logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Vertu Phones: ವೆರ್ಟು ದುಬಾರಿ ಫೋನ್‌ಗಳ ಮುಂದೆ ಐಫೋನ್‌ಗಳು ಜುಜುಬಿ, ಈ ವಿಲಾಸಿ ಫೋನ್‌ಗಳ ದರ 2 ಕೋಟಿ ರೂ.ಗೂ ಅಧಿಕ

Vertu Phones: ವೆರ್ಟು ದುಬಾರಿ ಫೋನ್‌ಗಳ ಮುಂದೆ ಐಫೋನ್‌ಗಳು ಜುಜುಬಿ, ಈ ವಿಲಾಸಿ ಫೋನ್‌ಗಳ ದರ 2 ಕೋಟಿ ರೂ.ಗೂ ಅಧಿಕ

Praveen Chandra B HT Kannada

Jun 19, 2023 12:17 PM IST

Vertu luxury Phones: ಜಗತ್ತಿನ ಅತಿದುಬಾರಿ ಮೊಬೈಲ್‌ ಫೋನ್‌ಗಳಿವು, ವೆರ್ಟು ಫೋನ್‌ಗಳ ಮಾಯಾಲೋಕ, ದರ 2 ಕೋಟಿ ರೂ.ಗೂ ಅಧಿಕ

    • ಅಂತಹ ದುಬಾರಿ ಫೋನ್‌ಗಳನ್ನು ಮಾರಾಟ ಮಾಡುವ ಕಂಪನಿಗಳಲ್ಲಿ ವೆರ್ಟು ಮೊಬೈಲ್‌ (Vertu luxury Phones) ಪ್ರಮುಖವಾದದ್ದು. ಬಹುತೇಕರು ಹೆಸರೇ ಕೇಳಿರದ ಈ ವೆರ್ಟು ವಿಲಾಸಿ ಫೋನ್‌ಗಳ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Vertu luxury Phones: ಜಗತ್ತಿನ ಅತಿದುಬಾರಿ ಮೊಬೈಲ್‌ ಫೋನ್‌ಗಳಿವು, ವೆರ್ಟು ಫೋನ್‌ಗಳ ಮಾಯಾಲೋಕ, ದರ 2 ಕೋಟಿ ರೂ.ಗೂ ಅಧಿಕ
Vertu luxury Phones: ಜಗತ್ತಿನ ಅತಿದುಬಾರಿ ಮೊಬೈಲ್‌ ಫೋನ್‌ಗಳಿವು, ವೆರ್ಟು ಫೋನ್‌ಗಳ ಮಾಯಾಲೋಕ, ದರ 2 ಕೋಟಿ ರೂ.ಗೂ ಅಧಿಕ

ಜಗತ್ತಿನಲ್ಲಿ ಆಪಲ್‌ ಐಫೋನ್‌ಗಳೇ ದುಬಾರಿ ಎಂದುಕೊಳ್ಳುವವರು ಇರಬಹುದು. ಆದರೆ, ಅದಕ್ಕಿಂತಲೂ ದುಬಾರಿಯಾದ ಮೊಬೈಲ್‌ ಫೋನ್‌ಗಳಿವೆ. ಅಂತಹ ದುಬಾರಿ ಫೋನ್‌ಗಳನ್ನು ಮಾರಾಟ ಮಾಡುವ ಕಂಪನಿಗಳಲ್ಲಿ ವೆರ್ಟು ಮೊಬೈಲ್‌ (Vertu luxury Phones) ಪ್ರಮುಖವಾದದ್ದು. ಬಹುತೇಕರು ಹೆಸರೇ ಕೇಳಿರದ ಈ ವೆರ್ಟು ವಿಲಾಸಿ ಫೋನ್‌ಗಳ ಕುರಿತು ಹೆಚ್ಚಿನ ವಿವರ ಇಲ್ಲಿದೆ. ಈ ಕಂಪನಿಯ ಫೀಚರ್‌ ಫೋನ್‌(ಸ್ಮಾರ್ಟ್‌ಫೋನ್‌ ಅಲ್ಲ)ವೊಂದರ ದರ 2.2 ಕೋಟಿ ರೂ.ಗಿಂತಲೂ ಹೆಚ್ಚಿದೆ ಎಂದರೆ ನೀವು ಅಚ್ಚರಿ ಪಡುವಿರಿ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಕಳೆದ ವರ್ಷ ವಿಲಾಸಿ ಮೊಬೈಲ್‌ ಫೋನ್‌ ಬ್ರಾಂಡ್‌ VERTU ವೆಬ್‌ 3 ಫೋನ್‌ ಮೆಟಾವೆರ್ಟು ಪರಿಚಯಿಸಿತ್ತು. ಅದರ ದುಬಾರಿ ದರ ನೋಡಿ ಜಗತ್ತೇ ಅಚ್ಚರಿ ವ್ಯಕ್ತಪಡಿಸಿತ್ತು. ಅಂದಹಾಗೆ, ವೆರ್ಟು ಕಂಪನಿಯ ಬಹುತೇಕ ಫೋನ್‌ಗಳ ದರ ಲಕ್ಷ ರೂಪಾಯಿ ಮೇಲೆಯೇ ಇದೆ. ಏಳೆಂಟು ಲಕ್ಷಕ್ಕೂ ದುಬಾರಿಯಾದ ಮೊಬೈಲ್‌ ಫೋನ್‌ಗಳನ್ನು ಈ ಕಂಪನಿ ಮಾರಾಟ ಮಾಡುತ್ತಿದೆ. "ಮೆಟಾವೆರ್ಟು ಕೇವಲ ಫೋನ್‌ ಅಲ್ಲ. ಅದು ಲಗ್ಷುರಿ, ಕರಕುಶಳತೆ ಮತ್ತು ತಂತ್ರಜ್ಞಾನದ ಯುಗಳ ಗೀತೆ" ಎಂದು ಕಂಪನಿ ಕಳೆದ ವರ್ಷ ಮೆಟವೆರ್ಟು ಬಿಡುಗಡೆ ಮಾಡಿದ ಸಂದರ್ಭದಲ್ಲಿ ತಿಳಿಸಿತ್ತು. ಮೆಟಾವೆರ್ಟು ದರ 41,500 ಡಾಲರ್‌. ಅಂದರೆ, ಭಾರತದ ರೂಪಾಯಿಯಲ್ಲಿ ಲೆಕ್ಕ ಹಾಕಿದರೆ 34 ಲಕ್ಷ ರೂಪಾಯಿಗಿಂತಲೂ ಹೆಚ್ಚು.

ಏಕೆ VERTU ಫೋನ್‌ಗಳು ದುಬಾರಿ?

ವೆರ್ಟು ಫೋನ್‌ಗಳು ಐಷಾರಾಮಿ ಮತ್ತು ಕರಕುಶಲತೆಗೆ ಸಮನಾರ್ಥಕ ಪದಗಳು. ಅತ್ಯುತ್ತಮ ವಸ್ತುಗಳನ್ನು ಬಳಕೆ ಮಾಡಿ ಕರಕುಶಲ ವಿನ್ಯಾಸದೊಂದಿದೆ ಈ ಫೋನ್‌ಗಳನ್ನು ತಯಾರಿಸಲಾಗುತ್ತದೆ. ಫೋನ್‌ನ ಗುಣಮಟ್ಟ ಮಾತ್ರವಲ್ಲದೆ ಫೋನ್‌ ಖರೀದಿದಾರರಿಗೆ ಕಂಪನಿಯು ಅತ್ಯುತ್ತಮ ಸೇವೆಯನ್ನೂ ನೀಡುತ್ತದೆ. 24/7 ಸಮಯ ತನ್ನ ಗ್ರಾಹಕರಿಗೆ ವಿನೂತನ ಸೇವೆ ಒದಗಿಸುತ್ತದೆ. ಗ್ರಾಹಕರಿಗೆ ವೈಯಕ್ತಿಕ ಸೇವೆ, ಟ್ರಾವೆಲ್‌ ಬುಕ್ಕಿಂಗ್‌, ರೆಸ್ಟೂರೆಂಟ್‌ ರಿಸರ್ವೇಷನ್‌, ಮನರಂಜನೆ ಚಟುವಟಿಕೆ ಅರೇಂಜ್‌ಮೆಂಟ್‌ ಇತ್ಯಾದಿಗಳನ್ನು ಕಂಪನಿಯೇ ಮಾಡುತ್ತದೆ. ಇದೇ ಕಾರಣಕ್ಕೆ ತನ್ನ ಪ್ರತಿಸ್ಪರ್ಧಿ ಫೋನ್‌ ಕಂಪನಿಗಳಿಗಿಂತ ವೆರ್ತು ಹೆಚ್ಚು ಜನಪ್ರಿಯತೆ ಪಡೆದಿದೆ. ವೆರ್ತು ಫೋನ್‌ಗಳು ಐಷಾರಾಮಿ ಸ್ಥಾನಮಾನ, ಪ್ರತಿಷ್ಠೆಯ ಸಂಕೇತವೂ ಹೌದು.

ಮೆಟಾ ವೆರ್ಟುವಿಗಿಂತಲೂ ದುಬಾರಿ ಫೋನ್‌

ಜಗತ್ತಿನ ಅತ್ಯಂತ ದುಬಾರಿ ಫೋನ್‌ ಎಂದು ಖ್ಯಾತಿ ಪಡೆದಿರುವುದು ವೆರ್ಟುವಿನ ಸಿಗ್ನೇಚರ್‌ ಕೋಬ್ರಾ (Vertu Signature Cobra). 2017ರಲ್ಲಿ ಲಾಂಚ್‌ ಮಾಡಲಾದ ಈ ಫೋನ್‌ನ ದರ 2.3 ಕೋಟಿ ರೂಪಾಯಿ. ಇಷ್ಟು ದರ ನೀಡಿದರೂ ಇದು ಟಚ್‌ ಸ್ಕ್ರೀನ್‌ ಫೋನ್‌ ಅಲ್ಲ, ಕೇವಲ ಫೀಚರ್‌ ಫೋನ್‌. ಸುಮಾರು 388 ಬಿಡಿಭಾಗಗಳನ್ನು ಜೋಡಿಸಿ ಈ ಫೋನ್‌ ತಯಾರಿಸಲಾಗಿದೆ. ಕೇವಲ 8 ಫೋನ್‌ಗಳನ್ನು ಮಾತ್ರ ಬಿಡುಗಡೆ ಮಾಡಿ ಮಾರಾಟ ಮಾಡಿತ್ತು.

ಇದಕ್ಕೂ ಹಿಂದಿನ ವರ್ಷ ಕಂಪನಿಯು ಬೆಂಟ್ಲಿ ಕಾರು ಕಂಪನಿಯ ಸಹಯೋಗದಲ್ಲಿ ಸಿಗ್ನೇಚರ್ ಟಚ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತು. ಇದು 1080x1920 ಪಿಕ್ಸೆಲ್ ರೆಸಲ್ಯೂಶನ್‌ನ 5.2-ಇಂಚಿನ ಪೂರ್ಣ ಎಚ್‌ಡಿ ಡಿಸ್ಪ್ಲೇಯನ್ನು ಹೊಂದಿದೆ. 4GB RAM ಜತೆಗೆ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 810 SoC ಹೊಂದಿದೆ. 21 ಎಂಬಿ ಹಿಂಬದಿ ಕ್ಯಾಮೆರಾ, ಮುಂಭಾಗದಲ್ಲಿ 2.1 ಕ್ಯಾಮೆರಾ ಇದೆ. 3,160 ಎಂಎಎಚ್‌ ಬ್ಯಾಟರಿ ಇದೆ. ಈ ರೀತಿ ಸಾಮಾನ್ಯ ಫೀಚರ್‌ ಹೊಂದಿದ್ದರೂ ಇದರ ದರ 90 ಸಾವಿರ ರೂಪಾಯಿ ಆಸುಪಾಸಿನಲ್ಲಿದೆ.

ಈಗ ನಿಮಗೆ ವೆರ್ಟು ಫೋನ್‌ಗಳು ದುಬಾರಿಯೆಂಬ ಅಂಶ ತಿಳಿದುಬಂದಿರಬಹುದು. ಆದರೆ, ಇಂತಹ ದುಬಾರಿ ಫೋನ್‌ಗಳು ನೋಡಲು ಹೇಗಿರುತ್ತವೆ ಎಂಬ ಕುತೂಹಲ ನಿಮ್ಮಲ್ಲಿರಬಹುದು. ಜಗತ್ತಿನ ಅಗ್ರ ದುಬಾರಿ ಫೋನ್‌ಗಳ ಫೋಟೊ ಫೀಚರ್‌ ಇಲ್ಲಿದೆ. ಕ್ಲಿಕ್‌ ಮಾಡಿ, ಕಣ್ತುಂಬಿಕೊಳ್ಳಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ