logo
ಕನ್ನಡ ಸುದ್ದಿ  /  Nation And-world  /  Two Get Death Sentence For Gang Rape And Attempt To Kill A Minor Girl In Pratapgarh

Death sentence to rape accused: ಅಪ್ರಾಪ್ರೆ ಮೇಲೆ ಅತ್ಯಾಚಾರ ಎಸಗಿ ಕೊಲ್ಲಲು ಯತ್ನಿಸಿದ ಇಬ್ಬರಿಗೆ ಮರಣದಂಡನೆ ಶಿಕ್ಷೆ

HT Kannada Desk HT Kannada

Nov 04, 2022 02:45 PM IST

ಸಾಂದರ್ಭಿಕ ಚಿತ್ರ

    • ಡಿಸೆಂಬರ್ 27, 2021 ರಂದು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕೊಲ್ಲಲು ಯತ್ನಿಸಿದ ಇಬ್ಬರು ಆರೋಪಿಗಳಿಗೆ ಕೇವಲ 11 ತಿಂಗಳೊಳಗೆ ಉತ್ತರ ಪ್ರದೇಶದ ಪ್ರತಾಪ್‌ಗಢದ ಪೋಕ್ಸೋ ನ್ಯಾಯಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪ್ರತಾಪ್‌ಗಢ (ಉತ್ತರ ಪ್ರದೇಶ): ಡಿಸೆಂಬರ್ 27, 2021 ರಂದು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕೊಲ್ಲಲು ಯತ್ನಿಸಿದ ಇಬ್ಬರು ಆರೋಪಿಗಳಿಗೆ ಕೇವಲ 11 ತಿಂಗಳೊಳಗೆ ಉತ್ತರ ಪ್ರದೇಶದ ಪ್ರತಾಪ್‌ಗಢದ ಪೋಕ್ಸೋ ನ್ಯಾಯಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ.

ಟ್ರೆಂಡಿಂಗ್​ ಸುದ್ದಿ

Lok Sabha Election 2024: ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸುತ್ತಿರುವ ಶ್ಯಾಮ್ ರಂಗೀಲ ಯಾರು; 10 ಪ್ರಮುಖ ಅಂಶಗಳಿವು

20 ವರ್ಷಗಳಲ್ಲಿ 115 ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ; ಅಗ್ರ ಸ್ಥಾನದಲ್ಲಿರುವ ಮದ್ರಾಸ್‌ನಲ್ಲಿ 26 ಸಾವು, ಆರ್‌ಟಿಐನಿಂದ ಮಾಹಿತಿ ಬಹಿರಂಗ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು, ಮೇ ತಿಂಗಳ ಉತ್ಸವ ವೇಳಾಪಟ್ಟಿ ಪ್ರಕಟಿಸಿದ ಟಿಟಿಡಿ

Gold Rate Today: ಚಿನ್ನಾಭರಣ ಪ್ರಿಯರಿಗೆ ಇಲ್ಲಿದೆ ಗುಡ್‌ನ್ಯೂಸ್‌; 10ಗ್ರಾಂ ಚಿನ್ನಕ್ಕೆ 1000 ರೂ ಇಳಿಕೆ, ಬೆಳ್ಳಿ ದರವೂ ಕುಸಿತ

ಅಲ್ಲದೆ ಬಾಲಕಿಯ ಕಣ್ಣುಗಳು, ಮುಖ ಮತ್ತು ಕಾಲಿನ ಮೂಳೆಗಳಿಗೆ ಹಾನಿ ಮಾಡಿದ ಆರೋಪದ ಮೇಲೆ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ತಲಾ 50,000 ರೂಪಾಯಿ ದಂಡವನ್ನೂ ವಿಧಿಸಿದೆ. ಕೃತ್ಯದ ಬಗ್ಗೆ ಮಾಹಿತಿ ಪಡೆದಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಮತ್ತು ತ್ವರಿತ ಕ್ರಮಕ್ಕೆ ನಿರ್ದೇಶನ ನೀಡಿದ್ದರು.

"ಈ ಪ್ರಕರಣದ ತನಿಖೆಯಲ್ಲಿ ಪೊಲೀಸರು ಮಾತ್ರ ತ್ವರಿತವಾಗಿ ಕಾರ್ಯನಿರ್ವಹಿಸಲಿಲ್ಲ, ರಾಜ್ಯ ಸರ್ಕಾರದ ಪ್ರಾಸಿಕ್ಯೂಷನ್ ಕಡೆಯವರು ನ್ಯಾಯಾಲಯದ ಮುಂದೆ ಪರಿಣಾಮಕಾರಿ ವಾದಗಳನ್ನು ಮಂಡಿಸಿದರು, ಇದು ಕೇವಲ 11 ತಿಂಗಳೊಳಗೆ ಅತ್ಯಾಚಾರ ಮತ್ತು ಕೊಲೆ ಯತ್ನದ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲು ಕಾರಣವಾಯಿತು" ಎಂದು ಗೃಹ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2021ರ ಡಿಸೆಂಬರ್​ 27 ರಂದು ಹಲೀಮ್, ರಿಜ್ವಾನ್ ಮತ್ತು ಇನ್ನೊಬ್ಬ ಅಪ್ರಾಪ್ತ ಬಾಲಕ - ಈ ಮೂವರು ಸೇರಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಆಕೆಯ ಮೇಲೆ ಹಲ್ಲೆ ನಡೆಸಿ ರೈಲ್ವೇ ಹಳಿ ಮೇಲೆ ಎಸೆದು ಪರಾರಿಯಾಗಿದ್ದರು.

ಪ್ರತಾಪ್‌ಗಢ ಜಿಲ್ಲೆಯ ನವಾಬ್‌ಗಂಜ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 326, 308 ಮತ್ತು 363ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಮೂವರನ್ನು ಬಂಧಿಸಿ ಅಪ್ರಾಪ್ತ ಆರೋಪಿಯನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಇದೀಗ ಹಲೀಮ್ ಮತ್ತು ರಿಜ್ವಾನ್​​ಗೆ ಶಿಕ್ಷೆ ಪ್ರಕಟವಾಗಿದೆ.

ಕಲಬುರಗಿಯಲ್ಲಿ ಬಾಲಕಿಯ ಅತ್ಯಾಚಾರ-ಕೊಲೆ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗ್ರಾಮವೊಂದರಲ್ಲಿ ಮಂಗಳವಾರ (ನವೆಂಬರ್ 1) ನಡೆದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಘಟನೆ ನಡೆದ 24 ಗಂಟೆಗಳಲ್ಲೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳವಾರ ಸಂಜೆ 14 ವರ್ಷದ ಬಾಲಕಿಯ ಅರೆಬೆತ್ತಲೆ ಶವ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ. ಬಾಲಕಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಹಿರ್ದೆಸೆಗೆ ತೆರಳಿದ್ದಳು. ಸಂಜೆ 6 ಗಂಟೆಯಾದರೂ ಮನೆಗೆ ಹಿಂದಿರುಗದ ಕಾರಣ ಮನೆಯವರು ಗಾಬರಿಯಾಗಿ ಹುಡುಕಾಡಲು ಆರಂಭಿಸಿದ್ದಾರೆ. ಇವರೊಂದಿಗೆ ಕೆಲ ಗ್ರಾಮಸ್ಥರೂ ಸೇರಿ ಹುಡುಕಿದ್ದಾರೆ.

ಗ್ರಾಮದಿಂದ 100 ಮೀಟರ್ ದೂರದಲ್ಲಿ ಬಾಲಕಿಯ ಒಂದು ಪಾದರಕ್ಷೆ ಹಾಗೂ 500 ಮೀಟರ್ ದೂರದಲ್ಲಿ ಕಬ್ಬಿನ ಗದ್ದೆ ಮತ್ತೊಂದು ಪಾದರಕ್ಷೆ ಪತ್ತೆಯಾಗಿದೆ. ಸ್ವಲ್ಪ ಮುಂದೆ ಹೋಗಿ ನೋಡಿದಾಗ ಕಬ್ಬಿನ ಗದ್ದೆಯಲ್ಲಿ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ನಂತರ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಕಲಬುರಗಿ ಎಸ್ಪಿ ಇಶಾ ಪಂಥ್ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು