logo
ಕನ್ನಡ ಸುದ್ದಿ  /  Nation And-world  /  Terrorist Property Attachement Nia Attaches Property Of Pak-based Listed Terrorist Basit Ahmad Reshi

Terrorist property attachement: ಉಗ್ರ ಬಸಿತ್ ಅಹ್ಮದ್ ರೇಶಿ ಆಸ್ತಿ ಎನ್‌ಐಎ ವಶ

HT Kannada Desk HT Kannada

Mar 03, 2023 04:16 PM IST

ಎನ್‌ಐಎ ನೋಟಿಸ್‌ (ಕಡತ ಚಿತ್ರ)

  • Terrorist property attachement: ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಪಾಕಿಸ್ತಾನ ಮೂಲದ ಪಟ್ಟಿಮಾಡಿದ ಭಯೋತ್ಪಾದಕ ಬಸಿತ್ ಅಹ್ಮದ್ ರೇಶಿ ಆಸ್ತಿಯನ್ನು ಜಪ್ತಿ ಮಾಡಿದೆ.

ಎನ್‌ಐಎ ನೋಟಿಸ್‌ (ಕಡತ ಚಿತ್ರ)
ಎನ್‌ಐಎ ನೋಟಿಸ್‌ (ಕಡತ ಚಿತ್ರ) (ANI)

ನವದೆಹಲಿ: ಪಾಕಿಸ್ತಾನದ ನೆಲದಿಂದ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮವನ್ನು ಮುಂದುವರೆಸಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಪಾಕಿಸ್ತಾನ ಮೂಲದ ಪಟ್ಟಿಮಾಡಿದ ಭಯೋತ್ಪಾದಕ ಬಸಿತ್ ಅಹ್ಮದ್ ರೇಶಿ ಆಸ್ತಿಯನ್ನು ಜಪ್ತಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

Lok Sabha Elections: ಲೈಂಗಿಕ ದೌರ್ಜನ್ಯ ಪ್ರಕರಣ ಆರೋಪಿ ಸಂಸದ ಬದಲು ಮಗನಿಗೆ ಟಿಕೆಟ್‌ ನೀಡಿದ ಬಿಜೆಪಿ

Lok Sabha Election 2024: ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸುತ್ತಿರುವ ಶ್ಯಾಮ್ ರಂಗೀಲ ಯಾರು; 10 ಪ್ರಮುಖ ಅಂಶಗಳಿವು

20 ವರ್ಷಗಳಲ್ಲಿ 115 ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ; ಅಗ್ರ ಸ್ಥಾನದಲ್ಲಿರುವ ಮದ್ರಾಸ್‌ನಲ್ಲಿ 26 ಸಾವು, ಆರ್‌ಟಿಐನಿಂದ ಮಾಹಿತಿ ಬಹಿರಂಗ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು, ಮೇ ತಿಂಗಳ ಉತ್ಸವ ವೇಳಾಪಟ್ಟಿ ಪ್ರಕಟಿಸಿದ ಟಿಟಿಡಿ

ರೇಶಿಗೆ ಸಬಂಧಿಸಿದ 9.25 ಮಾರ್ಲಾಸ್ ಅಳತೆಯ ಕೃಷಿ ಭೂಮಿಯನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ನಿಬಂಧನೆಗಳ ಪ್ರಕಾರ ಜಪ್ತಿ ಮಾಡಲಾಗಿದೆ ಎಂದು ಎನ್ಐಎ ಹೇಳಿಕೆಯಲ್ಲಿ ತಿಳಿಸಿದೆ.

ರಾಜ್ಯ ಸರ್ಕಾರ ಮತ್ತು ರಾಜ್ಯ ಪೊಲೀಸರು ಆಸ್ತಿ ಜಪ್ತಿ ಪ್ರಕ್ರಿಯೆಯಲ್ಲಿ ಎನ್‌ಐಎಗೆ ಸಹಾಯ ಮಾಡಿದರು. ಬಾರಾಮುಲ್ಲಾ ನಿವಾಸಿಯಾಗಿರುವ ರೇಶಿ ಅವರು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ 'ಪಟ್ಟಿ ಮಾಡಲಾದ ಭಯೋತ್ಪಾದಕ' ಮತ್ತು ಪಾಕಿಸ್ತಾನಕ್ಕೆ ಗಡಿಪಾರು ಮಾಡಿದ ನಂತರ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈತ ಕಣಿವೆಯಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಮತ್ತು ಕೃತ್ಯಗಳಿಗೆ ಹಣ ನೀಡುತ್ತಿರುವುದು ಪತ್ತೆಯಾಗಿದೆ ಎಂದು ಎನ್‌ಐಎ ಶುಕ್ರವಾರ ತಿಳಿಸಿದೆ.

ಈ ಕ್ರಮವು ಗುರುವಾರ ಅಲ್-ಉಮರ್ ಮುಜಾಹಿದ್ದೀನ್‌ನ ಸಂಸ್ಥಾಪಕ ಮತ್ತು ಮುಖ್ಯ ಕಮಾಂಡರ್ ಮುಷ್ತಾಕ್ ಜರ್ಗರ್ ಅಲಿಯಾಸ್ ಲಾಟ್ರಾಮ್‌ಗೆ ಸೇರಿದ ಆಸ್ತಿಯನ್ನು ಶ್ರೀನಗರದಲ್ಲಿ ಜಪ್ತಿ ಮಾಡಿದ ಬೆನ್ನಿಗೆ ಈ ಕ್ರಮವನ್ನು ಎನ್‌ಐಎ ಜರುಗಿಸಿದೆ.

ರೇಶಿ 2015 ರಲ್ಲಿ ಉಗ್ರಗಾಮಿ ಸಂಘಟನೆಯಲ್ಲಿ ಹೊಣೆಗಾರಿಕೆಯ ಶ್ರೇಣಿಗೆ ಸೇರಿದ ಮತ್ತು ಸೋಪೋರ್‌ನ ಪೊಲೀಸ್ ಗಾರ್ಡ್ ಪೋಸ್ಟ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ಯೋಜನೆ ಮತ್ತು ಕಾರ್ಯಗತಗೊಳಿಸುವಲ್ಲಿ ಭಾಗಿಯಾಗಿದ್ದ. ಆ ದಾಳಿಯಲ್ಲಿ ಒಬ್ಬ ಕಾನ್‌ಸ್ಟೆಬಲ್‌ ಹತನಾಗಿ ಹಲವರು ಗಾಯಗೊಂಡಿದ್ದರು.

ರೇಶಿ ಈ ಹಿಂದೆ ನಿಷೇಧಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್-ಮುಜಾಹಿದ್ದೀನ್ ಜತೆ ಸಂಬಂಧ ಹೊಂದಿದ್ದ ಮತ್ತು ನಂತರ ಆತನನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗಿತ್ತು. ರೇಶಿ ಪ್ರಸ್ತುತ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್‌) ನ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಅಲ್ಲದೆ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಮತ್ತು ಗಡಿಯುದ್ದಕ್ಕೂ ಟಿಆರ್‌ಎಫ್‌ನ ಹಣಕಾಸು ನಿರ್ವಹಣೆಗೂ ನೆರವಾಗುತ್ತಿದ್ದಾನೆ.

ಇದುವರೆಗೆ, ಎನ್‌ಐಎ ಐದು ಘೋಷಿತ ಭಯೋತ್ಪಾದಕರ ಆಸ್ತಿಗಳನ್ನು ಜಪ್ತಿ ಮಾಡಿದೆ. ಅಮೆರಿಕ ಮೂಲದ ಗುರುಪತ್‌ವಂತ್ ಸಿಂಗ್ ಪನ್ನುನ್, ಕೆನಡಾ ಮೂಲದ ಹರ್ದೀಪ್ ಸಿಂಗ್ ನಿಜ್ಜರ್ ಮತ್ತು ಪಾಕಿಸ್ತಾನ ಮೂಲದ ಭಯೋತ್ಪಾದಕರಾದ-ಮುಷ್ತಾಕ್ ಜರ್ಗರ್ ಅಲಿಯಾಸ್ ಲಟ್ರಾಮ್, ಬಸಿತ್ ಅಹ್ಮದ್ ಪಿರ್ ಮತ್ತು ಕೆಸಿಎಫ್ (ಪಂಜ್ವಾರ್) ಪರಮ್‌ಜಿತ್ ಸಿಂಗ್ ಅಲಿಯಾಸ್ ಪಂಜ್ವಾರ್ ಈ ಪಟ್ಟಿಯಲ್ಲಿರುವಂಥವರು.

ಇದರ ಜತೆಗೆ, ಹುರಿಯತ್ ಭಯೋತ್ಪಾದಕ ನಿಧಿ ಪ್ರಕರಣದಲ್ಲಿ ಎನ್‌ಐಎ ಆರೋಪಪಟ್ಟಿ ಸಲ್ಲಿಸಿದ ಆರೋಪಿ ನಯೀಮ್ ಖಾನ್ ಅವರ ಭಾಗಶಃ ಮಾಲೀಕತ್ವದ ಶ್ರೀನಗರದಲ್ಲಿರುವ ಹುರಿಯತ್ ಕಚೇರಿಯನ್ನು ಯುಎಪಿಎ ಅಡಿಯಲ್ಲಿ ಎನ್‌ಐಎ ಇತ್ತೀಚೆಗೆ ಜಪ್ತಿ ಮಾಡಿತ್ತು.

ಗಮನಿಸಬಹುದಾದ ಸುದ್ದಿ

ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳ ಮೇಲೆ ಬಿಜೆಪಿ ಕಣ್ಣು; ಮೈನ್‌ಪುರಿ-ರಾಯ್ ಬರೇಲಿ ಗೆಲ್ಲೋದು ಸ್ವಲ್ಪ ಕಷ್ಟವೇ..

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಈಗಲೇ ಸಿದ್ಧತೆ ಶುರುವಾಗಿದೆ. ಉತ್ತರ ಪ್ರದೇಶದ ಎಲ್ಲ 80 ಲೋಕಸಭಾ ಸ್ಥಾನಗಳನ್ನು ಗೆಲ್ಲುವುದಕ್ಕೆ ಬಿಜೆಪಿ ಮೆಗಾ ಪ್ಲಾನ್‌ ಸಿದ್ಧಪಡಿಸುತ್ತಿದೆ. ಬಿಜೆಪಿಯು ಮಿಷನ್‌ 2024 (BJP Mission 2024) ಯೋಜನೆ ರೂಪಿಸಿಕೊಂಡಿದ್ದು, ಇದಕ್ಕೆ ಪೂರಕವಾಗಿ 80 ಲೋಕಸಭಾ ಸ್ಥಾನಗಳನ್ನು ಗೆಲ್ಲುವುದಕ್ಕೆ ರಣತಂತ್ರ ರೂಪಿಸಲು ಸಜ್ಜಾಗಿದೆ. ಪಕ್ಷದ ವರಿಷ್ಠರ ಅಪೇಕ್ಷೆಯ ಪ್ರಕಾರ, ರಾಜ್ಯದ ಉಸ್ತುವಾರಿ-ಸಂಯೋಜಕರು ಈ ಕುರಿತು ಮಾರ್ಚ್‌ 15ರ ಒಳಗೆ ವರದಿಯನ್ನು ಸಲ್ಲಿಸುವ ನಿರೀಕ್ಷೆ ಇದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು