logo
ಕನ್ನಡ ಸುದ್ದಿ  /  Nation And-world  /  Upsc Recruitment 2023: Apply For 73 Assistant Controller And Other Posts

UPSC Recruitment 2023: ಯುಪಿಎಸ್‌ಸಿ ಮೂಲಕ ನೇಮಕ, 73 ಅಸಿಸ್ಟೆಂಟ್‌ ಕಂಟ್ರೋಲರ್‌ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ

Praveen Chandra B HT Kannada

Feb 11, 2023 09:38 AM IST

UPSC Recruitment 2023: ಯುಪಿಎಸ್‌ಸಿ ಮೂಲಕ ನೇಮಕ

    • ಕೇಂದ್ರ ಲೋಕ ಸೇವಾ ಆಯೋಗವು ಅಸಿಸ್ಟೆಂಟ್‌ ಕಂಟ್ರೋಲರ್‌ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು upsc.gov.in ಮುಖಾಂತರ ಅರ್ಜಿ ಸಲ್ಲಿಸಬಹುದು.
UPSC Recruitment 2023: ಯುಪಿಎಸ್‌ಸಿ ಮೂಲಕ ನೇಮಕ
UPSC Recruitment 2023: ಯುಪಿಎಸ್‌ಸಿ ಮೂಲಕ ನೇಮಕ

ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗವು ಅಸಿಸ್ಟೆಂಟ್‌ ಕಂಟ್ರೋಲರ್‌ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು upsc.gov.in ಮುಖಾಂತರ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ, ಹುದ್ದೆಗಳ ಸಂಖ್ಯೆ, ವಯೋಮಿತಿ ಸೇರಿದಂತೆ ಹೆಚ್ಚಿನ ವಿವರವನ್ನು ಇಲ್ಲಿ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

Closing Bell: ಮುಂಬೈ ಷೇರುಪೇಟೆಯ ವಾರಾಂತ್ಯದಲ್ಲಿ ಸೆನ್ಸೆಕ್ಸ್ 732 ಅಂಕಗಳ ಕುಸಿತ; ಈ ಪರಿ ಮಾರುಕಟ್ಟೆ ತಲ್ಲಣಕ್ಕೆ ಕಾರಣವೇನು

ತಿರುಮಲ ತಿರುಪತಿ ಜುಲೈ ತಿಂಗಳ ವಿಶೇಷ ಪ್ರವೇಶ ಟಿಕೆಟ್, ಟಿಟಿಡಿ ವೆಬ್‌ಸೈಟ್ ಮೂಲಕ 300 ರೂಪಾಯಿ ಟಿಕೆಟ್‌

ರಣಬಿಸಿಲಿನಿಂದ ರಕ್ಷಣೆಗೆ ಟ್ರಾಫಿಕ್‌ ಸಿಗ್ನಲ್ ಸಮೀಪ ಹಸಿರು ನೆರಳು ಬಲೆ; ಪುದುಚೇರಿ ಪಿಡಬ್ಲ್ಯುಡಿ ಇಲಾಖೆ ಉಪಕ್ರಮಕ್ಕೆ ವ್ಯಾಪಕ ಮೆಚ್ಚುಗೆ

ಅರ್ಜಿ ಸಲ್ಲಿಸಲು ಮಾರ್ಚ್‌ 2, 2023 ಕೊನೆಯ ದಿನಾಂಕವಾಗಿದೆ.

ಹುದ್ದೆಗಳ ವಿವರ

  • ಫೋರ್‌ಮ್ಯಾನ್ (ಏರೋನಾಟಿಕಲ್): 1 ಹುದ್ದೆ
  • ಫೋರ್‌ಮ್ಯಾನ್ (ಕೆಮಿಕಲ್): 4 ಹುದ್ದೆಗಳು
  • ಫೋರ್‌ಮ್ಯಾನ್ ಕಂಪ್ಯೂಟರ್ (IT): 2 ಹುದ್ದೆಗಳು
  • ಫೋರ್‌ಮ್ಯಾನ್ (ಎಲೆಕ್ಟ್ರಿಕಲ್): 1 ಹುದ್ದೆ
  • ಫೋರ್‌ಮ್ಯಾನ್ (ಎಲೆಕ್ಟ್ರಾನಿಕ್ಸ್): 1 ಹುದ್ದೆ
  • ಫೋರ್‌ಮ್ಯಾನ್ (ಮೆಟಲರ್ಜಿ): 2 ಹುದ್ದೆಗಳು
  • ಫೋರ್‌ಮ್ಯಾನ್ (ಟೆಕ್ಸ್‌ಟೈಲ್): 2 ಹುದ್ದೆಗಳು
  • ಉಪ ನಿರ್ದೇಶಕರು: 12 ಹುದ್ದೆಗಳು
  • ಸಹಾಯಕ ನಿಯಂತ್ರಕ: 47 ಹುದ್ದೆಗಳು
  • ಕಾರ್ಮಿಕ ಅಧಿಕಾರಿ: 1 ಹುದ್ದೆ

ವಿದ್ಯಾರ್ಹತೆ

ಆಯಾ ಹುದ್ದೆಗಳಿಗೆ ತಕ್ಕಂತೆ ಏರೋನಾಟಿಕಲ್‌, ಎಲೆಕ್ಟ್ರಿಕಲ್‌ ಇತ್ಯಾದಿ ವಿಷಯಗಳಲ್ಲಿ ಎಂಜಿನಿಯರಿಂಗ್‌ ಪದವಿ ಬಯಸಲಾಗಿದೆ. ಈ ಕುರಿತು ವಿವರವಾದ ಮಾಹಿತಿ ಪಡೆಯಲು ಅಧಿಸೂಚನೆಯನ್ನು ಗಮನಿಸಿ. ಅಧಿಸೂಚನೆಯನ್ನು ಈ ಕೆಳಗೆ ನೀಡಲಾಗಿದೆ.

ಅರ್ಜಿ ಶುಲ್ಕ

ಅರ್ಜಿ ಶುಲ್ಕ 25 ರೂ. ನಿಗದಿಪಡಿಸಲಾಗಿದೆ. ಎಸ್‌ಬಿಐ ನೆಟ್‌ಬ್ಯಾಂಕಿಂಗ್‌ ಅಥವಾ ಆನ್‌ಲನ್‌ ಪಾವತಿ ವಿಧಾನದ ಮೂಲಕ ಶುಲ್ಕ ಪಾವತಿಸಬಹುದು. ಎಸ್‌ಸಿ/ಎಸ್‌ಟಿ/ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.

ಆಯ್ಕೆ ಪ್ರಕ್ರಿಯೆ

ಸಂದರ್ಶನ ಮತ್ತು ನೇಮಕಾತಿ ಪರೀಕ್ಷೆಗಳ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ವಿವರ ಪಡೆಯಲು ಮತ್ತು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

 

ಸೇನೆಯಿಂದ ಎರಡನೇ ಹಂತದ ಅಗ್ನಿವೀರರ ನೇಮಕಾತಿ

ಭಾರತೀಯ ಸೇನೆಯು ಅಗ್ನಿಪಥ ಯೋಜನೆಯಡಿ ಎರಡನೇ ಹಂತದ ಅಗ್ನಿವೀರರ ನೇಮಕಾತಿಯನ್ನು ಇದೇ ಫೆಬ್ರವರಿ ತಿಂಗಳ ಮಧ್ಯೆ ಆರಂಭಿಸಲಿದೆ. ಸುಮಾರು ಒಂದು ತಿಂಗಳ ಕಾಲ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಬಲ್ಲಮೂಲಗಳು ತಿಳಿಸಿವೆ.

ಕಳೆದ ವರ್ಷ ಭಾರತೀಯ ಸೇನೆಯು ಅಗ್ನಿವೀರರ ನೇಮಕಾತಿ ರಾಲಿ ಕೈಗೊಂಡಿತ್ತು. ಸುಮಾರು 19 ಸಾವಿರ ಅಗ್ನಿವೀರರಿಗೆ ಜನವರಿ ತಿಂಗಳಲ್ಲಿ ತರಬೇತಿಯೂ ಆರಂಭವಾಗಿದೆ. ಸುಮಾರು 21 ಸಾವಿರ ಅಗ್ನಿವೀರರು ಮಾರ್ಚ್‌ ತಿಂಗಳಲ್ಲಿ ಸೇನೆಗೆ ಸೇರಲಿದ್ದಾರೆ.

ಇದೀಗ ಮತ್ತೊಂದು ಹಂತದಲ್ಲಿ ನೇಮಕಾತಿ ಆರಂಭವಾಗಲಿದ್ದು, ಸಾವಿರಾರು ಜನರಿಗೆ ಭಾರತೀಯ ಸೇನೆಗೆ ಅಗ್ನಿವೀರರಾಗಿ ಸೇರುವ ಅವಕಾಶ ದೊರಕಲಿದೆ. ಎರಡನೇ ಹಂತದ ನೇಮಕಾತಿಯಲ್ಲಿ ನೇಮಕ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆ ಇರಲಿದೆ ಎಂದು ಮೂಲಗಳು ತಿಳಿಸಿವೆ.

ಈ ಬಾರಿ ನೇಮಕಾತಿ ರಾಲಿಗೆ ಮೊದಲು ಆನ್‌ಲೈನ್‌ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಇ) ಇರಲಿದೆ ಎಂದು ಹೆಸರು ಹೇಳಲು ಬಯಸದ ಮೂಲಗಳು ಮಾಹಿತಿ ನೀಡಿವೆ. ಮೊದಲ ಹಂತದಲ್ಲಿ ಆನ್‌ಲೈನ್‌ ಪರೀಕ್ಷೆ ಇರದೆ ಇದ್ದರೂ ಮೊದಲ ಹಂತದ ನೇಮಕಾತಿ ನಡೆದ ಬಳಿಕ, ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯ ಬಳಿಕ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು