logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Mahindra Xuv700: ಖರೀದಿಸಿದ 6 ತಿಂಗಳಲ್ಲೇ ಹೆದ್ದಾರಿಯಲ್ಲಿ ಹೊತ್ತಿ ಉರಿದ 20 ಲಕ್ಷ ರೂನ ಎಕ್ಸ್‌ಯುವಿ 700, ತಪ್ಪು ನಮ್ಮದಲ್ಲ ಎಂದ ಮಹೀಂದ್ರ

Mahindra XUV700: ಖರೀದಿಸಿದ 6 ತಿಂಗಳಲ್ಲೇ ಹೆದ್ದಾರಿಯಲ್ಲಿ ಹೊತ್ತಿ ಉರಿದ 20 ಲಕ್ಷ ರೂನ ಎಕ್ಸ್‌ಯುವಿ 700, ತಪ್ಪು ನಮ್ಮದಲ್ಲ ಎಂದ ಮಹೀಂದ್ರ

Praveen Chandra B HT Kannada

May 23, 2023 09:28 AM IST

Mahindra XUV700: ಖರೀದಿಸಿದ ಆರು ತಿಂಗಳಲ್ಲಿಯೇ ಹೆದ್ದಾರಿಯಲ್ಲಿ ಉರಿದ ಮಹೀಂದ್ರ ಎಕ್ಸ್‌ಯುವಿ 700, ಪ್ರತಿಕ್ರಿಯೆ ನೀಡಿದ ಕಂಪನಿ (Image: Twitter/Kuldeep Singh)

    • Why Mahindra XUV700 fire Jaipur highway: ಮಹೀಂದ್ರ ಎಕ್ಸ್‌ಯುವಿ 700 ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿಯ ಕುರಿತು ಇದೀಗ ಮಹೀಂದ್ರ ಕಂಪನಿಯು ಪ್ರತಿಕ್ರಿಯೆ ನೀಡಿದೆ.  ಮೂಲ ವೈರಿಂಗ್‌ ಟ್ಯಾಂಪರ್‌ ಮಾಡಿರುವುದೇ ಘಟನೆಗೆ ಕಾರಣ ಎಂದಿದೆ. 
Mahindra XUV700: ಖರೀದಿಸಿದ ಆರು ತಿಂಗಳಲ್ಲಿಯೇ ಹೆದ್ದಾರಿಯಲ್ಲಿ ಉರಿದ ಮಹೀಂದ್ರ ಎಕ್ಸ್‌ಯುವಿ 700, ಪ್ರತಿಕ್ರಿಯೆ ನೀಡಿದ ಕಂಪನಿ (Image: Twitter/Kuldeep Singh)
Mahindra XUV700: ಖರೀದಿಸಿದ ಆರು ತಿಂಗಳಲ್ಲಿಯೇ ಹೆದ್ದಾರಿಯಲ್ಲಿ ಉರಿದ ಮಹೀಂದ್ರ ಎಕ್ಸ್‌ಯುವಿ 700, ಪ್ರತಿಕ್ರಿಯೆ ನೀಡಿದ ಕಂಪನಿ (Image: Twitter/Kuldeep Singh)

ಜೈಪುರ: ಕಳೆದ ಒಂದೆರಡು ದಿನಗಳಿಂದ ಮಹೀಂದ್ರ ಎಕ್ಸ್‌ಯುವಿ 700 ಕಾರು ಬೆಂಕಿಗೆ ಆಹುತಿಯಾದ ಸುದ್ದಿಯೊಂದು ಚರ್ಚೆಯಲ್ಲಿದೆ. ಮಹೀಂದ್ರ ಕಂಪನಿಯ ಈ ಎಸ್‌ಯುವಿಯನ್ನು ಹೊಂದಿರುವ ಮಾಲೀಕರಾದ ಕುಲದೀಪ್ ಸಿಂಗ್ ಮೇ 21ರಂದು ಸುಟ್ಟ ತಮ್ಮ ಕಾರಿನ ಚಿತ್ರಗಳು ಮತ್ತು ವಿಡಿಯೋವನ್ನು ಟ್ವೀಟ್‌ ಮಾಡಿದ್ದಾರೆ. ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ ಬೆಂಕಿ ಹೊತ್ತಿಕೊಂಡಿದೆ ಎಂದು ಅವರು ಬರೆದಿದಾರೆ. ಈ ಕಾರು ಖರೀದಿಸಿ ಆರು ತಿಂಗಳಾಗಿತ್ತಷ್ಟೇ, ಕಾರು ಹೆಚ್ಚು ಬಿಸಿಯಾಗುತ್ತಿರಲಿಲ್ಲ, ಕಾರು ಚಲಿಸುತ್ತಿದ್ದಾಗ ಎಂಜಿನ್‌ ಬಾನೆಟ್‌ನಿಂದ ಕೊಂಚ ಹೊಗೆ ಬರುವುದು ಕಾಣಿಸಿತು. ಕೊನೆಗೆ ದೊಡ್ಡದಾಗಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

ಮಹೀಂದ್ರ ಎಕ್ಸ್‌ಯುವಿ 700 ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿಯ ಕುರಿತು ಇದೀಗ ಮಹೀಂದ್ರ ಕಂಪನಿಯು ಪ್ರತಿಕ್ರಿಯೆ ನೀಡಿದೆ. ನಿನ್ನೆ ಮಹೀಂದ್ರ ಕಂಪನಿಯು ಅಧಿಕೃತ ಹೇಳಿಕೆ ನೀಡಿ ಬೆಂಕಿ ಕಾಣಿಸಿಕೊಳ್ಳಲು ಕಾರಣವಾದ ಅಂಶಗಳನ್ನು ತಿಳಿಸಿದೆ.

"Mahindra XUV700 ಕಾರಿನ ಬೆಂಕಿ ಆಕಸ್ಮಿಕದ ಕುರಿತು ಕಂಪನಿಯು ಕೂಲಂಕಷವಾಗಿ ತನಿಖೆ ಮಾಡಿದೆ. ಆಫ್ಟರ್‌ ಮಾರ್ಕೆಟ್‌ ಎಲೆಕ್ಟ್ರಿಕಲ್‌ ಆಕ್ಸೆಸರಿಗಳನ್ನು ಜೋಡಿಸುವ ಸಲುವಾಗಿ ಈ ಎಸ್‌ಯುವಿಯ ಮೂಲ ವೈರಿಂಗ್‌ ಅನ್ನು ಮಾರ್ಪಾಡು ಮಾಡಿರುವುದು ತನಿಖೆಯ ಸಮಯದಲ್ಲಿ ತಿಳಿದುಬಂದಿದೆ. ವಿದ್ಯುತ್‌ ವೈರಿಂಗ್‌ ಟ್ಯಾಂಪರ್‌ ಮಾಡಿರುವುದು ಬೆಂಕಿಗೆ ಕಾರಣವಾಗಿರಬಹುದು" ಎಂದು ಮಹೀಂದ್ರ ಕಂಪನಿಯು ಟ್ವೀಟ್‌ ಮಾಡಿದೆ.

"ನಮ್ಮ ಸೇವಾ ತಂಡವು ಗ್ರಾಹಕರನ್ನು ತಲುಪಿ ತನಿಖೆ ನಡೆಸಿದೆ. ಆರಂಭಿಕ ಸಂಶೋಧನೆಯಲ್ಲಿ ವೈರಿಂಗ್‌ ಟ್ಯಾಂಪರ್‌ ಮಾಡಿರುವುದೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಕಾರ್ಖಾನೆಯಲ್ಲಿ ಅಳವಡಿಸಲಾದ ಮೂಲ ವೈರಿಂಗ್‌ ಅನ್ನು ಟ್ಯಾಂಪರ್‌ ಮಾಡಿ ಬೇರೆ ಎಲೆಕ್ಟ್ರಿಕಲ್‌ ಬಿಡಿಭಾಗಗಳನ್ನು ಜೋಡಿಸಲಾಗಿದೆ. ಇದು ಘಟನೆಗೆ ಕಾರಣವಾಗಿರಬಹುದು" ಎಂದು ಮಹೀಂದ್ರ ಕಂಪನಿಯು ತಿಳಿಸಿದೆ.

ತಮ್ಮ ವಾಹನಗಳನ್ನು ಮಾರ್ಪಾಡು ಮಾಡುವ ಅಪಾಯಗಳನ್ನು ಕಂಪನಿ ತಿಳಿಸಿದೆ. ನಮ್ಮ ಕಾರು ಬ್ರ್ಯಾಂಡ್‌ನ ಎಸ್‌ಯುವಿಗಳನ್ನು ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ. ಅಧಿಕೃತವಲ್ಲದ ಮೂಲಗಳಿಂದ ತಮ್ಮ ವಾಹನಗಳನ್ನು ಮಾರ್ಪಡಿಸದಂತೆ ಅಥವಾ ಎಲೆಕ್ಟ್ರಿಕಲ್ ಸರ್ಕ್ಯೂಟ್‌ಗಳಿಗೆ ಯಾವುದೇ ಬಾಹ್ಯ ಹೊರೆಗಳನ್ನು ಹಾಕದಂತೆ ಕಂಪನಿಯು ಬಳಕೆದಾರರಿಗೆ ಈ ಮೂಲಕ ಸಲಹೆ ನೀಡಲಾಗುತ್ತಿದೆ ಎಂದು ಮಹೀಂದ್ರ ಕಂಪನಿ ಟ್ವೀಟ್‌ ಮಾಡಿದೆ.

ಈ ಕಾರಿನ ದರ ಸುಮಾರು 14 ಲಕ್ಷ ರೂ.ನಿಂದ 26 ಲಕ್ಷ ರೂ.ವರೆಗಿದೆ. ಬೆಂಕಿ ಆಕಸ್ಮಿಕಕ್ಕೆ ಈಡಾದ ಕಾರು ಮಧ್ಯಮ ಆವೃತ್ತಿಯಾಗಿದ್ದು ಇದರ ದರ 20 ಲಕ್ಷ ರೂ.ಗಿಂತಲೂ ಅಧಿಕವಿರುತ್ತದೆ. ಆಫ್ಟರ್‌ ಮಾರ್ಕೆಟ್‌ ಆಕ್ಸೆಸರಿ ಜೋಡಿಸಲು ಹೋಗಿ ಇದೀಗ ನಷ್ಟವನ್ನು ಅನುಭವಿಸಿದ್ದಾರೆ.

ಆಫ್ಟರ್‌ ಮಾರ್ಕೆಟ್‌ಗಳಲ್ಲಿ ದೊರಕುವ ಆಕ್ಸೆಸರಿಗಳನ್ನು ತಮ್ಮ ಕಾರುಗಳಿಗೆ ಜೋಡಿಸುವುದು ಭಾರತದ ಕಾರು ಖರೀದಿದಾರರ ಸಾಮಾನ್ಯ ಅಭ್ಯಾಸವಾಗಿದೆ. ಖರೀದಿ ವೆಚ್ಚ ತಗ್ಗಿಸುವ ಸಲುವಾಗಿ ವಾಹನ ಮಾಲೀಕರು ವಿವಿಧ ಬಗೆಯ ಆಕ್ಸೆಸರಿಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ ಜೋಡಿಸುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಈ ರೀತಿ ಜೋಡಣೆ ಮಾಡುವಾಗ ಮೂಲ ವೈರಿಂಗ್‌ಗೆ ಹಾನಿಯಾಗುತ್ತದೆ. ಇದರಿಂದ ಕಾರಿನ ವಾರೆಂಟಿಗೆ ತೊಂದರೆಯಾಗುವುದು ಮಾತ್ರವಲ್ಲದೆ ಬೆಂಕಿ ಆಕಸ್ಮಿಕದಂತಹ ಘಟನೆಗಳಿಗೂ ಕಾರಣವಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ