‌ ವರದಿ ಪ್ರಕಾರ ನೂತನ ಐಫೋನ್‌ ಪ್ರೊ ಮ್ಯಾಕ್ಸ್‌ Wi-Fi 6E ಹೊಂದಿರಲಿದೆ.

ಕ್ಯಾಮೆರಾ

iPhone 15 Pro Maxನಲ್ಲಿ 48MP ಸೋನಿ IMX803 ಸೆನ್ಸಾರ್‌ ಕ್ಯಾಮೆರಾ ಇರಲಿದೆ ಎಂದು ವರದಿಗಳು ತಿಳಿಸಿವೆ. ಇದರೊಂದಿಗೆ ನೂತನ ಐಫೋನ್‌ನಲ್ಲಿ ಪೆರಿಸ್ಕೋಪ್‌ ಲೆನ್ಸ್‌ ಇರಲಿದೆ. ಮೆಕ್‌ರೂಮರ್ಸ್‌ ಪ್ರಕಾರ ಪೆರಿಸ್ಕೋಪ್‌ ಕ್ಯಾಮೆರಾದಿಂದಾಗಿ ಈಗಿನ ಐಫೋನ್‌ಗಳಿಗಿಂತ ಎರಡು ಪಟ್ಟು ಝೂಮ್‌ ಸಾಧ್ಯವಾಗಲಿದೆ. ಪೆರಿಸ್ಕೋಪ್‌ ಲೆನ್ಸ್‌ಗಾಗಿ ಆಪಲ್‌ ಕಂಪನಿಯು ಬಿಡಿಭಾಗ ತಯಾರಕ ಕಂಪನಿ ಲಾರ್ಜನ್‌ ಜತೆಗೆ ಒಪ್ಪಂದ ಮಾಡಿಕೊಂಡಿತ್ತು.

ಐಫೋನ್‌ 15 ಪ್ರೊ ಮ್ಯಾಕ್ಸ್‌ನ ಕ್ಯಾಮೆರಾವು ಟೆಲಿಫೋಟೊ ಲೆನ್ಸ್‌ ಹೊಂದಿರಲಿದೆ. ಇದರಿಂದ 5X-6X ಆಪ್ಟಿಕಲ್‌ ಝೂಮ್‌ ಸಾಧ್ಯವಾಗಲಿದೆ. ಈಗಿನ ಐಫೋನ್‌ 14 ಪ್ರೊ ಮ್ಯಾಕ್ಸ್‌ನಲ್ಲಿ 3ಎಕ್ಸ್‌ ಝೂಮ್‌ ಇದೆ. ಆದರೆ, ಈ ಫೀಚರ್‌ ಐಫೋನ್‌ 15 ಪ್ರೊ ಮ್ಯಾಕ್ಸ್‌ನಲ್ಲಿ ಮಾತ್ರ ಇರಲಿದೆ ಎಂದು ವರದಿಗಳು ತಿಳಿಸಿವೆ.

ದರ ಎಷ್ಟಿರಬಹುದು?

ಈಗ ಇರುವ ಐಫೋನ್‌ಗಳಿಗಿಂತ ದರ ಹೆಚ್ಚಿರಲಿದೆ. ವರದಿಗಳ ಪ್ರಕಾರ ದರವು ಸುಮಾರು 200 ಡಾಲರ್‌ನಷ್ಟು ಹೆಚ್ಚಿರಲಿದೆ. iPhone 15 Ultra ಆರಂಭಿಕ ದರವು ಸುಮಾರು 1299 ಡಾಲರ್‌ ಇರಲಿದೆ. ಒಂದು ಟಿಬಿ ಮಾಡೆಲ್‌ ದರ ಸುಮಾರು 1799 ಡಾಲರ್‌ ಇರಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ